Toxic: 'ಟಾಕ್ಸಿಕ್' ಅಡ್ಡಾದಲ್ಲಿ ಏನಾಗ್ತಿದೆ? ಆಗಸ್ಟ್‌ಗೂ ರಿಲೀಸ್ ಆಗಲ್ವ..? ರಿಲೀಸ್ ಯಾವಾಗ ಸ್ವಾಮಿ?

ಮೂರುವರೆ ನಾಲ್ಕು ವರ್ಷದಿಂದ 'ಟಾಕ್ಸಿಕ್' ನೋಡಬೇಕು ಅಂತ ಕಾದು ಕೂತವರಿಗೆ ಬೇಸರ ಆಗಿದೆ. ಪದೇ ಪದೆ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗ್ತಿರೋದು ಅಭಿಮಾನಿಗಳಿಗಷ್ಟೇ ಅಲ್ಲ, ಸಿನಿಮಾ ಮಂದಿಗೂ ನಿರಾಸೆ ಮೂಡಿಸಿದೆ. ಕೆಲವೊಮ್ಮೆ ಅಂತೂ ಸಿನಿಮಾ ರಿಲೀಸ್ ಮಾಡೋಕೆ ಯಶ್ ಯಾಕಿಷ್ಟು ಸಮಯ ತಗೋತಿದ್ದಾರಪ್ಪಾ ಅನ್ನುವಷ್ಟು ಕಾಯಿಸಿಬಿಟ್ಟಿದ್ದಾರೆ.

ಮಾರ್ಚ್ 19ಕ್ಕೆ ರಿಲೀಸ್ ಆಗ್ಬೇಕಿದ್ದ ಸಿನಿಮಾ ಜೂನ್ 4ಕ್ಕೆ ಪೋಸ್ಟ್‌ಪೋನ್ ಆದಾಗ ರಾಕಿ ಭಾಯ್ ಅಭಿಮಾನಿಗಳು ಸಮಾಧಾನ ಮಾಡಿಕೊಂಡಿದ್ದರು. ಇನ್ನೆರಡು ತಿಂಗಳು ಹೇಗಾದರೂ ಮಾಡಿ ಕಾಯೋಣ ಅಂದುಕೊಂಡಿದ್ದರು. ಅಷ್ಟರಲ್ಲೇ ಯಶ್ ಕಡೆಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಂದಿತ್ತು. ಈ ಬಾರಿ ಅಂತೂ ಯಾವಾಗ ರಿಲೀಸ್ ಅನ್ನೋ ಡೇಟ್ ಕೂಡ ಇರಲಿಲ್ಲ. ಇದು ಅಭಿಮಾನಿಗಳು ಹಾಗೂ ಇಂಡಸ್ಸ್ರಿ ಮಂದಿಯ ತಾಳ್ಮೆಯನ್ನಂತೂ ಪರೀಕ್ಷೆ ಮಾಡುತ್ತಿದೆ.

Buzz is that Yash Nayanthara Kiara Advani movie Toxic may not release in August

ಅಷ್ಟಕ್ಕೂ ಯಶ್ ಹೀಗೆಲ್ಲ ಕಾಡಿಸೋದಿಲ್ಲ. ಮತ್ತೇನೋ ದೊಡ್ಡದು ಪ್ಲಾನ್ ಮಾಡುತ್ತಿರೋದಂತೂ ನಿಜ. 'ಟಾಕ್ಸಿಕ್' ಎರಡನೇ ಬಾರಿ ಪೋಸ್ಟ್‌ಪೋನ್ ಮಾಡುತ್ತಿದ್ದಂತೆ ಸಿನಿಮಾ ಮಂದಿ ಮಾಹಿತಿ ಕಲೆ ಹಾಕೋ ಕೆಲಸ ಶುರು ಮಾಡಿಕೊಂಡಿದ್ದರು. ಅವರಿಗೆ 'ಟಾಕ್ಸಿಕ್' ಟೀಮ್‌ನಲ್ಲಿ ನಡೆಯುತ್ತಿರೋ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಸಿಕ್ಕಿವೆ. ಅವುಗಳನ್ನೇ ಇಟ್ಕೊಂಡು ಗಾಂಧಿನಗರದ ತುಂಬೆಲ್ಲಾ ಹೇಳ್ಕೊಂಡು ಓಡಾಡ್ತಿದ್ದಾರೆ.

ಯಶ್ 'ಟಾಕ್ಸಿಕ್' ಡೇಟ್ ಅನ್ನು ಮುಂದೂಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಡೇಟ್ ಹರಿದಾಡುತ್ತಿತ್ತು. ಆಗಸ್ಟ್ ತಿಂಗಳಲ್ಲಿ 'ಟಾಕ್ಸಿಕ್' ರಿಲೀಸ್ ಆಗಬಹುದು ಎಂದು ಕೆಲವು ಫ್ಯಾನ್ಸ್ ಪೇಜ್‌ಗಳಲ್ಲಿ ಹರಿದಾಡಿದ್ದವು. ಅದೇ ಒಂದಿಷ್ಟು ದಿನ ಗುಲ್ಲೆದ್ದಿತ್ತು. ಆದ್ರೀಗ ಸಿನಿಮಾ ಮಂದಿಗೆ ಸಿಕ್ಕಿರೋ ಸುದ್ದಿ ಏನಪ್ಪಾ ಅಂದರೆ, 'ಟಾಕ್ಸಿಕ್' ಆಗಸ್ಟ್‌ನಲ್ಲಿಯೂ ರಿಲೀಸ್ ಆಗೋದು ಅನುಮಾನ. ಯಶ್ ಅಂಡ್ ಟೀಮ್ 'ಟಾಕ್ಸಿಕ್'ಗಾಗಿ ಇನ್ನೂ ಕೆಲಸ ಮಾಡುತ್ತಿದ್ದಾರೆ.

