'ರಣಬಾಲಿ' ಸಿನಿಮಾ ಬಜೆಟ್ ಮಿತಿ ಮೀರಿತೇ? ಅಷ್ಟಕ್ಕೂ ವಿಜಯ್ ದೇವರಕೊಂಡ ಮಾರ್ಕೆಟ್ ಎಷ್ಟಿದೆ?

ಟಾಲಿವುಡ್ ಎರಡೂ ತೆಲುಗು ರಾಜ್ಯಗಳನ್ನು ಮೀರಿ ಬೆಳೆದಿದೆ. ಸ್ಟಾರ್‌ಗಳ ಪ್ರತಿ ಸಿನಿಮಾಗಳು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕರು ಕಲ್ಪನೆಗೂ ಮೀರಿದ ವಿಭಿನ್ನ ಸ್ಟೋರಿಗಳನ್ನು ತೆರೆಮೇಲೆ ತಂದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರು ಸೃಷ್ಟಿಸೋ ದೃಶ್ಯ ವೈಭವ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸಿನಿಮಾಗಳಿಗೇ ಟಕ್ಕರ್ ಕೊಡುವಂತೆ ಸಿನಿಮಾಗಳನ್ನು ತೆಲುಗು ಫಿಲ್ಮ್ ಮೇಕರ್ಸ್ ಪೈಪೋಟಿ ಮಾಡುತ್ತಿದ್ದಾರೆ.

ನಟ ವಿಜಯ್ ದೇವರಕೊಂಡ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ಗೆ ಸದ್ದು ಮಾಡುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ 'ಪೆಳ್ಳಿ ಚೂಪುಲು', 'ಅರ್ಜುನ್ ರೆಡ್ಡಿ' ಹಾಗೂ 'ಗೀತಾ ಗೋವಿಂದಂ' ನಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಯಶಸ್ಸು ಕಾಣುತ್ತಿಲ್ಲ. ಹೀಗಾಗಿ ಅವರ ಮಾರ್ಕೆಟ್ ಮೌಲ್ಯ ಸ್ವಲ್ಪ ಕುಸಿತ ಕಂಡಿದೆ ಎನ್ನಲಾಗಿದೆ.

Buzz is that Vijay Deverakonda Rashmika Mandanna movie Rangabali budget increased

ಹೀಗಿರುವಾಗ ವಿಜಯ್ ದೇವರಕೊಂಡ ಹೇಗಾದರೂ ಮಾಡಿ ತಮ್ಮ ಸಿನಿಮಾಗಳ ಮೂಲಕ ಭರ್ಜರಿ ಕಂಬ್ಯಾಕ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಮತ್ತೆ ಟಾಲಿವುಡ್‌ನ ಟಾಪ್ ಹೀರೋ ಆಗಿ ಮರಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿ ವಿಜಯ್ ದೇವರಕೊಂಡ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ 'ರಣಬಾಲಿ' ಹಾಗೂ 'ರೌಡಿ ಜನಾರ್ದನ್' ನಂತಹ ಸಿನಿಮಾಗಳಿವೆ. ಸದ್ಯ ಟಾಲಿವುಡ್‌ನಲ್ಲಿ 'ರಣಬಾಲಿ' ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

'ಟೈರ್ 1' ಹೀರೋ ಆಗ್ತಾರಾ ವಿಜಯ್?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮತ್ತೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾ 'ರಣಬಾಲಿ'. ಈ ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಈಗಾಗಲೇ ಸಿನಿಮಾ ಸಂಸ್ಥೆಗಳು ಸೆಪ್ಟೆಂಬರ್ 11 ರಂದು ವಿಶ್ವಾದ್ಯಂತ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಹೀಗಿರುವಾಗಲೇ ಸಿನಿಮಾದ ಯಶಸ್ಸಿನ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಗಳು ಶುರುವಾಗಿವೆ. 'ರಣಬಾಲಿ' ವಿಜಯ್ ದೇವರಕೊಂಡ ಅವರನ್ನು ಟಾಲಿವುಡ್‌ನ ಟೈರ್-1 ಹೀರೋಗಳ ಸಾಲಿಗೆ ಸೇರಿಸುತ್ತಾ? ಅನ್ನೋದು ಚರ್ಚೆಯಾಗುತ್ತಿದೆ.

