Jailer 2: 'ಜೈಲರ್ 2'ನಲ್ಲಿ ವಿಜಯ್ ಸೇತುಪತಿ; ಸೂಪರ್‌ಸ್ಟಾರ್‌ ರಜನಿಗೆ ಖಳನಾಯಕನಾ? ಆಪ್ತನಾ?

2026ರಲ್ಲಿ ತಮಿಳು ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆ ಸಿನಿಮಾ 'ಜೈಲರ್ 2'. ಈಗಾಗಲೇ ಈ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಈಗಾಗಲೇ ರಜನಿಕಾಂತ್ ಅವರ ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಾರೆ. 2026ರಲ್ಲಿ ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುವುದಕ್ಕೆ ವೇಗವಾಗಿ ಶೂಟಿಂಗ್ ಅನ್ನು ಮುಗಿಸುತ್ತಿದ್ದಾರೆ. ಈ ಮಧ್ಯೆ 'ಜೈಲರ್ 2'ಗೆ ಒಬ್ಬರೊಬ್ಬರೇ ದಿಗ್ಗಜರು ಸೇರ್ಪಡೆಯಾಗುತ್ತಿದ್ದಾರೆ.

2023ರಲ್ಲಿ ತೆರೆಕಂಡಿದ್ದ 'ಜೈಲರ್' ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಇಬ್ಬರಿಗೂ ಗೆಲುವು ಕೊಟ್ಟಿತ್ತು. ಸೋಲಿನ ಸುಳಿಗೆ ಸಿಕ್ಕು ಕಂಗಾಲಾಗಿದ್ದ ಈ ಜೋಡಿಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು ₹600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹೀಗಾಗಿ ಮತ್ತೆ ಈ ಜೋಡಿ 'ಜೈಲರ್ 2'ನಲ್ಲಿ ಒಂದಾಗುತ್ತಿದೆ.

Buzz is that Vijay Sethupathi doing important role in Superstar Rajinikanth movie Jailer 2

ಈಗಾಗಲೇ ಈ ಸಿನಿಮಾದಲ್ಲಿ ದಿಗ್ಗಜರು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರವೊಂದಕ್ಕೆ ಟಾಲಿವುಡ್‌ನ ಲೆಜೆಂಡ್ ಬಾಲಕೃಷ್ಣ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಾಲಯ್ಯ 'ನೋ' ಎಂದಿದ್ದಾರೆಂಬ ಸುದ್ದಿಯಿದೆ. ಈ ಬೆನ್ನಲ್ಲೇ ತಮಿಳಿನ ಮತ್ತೊಬ್ಬ ಸ್ಟಾರ್ ನಟ ವಿಜಯ್ ಸೇತುಪತಿ 'ಜೈಲರ್ 2'ಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಗೋವಾದಲ್ಲಿ 'ಜೈಲರ್ 2'

ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಜೈಲರ್ 2' ಸಿನಿಮಾದ ಶೂಟಿಂಗ್ ಸದ್ಯ ಗೋವಾದಲ್ಲಿ ನಡೆಯುತ್ತಿದೆ ಎಂದು ವರದಿಯಾಗಿವೆ. ರಜನಿಕಾಂತ್ ಸೇರಿದಂತೆ ದೊಡ್ಡ ತಾರಾ ಬಳಗವೇ ಗೋವಾದ ಬೀಡುಬಿಟ್ಟಿದೆ ಎನ್ನಲಾಗಿದೆ. ಅಲ್ಲಿಗೆ ಈಗಾಗಲೇ ತಮಿಳಿನ ಮತ್ತೊಬ್ಬ ಸ್ಟಾರ್ ನಟ ವಿಜಯ್ ಸೇತುಪತಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಇದು ಆದರೆ, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಎಲ್ಲೂ ಹೇಳಿಕೆಯನ್ನು ನೀಡಿಲ್ಲ. ವಿಜಯ್ ಸೇತುಪತಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕನ್ಫರ್ಮ್ ಮಾಡಬೇಕಿದೆ.

ಡಿಸೆಂಬರ್‌ಗೆ ಶೂಟಿಂಗ್ ಫಿನಿಶ್

'ಜೈಲರ್ 2' ಶೂಟಿಂಗ್ ವೇಗವಾಗಿ ಸಾಗುತ್ತಿದೆ. ಈ ಮಧ್ಯೆ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಸಿನಿಮಾಗೂ ರಜನಿಕಾಂತ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ 'ಜೈಲರ್ 2' ಮೀಟಿಂಗ್ ಫಿನಿಶ್ ಆಗಲಿದೆ. ಮಿಡ್ ಡೇ ವರದಿ ಪ್ರಕಾರ, ರಜನಿಕಾಂತ್ ಈ ಹಿಂದೆ 'ಜೈಲರ್ 2' ಶೂಟಿಂಗ್ ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಇನ್ನೊಂದು ತಿಂಗಳಲ್ಲಿ ಸಿನಿಮಾ ಮುಗಿಯುವ ಸಾಧ್ಯತೆಯಿದೆ.

'ಜೈಲರ್ 2'ನಲ್ಲಿ ತಾರೆಯ ದಂಡು

ರಜನಿಕಾಂತ್ ನಟಿಸುತ್ತಿರುವ 'ಜೈಲರ್ 2'ನಲ್ಲಿ ದೊಡ್ಡ ತಾರೆಯರ ಹಿಂಡೇ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಸಿನಿಮಾದಲ್ಲಿ ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ ಖಳನಾಯಕನಾಗಿ ನಟಿಸಲಿದ್ದಾರೆ. ಅವರ ಮಗಳ ಪಾತ್ರದಲ್ಲಿ ವಿದ್ಯಾಬಾಲನ್ ನಟಿಸುತ್ತಿರುವ ಬಗ್ಗೆ ಮೂಲಗಳು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇನ್ನು 'ಜೈಲರ್' ಮಿಂಚಿದ್ದ ಶಿವಣ್ಣ ಹಾಗೂ ಮೋಹನ್‌ಲಾಲ್ ಈ ಸೀರಿಸ್‌ನಲ್ಲಿ ಇರುತ್ತಾರೆ ಎನ್ನಲಾಗಿದೆ. ಆದರೆ, ಪ್ರೊಡಕ್ಷನ್ ಹೌಸ್ ಅಧಿಕೃತ ಮಾಹಿತಿ ನೀಡಿಲ್ಲ.

'ಜೈಲರ್ 2' ಹೈಲೈಟ್ಸ್ ?

'ಜೈಲರ್ 2' ಸಿನಿಮಾದಲ್ಲಿ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ ಪಾತ್ರ ಮುಂದುವರೆದಿದೆ. ಹಾಗೇ ರಜನಿ ಸೊಸೆಯ ಪಾತ್ರದಲ್ಲಿ ನಟಿಸಿದ್ದ ಮಿರ್ನಾ ಕೂಡ ನಟಿಸುತ್ತಿದ್ದು, ಇದರಲ್ಲಿ ಪವರ್‌ಫುಲ್ ಪಾತ್ರ ಸಿಕ್ಕಿದೆ ಎನ್ನಲಾಗಿದೆ. ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ಇನ್ನೂ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ಅದ್ಧೂರಿ ಮನರಂಜನೆ ನೀಡುವುದಕ್ಕೆ ಶತಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Buzz is that Vijay Sethupathi doing important role in Superstar Rajinikanth movie Jailer 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X