ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ನಡುವೆ ವೈಮನಸ್ಸು? 'ಡ್ರ್ಯಾಗನ್' ಸಿನಿಮಾ ಸ್ಥಗಿತ?

'ಬಾಹುಬಲಿ', 'ಕೆಜಿಎಫ್' ಬಳಿಕ ದಕ್ಷಿಣ ಭಾರತದಲ್ಲಿ ಫಿಲ್ಮ್ ಮೇಕಿಂಗ್ ಬದಲಾಗಿದೆ. ಎಲ್ಲಾ ಭಾಷೆಗೂ ಸಲ್ಲುವ ಕಥೆಗಳನ್ನೇ ಇಲ್ಲಿನ ಸೂಪರ್‌ಸ್ಟಾರ್‌ಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂತಾರ ಚಾಪ್ಟರ್ 1 ಅನ್ನು ಹೊರತು ಪಡಿಸಿ ಹೇಳುವುದಾರೇ, ಬಹುತೇಕ ಎಲ್ಲಾ ದಿಗ್ಗಜರ ಸಿನಿಮಾಗಳು ಹೀಗೆ ಪ್ಲ್ಯಾನ್ ಮಾಡುತ್ತಿವೆ. ಇದರಲ್ಲಿ ಕನ್ನಡ ಹಾಗೂ ತೆಲುಗು ಸಿನಿಮಾರಂಗ ಮುಂದಿದೆ. ಈ ಎರಡೂ ಚಿತ್ರರಂಗಕ್ಕೂ ಸಕ್ಸಸ್ ಕೂಡ ಸಿಕ್ಕಿದೆ.

ನಿರ್ಮಾಣ ಸಂಸ್ಥೆಗಳು ಕೂಡ ನೂರಾರು ಕೋಟಿ ಹಣ ಸುರಿದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಅದರಲ್ಲಿ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ 'ಡ್ರ್ಯಾಗನ್' ಕೂಡ ಒಂದು. ಈ ವರ್ಷದ ಆರಂಭದಿಂದಲೇ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ.

Buzz is that Prashanth Neel and Jr Ntr Movie Dragon Shelved Amid Creative Clash

'ಪುಷ್ಪ 2' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾವನ್ನು ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಹಣ ಹೂಡಿಕೆ ಮಾಡಿದೆ. ಈ ಪ್ರಾಜೆಕ್ಟ್ 'ಕೆಜಿಎಫ್ 2', 'ಸಲಾರ್' ಸಿನಿಮಾಗಳಿಗಿಂತಲೂ ಬಿಗ್ ಬಜೆಟ್ ಸಿನಿಮಾ ಆಗಿರುತ್ತೆಂದೂ ಸುದ್ದಿಯಾಗಿತ್ತು. ಆದ್ರೀಗ ಟಾಲಿವುಡ್‌ನಲ್ಲಿ ಜೂ.ಎನ್‌ಟಿಆರ್ ಅಭಿಮಾನಿಗಳು ಆತಂಕ ಪಡುವಂತಹ ಸುದ್ದಿಯೊಂದು ಗುಲ್ಲೆದ್ದಿದೆ. ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ನಡುವೆ ವೈಮನಸ್ಸು ಮೂಡಿದ್ದು, 'ಡ್ರ್ಯಾಗನ್' ಸಿನಿಮಾ ನಿಂತೋಗಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಸಲಿಗೆ ಏನಿದು ಸುದ್ದಿ? ರಿಯಾಲಿಟಿ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಮೈತ್ರಿ ಮೂವೀ ಮೇಕರ್ಸ್ ನಿರ್ಮಾಪಕರಲ್ಲಿ ಒಬ್ಬರು ಡ್ರ್ಯಾಗನ್ ಮೂಡಿ ಬರುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಸಂದರ್ಶವೊಂದರಲ್ಲಿ ಮೈತ್ರಿ ಮೂವಿ ಮೇಕರ್ಸ್‌ನ ಮತ್ತೊಬ್ಬ ನಿರ್ಮಾಪಕ ನವೀನ್ ಯೆರ್ನೇನಿ "ತಾರಕ್ ಹಾಗೂ ಪ್ರಶಾಂತ್ ನೀಲ್ ಪ್ರಾಜೆಕ್ಟ್ ಯಾರೂ ಊಹೆ ಮಾಡದಂತೆ ಇರುತ್ತೆ. ಇದರಲ್ಲಿ ಎನ್‌ಟಿಆರ್‌ ಅವರ ನಿರ್ಧಾರವೇ ಅಂತಿಮ. ಅವರು ಕಥೆಯನ್ನು ಇಷ್ಟಪಟ್ಟು ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ." ಎಂದು ಹೇಳಿಕೆ ಕೊಟ್ಟಿದ್ದರು. ಅಲ್ಲಿಂದ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗಗನಕ್ಕೇರಿದ್ದವು. ಈ ಜೋಡಿಯ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ? ಅನ್ನೋದನ್ನು ತಿಳಿದುಕೊಳ್ಳಲು ಚಿಕ್ಕದೊಂದು ಅಪ್‌ಡೇಟ್‌ಗಾಗಿ ಕಾಯುತ್ತಿದ್ದರು.

