'ಟಾಕ್ಸಿಕ್‌'ನಲ್ಲಿ ಯಶ್‌ ವಿರುದ್ಧವೇ ನಿಲ್ತಾರಾ ನಯನತಾರಾ? ಇದೇ ಪಾತ್ರದಲ್ಲಿ ನಟಿಸುತ್ತಾರಾ ಲೇಡಿ ಸೂಪರ್‌ಸ್ಟಾರ್?

ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್'. ಯಶ್ ಅಭಿಮಾನಿಗಳನ್ನು ಸಿಕ್ಕಾಪಟ್ಟೆ ಕಾಯಿಸಿ ಒಪ್ಪಿಕೊಂಡಿರುವ ಸಿನಿಮಾವಿದು. ಹೀಗಾಗಿ ಈ ಸಿನಿಮಾ ಮತ್ತೊಂದು ಲೆವೆಲ್‌ನಲ್ಲಿ ಇರುತ್ತೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನೊಂದು ಕಡೆ ಇದೇ ಸಿನಿಮಾದಲ್ಲಿ ನಟಿಸುತ್ತಿರುವ ಲೇಡಿ ಸೂಪರ್‌ಸ್ಟಾರ್ ನಯನತಾರಾ ಪಾತ್ರದ ಬಗ್ಗೆನೂ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೆಲ್ಲ ಸಿನಿಮಾಗಳನ್ನು ಒಪ್ಪಿಕೊಳ್ಳಲ್ಲ. ಅದೆಷ್ಟೇ ದೊಡ್ಡ ನಟನ ಸಿನಿಮಾವಿದ್ದರೂ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ಹೋಗಿರುವಾಗ 'ಟಾಕ್ಸಿಕ್ಸ್' ಸಿನಿಮಾದಲ್ಲಿ ಇವರ ಪಾತ್ರ ಹೇಗಿರುತ್ತೆ? ಎನ್ನುವ ಕುತೂಹಲ ಸಹಜವಾಗಿ ಇದ್ದೇ ಇರುತ್ತೆ. ಆದರೆ, ಯಶ್ ಇದೂವರೆಗೂ ಸಿನಿಮಾದ ಒಂದೇ ಒಂದು ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.

Buzz is that Nayanthara doing gangster role in Yash starrer pan world Toxic Movie

ಹೀಗಿರುವಾಗ ಟಾಲಿವುಡ್‌ ಅಂಗಳದಲ್ಲಿ ನಯನಾ ತಾರಾ ಪಾತ್ರದ ಬಗ್ಗೆ ಸುದ್ಧಿಯೊಂದು ಓಡಾಡುತ್ತಿದೆ. 'ಟಾಕ್ಸಿಕ್' ಸಿನಿಮಾದಲ್ಲಿ ರಾಕಿ ಭಾಯ್ ಯಶ್‌ಗೆ ಸರಿ ಸಮನಾಗಿ ನಿಂತು ಪೈಪೋಟಿ ಕೊಡಲಿದ್ದಾರಂತೆ ನಯನತಾರಾ. ಇದೂವರೆಗೂ ಕಾಣಿಸಿಕೊಳ್ಳದೆ ಇರುವಂತಹ ಪಾತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಷಯ ಟಾಲಿವುಡ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಹಾಗಿದ್ದರೆ, 'ಟಾಕ್ಸಿಕ್' ಸಿನಿಮಾದಲ್ಲಿ ನಯನತಾರಾ ಪಾತ್ರವೇನು? ತಿಳಿಯುವುದಕ್ಕೆ ಮುಂದೆ ಓದಿ.

ನಯನತಾರಾ ಒಂದು ಸಿನಿಮಾ ಒಪ್ಪಿಕೊಳ್ಳುವಾಗ ಕೆಲವು ಷರತ್ತುಗಳನ್ನು ಹಾಕುತ್ತಾರೆ. ಅದು ಹೊಸಬರ ಸಿನಿಮಾ ಅಷ್ಟೇ ಅಲ್ಲ. ಸೂಪರ್‌ಸ್ಟಾರ್ ಸಿನಿಮಾಗಳಿಗೂ ಸೇರಿರುತ್ತೆ. ಹೀಗಿರುವಾಗ 'ಟಾಕ್ಸಿಕ್' ಸಿನಿಮಾವನ್ನು ಯಾವ್ಯಾವ ಷರತ್ತುಗಳನ್ನು ಹಾಕಿ ಒಪ್ಪಿಕೊಂಡಿದ್ದಾರೆ? ಎನ್ನುವ ಪ್ರಶ್ನೆ ಅಂತೂ ಎದ್ದಿದೆ. ಈ ಗ್ಯಾಪ್‌ನಲ್ಲಿ ತೆಲುಗು ಚಿತ್ರರಂಗದಲ್ಲಿ ನಯನತಾರಾ ಅವರದ್ದು ಪವರ್‌ಫುಲ್ ಪಾತ್ರ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.

