'ಯುಐ' ಎರಡೆರಡು ಕ್ಲೈಮ್ಯಾಕ್ ಕೊಟ್ಟ ಉಪ್ಪಿ? 4 ನಿಮಿಷದ ಅಂತರದಲ್ಲಿ ನಡೆಯುತ್ತಾ ಈ ಚಮತ್ಕಾರ?

ಉಪೇಂದ್ರ ಆಕ್ಷನ್ ಕಟ್ ಹೇಳಿದರೆ ತಲೆಗೆ ಹುಳ ಬಿಡುತ್ತಾರೆ ಅನ್ನೋದು ಕನ್ಫರ್ಮ್. ಉಪ್ಪಿ ಯೋಚನೆ ಮಾಡೋ ರೀತಿನೇ ಹಾಗೆ. ಎಲ್ಲರೂ ಮಾಡುವಂತ ಸಿನಿಮಾ ಮಾಡುವುದಕ್ಕೆ ಹೋಗುವುದಿಲ್ಲ. ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳ ಹಾಡುಗಳಿಗೆ, ಡೈಲಾಗ್‌ಗಳಿಗೆ ಈಗೀಗ ಅರ್ಥ ಸಿಗುತ್ತಿದೆ. 20 ರಿಂದ 25 ವರ್ಷಗಳ ಬಳಿಕ ಉಪ್ಪಿ ಟೈಟಲ್ ಯಾಕಿಟ್ರು ಅನ್ನೋದು ಅರ್ಥ ಆಗುತ್ತಿದೆ.

ರಿಯಲ್ ಸ್ಟಾರ್ ಸಿನಿಮಾದ ಕಥೆಯನ್ನು ಅಡ್ವಾನ್ಸ್ ಆಗಿ ಯೋಚನೆ ಮಾಡುತ್ತಾರೆ. ಒಮ್ಮೆಗೆ ಸಿನಿಮಾ ನೋಡಿದರೆ ಅರ್ಥ ಆಗುವುದಿಲ್ಲ. ಎರಡೆರಡು ಬಾರಿ ಸಿನಿಮಾ ನೋಡಬೇಕು. ಕೆಲವೊಮ್ಮೆ ಎರಡು ಬಾರಿ ನೋಡಿದರೂ ತಲೆಗೆ ಬಿಟ್ಟುಕೊಂಡು ಹುಳ ಹೋಗುವುದಿಲ್ಲ. ಆ ಮಟ್ಟಿಗೆ ಸಿನಿಮಾ ಮಾಡುವ ಏಕೈಕ ನಿರ್ದೇಶಕ ಉಪೇಂದ್ರ. ಈ ಮಾತನ್ನು ಸಿನಿಮಾ ಲೋಕದ ದಿಗ್ಗಜರು ಕೂಡ ಒಪ್ಪಿಕೊಂಡಿದ್ದಾರೆ.

Buzz is that Upendra-directed movie UI has two climaxes in two time frames

ಈಗ 9 ವರ್ಷಗಳ ಬಳಿಕ ಮತ್ತೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. 'ಯುಐ' ಟೈಟಲ್ ಅರ್ಥ ಏನು ಅನ್ನೋದನ್ನು ಇನ್ನೂ ಬಿಡುತ್ತಲೇ ಇದ್ದಾರೆ. ಅಷ್ಟರಲ್ಲೇ ಈ ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್ ಇರುತ್ತೆ ಅನ್ನೋ ಸುದ್ದಿ ಬೇರೆ ಹಬ್ಬಿದೆ. ಕೇವಲ ನಾಲ್ಕು ನಿಮಿಷಗಳ ಅಂತರದಲ್ಲಿ ಎರಡು ಕ್ಲೈಮ್ಯಾಕ್ಸ್ ಬಂದು ಹೋಗುತ್ತೆ ಅಂತ ಚರ್ಚೆಯಾಗುತ್ತಿದೆ. ಹಾಗಿದ್ದರೆ ಆ ಎರಡು ಕ್ಲೈಮ್ಯಾಕ್ಸ್ ಬರೋದು ಯಾವಾಗ?

'ಯುಐ' ವಾರ್ನರ್ ನೋಡಿ ಅದನ್ನು ನೆಟ್ಟಿಗರು ತಮ್ಮ ಮನಸ್ಸಿಗೆ ಬಂದಂತೆ ಡಿಕೋಡ್ ಮಾಡಿದ್ದರು. ಆಗಲೇ ಉಪ್ಪಿ ಮುಖದಲ್ಲಿ ಮಂದಹಾಸ ಮೂಡಿತ್ತು. ತಾವು ಅಂದುಕೊಂಡಂತೆ ಸಿನಿಮಾ ಮೇಲೆ ಕುತೂಹಲ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇನ್ನೇನು 'ಯುಐ' ರಿಲೀಸ್‌ಗೆ ಎರಡು ದಿನ ಬಾಕಿಯಿದೆ. ಅಷ್ಟರಲ್ಲೇ ಅಡ್ವಾನ್ಸ್ ಬುಕಿಂಗ್‌ಗೆ ಮಸ್ತ್ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನವೇ ಸಿನಿಮಾ ನೋಡುವುದಕ್ಕೆ ಜನರು ಆಸಕ್ತಿ ತೋರುತ್ತಿದ್ದಾರೆ.

