ರಾಜಮೌಳಿ-ಮಹೇಶ್ ಬಾಬು ಸಿನಿಮಾ ಟೈಟಲ್ ಲೀಕ್? ಆಧ್ಯಾತ್ಮಿಕ ಹಿನ್ನೆಲೆಯ ಶೀರ್ಷಿಕೆ ಯಾಕೆ?

ದಕ್ಷಿಣ ಭಾರತದ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ರಾಜಮೌಳಿ-ಮಹೇಶ್ ಬಾಬು ಸಿನಿಮಾ ಕೂಡ ಇದೆ. 'SSMB29' ಅನ್ನೋ ಟೈಟಲ್ ಇಟ್ಟುಕೊಂಡು ಸಿನಿಮಾ ಶೂಟಿಂಗ್ ಕೂಡ ನಡೆಯುತ್ತಿದೆ. 'ಬಾಹುಬಲಿ' ಬಳಿಕ ರಾಜಮೌಳಿ ನಿರ್ದೇಶನ ಸಿನಿಮಾಗಳ ಮೇಲೆ ಕೇವಲ ಸೌತ್ ಸಿನಿ ಇಂಡಸ್ಟ್ರಿ ಅಷ್ಟೇ ಅಲ್ಲ. ಇಡೀ ವಿಶ್ವವೇ ಎದುರು ನೋಡುತ್ತಿದೆ. ಅದರಲ್ಲೂ RRR ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಹೀಗಾಗಿ ಈ ಸಿನಿಮಾ ಮೇಲೂ ನಿರೀಕ್ಷೆಗಳು ದುಪ್ಪಟ್ಟಾಗಿವೆ.

ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಈಗಾಗಲೇ ಹಲವು ವಿಷಯಗಳಿಗೆ ಚರ್ಚೆಯಾಗುತ್ತಿದೆ. ಸಿನಿಮಾ ಅನೌನ್ಸ್ ಆದ ದಿನದಿಂದಲೂ ಒಂದು ಒಂದು ಸುದ್ದಿ ಬೆರಗುಗೊಳಿಸುತ್ತಲೇ ಇದೆ. ಅದರಲ್ಲೊಂದು ಈ ಸಿನಿಮಾದ ಬಜೆಟ್. ಸುಮಾರು ₹1000 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ ಎಂಬ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಇದು ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ದುಬಾರಿ ಬಜೆಟ್ ಸಿನಿಮಾ ಎನಿಸಿಕೊಂಡಿದೆ.

Buzz is that Telugu Superstar Mahesh Babu and Rajamouli Film title will be Vaaranaasi

ಅಂತರರಾಷ್ಟ್ರೀಯ ಮಟ್ಟದಲ್ಲಿ ದೃಶ್ಯ ವೈಭವ ಇರುತ್ತೆ. ಆಕ್ಷನ್ ಸೀಕ್ವೆನ್ಸ್ ಕೂಡ ಹಾಲಿವುಡ್‌ ಅನ್ನೂ ಮೀರಿಸಲಿದೆ. ಇನ್ನು ಸಿನಿಮಾ ಟೆಕ್ನಿಕಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುತ್ತೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಗ್ಯಾಪ್‌ನಲ್ಲಿ ರಾಜಮೌಳಿ ಇದೇ ನವೆಂಬರ್ 15ರಂದು ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ನೀಡುವುದಕ್ಕೆ ಸಜ್ಜಾಗಿದ್ದಾರೆ. ಅಷ್ಟರಲ್ಲೇ ಟಾಲಿವುಡ್‌ನಲ್ಲಿ ಈ ದುಬಾರಿ ಕಾಂಬಿನೇಷನ್‌ ಸಿನಿಮಾದ ಟೈಟಲ್ ಬಗ್ಗೆ ಸುದ್ದಿ ಓಡಾಡುತ್ತಿದೆ. ಕೆಲವು ಟೈಟಲ್ ಲೀಕ್ ಆಗಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಗಾಳಿ ಸುದ್ದಿ ಎನ್ನುತ್ತಿದ್ದಾರೆ. ಅಸಲಿಗೆ ಓಡಾಡುತ್ತಿರುವ ಟೈಟಲ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

