ಪ್ರಭಾಸ್‌, ತೃಪ್ತಿ ಡಿಮ್ರಿ ನಟಿಸುತ್ತಿರುವ ಸ್ಪಿರೀಟ್ 'ಎ ರೇಟೆಡ್' ಥ್ರಿಲ್ಲರ್ ಸಿನಿಮಾವೇ? ಏನಿದು ಹೊಸ ಸುದ್ದಿ?

'ಅನಿಮಲ್' ಅಂತಹ ವಿವಾದಾತ್ಮಕ ಸಿನಿಮಾ ನಿರ್ದೇಶಿಸಿದ್ದ ಸಂದೀಪ್ ರೆಡ್ಡಿ ವಂಗಾ ಮತ್ತೊಂದು ಪ್ರಾಜೆಕ್ಟ್‌ಗೆ ಕೈ ಹಾಕಿರೋದು ರಹಸ್ಯವಾಗೇನೂ ಇಲ್ಲ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಇತ್ತೀಚೆಗೆ ದೀಪಿಕಾ ಪಡುಕೋಣೆಯನ್ನು ನಾಯಕಿಯಾಗಿ ಆಯ್ಕೆ ಮಾಡುವ ಉತ್ಸಾಹ ತೋರಿದ್ದರು. ಆದರೆ, ಸಂದೀಪ್ ರೆಡ್ಡಿ ವಂಗಾ ಹಾಗೂ ದೀಪಿಕಾ ನಡುವೆ ಕಥೆಯ ವಿಷಯಕ್ಕೆ ಒಮ್ಮತ ಮೂಡದೇ ಇದ್ದಿದ್ದರಿಂದ ಅವರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.

ಇದೇ ವೇಳೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿದ ಮೆಗಾ ಹಿಟ್ ಸಿನಿಮಾ 'ಅನಿಮಲ್'ನಲ್ಲಿ ನಟಿಸಿದ್ದ ತೃಪ್ತಿ ಡಿಮ್ರಿಯನ್ನು ಆಯ್ಕೆ ಮಾಡಲಾಗಿದೆ. ಸ್ವತ: ನಿರ್ದೇಶಕರೇ ಈ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದರು. ಪ್ರಭಾಸ್‌ಗೆ ನಾಯಕಿಯಾಗಬೇಕಿದ್ದ ದೀಪಿಕಾ ಪಡುಕೋಣೆ ಬದಲಿಗೀಗ ತೃಪ್ತಿ ಡಿಮ್ರಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ 'ಅರ್ಜುನ್ ರೆಡ್ಡಿ', 'ಅನಿಮಲ್' ಅಂತಹ ವಿವಾದಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿರುವ ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರೀಟ್' ಹೇಗಿರುತ್ತೋ ಎನ್ನುವ ಲೆಕ್ಕಾಚಾರ ಶುರುವಾಗಿದೆ.

Buzz is that Prabhas Sandeep Reddy Vanga Tripti Dimri movie Spirit is A rated cop Thriller

ಪ್ರಭಾಸ್, ತೃಪ್ತಿ ಡಿಮ್ರಿ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ 'ಸ್ಪಿರೀಟ್' ಕಥೆಯ ಬಗ್ಗೆ ಸಿನಿಪ್ರಿಯರು ತಲೆ ಕೆಡಿಸಿಕೊಂಡಿದ್ದಾರೆ. ಹಿಂದಿನ ಎರಡು ಸಿನಿಮಾಗಳನ್ನು ನೋಡಿರುವ ಪ್ರೇಕ್ಷಕರಿಗೆ ಹಾಗೂ ಸಿನಿಮಾ ಮಂದಿಗೆ ಇದು ಹೇಗಿರುತ್ತೋ? ಎನ್ನುವ ಕುತೂಹಲ ಅದಕ್ಕೆ ಸರಿಯಾಗಿ ಸುದ್ದಿಯೊಂದು ಹರಿದಾಡುವುದಕ್ಕೆ ಶುರುವಾಗಿದೆ. ಈ ಬಾರಿ ನಿರ್ದೇಶಕ ಎ ರೇಟೆಡ್ ಥ್ರಿಲ್ಲರ್ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೇಳಿದ 'ಸ್ಪಿರೀಟ್' ಕತೆಯಲ್ಲಿ ದೀಪಿಕಾ ಪಡುಕೋಣೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ, ಕೆಲವು ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಷರತ್ತು ಹಾಕಿದ್ದರಂತೆ. ಇದರಿಂದ ಕೋಪಗೊಂಡ ಸಂದೀಪ್ ರೆಡ್ಡಿ ವಂಗಾ ತಮ್ಮದೇ ಸಿನಿಮಾ ನಟಿ ತೃಪ್ತಿ ಡಿಮ್ರಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಈ ಬೆಳವಣಿಗೆಯ ಬಳಿಕ ಬಾಲಿವುಡ್‌ ಅಂಗಳಲ್ಲಿ ಸಿನಿಮಾ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಶುರುವಾಗಿದೆ.

ಡಾರ್ಲಿಂಗ್ ಪ್ರಭಾಸ್ ನಟಿಸುತ್ತಿರುವ 'ಸ್ಪಿರೀಟ್' ಸಿನಿಮಾ ಎ ರೇಟೆಡ್ ಕಾಪ್ ಥ್ರಿಲ್ಲರ್ ಸಿನಿಮಾ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ. ಈ ಸಿನಿಮಾವನ್ನು ತೆಲುಗು ಪ್ರೇಕ್ಷಕರಿಗೆ ಎಂದೇ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಮಾಸ್ ಎಲಿಮೆಂಟ್ಸ್‌ ಇಟ್ಟು ಪಕ್ಕ ಆಕ್ಷನ್ ಸಿನಿಮಾವನ್ನು ಮಾಡುತ್ತಿದ್ದು, ಇದಕ್ಕೆ ಕೆಲವು ಟ್ವಿಸ್ಟ್‌ಗಳನ್ನು ಇಟ್ಟಿದ್ದಾರಂತೆ. ಇದರಲ್ಲಿ ಕೆಲವು ಎ ರೇಟೆಡ್ ಸೀನ್‌ಗಳನ್ನು ಸಂದೀಪ್ ರೆಡ್ಡಿ ವಂಗಾ ಸೇರಿಸಿದ್ದಾರೆಂದು ಸುದ್ದಿ ಹಬ್ಬುತ್ತಿದೆ.

Buzz is that Prabhas Sandeep Reddy Vanga Tripti Dimri movie Spirit is A rated cop Thriller

'ಸ್ಪಿರೀಟ್' ಸಿನಿಮಾದಲ್ಲಿ ಆಕ್ಷನ್‌ ಸೀನ್‌ಗಳ ಜೊತೆ ಸಾಕಷ್ಟು ರಕ್ತಪಾತ ಕೂಡ ಇರುತ್ತೆ ಎಂದು ಹೇಳಲಾಗಿದೆ. ಸಂದೀಪ್ ರೆಡ್ಡಿ ವಂಗಾ ಈಗಾಗಲೇ ಬರೆದಿಟ್ಟುಕೊಂಡಿರುವ ಸ್ಕ್ರಿಪ್ಟ್‌ಗೆ ಹೊಂದಿಕೊಂಡು ನಟಿಸುವ ನಟಿಯರ ಹುಡುಕಾಟದಲ್ಲಿ ಇದ್ದರು. ಅಲ್ಲದೆ ಅವರು ಹೆಣೆದ ದೃಶ್ಯಗಳನ್ನು ಒಪ್ಪಿಕೊಂಡು ನಟಿಸುವ ನಟಿಯರ ಹುಡುಕಾಟದಲ್ಲಿದ್ದರು. ಅಲ್ಲದೆ ಅವರಿಗೆ ಕಂಫರ್ಟೆಬಲ್ ಹಾಗೂ ವೃತ್ತಿಪರತೆಯ ವಾತಾರವಣವನ್ನು ಸೃಷ್ಟಿಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಸಿನಿಮಾ ಅಕ್ಟೋಬರ್ 2025ಕ್ಕೆ ಶೂಟಿಂಗ್‌ ಆರಂಭ ಮಾಡುತ್ತಿದ್ದು, ಈ ಬಾರಿ ಪ್ರಭಾಸ್ ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ವರ್ಲ್ಡ್ ಸಿನಿಮಾ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಸುಮಾರು 9 ಭಾಷೆಗಳಲ್ಲಿ 'ಸ್ಪಿರೀಟ್' ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಪ್ರಭಾಸ್, ತೃಪ್ತಿ ಡಿಮ್ರಿ ಜೊತೆ ಇನ್ನೂ ಪ್ರಮುಖ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಆ ಪಟ್ಟಿ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ವರ್ಷ ಸಿನಿಮಾ ಆರಂಭ ಆದರೂ, ಸಿನಿಮಾ 2027ಕ್ಕೆ ಬಿಡುಗಡೆಯಾಗಲಿದೆ.

More from Filmibeat

English summary
Buzz is that Prabhas, Sandeep Reddy Vanga, Tripti Dimri movie Spirit is A rated cop Thriller.
Read more about: prabhas tollywood movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X