80 ದಿನಗಳ ರೀ-ಶೂಟ್, ರಾಮಾಯಣ ಪೋಸ್ಟ್‌ಪೋನ್? ಬರ್ತ್‌ಡೇಗೂ ಮುನ್ನವೇ 'ಟಾಕ್ಸಿಕ್' ರಿಲೀಸ್?

ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ರಿಲೀಸ್ ಯಾವಾಗ ಆಗುತ್ತೆ ಅನ್ನೋ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಎರಡೆರಡು ಬಾರಿ 'ಟಾಕ್ಸಿಕ್' ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ. ಈ ಮಧ್ಯೆ ಕಳೆದ ಕೆಲವು ದಿನಗಳಿಂದ ಸಿನಿಮಾ ಬಗ್ಗೆ ನೂರೆಂಟು ಸುದ್ದಿಗಳು ಓಡಾಡುತ್ತಿವೆ. ಅದರಲ್ಲಿ ರಿ-ಶೂಟ್ ಆಗಿರುವ ಸುದ್ದಿ ಕೂಡ ಒಂದು. ಈಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ.

'ಕೆಜಿಎಫ್ 2' ಬಳಿಕ ಯಶ್ ಸಾಕಷ್ಟು ಸಮಯ ತೆಗೆದುಕೊಂಡು 'ಟಾಕ್ಸಿಕ್' ಕೈ ಹಾಕಿದ್ದರು. ಅಲ್ಲಿಂದ ಇಲ್ಲಿವರೆಗೂ ಸಿನಿಮಾ ರಿಲೀಸ್‌ಗಾಗಿ ಅವರ ಫ್ಯಾನ್ಸ್ ಎದುರು ನೋಡುತ್ತಲೇ ಇದ್ದಾರೆ. ಆದರೆ, ಇನ್ನೂ ಸಿನಿಮಾ ರಿಲೀಸ್ ಮಾಡುವ ಯಾವುದೇ ಸುಳಿವು ಇಲ್ಲ. ಅಲ್ಲದೇ ಯಶ್ ನಟನೆ ಜೊತೆಗೆ ನಿರ್ಮಾಣದಲ್ಲಿಯೂ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರ ಮುಂದಿನ ನಡೆಯ ಬಗ್ಗೆ ಸುಳಿವು ಇಲ್ಲ.

Buzz is that Yash finished Toxic re shoot planning to release in September

ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಕನ್ನಡ ಚಿತ್ರರಂಗಕ್ಕೆ 'ಟಾಕ್ಸಿಕ್' ಅಗತ್ಯವಾಗಿ ಬೇಕಾಗಿದೆ. ಆದರೆ, ಸಿನಿಮಾ ಈ ವರ್ಷ ರಿಲೀಸ್ ಆಗೋದು ಅನುಮಾನ ಎಂದೇ ಹೇಳಲಾಗಿತ್ತು. ಆದ್ರೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸುದ್ದಿಯೊಂದು ಸಂಚಲನ ಸೃಷ್ಟಿಸಿದೆ. ಯಶ್ 'ರಾಮಾಯಣ'ವನ್ನೇ ಪೋಸ್ಟ್‌ಪೋನ್ ಮಾಡಿ, 'ಟಾಕ್ಸಿಕ್' ರಿಲೀಸ್ ಮಾಡುವುದಕ್ಕೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ತಿಳಿಯುವುದಕ್ಕೆ ಮುಂದೆ ಓದಿ.

80 ದಿನ 'ಟಾಕ್ಸಿಕ್' ಶೂಟಿಂಗ್

ಯಶ್ 'ಟಾಕ್ಸಿಕ್' ಅನ್ನು ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಕೆಲ ತಿಂಗಳ ಹಿಂದೆ ಯಶ್‌ 'ಟಾಕ್ಸಿಕ್'ಗೆ ಗ್ಲೋಬಲ್ ಲೆವೆಲ್‌ನಲ್ಲಿ ಭಾರೀ ಮನ್ನಣೆ ಸಿಕ್ಕಿತ್ತು. ಹೀಗಾಗಿ 'ಟಾಕ್ಸಿಕ್' ಸಿನಿಮಾ ಬಗ್ಗೆ ಮತ್ತಷ್ಟು ಕಾಳಜಿ ವಹಿಸಿದ್ದರು. ಈ ಕಾರಣಕ್ಕಾಗಿಯೇ ಸಿನಿಮಾದ ಕೆಲವು ಭಾಗಗಳನ್ನು ರಿ-ಶೂಟ್ ಮಾಡಿದ್ದಾರೆಂಬ ಸುದ್ದಿ ಹರಿದಾಡಿತ್ತು. ಆದರೆ, 'ಟಾಕ್ಸಿಕ್' ಎಲ್ಲಿಯೂ ಅಧಿಕೃತವಾಗಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೂ, ಸ್ಯಾಂಡಲ್‌ವುಡ್‌ನಲ್ಲಿ 80 ದಿನಗಳ ಕಾಲ ರೀ-ಶೂಟ್ ಮಾಡಲಾಗಿದೆ ಎಂಬ ಸುದ್ದಿ ಓಡಾಡುತ್ತಿದೆ.