ರಾಜಮೌಳಿ-ಮಹೇಶ್ ಬಾಬು ಇಬ್ಬರ ಕಾಂಬಿನೇಷನ್ ಸಿನಿಮಾ ಈಗಾಗಲೇ ಕೀನ್ಯಾ, ಒರಿಸ್ಸಾ ಹಾಗೂ ನೈರೋಬಿಯಂತಹ ದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಇಲ್ಲಿವರೆಗೂ ನಾಲ್ಕು ಹಂತದ ಚಿತ್ರೀಕರಣ ನಡೆದಿದೆ ಎನ್ನಲಾಗಿದೆ. ಪ್ರತಿಯೊಂದು ಶೆಡ್ಯೂಲ್‌ನಲ್ಲಿಯೂ ಮಹೇಶ್ ಬಾಬು ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಲುಕ್ ರಿಲೀಸ್ ಆಗಿತ್ತು. ಅಲ್ಲಿಂದ ಸಿನಿಮಾ ಬಗ್ಗೆ ಮತ್ತಷ್ಟು ಕೂತೂಹಲ ಹೆಚ್ಚಾಗಿತ್ತು.

ನವೆಂಬರ್ 15ರಂದು ರಾಜಮೌಳಿ ಈ ಸಿನಿಮಾದ ಪೋಸ್ಟರ್ ಅನ್ನು ಅನೌನ್ಸ್ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಘೋಷಣೆ ಕೂಡ ಮಾಡಿದ್ದಾರೆ. ಅಷ್ಟರಲ್ಲೇ ರಾಜಮೌಳಿ ಅಂತಿಮಗೊಳಿಸಿರುವ ಸಿನಿಮಾ ಟೈಟಲ್ ಹರಿದಾಡುತ್ತಿದೆ. ರಾಜಮೌಳಿ ತಮ್ಮ ಸಿನಿಮಾಗೆ 'ವಾರಾಣಾಸಿ' ಅನ್ನೋ ಟೈಟಲ್ ಫಿಕ್ಸ್ ಮಾಡಿರೋ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಕೆಲ ತೆಲುಗು ಮಂದಿ ಈ ಟೈಟಲ್ ಅನ್ನು ಇಷ್ಟ ಪಟ್ಟಿದ್ದಾರೆ.

Buzz is that Telugu Superstar Mahesh Babu and Rajamouli Film title will be Vaaranaasi

ರಾಜಮೌಳಿ ಪರಿಕಲ್ಪನೆಗೆ ತಕ್ಕಂತೆ ಸಿನಿಮಾದ ಟೈಟಲ್ ಇದೆಯೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ರಾಜಮೌಳಿ ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಹೀಗಾಗಿ ಅಂತರರಾಷ್ಟ್ರೀಯ ಲೆವಲ್‌ಗೆ ಈ ಟೈಟಲ್ ಸೂಕ್ತ ಅಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಸಿನಿಮಾ ಕೂಡ ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಹಾಗೇ ಜಪಾನೀಸ್, ಕೊರಿಯನ್ ಹಾಗೂ ಮ್ಯಾಂಡರೀನ್ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.

ರಾಜಮೌಳಿ ನವೆಂಬರ್ 15ರಂದು ಹೈದರಾಬಾದ್‌ನಲ್ಲಿ ಈ ಸಿನಿಮಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ಶೀರ್ಷಿಕೆ ಜೊತೆ ಫಸ್ಟ್ ಗ್ಲಿಂಪ್ಸ್ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ. ಒಟ್ನಲ್ಲಿ ರಾಜಮೌಳಿ 'ವಾರಾಣಾಸಿ' ಟೈಟಲ್ ಅನ್ನೇ ಫಿಕ್ಸ್ ಮಾಡಿದ್ದಾರಾ? ಇಲ್ಲಾ ಬೇರೆ ಟೈಟಲ್ ಇಟ್ಟಿದ್ದಾರಾ? ಅನ್ನೋದನ್ನು ನವೆಂಬರ್ 15ರಂದು ಗೊತ್ತಾಗಲಿದೆ.

More from Filmibeat

English summary
Buzz is that Telugu Superstar Mahesh Babu and Rajamouli Film title will be Vaaranaasi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X