SSMB29: ಮಹೇಶ್ ಬಾಬು ಸಂಭಾವನೆ ಕಮ್ಮಿ ಕೊಟ್ಟು ಪ್ರಿಯಾಂಕಾ ಚೋಪ್ರಾಗೆ ಹೆಚ್ಚು ಕೊಟ್ಟರೇ ರಾಜಮೌಳಿ?

ಟಾಲಿವುಡ್‌ ಗ್ಲೋಬಲ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ಹೊಸ ಸಿನಿಮಾಗೆ ಕೈ ಹಾಕಿರೋದು ಗೊತ್ತಿರೋ ವಿಷಯವೇ. ತೆಲುಗು ಚಿತ್ರರಂಗ ಸೂಪರ್‌ಸ್ಟಾರ್ ಮಹೇಶ್ ಬಾಬು ಈ ಸಿನಿಮಾದ ಹೀರೋ. ಇವರಿಗೆ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಇವರೊಂದಿಗೆ ತಮಿಳು, ಮಲಯಾಳಂ, ಬಾಲಿವುಡ್‌ ಚಿತ್ರರಂಗದ ಪ್ರಮುಖ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

RRR ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿದ ಬಳಿಕ ಎಸ್.ಎಸ್. ರಾಜಮೌಳಿ ಮತ್ತೊಂದು ದುಬಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾದ ಬಜೆಟ್ ಸಾವಿರ ಕೋಟಿ ದಾಟುತ್ತೆ ಎಂಬ ವದಂತಿಗಳು ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಪ್ರತಿ ಸಿನಿಮಾದಂತೆ ಎಸ್.ಎಸ್. ರಾಜಮೌಳಿ ಸಿನಿಮಾ ರಿಲೀಸ್‌ವರೆಗೂ ಯಾವುದೇ ಗುಟ್ಟನ್ನೂ ಬಿಟ್ಟು ಕೊಡುವುದಿಲ್ಲ. ಅದರಲ್ಲೂ ಸಿನಿಮಾದ ಬಜೆಟ್ ಹಾಗೂ ಸಂಭಾವನೆ ಬಗ್ಗೆ ಬಾಯಿ ಬಿಡುವುದೇ ಇಲ್ಲ.

Buzz is that Priyanka Chopra Salary is Higher Than Mahesh Babu in SS Rajamouli directorial SSMB29

ಹೀಗಿರುವಾಗ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಸಿನಿಮಾ ಗ್ಲೋಬಲ್ ಸಿನಿಮಾ ಅನ್ನೋದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಇಬ್ಬರು ಪ್ರಮುಖ ನಟರಿಗೆ ದೊಡ್ಡ ಸಂಭಾವನೆಯನ್ನೇ ನೀಡಲಾಗಿದೆ ಅನ್ನೋ ಸುದ್ದಿ ಕೂಡ ಇದೆ. ಈಗ ಟಾಲಿವುಡ್ ಅಂಗಳಲ್ಲಿ ಮತ್ತೊಂದು ಸುದ್ದಿ ಹಬ್ಬಿತ್ತು. ಮಹೇಶ್ ಬಾಬುಗೆ ನೀಡಿದ ಸಂಭಾವನೆಗಿಂತ ಪ್ರಿಯಾಂಕಾ ಚೋಪ್ರಾ ಕೊಟ್ಟಿದ್ದೇ ಹೆಚ್ಚು ಅನ್ನೋದು ಚರ್ಚೆ ಹುಟ್ಟಾಕಿದೆ. ಅಸಲಿಗೆ ಇವರಿಬ್ಬರ ನಡುವಿನ ಸಂಭಾವನೆಯ ಗುಸು ಗುಸು ಏನು? ತಿಳಿಯುವುದಕ್ಕೆ ಮುಂದೆ ಓದಿ.

ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಕಾಂಬಿನೇಷನ್ ಸಿನಿಮಾವನ್ನು ಕೆ.ಎಲ್. ನಾರಾಯಣ್ ನಿರ್ಮಿಸುತ್ತಿದ್ದಾರೆ. ಇದು ತೆಲುಗು ಚಿತ್ರರಂಗದ ಗ್ಲೋಬಲ್ ಸಿನಿಮಾ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ನಟಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.

Buzz is that Priyanka Chopra Salary is Higher Than Mahesh Babu in SS Rajamouli directorial SSMB29

'SSMB29' ಸಿನಿಮಾವನ್ನು ರಾಜಮೌಳಿ ಪ್ಯಾನ್ ಇಂಡಿಯಾದಿಂದ ಪ್ಯಾನ್ ವರ್ಲ್ಡ್ ರೇಂಜ್‌ಗೆ ತೆಗೆದುಕೊಂಡು ಹೋಗುವ ಗುರಿಯನ್ನು ಹೊಂದಿದ್ದಾರೆ. ಈ ಸಿನಿಮಾವನ್ನು ವಿಶ್ವದ ಹಲವು ದೇಶಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದರಿಂದ ಸ್ಟಾರ್‌ ಕಾಸ್ಟ್‌ ಕಡೆಗೆ ಸಿಕ್ಕಾಪಟ್ಟೆ ಗಮನ ಹರಿಸಿದ್ದಾರೆ. ಆದ್ದರಿಂದಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾರನ್ನು ಈ ಸಿನಿಮಾಗೆ ಕರೆದುಕೊಂಡು ಬಂದಿದ್ದಾರೆ.

ಇನ್ನು ಈಗ ಹಬ್ಬಿರುವ ಸುದ್ದಿ ಏನಪ್ಪಾ ಅಂದರೆ, ಪ್ರಿಯಾಂಕಾ ಚೋಪ್ರಾ ಸಿನಿಮಾಗಾಗಿ ಮಹೇಶ್ ಬಾಬುಗಿಂತ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ. ಈ ಹಿಂದೆ ಮನಿ ಕಂಟ್ರೋಲ್‌ನಲ್ಲಿ ವರದಿಯಾದಂತೆ ಪ್ರಿಯಾಂಕಾ ಚೋಪ್ರಾ ₹30 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆಂದು ವರದಿ ಮಾಡಿತ್ತು. ಹಾಗೇ ಮಹೇಶ್ ಬಾಬು ಸಂಭಾವನೆಯನ್ನು ಪಡೆಯುತ್ತಿಲ್ಲ. ಬದಲಾಗಿ ಪ್ರಾಫಿಟ್ ಶೇರಿಂಗ್ ಕೇಳಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ಆದ್ರೀಗ ಬೇರೆ ಸುದ್ದಿನೇ ಹರಿದಾಡುತ್ತಿದೆ.

₹1000 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಮಹೇಶ್ ಬಾಬುಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಅಂದ್ಮೇಲೆ ಎಷ್ಟಿರಬಹುದೆಂದು ಲೆಕ್ಕ ಹಾಕುತ್ತಿದ್ದಾರೆ. ಆದರೆ, ಈ ಸುದ್ದಿ ನಿಜನಾ? ಇಲ್ಲ ಕೇವಲ ವದಂತಿ ಅಷ್ಟೇನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇನ್ನು ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಇದ್ದರೂ ಇರಬಹುದೆಂದು ಫ್ಯಾನ್ಸ್ ಮಾತಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಪ್ರಿಯಾಂಕಾ ಚೋಪ್ರಾ ಹೆಚ್ಚು ಸಂಭಾವನೆ ಪಡೆಯುವುದಕ್ಕೆ ಯೋಗ್ಯ ಎಂದೂ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಟ್ಟಾರೆ, ಇದು ಈ ಸುದ್ದಿ ಎಷ್ಟು ನಿಜನೋ? ಸುದ್ದಿಯಂತೂ ಹರಿದಾಡುತ್ತಿದೆ.

More from Filmibeat

English summary
Buzz is that Priyanka Chopra Salary is Higher Than Mahesh Babu in SS Rajamouli directorial SSMB29.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X