Also Read
ರಶ್ಮಿಕಾ-ವಿಜಯ್ ಹಳ್ಳಿ ಭೇಟಿ ಹಿಂದಿನ ಅಸಲಿ ರಹಸ್ಯವೇನು? 2026ರ ವರ್ಷ ಜೋಡಿಗೆ ಕೂಡಿಬರುತ್ತಾ?
ರಶ್ಮಿಕಾ-ವಿಜಯ್ ಹಳ್ಳಿ ಭೇಟಿ ಹಿಂದಿನ ಅಸಲಿ ರಹಸ್ಯವೇನು? 2026ರ ವರ್ಷ ಜೋಡಿಗೆ ಕೂಡಿಬರುತ್ತಾ?

ಹೆಚ್ಚಾಗುತ್ತಿದೆ ಬಜೆಟ್

ಟಾಲಿವುಡ್‌ನಲ್ಲಿ 'ರಣಬಾಲಿ' ಸಿನಿಮಾದ ಬಜೆಟ್ ಬಗ್ಗೆ ಚರ್ಚೆಯಾಗುತ್ತಿದೆ. ಈ ಸಿನಿಮಾದ ಬಜೆಟ್ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ವಿಜಯ್ ದೇವರಕೊಂಡ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಸಾಮರ್ಥ್ಯವಿದೆ. ಆದರೆ ಇದೂವರೆಗೂ ಅವರ ಸಿನಿಮಾಗಳು ₹200 ಕೋಟಿ ಕಲೆಕ್ಷನ್ ಆಗಿಲ್ಲ. ಹೀಗಾಗಿ ಪ್ರಸ್ತುತ 'ರಣಬಾಲಿ' ಬಜೆಟ್ ಚರ್ಚೆಯಾಗುತ್ತಿದೆ. ಈ ಸಿನಿಮಾಗಾಗಿ ನಿರ್ಮಾಪಕರು ಬರೋಬ್ಬರಿ 150 ಕೋಟಿ ರೂಪಾಯಿಯಷ್ಟು ಈಗಾಗಲೇ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

Buzz is that Vijay Deverakonda Rashmika Mandanna movie Rangabali budget increased

ಆತಂಕವೇನು?

ಒಂದು ವೇಳೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ ಈ ಸಿನಿಮಾಗೆ ನೆಗೆಟಿವ್ ರಿವ್ಯೂ ಬಂದರೆ, ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಉತ್ತಮವಾಗಿರದೇ ಇದ್ದರೆ, ಚಿತ್ರತಂಡ ಹಾಗೂ ವಿತರಕರು ಭಾರಿ ಪ್ರಮಾಣದ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತವೆ. ಈಗಾಗಲೇ ವಿಜಯ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿಲ್ಲ. ಹೀಗಾಗಿ ಸಿನಿ ವಿಶ್ಲೇಷಕರು ಇಂತಹದ್ದೊಂದು ಲೆಕ್ಕಾಚಾರ ಹಾಕುತ್ತಿದ್ದಾರೆಂದು ಟಾಲಿವುಡ್‌ನಲ್ಲಿ ಟಾಕ್ ಶುರುವಾಗಿದೆ.

'ರಣಬಾಲಿ' ವಿಶೇಷತೆ ಏನು?

ಅಂದಹಾಗೆ, 'ರಣಬಾಲಿ' ಸಿನಿಮಾದ ಮತ್ತೊಂದು ವಿಶೇಷತೆಯಿದೆ. ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮದುವೆಯಾದ ಬಳಿಕ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನಿಮಾ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ನೋಡಲು ಇಬ್ಬರ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. 150 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ ವಿಜಯ್ ದೇವರಕೊಂಡ ವೃತ್ತಿ ಬದುಕಿಗೆ ದೊಡ್ಡ ಬ್ರೇಕ್ ನೀಡಬಲ್ಲದೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
Buzz is that Vijay Deverakonda, Rashmika Mandanna movie Rangabali budget increased. Reports says that Mythri Movie Makers and T-Series decided to increased the production because of hype generated by the couple's real-life wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X