ಮೆಗಾ ಫ್ಯಾಮಿಲಿಯ ಕುಡಿ ನಿಹಾರಿಕಾ 2ನೇ ಮದುವೆ ಫಿಕ್ಸ್? ಆ ಟಾಲಿವುಡ್ ಹೀರೋ ಯಾರು?
ಮೆಗಾ ಕುಟುಂಬದಲ್ಲಿ ಆಗಾಗ ವಿಚ್ಚೇದನದ ಸುದ್ದಿಗಳನ್ನು ಕೇಳಿ ಅಭಿಮಾನಿಗಳಿಗೆ ಬೇಸರ ಆಗಿತ್ತು. ಮೆಗಾಸ್ಟಾರ್ ಚಿರಂಜೀವಿ ಪುತ್ರಿ, ಅವರ ಸಹೋದರ ನಾಗಬಾಬು ಪುತ್ರಿ ವಿಚ್ಚೇದನಕ್ಕೆ ಮುಂದಾಗಿದ್ದು ಟಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಅದರಲ್ಲೂ ಎರಡು ವರ್ಷಗಳ ಹಿಂದಷ್ಟೇ ಮೆಗಾ ಹೀರೋ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೇಲಾ ವಿಚ್ಚೇದನದ ಸುದ್ದಿಯನ್ನು ಘೋಷಣೆ ಮಾಡಿದಾಗ, ಟಾಲಿವುಡ್‌ಗೆ ಶಾಕ್ ಆಗಿತ್ತು.
ಈಗ ಅದೇ ಟಾಲಿವುಡ್ ನಿಹಾರಿಕಾ ಕೊನಿಡೇಲಾ ಎರಡನೇ ಮದುವೆ ಬಗ್ಗೆ ಸುದ್ದಿಯನ್ನು ಮಾಡುತ್ತಿದೆ. ಮೆಗಾ ಕುಟುಂಬದ ಕುಡಿ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ತನ್ನದೇ ಆದ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಾಣುತ್ತಿರುವ ನಿಹಾರಿಕಾ ಕೌಟುಂಬಿಕ ಜೀವನ ಮಾತ್ರ ಹಳಿ ತಪ್ಪಿತ್ತು. ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿಯ ಕುಡಿಗೆ ಅಭಿಮಾನಿಗಳು ಬೆಂಬಲವಾಗಿ ನಿಂತಿದ್ದಾರೆ.

ಸಿನಿಮಾದಲ್ಲಿ ನಟನೆ, ನಿರ್ಮಾಣ ಅಂತ ಬ್ಯುಸಿಯಾಗಿದ್ದ ನಿಹಾರಿಕಾ ಕೊನಿಡೇಲಾ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಮೆಗಾ ಫ್ಯಾಮಿಲಿ ಅಭಿಮಾನಿಗಳು ಈ ಕುತೂಹಲಕಾರಿ ಸುದ್ದಿ ನಿಜವಾಗಲಿ ಎಂದು ಎದುರು ನೋಡುತ್ತಿದ್ದಾರೆ. ಅಷ್ಟಕ್ಕೂ ಆ ಸುದ್ದಿಯೇನಂದ್ರೆ, ನಿಹಾರಿಕಾ ಕೊನಿಡೇಲಾ ಟಾಲಿವುಡ್‌ನ ಯಂಗ್ ಹೀರೋ ಜೊತೆ ಎರಡನೇ ಮದುವೆಗೆ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಹಾರಿಕಾ ಮದುವೆ ಮತ್ತು ವಿಚ್ಚೇದನ
ಮೆಗಾ ಕುಟುಂಬದ ಹೀರೋ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೇಲಾ 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಲಾಕ್‌ಡೌನ್ ಸಮಯದಲ್ಲಿ ಚೈತನ್ಯ ಜಿನ್ನಲಗಡ್ಡ ಎಂಬುವವರನ್ನು ವಿವಾಹವಾಗಿದ್ದರು. ಈ ಮದುವೆಯನ್ನು ಮೆಗಾ ಫ್ಯಾಮಿಲಿ ಕೂಡ ಅದ್ಧೂರಿಯಾಗಿಯೇ ನೆರವೇರಿಸಿತ್ತು. ಆದರೆ, ಮದುವೆಯಾದ ಕೇವಲ ಮೂರು ವರ್ಷಗಳಲ್ಲಿಯೇ ನಿಹಾರಿಕಾ ವಿಚ್ಚೇದನಕ್ಕೆ ಮುಂದಾಗಿದ್ದರು. ಡಿವೋರ್ಸ್ ಬಳಿಕ ಇಲ್ಲಿವರೆಗೂ ಒಂಟಿಯಾಗಿಯೇ ಇದ್ದ ನಿಹಾರಿಕಾ ಈಗ ಎರಡನೇ ಬಾರಿ ಮದುವೆಗೆ ಸಿದ್ಧರಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ನಟಿ-ನಿರ್ಮಾಪಕಿಯಾಗಿ ಫೇಮಸ್
