ಬಾಲಿವುಡ್ ಎಂಟ್ರಿಗೆ 150 ಕೋಟಿ ಡಿಮ್ಯಾಂಡ್ ಮಾಡಿದ್ರಾ ರಾಕಿಂಗ್ ಸ್ಟಾರ್? ರಾವಣನ ಪಾತ್ರಕ್ಕೆ ಯಶ್ ಬಹುತೇಕ ಫಿಕ್ಸ್!?

ಕನ್ನಡ ಚಿತ್ರರಂಗವನ್ನ ಬೇರೆಯೇ ಲೆವೆಲ್‌ಗೆ ತೆಗೆದುಕೊಂಡು ಹೋದ ಸಿನಿಮಾ 'ಕೆಜಿಎಫ್' ಮತ್ತು 'ಕೆಜಿಎಫ್ 2'. ಈ ಬಗ್ಗೆ ಎರಡು ಮಾತಿಲ್ಲ ಬಿಡಿ. ಏಪ್ರಿಲ್ 2022ರಲ್ಲಿ ಬಿಡುಗಡೆಯಾದ 'ಕೆಜಿಎಫ್ 2' ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದು, ಯಶ್ ನ್ಯಾಷನಲ್ ಸ್ಟಾರ್ ಆಗಿದ್ದು ಇಂದಿಗೂ ದಾಖಲೆಯೇ. ಆದರೆ, 'ಕೆಜಿಎಫ್' ನಂತರ ಯಶ್ ಏನ್ಮಾಡ್ತಾರೆ? ಯಾವ ಸಿನಿಮಾ? ಏನು ಪ್ರಾಜೆಕ್ಟ್ ? ಅನ್ನೋ ಪ್ರಶ್ನೆಗಳಿಗೆ ಮಾತ್ರ ಯಾರ ಬಳಿಯೂ ನಿರ್ದಿಷ್ಟ ಉತ್ತರ ಇಲ್ವೇ ಇಲ್ಲ.

ಆದರೆ, ಈಗ ಕೆಲವು ವಾರಗಳಿಂದಾಚೆ ರಾಕಿಂಗ್ ಸ್ಟಾರ್ ಬಾಲಿವುಡ್ ಪ್ರಾಜೆಕ್ಟ್ ಬಗ್ಗೆ ಚರ್ಚೆ ಶುರುವಾಗಿದೆ. ಬಾಲಿವುಡ್‌ನಲ್ಲಿ ಬರ್ತಿರೋ ಬಿಗ್ ಬಜೆಟ್ ಚಿತ್ರ 'ರಾಮಾಯಣ'ದಲ್ಲಿ ಯಶ್ ರಾವಣನ ಪಾತ್ರ ಮಾಡ್ತಾರಂತೆ ಅನ್ನೋ ಮಾತುಗಳು ಮೊದಲೆಲ್ಲಾ ಕೇವಲ ಊಹಾಪೋಹ ಎನ್ನಲಾಗ್ತಿತ್ತು. ಆದರೆ, ಈಗೀಗ ಇದು ನಿಜವೇ ಅನ್ನೋ ಸುದ್ದಿ ಬಾಲಿವುಡ್ ಅಂಗಳದಿಂದಲೇ ಹೊರಬೀಳ್ತಾ ಇದೆ.

yash-ravana-character-ramayana-movie

'ಬರೇಲಿ ಕಿ ಬರ್ಫಿ', 'ದಂಗಲ್' ಮುಂತಾದ ಸದಭಿರುಚಿಯ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರೋ ನಿರ್ದೇಶಕ ನಿತೇಶ್ ತಿವಾರಿ. ಈ ನಿರ್ದೇಶಕ 'ರಾಮಾಯಣ' ಟ್ರೈಲಜಿ ಅಂದ್ರೆ ರಾಮಾಯಣದ ಕಥೆಯನ್ನು ಮೂರು ಭಾಗಗಳ ಚಿತ್ರವನ್ನಾಗಿ ಮಾಡೋಕೆ ತಯಾರಿ ನಡೆಸಿದ್ದಾರಂತೆ. ಭಾರೀ ಬಜೆಟ್‌ನ ಈ ಸಿನಿಮಾಗಳನ್ನು ಮಧು ಮಂಟೇನಾ ನಿರ್ಮಿಸ್ತಿದ್ದಾರೆ.

