ಮದುವೆಗೆ ಸಜ್ಜಾಗುತ್ತಿರೋ ಮಿಲ್ಕಿ ಬ್ಯೂಟಿ ತಮನ್ನಾ: ಯಾವಾಗ? ಎಲ್ಲಿ?
ಮಿಲ್ಕಿ ಬ್ಯೂಟಿ ತಮನ್ನಾ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ಸಿನಿಪ್ರಿಯರಿಗೆ ತಮನ್ನಾ ಚೆನ್ನಾಗಿಯೇ ಪರಿಚಯವಿದೆ. ಇತ್ತೀಚೆಗೆ ಸೌತ್ ಸಿನಿಮಾಗಳಿಗೆ ಗುಡ್ ಬೈ ಹೇಳಿ ಬಾಲಿವುಡ್‌ನಲ್ಲಿ ಸೆಟಲ್ ಆಗುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ.
ಉತ್ತರ ಭಾರತ ಮೂಲದವರೇ ಆಗಿರೋ ತಮನ್ನಾ ಹಿಂದಿ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿದ್ದರೂ, ಯಶಸ್ಸು ಅಂತ ಸಿಕ್ಕಿದ್ದು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೇ.. ಯಶ್ ನಟಿಸಿದ 'ಕೆಜಿಎಫ್ ಚಾಪ್ಟರ್ 1'ನಲ್ಲಿ ಕೇವಲ ಒಂದು ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದಾರಷ್ಟೇ. ಅದು ಬಿಟ್ಟರೆ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ.

ಬಾಲಿವುಡ್‌ನಲ್ಲಿ ಸೆಟೆಲ್ ಆಗಲು ಯತ್ನಿಸುತ್ತಿರುವ ತಮನ್ನಾ ಇತ್ತೀಚೆಗೆ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದರು. ಹಾಟ್ ಹಾಗೂ ಕಿಸ್ಸಿಂಗ್ ಸೀನ್‌ಗಳಲ್ಲಿ ನಟಿಸಿ ವಿವಾದ ಕೇಂದ್ರ ಬಿಂದುವಾಗಿದ್ದರು. ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವಾಗ ಕಿಸ್ಸಿಂಗ್ ಸೀನ್ ಮಾಡೋದಿಲ್ಲ ಅಂತ ಷರತ್ತು ಹಾಕಿದ್ದ ತಮನ್ನಾ ಈಗ ಅಂತಹದ್ದೇ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಚರ್ಚೆಯಾಗಿತ್ತು.
ಇದೇ ವೇಳೆ ಬಾಲಿವುಡ್‌ನಲ್ಲಿ ಗಮನ ಸೆಳೆದಿರುವ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿರೋ ವಿಷಯ ರಿವೀಲ್ ಆಗಿತ್ತು. ತಮನ್ನಾ ಹಾಗೂ ವಿಜಯ್ ವರ್ಮಾ ಇಬ್ಬರೂ ಅನೇಕ ಸಂದರ್ಭಗಳಲ್ಲಿ ಪಾಪರಾಜಿಗಳಿಗೆ ಸಿಕ್ಕಿ ಬಿದ್ದಿದ್ದರು.
ವಿಜಯ್ ವರ್ಮಾ ಬಾಲಿವುಡ್‌ನ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ತಮನ್ನಾ ಕೂಡ ಕೆಲವು ಹಿಂದಿ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಿರುವಾಗ ಈ ಜೋಡಿ ಮದುವೆ ಬಗ್ಗೆ ಯೋಚನೆ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿದರೂ, ಬಾಲಿವುಡ್ ಮಂದಿ ಮಾತ್ರ ಈ ಜೋಡಿ ಶೀಘ್ರದಲ್ಲೇ ಮದುವೆ ಆಗುತ್ತಿರೋ ಸುದ್ದಿಯನ್ನು ಹಬ್ಬಿಸಿದ್ದಾರೆ.

ತಮನ್ನಾಗೆ ಈಗ 33 ವರ್ಷ. ಇತ್ತ ಬಾಯ್‌ಫ್ರೆಂಡ್ ವಿಜಯ್ ವರ್ಮಾಗೂ 37 ವರ್ಷ. ಹೀಗಾಗಿ ಇಬ್ಬರ ಮನೆಯಲ್ಲೂ ಮದುವೆಯಾಗುವಂತೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ಇಬ್ಬರೂ ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಹೀಗಂತ ಬಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ. 2024ರ ಫೆಬ್ರವರಿಯಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಮದುವೆ ಆಗಲಿದ್ದಾರೆ ಅನ್ನೋದು ಸದ್ಯದ ಸುದ್ದಿ.
ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಇಬ್ಬರ ಕುಟುಂಬವೂ ಮುಂದಿನ ವರ್ಷ ಫೆಬ್ರವರಿಯಲ್ಲಿ ಮದುವೆ ಆಗಲು ಗ್ರೀನ್ ಸಿಗ್ನಲ್ ಕೊಟ್ಟಿವೆಯಂತೆ. ಈ ಜೋಡಿ ಕೂಡ ಮದುವೆ ಆಗುವುದಾಗಿ ಮಾತು ಕೊಟ್ಟಿದ್ದು, ಇಬ್ಬರೂ ಶೀಘ್ರವೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications











