ಬೇಗ ಬೇಗ ಸಿನಿಮಾ ಮಾಡಿ ಎಂದಿದ್ದೇ ತಡ ಶಾರುಖ್ ಖಾನ್ ಭೇಟಿಯಾದರೇ ರಾಕಿ ಭಾಯ್? 'ಮನ್ನಥ್'ನಲ್ಲಿ ಯಶ್!
ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಮುಂಬೈನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಅಲ್ಲೇ ನಡೆಯುತ್ತಿರುವುದರಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅಲ್ಲಿನ ಏರಿಯಾಗಳಲ್ಲಿ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳನ್ನು ಸುತ್ತಾಡಿಸಿದ್ದರು. ಈ ವೇಳೆ ಮುಂಬೈನ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದರು.
'ಕೆಜಿಎಫ್ 2' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಯಶ್ ಹಿಂದಿ ಬೆಲ್ಟ್‌ಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 'ಕೆಜಿಎಫ್' ಬಳಿಕ ಎಲ್ಲಾ ಭಾಷಿಗರಿಗೂ ಯಶ್ ಹಾಗೂ ಅವರ ಸಿನಿಮಾಗಳು ಇಷ್ಟ ಆಗಿವೆ. ಇದೇ ವೇಳೆ ಯಶ್ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಶಾರುಖ್ ಖಾನ್ ಕೆಲವೇ ದಿನಗಳ ಹಿಂದಷ್ಟೇ ಯಶ್‌ಗೆ ಸಲಹೆಯನ್ನು ನೀಡಿದ್ದರು. ಬೇಗ ಬೇಗ ಸಿನಿಮಾ ಮಾಡುವಂತೆ ಹೇಳಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಯಶ್ ಮುಂಬೈನಲ್ಲಿರುವ ಶಾರುಖ್ ಖಾನ್ ಬಂಗಲೆ 'ಮನ್ನಥ್'ಗೆ ಭೇಟಿ ಕೊಟ್ಟಿರುವ ಬಗ್ಗೆ ಸುದ್ದಿಯಾಗಿದೆ. ಹೀಗಾಗಿ ಇಬ್ಬರೂ ಸೇರಿ ಸಿನಿಮಾ ಮಾಡಬಹುದು ಎಂಬ ಮಾತುಗಳು ಕೂಡ ಹೇಳಿ ಬರುತ್ತಿದೆ. ಅಸಲಿಗೆ ಯಶ್-ಶಾರುಖ್ ಬಗ್ಗೆ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಏನು? ತಿಳಿಯಲು ಮುಂದೆ ಓದಿ.
ಒಂದ್ಕಡೆ ಪ್ಯಾನ್ ಇಂಡಿಯಾ ಸ್ಟಾರ್ ಯಶ್. ಅದೇ ಇನ್ನೊಂದು ಕಡೆ ಬಾಲಿವುಡ್‌ನ ಬಾದ್‌ಷಾ ಶಾರುಖ್ ಖಾನ್. ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಇಬ್ಬರ ಅಭಿಮಾನಿಗಳ ಆಸೆ. ಆದರೆ, ಫ್ಯಾನ್ಸ್ ಅಂದುಕೊಂಡ ಕೂಡಲೇ ಸಿನಿಮ ಆಗಬೇಕಲ್ಲ. ಇಬ್ಬರೂ ನಟರೂ ಭೇಟಿ ಮಾಡಬೇಕು. ಮಾತುಕಥೆಗಳಾಗಬೇಕು. ಇಬ್ಬರಿಗೂ ಹೊಂದುವಂತಹ ಕತೆ ಸಿದ್ಧವಾಗಬೇಕು. ಆಗಲೇ ಇಂತಹ ಹೈ ವೋಲ್ಟೇಜ್ ಸಿನಿಮಾ ನಿರ್ಮಾಣ ಆಗುತ್ತಿದೆ. ಅದಕ್ಕೆ ಯಶ್ ಹಾಗೂ ಶಾರುಖ್ ಖಾನ್ ಈಗ ಮುನ್ನುಡಿ ಬರೆದಂತೆ ಇದೆ.
