Sanjay Dutt: ಕೆಜಿಎಫ್‌ 2 ಬಳಿಕ ಅಧೀರನಿಗೆ ಹೆಚ್ಚಿದ ಬೇಡಿಕೆ..'ಲಿಯೋ'ಗೆ ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು?

ಇಂದು (ಅಕ್ಟೋಬರ್ 19) 'ಘೋಸ್ಟ್' ಹಾಗೂ 'ಲಿಯೋ' ಈ ಎರಡು ಸಿನಿಮಾಗಳ ಹಣೆಬರಹವನ್ನು ಪ್ರೇಕ್ಷಕರು ಬರೆದಾಗಿದೆ. ಒಂದೊಂದು ಸಿನಿಮಾಗೂ ಒಂದೊಂದು ರೀತಿಯ ರೆಸ್ಪಾನ್ಸ್ ಸಿಕ್ಕಿದೆ. ಶಿವಣ್ಣ 'ಘೋಸ್ಟ್' ಸಿನಿಮಾಗೆ ಪ್ರೇಕ್ಷಕರು ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದಾರೆ. ಅದೇ 'ಲಿಯೋ' ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಲೋಕೇಶ್ ಕನಗರಾಜ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಅಲ್ಲದೆ ವಿಜಯ್ ಜೊತೆ ಅಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಬಾಲಿವುಡ್ ನಟ ಸಂಜಯ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಅದೆಲ್ಲವೂ ಈಗ ಹುಸಿಯಾಗಿದೆ. ಯಾರೇ ಇದ್ದರೂ ತಮಿಳು ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿಲ್ಲ.

sanjay-dutt-thalapathy-vijay-movie-leo

'ಕೆಜಿಎಫ್ 2' ಬಳಿಕ ಸಂಜಯ್ ದತ್ ನಟಿಸಿದ 2ನೇ ದಕ್ಷಿಣ ಭಾರತದ ಸಿನಿಮಾ 'ಲಿಯೋ'. 'ಕೆಜಿಎಫ್ 2' ಬಳಿಕ ಸಂಜಯ್ ದತ್ ದಕ್ಷಿಣ ಭಾರತದಲ್ಲೂ ಬೇಡಿಕೆಯ ನಟನಾಗಿದ್ದಾರೆ. ಹೀಗಾಗಿ 'ಲಿಯೋ'ಗೆ ದೊಡ್ಡ ಮೊತ್ತವನ್ನು ಸಂಭಾವನೆಯ ರೂಪದಲ್ಲಿ ಪಡೆದಿದ್ದಾರೆ ಅನ್ನೋ ಮಾತು ಕಾಲಿವುಡ್‌ನಲ್ಲಿ ಓಡಾಡುತ್ತಿದೆ.

'ಲಿಯೋ'ದಲ್ಲಿ ಸಂಜಯ್ ಪಾತ್ರ ಹೇಗಿದೆ?

'ಲಿಯೋ' ಸಿನಿಮಾದಲ್ಲಿಯೂ ಸಂಜಯ್ ದತ್ ವಿಲನ್. ಆಂಟೋನಿ ದಾಸ್ ಅವತಾರದಲ್ಲಿ ಸಂಜಯ್ ದತ್ ಖಡಕ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ದಳಪತಿ ವಿಜಯ್ ಹಾಗೂ ಸಂಜಯ್ ದತ್ ಕಾದಾಟವನ್ನು ನೋಡುವುದಕ್ಕೆಂದೇ ಪ್ರೇಕ್ಷಕರು ಕಾತುರದಿಂದ ಕಾದು ಕೂತಿದ್ದರು. ಆದರೆ, ನಿರೀಕ್ಷೆ ಮಾಡಿದ ಮಟ್ಟದಲ್ಲಿ ಇಬ್ಬರ ಕಾಂಬಿನೇಷನ್ ವರ್ಕ್ ಆಗಿಲ್ಲ ಅನ್ನೋದು ಸಿನಿಮಾ ನೋಡಿದವರ ಅಭಿಪ್ರಾಯ. ಆದ್ರೀಗ ಸಂಜಯ್ ದತ್ ಪಾತ್ರದ ಬಗ್ಗೆ ಚರ್ಚೆಯಾಗುತ್ತಿಲ್ಲ. ಬದಲಾಗಿ ಪಡೆದ ಸಂಭಾವನೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.

