'ಪುಷ್ಪ 2'.. ನಾಯಕಿಯರೂ 2; ಸ್ಪೆಷಲ್ ಸಾಂಗ್‌ನಲ್ಲಿ ಅಲ್ಲು ಅರ್ಜುನ್ ಇಬ್ಬರು ಸ್ಟಾರ್ ಹೀರೋಯಿನ್ ಸ್ಟೆಪ್ಸ್?
ದಕ್ಷಿಣ ಭಾರತದಲ್ಲಿ ಸೀಕ್ವೆಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. 'ಬಾಹುಬಲಿ' ಸಿನಿಮಾ ಬಳಿಕ ಸೀಕ್ವೆಲ್‌ಗಳು ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆದಿದ್ದೂ ಇದೆ. ಇಂತಹ ಕ್ರೇಜಿ ಸೀಕ್ವೆಲ್‌ನಲ್ಲಿ ಟಾಲಿವುಡ್‌ನ ಐಕಾನ್ ಸ್ಟಾರ್ ನಟನೆಯ 'ಪುಷ್ಪ 2' ಕೂಡ ಒಂದು. 'ಪುಷ್ಪ' ಸಿನಿಮಾ ಈಗಾಗಲೇ ದಕ್ಷಿಣ ಭಾರತದ ಹಾಗೂ ಉತ್ತರ ಭಾರತ ಎರಡೂ ಕಡೆ ಜೋರಾಗಿಯೇ ಸದ್ದು ಮಾಡಿದೆ. ಹೀಗಾಗಿ ಸೀಕ್ವೆಲ್ ಅದಕ್ಕಿಂತಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
'ಪುಷ್ಪ 2' ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಜೋಡಿಯ ಮೂರನೇ ಸಿನಿಮಾ. ಈ ಹಿಂದೆ ಬಂದ ಎರಡೂ ಸಿನಿಮಾಗಳೂ ಹೊಸ ಟ್ರೆಂಡ್ ಅನ್ನೇ ಸೃಷ್ಟಿ ಮಾಡಿವೆ. 'ಪುಷ್ಪ 2' ಗೆದ್ದರೆ ಈ ಜೋಡಿ ಹ್ಯಾಟ್ರಿಕ್ ಸಕ್ಸಸ್ ಆಗುತ್ತೆ. 'ಪುಷ್ಪ 2' ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದಲ್ಲಿ ಕ್ರೇಜ್ ಅನ್ನು ಹುಟ್ಟಾಕಿದೆ. ಆದರೆ, ರಿಲೀಸ್ ಆದ ಮೇಲೆ ಹೇಗಿರುತ್ತೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಈ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಈಗಾಗಲೇ ಸಾವಿರ ಕೋಟಿ ದಾಟಿದೆ. ಇದು ದಕ್ಷಿಣ ಭಾರತದ ಮಟ್ಟಿದೆ ದೊಡ್ಡ ಬ್ಯುಸಿನೆಸ್ ಅಂತಲೇ ಹೇಳಬಹುದು. ಇಷ್ಟು ದೊಡ್ಡ ಮಟ್ಟಕ್ಕೆ ಸಿಕ್ಕಿರುವ ಕ್ರೇಜ್ ನೋಡಿದ ಬಳಿಕ ಸಿನಿಮಾದಲ್ಲಿ ಮತ್ತಷ್ಟು ಮನರಂಜನೆ ನೀಡುವುದಕ್ಕೆ ಮುಂದಾಗಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಅದೇನು ಅಂದರೆ ಸ್ಪೆಷಲ್ ಸಾಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ತೀರ್ಮಾನಿಸಿದೆ ಅನ್ನೋದು ಸದ್ಯದ ಸುದ್ದಿ.
