'ಅನಿಮಲ್' ಅಂತಹ ಸಕ್ಸಸ್‌ಫುಲ್ ಸಿನಿಮಾ ಕೊಟ್ಟಿದ್ರೂ ರಶ್ಮಿಕಾ ಹೊಸ ಸಿನಿಮಾ ನಿಂತಿದ್ದೇಕೆ? ಏನಿದು ಸುದ್ದಿ?

ಒಂದು ಕಾಲದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಂತ ಬ್ಯುಸಿಯಾಗಿದ್ದಾರೆ. ಇದರ ಜೊತೆನೇ ಹೊಸ ಸಿನಿಮಾಗಳು ಸೆಟ್ಟೇರಿವೆ. ಅದರ ಶೂಟಿಂಗ್ ಕೂಡ ನಡೀತಿದೆ. ಬಾಲಿವುಡ್‌ನಲ್ಲಿ 'ಅನಿಮಲ್' ಅಂತಹ ಮೆಗಾ ಹಿಟ್ ಸಿನಿಮಾಗಳನ್ನೂ ಕೊಟ್ಮೇಲಂತೂ ಬೇಡಿಕೆ ಹೆಚ್ಚಾಗಿದೆ. ಹಿಂದಿ ಹಾಗೂ ದಕ್ಷಿಣ ಭಾರತದಲ್ಲಿ ರಶ್ಮಿಕಾ ಮಂದಣ್ಣ ಬೇಡಿಕೆಯ ನಟಿಯಾಗಿದ್ದಾರೆ.

ಇಷ್ಟೊಂದು ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ತೆಲುಗು ಸಿನಿಮಾ ವಲಯದಲ್ಲಿ ಬಿಸಿಬಿಸಿ ಸುದ್ದಿಯೊಂದು ಓಡಾಡುವುದಕ್ಕೆ ಶುರು ಮಾಡಿದೆ. 'ಅನಿಮಲ್' ರಿಲೀಸ್‌ಗೂ ಮುನ್ನ ರಶ್ಮಿಕಾ ಮಂದಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಸಿನಿಮಾವೊಂದು ದಿಢೀರನೇ ನಿಂತುಬಿಟ್ಟಿದೆ. ಮತ್ತೆ ಈ ಸಿನಿಮಾ ಟೇಕ್ ಆಫ್ ಆಗುವುದಿಲ್ಲ ಅನ್ನೋ ಸುದ್ದಿ ಓಡಾಡುತ್ತಿದೆ.

Buzz is that Rashmika Mandanna starrer lady oriented tamil movie Rainbow shelved

ಹೌದು.. 'ಅನಿಮಲ್' ರಿಲೀಸ್‌ಗೂ ಮುನ್ನ ರಶ್ಮಿಕಾ ಮಂದಣ್ಣ ಮಹಿಳಾ ಪ್ರಧಾನ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದೇ ಸಿನಿಮಾವೀಗ ದಿಢೀರನೇ ನಿಂತಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಟಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದ್ದು, ನಿಂತಿದೆ ಎನ್ನುತ್ತಿರುವ ಆ ಸಿನಿಮಾ ಯಾವುದು? ಸಿನಿಮಾ ನಿಲ್ಲುವುದಕ್ಕೆ ಏನು ಕಾರಣ? ಈ ಸಿನಿಮಾ ಬಗ್ಗೆ ಮಾಹಿತಿ ತಿಳಿಯುವುದಕ್ಕೆ ಮುಂದೆ ಓದಿ.