ಈ ಮಧ್ಯೆ ಎರಡು ಕ್ಲೈಮ್ಯಾಕ್ಸ್ ಇದೆ ಅಂತ ಬೇರೆ ಸುದ್ದಿ ಹಬ್ಬಿದೆ. ಉಪ್ಪಿ ಕನ್ನಡ ವರ್ಷನ್‌ 'ಯುಐ' ನಲ್ಲಿ ಎರಡು ಕ್ಲೈಮ್ಯಾಕ್ಸ್ ಇಟ್ಟಿದ್ದಾರಂತೆ. 2 ಗಂಟೆ 12 ನಿಮಿಷಕ್ಕೆ ಒಂದು, ಇನ್ನೊಂದು 2 ಗಂಟೆ 16 ನಿಮಿಷಕ್ಕೆ ಬರತ್ತಂತೆ. ಇನ್ನೇನು ಸಿನಿಮಾ ಮುಗೀತು ಅಂತ ಸೀಟಿಂದ ಎದ್ದರೆ ಮುಗೀತು. ಮತ್ತೊಂದು ಕ್ಲೈಮ್ಯಾಕ್ಸ್ ಅನ್ನು ಮಿಸ್ ಮಾಡಿಕೊಳ್ಳುತ್ತೀರ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಇದು ನಿಜವೋ? ಇಲ್ಲ ಬರೀ ಗಾಳಿ ಸುದ್ದಿನೋ ಚಿತ್ರತಂಡವೇ ಕನ್ಫರ್ಮ್ ಮಾಡಬೇಕಿದೆ.

Buzz is that Upendra-directed movie UI has two climaxes in two time frames

ಉಪ್ಪಿ ಸಿನಿಮಾಗೂ ಮುನ್ನ ಏನನ್ನೂ ಬಿಟ್ಟು ಕೊಡುವುದಿಲ್ಲ. ಇಲ್ಲಿವರೆಗೂ ಸಾಕಷ್ಟು ಸಂದರ್ಶನಗಳನ್ನು 'ಯುಐ' ಬಗ್ಗೆನೇ ಕೊಟ್ಟಿದ್ದಾರೆ. ಅದರಲ್ಲೂ 'ಯುಐ' ಸಿನಿಮಾ ಬಗ್ಗೆ ಅದೆಷ್ಟೇ ಬಾಯಿಬಿಡಿಸುವುದಕ್ಕೆ ಮುಂದಾದರೂ ರಿಯಲ್‌ಸ್ಟಾರ್ ಮಾತ್ರ ತುಟಿಬಿಚ್ಚಿಲ್ಲ. ಇದ್ದಿದ್ದನ್ನೇ ಮತ್ತಷ್ಟು ಕನ್ಫ್ಯೂಸ್ ಮಾಡಿ ಕಳುಹಿಸಿದ್ದಾರೆ. ಹೀಗಾಗಿ ಉಪೇಂದ್ರ ಬಳಿ ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್ ಇದೆಯಾ ಅಂತ ಕೇಳಿದರೆ ಹೇಳೋದು ಅನುಮಾನ.

ಈ ಬಾರಿ ರಿಯಲ್ ಸ್ಟಾರ್ ತೆರೆಮೇಲೆ ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋ ಸುಳಿವನ್ನೇ ಇನ್ನು ಬಿಟ್ಟುಕೊಟ್ಟಿಲ್ಲ. 'ಯುಐ' ಸಿನಿಮಾದಲ್ಲಿ ಕಲ್ಕಿ ಹಿನ್ನೆಲೆಯಂತೂ ಇದೆ ಅನ್ನೋದನ್ನು ಅವರೇ ಕನ್ಫರ್ಮ್ ಮಾಡಿದ್ದಾರೆ. ಒಂದು ವೇಳೆ ಈಗಾಗಲೇ ಹರಿದಾಡುತ್ತಿರುವ ಸುದ್ದಿ ನಿಜವೇ ಆಗಿದ್ದರೆ, 'ಯುಐ' ಕರ್ನಾಟಕ ಅಷ್ಟೇ ಅಲ್ಲ. ಇಡೀ ವಿಶ್ವದ ಜನರನ್ನೇ ತನ್ನತ್ತ ಸೆಳೆಯಬಹುದು.. ನೋ ಡೌಟ್.

More from Filmibeat

English summary
Buzz is that Upendra-directed movie UI has two climaxes in two time frames;
Read more about: upendra ui sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X