Also Read
ಅವತ್ತು ಆ ನಟ ನನ್ನೊಟ್ಟಿಗೆ ಒರಟಾಗಿ ನಡೆದುಕೊಂಡಿದ್ದ.. ಬಳಿಕ ಅವನ ಸಿನ್ಮಾ ನೋಡೊದು ಬಿಟ್ಟೆ; ಯಶ್
ಅವತ್ತು ಆ ನಟ ನನ್ನೊಟ್ಟಿಗೆ ಒರಟಾಗಿ ನಡೆದುಕೊಂಡಿದ್ದ.. ಬಳಿಕ ಅವನ ಸಿನ್ಮಾ ನೋಡೊದು ಬಿಟ್ಟೆ; ಯಶ್

ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾಗೆ ಒಳ್ಳೆಯ ಓಪಿನಿಯನ್ ಸಿಕ್ಕಿದೆ. ಹೀಗಾಗಿ ಒಂದಿಷ್ಟು ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಸಿನಿಮಾದ ಕೆಲವು ಭಾಗಗಳನ್ನು ರಿ-ಶೂಟ್ ಮಾಡಲಾಗುತ್ತಿದ್ಯಂತೆ. ಅದಕ್ಕೆ ಮುಂಬೈನಲ್ಲಿ ಬೃಹತ್ ಸೆಟ್ ಹಾಕಿ ಶೂಟಿಂಗ್ ಮಾಡುತ್ತಿದ್ದಾರಂತೆ. ಮತ್ತೆ ಇಡೀ ಟೀಮ್ ಅನ್ನು ಒಟ್ಟಿಗೆ ಸೇರಿಸುತ್ತಿದ್ದಾರಂತೆ. ಮತ್ತೆ ನಟಿಸಿದ ಸ್ಟಾರ್‌ ಕಾಸ್ಟ್‌ಗಳ ಡೇಟ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Buzz is that Yash Nayanthara Kiara Advani movie Toxic may not release in August

ಆದರೆ, ಆರ್ಟಿಸ್ಟ್ ಡೇಟ್ ಮ್ಯಾಚ್ ಮಾಡೋಕೆ ಟೀಮ್ ವರ್ಕ್‌ಔಟ್ ಮಾಡುತ್ತಿದ್ಯಂತೆ. ಹೀಗಾಗಿ ಸೀನ್‌ಗಳನ್ನು ರೀ-ಶೂಟ್ ಮಾಡುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆಯಂತೆ. ಇಷ್ಟೇ ಅಲ್ಲದೆ, ಕೆಲವು ಎಲೆವೆಷನ್ ಸೀನ್‌ಗಳನ್ನು ರೀ-ಶೂಟ್ ಮಾಡಲಾಗಿದ್ದು, ಇಂಟರ್‌ನ್ಯಾಷಲ್‌ ಲೆವೆಲ್‌ಗೆ ಸರಿ ಹೊಂದುವ ಹಾಗೇ ಹೊಸದಾಗಿ ಕಂಪೋಸ್ ಮಾಡಲಾಗುತ್ತಿದೆಯಂತೆ. ಹೀಗಾಗಿ ಕೆಲವು ತಿಂಗಳು ಶೂಟಿಂಗ್ ಮೀಸಲಿಟ್ಟಿದೆ ಅನ್ನೋದು ಸುದ್ದಿ.

ಮತ್ತೊಂದು ಕಡೆ ಹೊಸದಾಗಿ ಶೂಟ್ ಮಾಡಿರುವ ಸೀನ್‌ಗಳಿಗೆ ವಿಎಫ್‌ಎಕ್ಸ್ ಮಾಡಿಬೇಕಿದೆಯಂತೆ. ಅದಕ್ಕೆ ಕಮ್ಮಿ ಅಂದರೂ ಇನ್ನೊಂದು ನಾಲ್ಕೈದು ತಿಂಗಳು ಬೇಕಂತೆ. ಹೀಗಾಗಿ ಆಗಸ್ಟ್‌fಗೆ ಸಿನಿಮಾ ರಿಲೀಸ್ ಆಗೋದು ಅನುಮಾನ. ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್‌ ತಿಂಗಳಲ್ಲಿ ಸಿನಿಮ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ ಅನ್ನೋ ಮಾತಿದೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆದರೆ, ಯಶ್ ಆಗಲಿ, ಕೆವಿಎನ್ ಪ್ರೊಡಕ್ಷನ್ಸ್ ಆಗಲಿ, ಈ ಬಗ್ಗೆ ಎಲ್ಲೂ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

English summary
Yash, Nayanthara, Kiara Advani movie Toxic may not release in August. Buzz is that it may release in September or October due to re-shoot, vfx and other work.
Read more about: yash toxic kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X