ಜೈಲರ್ ನಂತರ ಎರಡನೇ ಭಾಗದಲ್ಲಿ ಸೇರಿಕೊಂಡ ನಟಿ..? ರಜನಿ, ನೆಲ್ಸನ್ ಮೈತ್ರಿ ಪುನರಾಗಮನ!

ಸೂಪರ್ ಸ್ಟಾರ್ ರಜನಿಕಾಂತ್ ನಟಿಸದ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾಗೆ ದಕ್ಷಿಣ ಭಾರತದಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾದ ಯಶಸ್ಸಿನ ಬಳಿಕ ಪಾರ್ಟ್‌ 2 ಬರುತ್ತೆ ಅನ್ನೋ ಮಾತು ಕೇಳಿ ಬರುತ್ತಲೇ ಇತ್ತು. ಅದರಂತೆ ಈಗ ಕಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ರಜನಿಕಾಂತ್‌ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಇಬ್ಬರಿಗೂ ಈ ಸಿನಿಮಾ ಮರು ಜೀವ ನೀಡಿತ್ತು. ರಜನಿಗಂತೂ 'ಜೈಲರ್' ಮತ್ತೆ ಸ್ಟಾರ್‌ಡಮ್ ಕೊಟ್ಟಿದ್ದು ಸುಳ್ಳಲ್ಲ. ಇತ್ತ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ 'ಬೀಸ್ಟ್ ' ಸಿನಿಮಾ ದಳಪತಿ ವಿಜಯ್ ಅಂತಹ ಸ್ಟಾರ್ ನಟನ ಹೊರತಾಗಿಯೂ ಮಖಾಡೆ ಮಲಗಿತ್ತು. ಹೀಗಾಗಿ ದಳಪತಿ ವಿಜಯ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕನನ್ನು ಟೀಕಿಸಿದ್ದರು.

Buzz is that Nelson Dilip Kumar is working on the Jailer 2 for Rajinikanth

ಸೋಲಿನ ಸುಳಿಗೆ ಸಿಲುಕಿದ್ದ ಇಬ್ಬರು ಸೇರಿ 'ಜೈಲರ್' ಸಿನಿಮಾ ಮಾಡಿದ್ದರು. ಈ ಸಿನಿಮಾ ಎಲ್ಲರ ನಿರೀಕ್ಷೆಯನ್ನು ಮೀರಿ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಬಾಕ್ಸಾಫೀಸ್‌ನಲ್ಲಿ ಇದೇ ಸಿನಿಮಾ ಸುಮಾರು 600 ಕೋಟಿ ರೂಪಾಯಿಗು ಅಧಿಕ ಕಲೆಕ್ಷನ್ ಮಾಡಿತ್ತು. 'ಜೈಲರ್' ಮೆಗಾ ಹಿಟ್ ಅಂರ ಸಾಬೀತಾಗಿತ್ತು. ಇದೇ ಬೆನ್ನಲ್ಲೇ 'ಜೈಲರ್ 2' ಬಗ್ಗೆ ಜೋರಾಗಿಯೇ ಸದ್ದಾಗಿತ್ತು. ಈಗ ಆ ಸುದ್ದಿಗೆ ಮರುಜೀವ ಬಂದಿದೆ.

'ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ವಸಂತ್ ರವಿ, ವಿನಾಯಕನ್, ರಮ್ಯಾ ಕೃಷ್ಣನ್, ಮೈರ್ನಾ ಮೆನನ್ ನಟಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಮೋಹನ್ ಲಾಲ್, ಶಿವರಾಜ್ ಕುಮಾರ್, ತಮನ್ನಾ ಹಾಗೂ ಜಾಕಿ ಶ್ರಾಫ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ 'ಜೈಲರ್' ಸಿನಿಮಾದಲ್ಲಿ ಅನಿರುದ್ಧ್ ಮ್ಯೂಸಿಕ್ ಮಹತ್ವದ ಪಾತ್ರವಹಿಸಿತ್ತು. ಹೀಗಾಗಿ 'ಜೈಲರ್ 2' ಬರಲಿ ಅಂತ ಸೂಪರ್‌ಸ್ಟಾರ್ ಫ್ಯಾನ್ಸ್ ಎದುರು ಕಾದು ಕೂತಿದ್ದಾರೆ.

Buzz is that Nelson Dilip Kumar is working on the Jailer 2 for Rajinikanth

ರಜನಿಕಾಂತ್, ನೆಲ್ಸನ್ ದಿಲೀಪ್ ಕುಮಾರ್ ಹಾಗೂ ಅನಿರುದ್ಧ್ ಮೂವರ ಕಾಂಬಿನೇಷನ್‌ನಲ್ಲಿ 'ಜೈಲರ್ 2' ಬರುತ್ತೆ ಅನ್ನೋ ಸುದ್ದಿ ಓಡಾಡಿತ್ತು. ಅಲ್ಲದೆ ಶೀಘ್ರದಲ್ಲಿಯೇ 'ಜೈಲರ್ 2' ಸೆಟ್ಟೇರುತ್ತೆ ಅನ್ನೋ ಮಾತು ಕೂಡ ಕೇಳಿ ಬಂದಿತ್ತು. ಇದೀಗ ಕಾಲಿವುಡ್‌ನಲ್ಲಿ 'ಜೈಲರ್ 2'ಗಾಗಿ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸ್ಕ್ರಿಪ್ಟ್ ವರ್ಕ್ ಶುರು ಮಾಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ರಜನಿಕಾಂತ್ ಸದ್ಯ 'ಜೈ ಭೀಮ್' ನಿರ್ದೇಶಕ ಜ್ಷಾನವೇಲು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಲೋಕೇಶ್ ಕನಗರಾಜ್ ನಿರ್ದೇಶಿಸಲಿರುವ 171ನೇ ಸಿನಿಮಾ ತಂಡ ಸೇರಿಕೊಳ್ಳಬೇಕಿದೆ. ಅಷ್ಟರಲ್ಲಿ ನೆಲ್ಸನ್ ದಿಲೀಪ್ ಕುಮಾರ್ 'ಜೈಲರ್ 2' ಸ್ಕ್ರಿಪ್ಟ್ ರೆಡಿ ಮಾಡಿ ರಜನಿಗೆ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಹೀಗಾಗಿ ಈಗಾಗಲೇ ನೆಲ್ಸನ್ ಸ್ಕ್ರಿಪ್ಟ್ ಕೆಲಸ ಶುರು ಮಾಡಿದ್ದಾರೆ ಎನ್ನಲಾಗಿದೆ.

ಆದರೆ, 'ಜೈಲರ್ 2' ಆರಂಭದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಇದೇ ಸಿನಿಮಾದಲ್ಲಿ ನಟಿಸಿರೋ ನಟಿ ಮೈರ್ನಾ ಮೆನನ್ 'ಜೈಲರ್2' ಸ್ಕ್ರಿಪ್ಟ್ ವರ್ಕ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಾಗಿ ಸೂಪರ್‌ಸ್ಟಾರ್ ಮತ್ತೆ ಜೈಲರ್ ಆಗಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.

More from Filmibeat

English summary
Nelson Dilip Kumar is working on the Jailer 2 script.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X