'ಪುಷ್ಪ 2'ನಲ್ಲಿ 'ಕೆಜಿಎಫ್' ಅಧೀರನಿಗೇನು ಕೆಲಸ? ಟಾಲಿವುಡ್‌ನಲ್ಲಿ ಏನಿದು ಸುದ್ದಿ?

ಈ ವರ್ಷ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಬಹುದಾದ ಸಿನಿಮಾಗಳ ಪಟ್ಟಿಯಲ್ಲಿ 'ಪುಷ್ಪ 2' ಮೊದಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿದ್ದು, ದಾಖಲೆಗಳನ್ನು ಬರೆಯುವುದಕ್ಕೆ ಪಣ ತೊಟ್ಟು ನಿಂತಿದೆ. 'ಪುಷ್ಪ' ರಿಲೀಸ್ ಆದಾಗ, ಅಲ್ಲು ಅರ್ಜುನ್ ಮ್ಯಾನರಿಸಂ, ಡ್ಯಾನ್ಸ್ ಭಾರತದಾದ್ಯಂತ ಸದ್ದು ಮಾಡಿತ್ತು. ಈಗ ಅದೇ ಜೋಷ್‌ನಲ್ಲಿ 'ಪುಷ್ಪ 2' ನಿರ್ಮಾಣ ಆಗುತ್ತಿದೆ.

'ಪುಷ್ಪ' ಮೊದಲಿನಿಂದಲೂ 'ಕೆಜಿಎಫ್' ಹಾದಿಯನ್ನೇ ಫಾಲೋ ಮಾಡುತ್ತಿದೆ. 'ಕೆಜಿಎಫ್' ದಾಖಲೆಯನ್ನು ಹಿಂದಿಕ್ಕುವುದನ್ನೇ ಗುರಿಯಾಗಿ ಇಟ್ಟುಕೊಂಡಂತೆ ಇದೆ. ಯಾಕಂದ್ರೆ 'ಪುಷ್ಪ' ರಿಲೀಸ್ ವೇಳೆ 'ಕೆಜಿಎಫ್' ಚಾಪ್ಟರ್ 1ರ ಮೇಲೆ ಕಣ್ಣಿಟ್ಟಿತ್ತು. ಕೆಜಿಎಫ್ ಬಾಕ್ಸಾಫೀಸ್ ದಾಖಲೆಯನ್ನು ಉಡೀಸ್ ಮಾಡುವುದಕ್ಕೆ ಹೊರಟಿತ್ತು. ಆ ಪ್ರಯತ್ನ ಯಶಸ್ಸು ಕೂಡ ಸಿಕ್ಕಿತ್ತು. ಸುಮಾರು 350 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು.

Buzz is that Sanjay Dutt in guest appearance in Allu Arjun movie Pushpa The Rule

ಈಗ 'ಪುಷ್ಪ 2' ನಿರ್ಮಾಣ ಆಗುತ್ತಿದೆ. 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆಯನ್ನು ಮುರಿಯುವುದನ್ನು ಗುರಿಯಾಗಿಟ್ಟುಕೊಂಡೇ ಚಿತ್ರತಂಡ ಕೆಲಸ ಮಾಡುತ್ತಿದೆ. ಹೀಗಾಗಿ 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ 1250 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿಬೇಕಿದೆ. ಇದಕ್ಕಾಗಿ ಮೊದಲಿನಿಂದಲೂ ಸಾಕಷ್ಟು ಕಸರತ್ತು ಮಾಡುತ್ತಲೇ ಇದೆ. ಈ ಸಾಹಸಕ್ಕೀಗ ಹೊಸ ಸೇರ್ಪಡೆ ಅಂದರೆ, ಅದು ಸಂಜಯ್ ದತ್.

ಟಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಅಲ್ಲು ಅರ್ಜುನ್ ನಟಿಸುತ್ತಿರುವ ಸಿನಿಮಾದಲ್ಲಿ ಸಂಜಯ್ ದತ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸಂಜಯ್ ದತ್ 'ಪುಷ್ಪ 2' ನಲ್ಲಿ ನಟಿಸುವುದೇ ಆದರೆ, ಅವರ ಪಾತ್ರ ಹೇಗಿರಬಹುದು? ಅನ್ನೋ ಕುತೂಹಲ ಈಗಿನಿಂದಲೇ ಹೆಚ್ಚಾಗಿದೆ. ಇದು ಕೇವಲ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬೀಳಬೇಕಿದೆ.

Buzz is that Sanjay Dutt in guest appearance in Allu Arjun movie Pushpa The Rule

'ಪುಷ್ಪ 2' ಸುತ್ತಮುತ್ತ ಸಾಕಷ್ಟು ಸುದ್ದಿಗಳು ಓಡಾಡುತ್ತಿವೆ. ನಿರ್ದೇಶಕ ಸುಕುಮಾರ್ ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ರೀಚ್ ಮಾಡುವುದಕ್ಕೆ ಸಾಕಷ್ಟು ಸಾಹಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್‌ಗಿಂತಲೂ ಮುನ್ನ ನಟಿ ಜಾಹ್ನವಿ ಕಪೂರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ಆದರೆ, ಇವರಿಬ್ಬರೂ ನಟಿಸುವ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಸದ್ಯ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಜೋಡಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಆಗಸ್ಟ್ 15ರಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಹೀಗಾಗಿ ಆದಷ್ಟು ಬೇಗ ಚಿತ್ರೀಕರಣ ಮುಗಿಸಬೇಕಿದೆ. ಸದ್ಯ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಇನ್ನೂ ಹೊರ ಹಾಕಿಲ್ಲ. ಸಿನಿಮಾ ಯಾವ ಹಂತದಲ್ಲಿದೆ ಅನ್ನೋ ಸುಳಿವು ಸದ್ಯಕ್ಕಿಲ್ಲ. ಆದರೆ, ಆಗಸ್ಟ್ 15ಕ್ಕೆ ಪಕ್ಕಾ ರಿಲೀಸ್ ಆಗುತ್ತೆ ಅನ್ನೋ ನಂಬಿಕೆಯಲ್ಲಿ ಅಲ್ಲು ಅರ್ಜುನ್ ಫ್ಯಾನ್ಸ್ ಇದ್ದಾರೆ.

More from Filmibeat

English summary
Buzz: Sanjay Dutt in Pushpa 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X