sanjay-dutt-thalapathy-vijay-movie-leo

'ಲಿಯೋ' ಸಂಜಯ್ ದತ್ ಪಡೆದಿದ್ದು ಎಷ್ಟು?

ದಳಪತಿ ವಿಜಯ್ ಹಾಗೂ ಸಂಜಯ್ ದತ್ ಮುಖಾ ಮುಖಿಯನ್ನು ನೋಡುವುದಕ್ಕೇ ಹಬ್ಬ. ಇದೇ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದ್ದಂತೂ ಸತ್ಯ. ಆದರೂ, ಸಂಜಯ್ ದತ್ ಈ ಸಿನಿಮಾದಲ್ಲಿ ನಟಿಸುವುದಕ್ಕೆ ದೊಡ್ಡ ಮೊತ್ತವನ್ನೇ ಪಡೆದಿದ್ದಾರೆ ಎನ್ನಲಾಗಿದೆ. 'ಲಿಯೋ'ದ ಆಂಟೋನಿ ದಾಸ್ ಪಾತ್ರದಲ್ಲಿ ನಟಿಸುವುದಕ್ಕೆ ಸಂಜಯ್ ದತ್ ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಅಧೀರ ಪಾತ್ರದಷ್ಟು ಸ್ಕೋಪ್ ಇಲ್ಲ

'ಕೆಜಿಎಫ್ 2'ದ ಅಧೀರನ ಪಾತ್ರ ಸಂಜಯ್ ದತ್‌ಗೆ ಹೊಸ ಇಮೇಜ್ ಕೊಟ್ಟಿದ್ದೇನೋ ನಿಜ. ಹಾಗೇ 'ಲಿಯೋ'ದ ಆಂಟೋನಿ ದಾಸ್ ಪಾತ್ರಕ್ಕೂ ಹಾಗೇ ಹೊಸ ಇಮೇಜ್ ಸಿಗಬಹುದು ಅಂತ ನಿರೀಕ್ಷೆ ಮಾಡಲಾಗಿತ್ತು. ಆದರೆ, ತಮಿಳು ಚಿತ್ರರಂಗಕ್ಕೆ ಸಂಜಯ್ ದತ್ ಎಂಟ್ರಿನೇ ಸರಿಯಾಗಿಲ್ಲ. ಆಂಟೋನಿ ದಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿದ್ದಾರೆ. ಇನ್ನೊಂದು ಕಡೆ ಅರ್ಜುನ್ ಸರ್ಜಾ ಪಾತ್ರ ಕೂಡ ಅಷ್ಟಕ್ಕಷ್ಟೇ ಎನ್ನಲಾಗುತ್ತಿದೆ.

'ಲಿಯೋ' ಬಾಕ್ಸಾಫೀಸ್ ಲೆಕ್ಕಾಚಾರವೇನು?

'ಲಿಯೋ' ಬಿಡುಗಡೆಗೂ ಮುನ್ನ ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿತ್ತು. ಟಿಕೆಟ್ ಖರೀದಿ ಮಾಡಿದ್ದು ನೋಡಿದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಮೊದಲ ದಿನ ವರ್ಲ್ಡ್‌ ವೈಡ್ ಕಲೆಕ್ಷನ್ ಸುಮಾರು 100 ಕೋಟಿ ರೂಪಾಯಿ ದಾಟಬಹುದು ಎಂದು ಹೇಳಲಾಗುತ್ತಿದೆ.

More from Filmibeat

English summary
Buzz is that Sanjay Dutt took 8 crore for Thalapathy Vijay Movie Leo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X