'ಪುಷ್ಪ' ಸಿನಿಮಾದ ಹೈಲೈಟ್ ಆಗಿದ್ದಿದ್ದು ಸಮಂತಾ ನಟಿಸಿದ ಸ್ಪೆಷಲ್ ಸಾಂಗ್. "ಊ ಅಂಟಾವಾ ಮಾವ.." ಸಾಂಗ್ ಸಿನಿಮಾ ಮಂದಿಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಆ ಹಾಡಿಗೆ ಪ್ರತ್ಯೇಕವಾಗಿ ಅಭಿಮಾನಿಗಳಿಗೆ ಹುಟ್ಟಿಕೊಂಡಿದ್ದರು. ಥಿಯೇಟರ್‌ನಲ್ಲಿ ಈ ಹಾಡು ಬರುತ್ತಿದ್ದಂತೆ ಥಿಯೇಟರ್ ರೂಫ್ ಕಿತ್ತು ಹೋಗುವಂತೆ ಶಿಳ್ಳೆಗಳು ಬಿದ್ದಿದ್ದವು. ಈಗ 'ಪುಷ್ಪ 2'ನಲ್ಲಿ ಇಂತಹದ್ದೊಂದು ಸಾಂಗ್ ಇರುತ್ತಾ? ಇದ್ದಕ್ಕೆ ಹೇಗಿರುತ್ತೆ ಅನ್ನೋ ಕುತೂಹಲವಿದೆ.

ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಅದೇನಪ್ಪಾ ಅಂದರೆ, ಅಲ್ಲು ಅರ್ಜುನ್ ಇಬ್ಬರ ನಾಯಕಿಯರು ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. 'ಪುಷ್ಪ 2' ಸಿನಿಮಾದ ಸ್ಪೆಷಲ್ ಸಾಂಗ್‌ಗೆ ಈಗಾಗಲೇ ಬಾಲಿವುಡ್ ನಟಿ ಶ್ರದ್ಧಾ ಕಪೂರ್‌ಗೆ ಆಫರ್ ಕೊಡಲಾಗಿತ್ತು. ಆದರೆ, ಆ ನಟಿ ಸ್ಪೆಷಲ್ ಸಾಂಗ್‌ನಲ್ಲಿ ನಟಿಸುವುದಕ್ಕೆ ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ದಕ್ಷಿಣ ಭಾರತದ ನಟಿಯರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಪ್ರೇಕ್ಷಕರಿಗೆ ಹೇಗಾದರೂ ಮಾಡಿ ಮನರಂಜನೆ ನೀಡಲೇ ಬೇಕು ಅಂತಿರುವ ಚಿತ್ರತಂಡ ಇಬ್ಬರ ನಾಯಕಿಯರನ್ನು ಕರೆದುಕೊಂಡು ಬಂದಿದೆ ಅನ್ನೋ ಸುದ್ದಿಯಿದೆ. ತೆಲುಗಿನ ಸೆನ್ಸೇಷನ್ ಶ್ರೀಲೀಲಾ ಈ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ. ಡ್ಯಾನ್ಸ್ ವಿಷಯದಲ್ಲಿ ಅಲ್ಲು ಅರ್ಜುನ್‌ಗೆ ಸಮನಾಗಿ ಹೆಜ್ಜೆ ಹಾಕಬಲ್ಲ ಈ ನಟಿ 'ಪುಷ್ಪ 2'ನ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಗಂತ ಸರ್ಪ್ರೈಸ್ ಇಲ್ಲಿಗೆ ನಿಂತಿಲ್ಲ. ಮೊದಲ ಪಾರ್ಟ್‌ನಲ್ಲಿ ಧೂಳೆಬ್ಬಿಸಿದ್ದ ಸಮಂತಾ ಕೂಡ ಈ ಸ್ಪೆಷಲ್ ಸಾಂಗ್‌ನಲ್ಲಿ ಇರುತ್ತಾರಂತೆ. ಒಂದೇ ಹಾಡಿನಲ್ಲಿ ಶ್ರೀಲೀಲಾ ಹಾಗೂ ಸಮಂತಾ ಇಬ್ಬರೂ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಹಾಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ದೇವಿಶ್ರೀ ಪ್ರಸಾದ್ ಈ ಹಾಡಿಗೆ ಟ್ಯೂನ್ ಹಾಕಿದ್ದು, ಸಿನಿಪ್ರಿಯರಿಗೆ ಸಖತ್ ಕಿಕ್ ಸಿಗೋದಂತೂ ಗ್ಯಾರಂಟಿ.


Click it and Unblock the Notifications