ಆದ್ರೀಗ ಸಡನ್ ಆಗಿ ಸಿನಿಮಾ ನಿಂತೋಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸೋಶಿಯಲ್ ಮೀಡಿಯಾಗಳಲ್ಲಿ ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ನಡುವೆ ಸಿನಿಮಾ ವಿಚಾರಕ್ಕೆ ಮೈಮನಸ್ಸು ಮೂಡಿದೆ. ಕಥೆ ಹಾಗೂ ದೃಶ್ಯಗಳಿಗೆ ಸಂಬಂಧಿಸಿದಂತೆ ಒಮ್ಮತ ಮೂಡುತ್ತಿಲ್ಲ. ಈ ಕಾರಣಕ್ಕೆ 'ಡ್ರ್ಯಾಗನ್' ಸಿನಿಮಾ ನಿಂತು ಹೋಗಿದೆ. ಹಲವು ದಿನಗಳಿಂದ ಸಿನಿಮಾದ ಶೂಟಿಂಗ್ ನಡೆಯುತ್ತಿಲ್ಲ ಎಂದು ಸುದ್ದಿಗಳಾಗಿವೆ.

Buzz is that Prashanth Neel and Jr Ntr Movie Dragon Shelved Amid Creative Clash

ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರುವಾಗುತ್ತಿದ್ದಂತೆ ಎನ್‌ಟಿಆರ್ ಅಭಿಮಾನಿಗಳು ಅಖಾಡಕ್ಕೆ ಇಳಿದಿದ್ದಾರೆ. ಹೀಗೆ ನಡೆಯುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇತ್ತೀಚೆಗೆ ಜೂ.ಎನ್‌ಟಿಆರ್ ತಮ್ಮ ಸಂಬಂಧಿಯ ವಿವಾಹ ಸಮಾರಂಭಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದಾರೆ. ಜೊತೆಗೆ ಡ್ರ್ಯಾಗನ್‌ಗಾಗಿಯೇ ಸಿಕ್ಸ್‌ಪ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಇದು ಕೇವಲ ವದಂತಿಗಳಷ್ಟೇ ಎಂದು ಹೇಳಲಾಗುತ್ತಿದೆ.

ಇನ್ನೊಂದು ಮೂಲದ ಹೇಳುವಂತೆ ಅಕ್ಟೋಬರ್ ಕೊನೆಯ ವಾರದಲ್ಲಿ 'ಡ್ರ್ಯಾಗನ್' ಶೂಟಿಂಗ್ ಮತ್ತೆ ಆರಂಭ ಆಗುತ್ತೆ. ಜೂ.ಎನ್‌ಟಿಆರ್ ಕೊನೆಯ ವಾರದಲ್ಲಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇಲ್ಲಿಂದ ಮುಂದಿನ ವರ್ಷ ಬೇಸಿಗೆ ಮುಗಿಯುವವರೆಗೂ ನಿರಂತರವಾಗಿ ಶೂಟಿಂಗ್ ಮಾಡಲಾಗುತ್ತೆ ಎಂದು ಹೇಳಲಾಗಿದೆ. ಆದರೆ, ಈಗಾಗಲೇ 2026 ಜೂನ್ ತಿಂಗಳಲ್ಲಿ ರಿಲೀಸ್ ಎಂದು ಹೇಳಲಾಗಿತ್ತು. ಈಗ ಮತ್ತೆ 2027ಕ್ಕೆ ರಿಲೀಸ್ ಮುಂದೂಡುವ ಸಾಧ್ಯತೆಯಿದೆ ಎಂಬ ವದಂತಿಗಳು ಹರಿದಾಡುತ್ತಿದೆ. ಅಸಲಿಗೆ ಸತ್ಯ ಯಾವುದೋ? ಚಿತ್ರತಂಡವೇ ರಿವೀಲ್ ಮಾಡಬೇಕಿದೆ.

More from Filmibeat

English summary
Buzz is that Prashanth Neel and Jr.Ntr Movie Dragon Shelved Amid Creative Clash.
Read more about: prashanth neel ntr telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X