ಕೆಲವು ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ ತಮಿಳು ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದು ರಶ್ಮಿಕಾ ಒಪ್ಪಿಕೊಂಡ ಮೊದಲ ಮಹಿಳಾ ಪ್ರಧಾನ ಸಿನಿಮಾ. ಆ ಸಿನಿಮಾ ಹೆಸರು 'ರೈಂಬೊ'. ಈ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಿದ ಬಳಿಕ ಸಿನಿಮಾವನ್ನು ಹೋಲ್ಡ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ದಿಢೀರನೇ ಸಂಚಲನ ಸೃಷ್ಟಿಸಿರುವ ಈ ಸುದ್ದಿ ರಶ್ಮಿಕಾ ಮಂದಣ್ಣ ಅವರ ತಮಿಳು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ರಶ್ಮಿಕಾ ಮಂದಣ್ಣ ನಟಿಸುತ್ತಿದ್ದ ಅವರ ಮೊದಲ ಮಹಿಳಾ ಪ್ರಧಾನ ಸಿನಿಮಾ 'ರೈಂಬೋ'ದ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಸುಮಾರು 20 ದಿನಗಳ ಕಾಲ ಶೂಟಿಂಗ್ ಮಾಡಿದ ಬಳಿಕ ಸಿನಿಮಾವನ್ನು ನಿಲ್ಲಿಸಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲದೆ ಈ ಸಿನಿಮಾ ನಿಲ್ಲುವುದಕ್ಕೆ ಕಾರಣವೇನು? ಅನ್ನೋದನ್ನು ಅಂದಾಜು ಮಾಡಿವೆ.

Buzz is that Rashmika Mandanna starrer lady oriented tamil movie Rainbow shelved

ಬಾಲಿವುಡ್‌ನಲ್ಲಿ ಕೆಲವು ಮಹಿಳಾ ಪ್ರಧಾನ ಸಿನಿಮಾಗಳಿಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿವೆ. ಆಲಿಯಾ ಭಟ್ ನಟಿಸಿದ 'ಗಂಗೂಬಾಯಿ ಕಾಠೀಯವಾಡಿ', ಕಂಗನಾ ರಣಾವತ್ ನಟಿಸಿದ 'ಮಣಿಕರ್ಣೀಕಾ'ದಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿವೆ. ಹೀಗೆ ಇನ್ನೂ ಕೆಲವು ಮಹಿಳಾ ಪ್ರಧಾನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಆದರೆ, ದಕ್ಷಿಣ ಭಾರತದಲ್ಲಿ ಇದರ ಸಕ್ಸಸ್ ರೇಟ್ ತುಂಬಾನೇ ಕಮ್ಮಿಯಿದೆ.

ತಮಿಳುನಾಡಿನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಗೆದ್ದಿದ್ದು ತೀರಾ ಕಡಿಮೆ. ಅದರಲ್ಲೂ ಇತ್ತೀಚೆಗೆ ಲೇಡಿ ಓರಿಯೆಂಟೆಡ್ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ನಯನತಾರಾ ಬಿಟ್ಟರೆ, ಬೇರೆ ನಟಿಯರಿಗೆ ತೀರಾ ಕಡಿಮೆ ಸಕ್ಸಸ್ ರೇಟ್ ಸಿಕ್ಕಿದೆ. ಜಯಲಲಿತಾ ಬಯೋಪಿಕ್‌ 'ಅಮ್ಮ'ದಲ್ಲಿ ಕಂಗನಾ ರಣಾವತ್ ನಟಿಸಿದ್ದರು. ಆ ಸಿನಿಮಾವನ್ನೇ ತಮಿಳುನಾಡಿನ ಜನರು ತಿರುಗಿ ನೋಡಲಿಲ್ಲ. ಇತ್ತೀಚೆಗೆ ತೆರೆಕಂಡ ನಯನತಾರಾ ನಟಿಸಿದ 'ಅನ್ನಪೂರ್ಣಿ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ. ಹೀಗಾಗಿ ನಿರ್ಮಾಪಕರು ಬೆಚ್ಚಿಬಿದ್ದು ರಶ್ಮಿಕಾ ಸಿನಿಮಾವನ್ನು ನಿಲ್ಲಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

More from Filmibeat

English summary
Rashmika Mandanna lady oriented tamil movie Rainbow shelved
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X