'ರಾಮಾಯಣ' ಪೋಸ್ಟ್‌ಪೋನ್?

'ಟಾಕ್ಸಿಕ್' ಜೊತೆಗೆ ಯಶ್ 'ರಾಮಾಯಣ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ರಾವಣನಾಗಿ ಕಾಣಿಸಿಕೊಂಡಿದ್ದು, ಮೊದಲ ಬಾಲಿವುಡ್ ಸಿನಿಮಾ ಮೇಲೆ ದುಪ್ಪಟ್ಟು ನಿರೀಕ್ಷೆಯಿದೆ. ಅಲ್ಲದೇ ಈ ಸಿನಿಮಾವನ್ನು ಯಶ್ ಕೂಡ ನಿರ್ಮಾಣ ಮಾಡಿದ್ದರಿಂದ ಪ್ಯಾನ್ ಇಂಡಿಯಾ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದ್ರೀಗ ಪೌರಾಣಿಕ ಸಿನಿಮಾ 'ರಾಮಾಯಣ'ವನ್ನು 'ಟಾಕ್ಸಿಕ್' ರಿಲೀಸ್ ಆಗಿ ಪೋಸ್ಟ್‌ಪೋನ್ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

Buzz is that Yash finished Toxic re shoot planning to release in September

ಶೀಘ್ರದಲ್ಲಿಯೇ ರಿಲೀಸ್ ಡೇಟ್

'ಟಾಕ್ಸಿಕ್' ಸಿನಿಮಾದ ಕೆಲವು ದೃಶ್ಯಗಳನ್ನು ರೀ-ಶೂಟ್ ಮಾಡಿದ್ದು ಆಗಿದೆ. ಸುಮಾರು 40 ರಿಂದ 50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ. ಇದರ ಜೊತೆ ಜೊತೆಗೆ ಸಿನಿಮಾದ ಬ್ಯುಸಿನೆಸ್‌ ಕೂಡ ನಡೆಯುತ್ತಿದೆ. ಹೀಗಾಗಿ 'ಟಾಕ್ಸಿಕ್' ರಿಲೀಸ್‌ಗೆ ಬಹುತೇಕ ಯಶ್ ತಂಡ ರೆಡಿಯಾಗಿದೆ ಅನ್ನೋ ಮಾತು ಕೇಳಿ ಬರುತ್ತಿದ್ದು, ಇದೇ ತಿಂಗಳ ಕೊನೆಯಲ್ಲಿ ಇಲ್ಲವೇ, ಜುಲೈನಲ್ಲಿ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆಯಿದೆ.

ಹೊಸ ರಿಲೀಸ್ ಡೇಟ್ ಯಾವಾಗ?

ಇಲ್ಲಿವರೆಗೂ ಯಶ್ ಬರ್ತ್‌ಡೇಗೆ 'ಟಾಕ್ಸಿಕ್' ರಿಲೀಸ್ ಆಗುತ್ತೆ ಅನ್ನೋ ವಿಷಯ ದೊಡ್ಡದಾಗಿಯೇ ಸದ್ದು ಮಾಡುತ್ತಿತ್ತು. ಆದ್ರೀಗ ಯಶ್ ಬೇರೆನೇ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ 'ರಾಮಾಯಣ'ವನ್ನೂ ಪೋಸ್ಟ್‌ಪೋನ್‌ ಮಾಡುವುದಕ್ಕೂ ರೆಡಿಯಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಒಂದು ಅಂದಾಜಿನ ಪ್ರಕಾರ, ಅಕ್ಟೋಬರ್‌ ಇಲ್ಲವೇ ಸೆಪ್ಟೆಂಬರ್ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

English summary
Buzz is that Yash finished Toxic re shoot planning to release in September. Toxic re shoot takes 80 days.
Read more about: yash toxic kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X