ನಿಹಾರಿಕಾ ಕೊನಿಡೇಲಾ 2015 ರಲ್ಲಿ ಟಾಲಿವುಡ್‌ಗೆ ನಟಿಯಾಗಿ ಎಂಟ್ರಿ ಕೊಟ್ಟಿದ್ದರು. 'ಓಕಾ ಮನಸು', 'ಹ್ಯಾಪಿ ವೆಡ್ಡಿಂಗ್', 'ಸೂರ್ಯಕಾಂತಂ', 'ಸೈ ರಾ ನರಸಿಂಹ ರೆಡ್ಡಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾ ಜೊತೆ ಜೊತೆಗೆ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದರು. ಆದರೆ, ಅವು ಕೈ ಹಿಡಿಯಲಿಲ್ಲ. ಹೀಗಾಗಿ ನಿರ್ಮಾಪಕಿಯಾಗಿ ಅಖಾಡಕ್ಕೆ ಇಳಿದಿದ್ದರು. ಇವರು ನಿರ್ಮಿಸಿದ 'ಕಮಿಟಿ ಕುರ್ರಲ್ಲು' ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ₹10 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ ₹25 ಕೋಟಿ ಕಲೆಕ್ಷನ್ ಮಾಡಿತ್ತು.
ಎರಡನೇ ಮದುವೆಗೆ ರೆಡಿ?
ನಿರ್ಮಾಪಕಿಯಾಗಿ ಯಶಸ್ಸು ಗಳಿಸುತ್ತಿದ್ದಂತೆ ನಿಹಾರಿಕಾ ಎರಡನೇ ಮದುವೆ ಬಗ್ಗೆ ಸುದ್ದಿ ಓಡಾಡುತ್ತಿದೆ. ಟಾಲಿವುಡ್‌ನ ಯಂಗ್ ಹೀರೋ ಸಿದ್ದು ಜೊನ್ನಲಗಡ್ಡ ಜೊತೆ ನಿಹಾರಿಕಾ ಮದುವೆ ನಡೆಯುತ್ತೆ ಎಂಬ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಇವರೇ ನಿರ್ಮಿಸಿದ್ದ 'ಕಮಿಟಿ ಕುರ್ರಲ್ಲು' ಸಿನಿಮಾ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಇಬ್ಬರು ಮುಖಾಮುಖಿಯಾಗಿದ್ದರು. ಅಲ್ಲಿಂದ ಇಬ್ಬರ ಪರಿಚಯವಾಗಿ, ಇವರಲ್ಲಿ ಲವ್ ಆಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕುಟುಂಬದ ಸದಸ್ಯರು ಕೂಡ ಇಬ್ಬರ ಮದುವೆ ಬಗ್ಗೆ ಚರ್ಚೆ ಮಾಡುತ್ತಿದ್ದಾರಂತೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಸುದ್ದಿ ಹೊರಬಿದ್ದಿಲ್ಲ. ಕೇವಲ ಟಾಲಿವುಡ್ ಅಂಗಳದಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ.
ಕೈಯಲ್ಲಿರೋ ಸಿನಿಮಾಗಳು
ನಿಹಾರಿಕಾ ಕೊನೆಡೇಲಾ ಇತ್ತೀಚೆಗೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದರು. 'ಮದ್ರಾಸ್ಕಾರನ್' ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ವರ್ಷದ ಆರಂಭದಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ಈಗ ತೆಲುಗಿನಲ್ಲಿ 'ವಾಟ್ ದಿ ಫಿಶ್' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅಷ್ಟಲಕ್ಷ್ಮಿ ಎಂಬ ಪಾತ್ರದಲ್ಲಿ ನಿಹಾರಿಕಾ ನಟಿಸುತ್ತಿದ್ದಾರೆ. ಈಗ ಸಿನಿಮಾಗಿಂತ ಹೆಚ್ಚಾಗಿ ಎರಡನೇ ಮದುವೆ ವಿಷಯ ಓಡಾಡುತ್ತಿದೆ.


Click it and Unblock the Notifications











