ಭಾರತದ ಯುವತಿಯೊಂದಿಗೆ RCB ಆಟಗಾರ ಜೇಕಬ್ ಬೇಥಲ್ ಡೇಟಿಂಗ್? ಯಾರಿದು ಅಂಕಿತಾ ಪಟೇಲ್?
ಇಡೀ ವಿಶ್ವದಲ್ಲಿ ಯಾವ ತಂಡಕ್ಕೆ ಎಷ್ಟು ಫ್ಯಾನ್ ಫಾಲೋಯಿಂಗ್ ಇದೆಯೋ ಅದಕ್ಕಿಂತ ಒಂದು ಹೆಜ್ಜೆ ಹೆಚ್ಚು RCB ತಂಡಕ್ಕಿದೆ. ಹಾಗೇ ಈ ತಂಡವನ್ನು ಪ್ರತಿನಿಧಿಸುತ್ತಿರುವ ಪ್ರತಿಯೊಂದು ಆಟಗಾರನಿಗೂ ಅದೇ ಫಾನ್ ಫಾಲೋಯಿಂಗ್ ಇದೆ. ಇದೂವರೆಗೂ ಆರ್‌ಸಿಬಿಯಲ್ಲಿ ಗುರುತಿಸಿಕೊಂಡಿರುವ ಆಟಗಾರರಿಗೆ ಫೀಮೇಲ್ ಫ್ಯಾನ್ಸ್ ಏನು ಕಮ್ಮಿಯಿಲ್ಲ. ಅಂತಹ ಸ್ಟಾರ್ ಆಟಗಾರರಲ್ಲಿ ಇಂಗ್ಲೆಂಡ್ ಕ್ರಿಕೆಟರ್ ಜೇಕಬ್ ಬೇಥಲ್ ಕೂಡ ಒಬ್ಬರು.
ಐಪಿಎಲ್- 2026ರಲ್ಲಿ ಜೇಬಕ್ ಬೇಥಲ್ ಹೆಚ್ಚೇನು ಕಮಾಲ್ ಮಾಡಿಲ್ಲ. ಇವರು ಆಡಿದ ಪಂದ್ಯಗಳಲ್ಲಿ ಆಕ್ರಮಣಕಾರಿಯಾಗಿ ಆಟ ಆಡುವುದರಲ್ಲಿ ವಿಫಲರಾಗಿದ್ದರು. ಆದರೂ ಅವರಿಗೆ ಫ್ಯಾನ್ ಫಾಲೋವಿಂಗ್ ಏನು ಕಮ್ಮಿಯಾಗಿಲ್ಲ. ಜೇಕಬ್ ಬೇಥಲ್‌ಗೆ ಭಾರತದಲ್ಲಿಯೇ ಅತೀ ಹೆಚ್ಚು ಫ್ಯಾನ್ಸ್ ಇದ್ದಾರೆ. ಇದೊಂದು ಕಡೆಯಾದರೆ, ಜೇಕಬ್ ಬೇಥಲ್ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿ ಇದ್ದಾರೆ.