ನಿತೇಶ್ ತಿವಾರಿಯ ರಾಮಾಯಣದಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸುತ್ತಿದ್ದು, ಸೌತ್ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡಲಿದ್ದಾರೆ. ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಇದ್ರಲ್ಲಿ ರಾವಣನ ಪಾತ್ರ ಮಾಡ್ತಾರೆ ಎನ್ನಲಾಗ್ತಿದೆ. ಹಾಗಂತ ಇದು ಸುಮ್ಮನೆ ಹೀಗೆ ಬಂದು ಹಾಗೆ ಒದೆ ತಿಂದು ಹೋಗೋ ರಾವಣನಲ್ಲ. ಬದಲಿಗೆ ಇಲ್ಲಿ ರಾವಣನ ಪಾತ್ರಕ್ಕೆ ಹೆಚ್ಚು ಪವರ್ ಇದೆಯಂತೆ.

yash-ravana-character-ramayana-movie

ಹಾಗಾಗೇ ಯಶ್ ಇದನ್ನು ಒಪ್ಪಿಕೊಂಡಿದ್ದಾರಂತೆ. ಈಗಾಗಲೇ ಮೂರು ಕಲಾವಿದರು ತಂತಮ್ಮ ಪಾತ್ರಗಳ ಲುಕ್ ಟೆಸ್ಟ್ ಮಾಡಿದ್ದಾರಂತೆ. ರಾಮಾಯಣ ಮೊದಲನೇ ಭಾಗದ ಶೂಟಿಂಗ್ಗಾಗಿ ಯಶ್ 15 ದಿನಗಳ ಕಾಲ್‌ಶೀಟ್ ಕೊಟ್ಟಿದ್ದಾರಂತೆ. ಆದರೆ, ರಾಮಾಯಣದಲ್ಲಿ ನಟಿಸೋಕೆ ಯಶ್ ಪಡೆಯುತ್ತಿರುವ ಸಂಭಾವನೆ ಈಗ ಲೇಟೆಸ್ಟ್ ಹಾಟ್ ನ್ಯೂಸ್ ಆಗಿದೆ.

ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ರಾವಣನ ಪಾತ್ರ ಮಾಡೋಕೆ ಯಶ್ ಬರೋಬ್ಬರಿ 100 ರಿಂದ 150 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರಂತೆ. ಇದ್ರಲ್ಲಿ ಕಮ್ಮಿ ಅಂದರೂ 100 ಕೋಟಿ ರೂಪಾಯಿ ಪೇಮೆಂಟ್ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಇನ್ನುಳಿದ ಹಣ ಚಿತ್ರತಂಡಕ್ಕೆ ಬೇಕಾಗಿರುವ ಡೇಟ್ಸ್ ಮತ್ತು ಎಷ್ಟು ದಿನಗಳ ಶೂಟಿಂಗ್ ಎನ್ನುವುದರ ಮೇಲೆ ನಿಂತಿದೆ ಎನ್ನಲಾಗಿದೆ. ರಾಮಾಯಣ ಎರಡನೇ ಭಾಗದ ಶೂಟಿಂಗ್ ಶ್ರೀಲಂಕಾದಲ್ಲೇ ಹೆಚ್ಚಾಗಿ ನಡೆಯುವುದು ಬಹತೇಕ ಫಿಕ್ಸ್ ಎನ್ನಲಾಗಿದೆ.

ಒಟ್ನಲ್ಲಿ ಇಷ್ಟೊಂದು ಗ್ಯಾಪ್ ನಂತರ ಕೊನೆಗೂ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಸ್ವಲ್ಪ ಗಟ್ಟಿ ಎನ್ನುವಂಥಾ ಸುದ್ದಿಗಳು ಹೊರಬೀಳ್ತಾ ಇರೋದು ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದೆ. ರಾವಣನ ಪಾತ್ರದಲ್ಲಿ ಯಶ್ ಹೇಗೆಲ್ಲಾ ವಿಜೃಂಭಿಸಬಹುದು ಅನ್ನೋ ಅಂದಾಜಿನ ಚರ್ಚೆಗಳು ಈಗಾಗ್ಲೇ ಶುರುವಾಗಿದೆ.

More from Filmibeat

English summary
Buzz is that Rocking star Yash charged 150 crore for Ravana Character in Ramayana Epic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X