ಶಾರುಖ್ ಖಾನ್ ಮುಂಬೈ ನಿವಾಸ ಮನ್ನಥ್‌ಗೆ ಯಶ್ ಭೇಟಿ ಕೊಟ್ಟಿದ್ದಾರೆಂಬ ಸುದ್ದಿಯನ್ನು ಫಿಲ್ಮ್‌ಫೇರ್ ಪ್ರಕಟಿಸಿತ್ತು. ಅಲ್ಲಿಂದ ಇವರಿಬ್ಬರೂ ಸೇರಿ ಸಿನಿಮಾ ಮಾಡುತ್ತಾರೆ ಅನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇಬ್ಬರೂ ಭೇಟಿಯ ಬಗ್ಗೆ ಅಧಿಕೃತವಾಗಿ ಎಲ್ಲಿವೂ ಹೇಳಿಕೊಂಡಿಲ್ಲ. ಆದರೆ, ಶಾರುಖ್ ಖಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ಯಶ್ ಚರ್ಚೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಶಾರುಖ್ ಖಾನ್ ನಟಿಸಿದ 'ಝೀರೋ' ರಿಲೀಸ್ ಎದುರಿಗೇ 'ಕೆಜಿಎಫ್' ಚಾಪ್ಟರ್ 1 ರಿಲೀಸ್ ಮಾಡಿ ಗೆದ್ದಿದ್ದರು. ಅಲ್ಲಿಂದ ಇಬ್ಬರ ನಡುವೆ ಪೈಪೋಟಿಯಿದೆ ಎಂದುಕೊಂಡಿದ್ದೇ ಹೆಚ್ಚು. ಇತ್ತೀಚೆಗೆ ಶಾರುಖ್ ಖಾನ್ ವೇದಿಕೆಯೊಂದರಲ್ಲಿ "ಯಶ್, ಬೇಗನೇ ಸಿನಿಮಾ ಮಾಡಿ.. ನಾವು ನಿಮ್ಮ ಸಿನಿಮಾವನ್ನು ನೋಡುವುದಕ್ಕೆ ಕಾಯುತ್ತಿದ್ದೇವೆ" ಎಂದು ಹೇಳಿದ್ದರು. ಯಶ್ ಸಿನಿಮಾ ಬಗ್ಗೆ ಶಾರುಖ್ ಖಾನ್ ಹೇಳಿದ ಮಾತು ಇಬ್ಬರ ಫ್ಯಾನ್ಸ್ ಕೂಡ ಪಾಸಿಟಿವ್ ಆಗಿಯೇ ಪ್ರತಿಕ್ರಿಯಿಸಿದ್ದರು.
ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಗಳಿಸುವ ತಾಕತ್ತು ಇರುವ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೇ ಹೇಗಿರಬಹುದು? ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆಯಬಹುದು. ಯಶ್‌ಗಿರುವ ಕ್ರೇಜ್, ಶಾರುಖ್ ಖಾನ್‌ಗೆ ಇರುವ ಫ್ಯಾನ್ ಫಾಲೋವಿಂಗ್ ಬಾಕ್ಸಾಫೀಸ್‌ನಲ್ಲಿ ಚರಿತ್ರೆಯನ್ನು ಬರೆಯಬಹುದು. ಇದರೊಂದಿಗೆ ಶಾರುಖ್ ಖಾನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತೆ ಆಗುತ್ತೆ. ಮುಂದಿನ ದಿನಗಳಲ್ಲಿ ಈ ಇಬ್ಬರು ಅಭಿಮಾನಿಗಳು ಹಾಗೂ ಕನ್ನಡಿಗರ ಆಸೆ ಈಡೇರುತ್ತಾ? ಅನ್ನೋದು ನೋಡೋಣ.


Click it and Unblock the Notifications