ಈಗ ಸೋಶಿಯಲ್ ಮೀಡಿಯಾದಲ್ಲಿ ಜೇಕಬ್ ಬೇಥಲ್ ಅವರ ಡೇಟಿಂಗ್ ಕುರಿತು ಸುದ್ದಿಯೊಂದು ಸಂಚನ ಸೃಷ್ಟಿಸಿದೆ. ಭಾರತದ ಯುವತಿಯೊಂದಿಗೆ ಜೇಕಬ್ ಬೇಥಲ್ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಭಾರತದ ಮೀಡಿಯಾಗಳಲ್ಲಿ ಹಲ್‌ಚಲ್ ಎಬ್ಬಿಸಿದೆ. ಅಷ್ಟಕ್ಕೂ ಈ ಆರ್‌ಸಿಬಿ ಆಟಗಾರನ ಜೊತೆ ತಳುಕು ಹಾಕಿಕೊಂಡಿರುವ ಆ ಯುವತಿ ಯಾರು? ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಯುವತಿಯ ಹಿನ್ನೆಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
ಭಾರತದ ಯುವತಿ ಜೊತೆ ಡೇಟಿಂಗ್
ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೊ ವೈರಲ್ ಆಗುತ್ತಿದೆ. ಅದರಲ್ಲಿ ಆರ್‌ಸಿಬಿ ಆಟಗಾರ ಜೇಕಬ್ ಬೇಥಲ್ ಕನ್ನಡಿಯ ಮುಂದೆ ಯುವತಿಯೊಬ್ಬಳ ಜೊತೆಯಲ್ಲಿ ನಿಂತಿದ್ದಾರೆ. ಈ ಫೋಟೊ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜೇಕಬ್ ಬೇಥಲ್ ಮತ್ತೆ ಸುದ್ದಿಯಾಗುವುದಕ್ಕೆ ಶುರುವಾಗಿದ್ದಾರೆ. ಆಕೆ ಪಕ್ಕಾ ಭಾರತೀಯ ಯುವತಿ. ಆಕೆಯೊಂದಿಗೆ ಜೇಕಬ್ ಬೇಥಲ್ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ಯಾರಿದು ಯುವತಿ?
ಯುವತಿಯೊಂದಿಗಿರುವ ಜೇಕಬ್ ಬೇಥಲ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ, ಆ ಯುವತಿಯ ಮುಖ ಕಾಣದೆ ಇರುವುದರಿಂದ ನೆಟ್ಟಿಗರು ತಲೆ ಕೆಡಿಸಿಕೊಂಡು ಹುಡುಕಾಡಿದ್ದಾರೆ. ಆಗ ಅವರಿಗೆ ಸಿಕ್ಕದ್ದೇ ಮುಂಬೈ ಮೂಲದ ಯುವತಿ ಅಂಕಿತಾ ಪಟೇಲ್. ನೆಟ್ಟಿಗರ ಪ್ರಕಾರ ಜೇಕಬ್ ಬೇಥಲ್ ಜೊತೆಯಿರುವ ಆ ಯುವತಿ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಅಂಕಿತಾ ಪಟೇಲ್. ಬಾಲಿವುಡ್‌ನ ಸ್ಟಾರ್ ನಟಿಯರಿಗೆ ಮೇಕಪ್ ಆರ್ಟಿಸ್ಟ್ ಆಗಿ ಅಂಕಿತಾ ಕೆಲಸ ಮಾಡಿದ್ದಾರೆ.

ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ
ಈ ಫೋಟೊ ವೈರಲ್ ಆಗುತ್ತಿದ್ದರೂ, ಇದೂವರೆಗೂ ಇಂಗ್ಲೆಂಡ್ ಹಾಗೂ ಆರ್‌ಸಿಬಿ ಆಟಗಾರ ಜೇಕಬ್ ಬೇಥಲ್ ಎಲ್ಲರೂ ಪ್ರತಿಕ್ರಿಯೆ ನೀಡಿಲ್ಲ. ಹಾಗೇ ಮೇಕಪ್ ಆರ್ಟಿಸ್ಟ್ ಅಂಕಿತಾ ಪಟೇಲ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಈ ಫೋಟೊದಲ್ಲಿ ಇರುವ ಯುವತಿ ಅವರೇನಾ? ಇಲ್ಲ ಬೇರೆನಾ? ಅಥವಾ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ನಿಜನಾ? ಅನ್ನೋದಕ್ಕೆ ಕ್ಲಾರಿಟಿ ಸಿಗದೆ ಬೇಥಲ್ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿರೋದಂತೂ ನಿಜ.
ನಟಿಯೊಂದಿಗೂ ತಳುಕು ಹಾಕೊಂಡಿತ್ತು
ಇಂಗ್ಲೆಂಡ್ ಆಟಗಾರನ ಹೆಸರು ಕೇವಲ ಈ ಯುವತಿಯೊಂದಿಗೆ ಅಷ್ಟೇ ಅಲ್ಲ. ಈ ಹಿಂದೆ ಕೂಡ ನಟ ಆಧ್ಯಾ ಆನಂದ್ ಜೊತೆ ಜೇಕಬ್ ಬೇಥಲ್ ಹೆಸರು ತಳುಕು ಹಾಕೊಂಡಿತ್ತು. ಐಪಿಎಲ್ ಪಂದ್ಯದ ವೇಳೆ ನಟಿ ಆಧ್ಯಾ ಆನಂದ್ ಅವರನ್ನು ಜೇಕಬ್ ಬೇಥಲ್ ಪರಿಚಯವಾಗಿದ್ದರು. ಅಲ್ಲಿಂದ ಇಬ್ಬರಲ್ಲಿ ಆತ್ಮೀಯತೆ ಬೆಳೆದಿತ್ತು ಎಂದು ವರದಿಗಳಾಗಿವೆ. ಆದರೆ, ಈಗ ಇವರಿಬ್ಬರ ನಡುವಿನ ಸಂಬಂಧ ಹೇಗಿದೆ? ಅನ್ನೋದು ಗೊತ್ತಾಗಿಲ್ಲ.


Click it and Unblock the Notifications