ಯಶ್ ಬರ್ತ್‌ಡೇಗೆ 'ಟಾಕ್ಸಿಕ್' ಸಿನಿಮಾದ ಚಿಕ್ಕದೊಂದು ತುಣುಕುಗಳನ್ನು ರಿಲೀಸ್ ಮಾಡಲಾಗಿತ್ತು. ಈ ಟೀಸರ್ ಯಶ್ ಪಾತ್ರ ಹೇಗಿರುತ್ತೆ ಅನ್ನೋದನ್ನು ರಿವೀಲ್ ಮಾಡಿತ್ತು. ಆದರೆ, ಉಳಿದ ತಾರೆಯರು ಹೇಗೆ ಕಾಣಿಸಿಕೊಳ್ಳಬಹುದು ಅನ್ನೋದನ್ನು ಇನ್ನೂ ಗೌಪ್ಯವಾಗಿಯೇ ಇಟ್ಟಿದ್ದಾರೆ. ಈ ಗ್ಯಾಪ್‌ನಲ್ಲಿ ಲೇಡಿ ಸೂಪರ್‌ಸ್ಟಾರ್ ನಯನಾತಾರಾ ಈ ಸಿನಿಮಾದಲ್ಲಿ ಲೇಡಿ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಯಶ್ ಕೂಡ ಗ್ಯಾಂಗ್‌ಸ್ಟರ್ ಎಂದು ಈ ಹಿಂದೆ ವರದಿಯಾಗಿತ್ತು. ಹೀಗಾಗಿ ಯಶ್ ಎಂದು ನಯನತಾರಾ ಅಬ್ಬರಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

Buzz is that Nayanthara doing gangster role in Yash starrer pan world Toxic Movie

'ಟಾಕ್ಸಿಕ್' ಸಿನಿಮಾ 40ರ ದಶಕದಲ್ಲಿ ನಡೆಯುವ ಡ್ರಗ್ ಮಾಫಿಯಾ ಕುರಿತಾದ ಕಥೆ ಎಂದು ಗುಲ್ಲೆದ್ದಿದೆ. ಇದರಲ್ಲಿ ಇಬ್ಬರು ಡಾನ್‌ಗಳ ಕಥೆಯನ್ನು ಹೇಳುತ್ತಿದ್ದಾರೆಂಬ ಮಾತಿದೆ. ಯಶ್ ಪವರ್‌ಫುಲ್ ಪಾತ್ರದಲ್ಲಿ ಗಮನ ಸೆಳೆದರೆ, ಅದಕ್ಕೆ ಸಮನಾಗಿ ನಯನತಾರಾ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯಶ್ ಹಾಗೂ ನಯನತಾರಾ ಇಬ್ಬರನ್ನು ತೆರೆಮೇಲೆ ನೋಡುವುದೇ ಮಜಾ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರಂತೆ.

ಶಾರುಖ್ ಖಾನ್ ಜೊತೆ 'ಜವಾನ್' ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಬಾಲಿವುಡ್ ಕಿಂಗ್ ಖಾನ್ ಜೊತೆ ನಟಿಸಿದಾಗಲೂ ಅವರ ಸ್ಕ್ರೀನ್ ಸ್ಪೇಸ್ ಅನ್ನು ಬಿಟ್ಟುಕೊಟ್ಟಿರಲಿಲ್ಲ. ರೊಮ್ಯಾಂಟಿಕ್, ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್‌ಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಮಿಂಚಿದ್ದರು. ಇನ್ನು ಮೆಗಾಸ್ಟಾರ್ ಚಿರಂಜೀವಿ ನಟಿಸಿದ ಗಾಡ್‌ಫಾದರ್ ಸಿನಿಮಾದಲ್ಲೂ ನಯನತಾರಾ ಪವರ್‌ಫುಲ್ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿದ್ದರು.

More from Filmibeat

English summary
Buzz is that Nayanthara doing gangster role in Yash starrer pan world Toxic Movie.
Read more about: yash nayanthara toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X