₹300ರಿಂದ ₹150 ಕೋಟಿವರೆಗೆ; ರಾವಣನಾಗಲು ದುಬಾರಿ ಸಂಭಾವನೆ ಕೇಳಿದ್ರಾ ರಾಕಿ ಭಾಯ್?

ಇಂದು (ಜನವರಿ 8) ರಾಕಿ ಭಾಯ್ ಯಶ್ ಹುಟ್ಟುಹಬ್ಬ. ಇದೇ ದಿನ ಅವರ ಮೂವರು ಅಭಿಮಾನಿಗಳು ಬ್ಯಾನರ್ ಕಟ್ಟುವ ವೇಳೆ ಮೃತರಾಗಿದ್ದಾರೆ. ಬರ್ತ್‌ಡೇಯಂದೇ ಯಶ್‌ಗೆ ಶಾಕ್ ಸುದ್ದಿ ಸಿಕ್ಕಿದೆ. ಇದೇ ನೋವಿನಲ್ಲಿಯೇ ಶೂಟಿಂಗ್ ಬಿಟ್ಟು ಮೃತರಾದ ತಮ್ಮ ಫ್ಯಾನ್ಸ್ ಕುಟಂಬಕ್ಕೆ ಸಾಂತ್ವಾನ ಹೇಳುವುದಕ್ಕೆ ಬಂದಿದ್ದಾರೆ.

ಯಶ್‌ಗೀಗ ವಿಶ್ವದೆಲ್ಲೆಡೆ ಅಭಿಮಾನಿಗಳು ಇದ್ದಾರೆ. 'ಕೆಜಿಎಫ್ 2' ರಿಲೀಸ್ ಆದ ಬಳಿಕವಂತೂ ರಾಕಿ ಭಾಯ್ ಹವಾ ಕೊಂಚ ಮಟ್ಟಿಗೆ ಜೋರಾಗಿಯೇ ಇದೆ. ಯಶ್ ರೇಂಜ್ ಬದಲಾಗಿದೆ. ರಾಕಿಂಗ್ ಸ್ಟಾರ್ 'ಕೆಜಿಎಫ್ 2' ಬಳಿಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಹೆಚ್ಚಾಗಿದೆ. ನಿಸ್ಸಂದೇಹವಾಗಿ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಆಗಿ ಯಶ್ ಹೊರಹೊಮ್ಮಿದ್ದಾರೆ.

Buzz is that Rocking star Yash asking 150 crore for Ravan Role in Ramayan Movie

'ಕೆಜಿಎಫ್ ಚಾಪ್ಟರ್ 2' ಬಳಿಕ ರಾಕಿ ಭಾಯ್‌ಗೆ ಎಲ್ಲಾ ಭಾಷೆಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ಆದರೆ, ಕನ್ನಡದ ಜೊತೆ ಜೊತೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವುದಕ್ಕೂ ರಾಕಿ ಭಾಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದುವೇ 'ದಂಗಲ್' ಸಿನಿಮಾದ ನಿರ್ದೇಶಕ ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳಲಿರುವ 'ರಾಮಾಯಣ'.

ಹೌದು, 'ರಾಮಾಯಣ' ಸಿನಿಮಾದಲ್ಲಿ ಯಶ್ ನಟಿಸುತ್ತಿರೋದು ಬಹುತೇಕ ಪಕ್ಕಾ ಆಗಿದೆ. ಈ ಸಿನಿಮಾದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದರೆ, ಇತ್ತ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳಲಿದ್ದಾರೆ. ಮೊದಲು ರಾವಣನಾಗಿ ನಟಿಸುವುದಕ್ಕೆ ಯಶ್ ನಿರಾಕರಿಸಿದ್ದಾರೆ ಎನ್ನಲಾಗಿತ್ತು. ಬಳಿಕ ಮತ್ತೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಸುದ್ದಿನೂ ಹೊರಬಂದಿತ್ತು. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಯಶ್ ಈ ಪಾತ್ರಕ್ಕಾಗಿ ಪಡೆಯುತ್ತಿರುವ ಸಂಭಾವನೆ ಬಗ್ಗೆನೂ ಚರ್ಚೆಯಾಗುತ್ತಿದೆ.

Buzz is that Rocking star Yash asking 150 crore for Ravan Role in Ramayan Movie

ಯಶ್ ನಟನಾಗಬೇಕು ಅಂತ ಬೆಂಗಳೂರಿಗೆ ಬಂದಾಗ ಜೇಬಿನಲ್ಲಿ ಕೇವಲ 300 ರೂಪಾಯಿ ಇತ್ತು. ಅದೇ ಈಗ 'ರಾಮಾಯಣ' ಸಿನಿಮಾದಲ್ಲಿ ರಾವಣನಾಗಿ ನಟಿಸುವುದಕ್ಕೆ ಯಶ್ 150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 300 ರೂಪಾಯಿಯಿಂದ 150 ಕೋಟಿ ರೂಪಾಯಿವರೆಗೆ ಬೆಳೆದು ಬಂದ ಯಶ್ ಜರ್ನಿ ಬಗ್ಗೆ ಅವರ ಫ್ಯಾನ್ಸ್ ಮೆಲುಕು ಹಾಕುತ್ತಿದ್ದಾರೆ. ಆದರೆ, 150 ಕೋಟಿ ರೂಪಾಯಿ ಸಂಭಾವನೆ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಸದ್ಯಕ್ಕೆ ಯಶ್ ಈಗ 'ಟಾಕ್ಸಿಕ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಶೂಟಿಂಗ್ ಮಧ್ಯೆನೇ ಬ್ರೇಕ್ ಕೊಟ್ಟು 'ರಾಮಾಯಣ' ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ಎರಡು ಭಾಗಗಳಲ್ಲಿ 'ರಾಮಯಣ' ನಿರ್ಮಾಣ ಆಗುತ್ತಿದ್ದು, ಮೊದಲ ಭಾಗದ ಅಂತ್ಯದಲ್ಲಿ ರಾವಣ ಪ್ರತ್ಯಕ್ಷ ಆಗಲಿದ್ದಾರೆ. ಇನ್ನು ಎರಡನೇ ಭಾಗದಲ್ಲಿ ಯಶ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆಯಂತೆ.

'ಟಾಕ್ಸಿಕ್' ಸಿನಿಮಾದ ಚಿತ್ರೀಕರಣ ಬರದಿಂದ ನಡೆಯುತ್ತಿದೆ. ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್ ಆಗಬಹುದು ಅನ್ನೋ ನಿರೀಕ್ಷೆಯಿತ್ತು. ಆದರೆ, ಯಶ್ ಅದನ್ನು ಹುಸಿಗೊಳಿಸಿದ್ದಾರೆ. ಈ ಮಧ್ಯೆ 'ಕೆಜಿಎಫ್ 3' ಇದೇ ವರ್ಷ ಅಕ್ಟೋಬರ್ ಕೊನೆಯಲ್ಲಿ ಸೆಟ್ಟೇರುತ್ತಿದೆ ಎಂಬ ಮಾತು ಹೇಳಿಬರುತ್ತಿದೆ. ಈ ಸಿನಿಮಾ 2025ಕ್ಕೆ ಬಿಡುಗಡೆಯಾಗುತ್ತೆ ಎಂದೂ ಹೇಳಲಾಗುತ್ತಿದೆ.

More from Filmibeat

English summary
Yash taking 150 crore for Ravan role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X