ಮುಂಬೈನ ಐಕಾನಿಕ್ ಥಿಯೇಟರ್‌ಗಳಿಗೆ 'ಟಾಕ್ಸಿಕ್' ಟೀಮ್ ಪಟ್ಟು? ಮಾಲೀಕರ ವಾದವೇನು?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕರ್ನಾಟಕದಲ್ಲಿ ಎಷ್ಟು ಹಾವಾ ಇದೆಯೋ ಅಷ್ಟೇ ಉತ್ತರ ಭಾರತದಲ್ಲಿಯೂ ಇದೆ. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಉತ್ತರ ಭಾರತದ ಬಾಕ್ಸಾಫೀಸ್‌ ಕಲೆಕ್ಷನ್ ವರ ಇದ್ದಂತೆ. ಯಾಕಂದ್ರೆ, ಅಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗುತ್ತೆ. ಹೀಗಾಗಿ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ಮೊದಲು ಪ್ರಚಾರವನ್ನು ಅಲ್ಲಿಂದಲೇ ಆರಂಭ ಮಾಡುತ್ತವೆ. ಆದರೆ, ಪ್ರಚಾರಕ್ಕೂ ಮುನ್ನ ಥಿಯೇಟರ್‌ ಸೆಟಪ್‌ ಮಾಡುವತ್ತ ಮೊದಲು ಗಮನ ಹರಿಸುತ್ತೆ.

ಉತ್ತರ ಭಾರತದಲ್ಲಿ ಮುಂಬೈ ಹಾಗೂ ದೆಹಲಿ ಪ್ರಮುಖ ಸೆಂಟರ್‌ಗಳು. ಇಲ್ಲಿ ಅತೀ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಆಗುತ್ತೆ. 'ಟಾಕ್ಸಿಕ್' ಟೀಮ್ ಕೂಡ ಇದೇ ತಂತ್ರವನ್ನು ಅನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಬಾಲಿವುಡ್‌ನಲ್ಲಿ 'ಟಾಕ್ಸಿಕ್' ಸ್ಟ್ರಾಟಜಿ ಬಗ್ಗೆ ಚರ್ಚೆಯಾಗುತ್ತಿದೆ. ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಕೂಡ ಮಾರ್ಚ್ 19ಕ್ಕೆ ರಿಲೀಸ್ ಆಗುತ್ತಿರೋದ್ರಿಂದ ಉತ್ತರ ಭಾರತದಲ್ಲಿ ಥಿಯೇಟರ್‌ಗಳ ವಿಚಾರಕ್ಕೆ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ.

Buzz is that Yash Rukmini Vasanth starrer Toxic team demanding these Mumbai iconic theaters

'ಟಾಕ್ಸಿಕ್' ಸಿನಿಮಾವನ್ನು ಎಎ ಫಿಲ್ಮ್ಸ್‌ನ ಅನಿಲ್ ತಡಾನಿ ಉತ್ತರ ಭಾರತದಲ್ಲಿ ವಿತರಣೆ ಮಾಡುತ್ತಿದ್ದಾರೆ. ಈ ಹಿಂದೆ ಯಶ್ ನಟಿಸಿದ 'ಕೆಜಿಎಫ್ 2' ಸಿನಿಮಾವನ್ನು ವಿತರಣೆ ಮಾಡಿದ್ದರು. ಹೀಗಾಗಿ 'ಟಾಕ್ಸಿಕ್' ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತೆ ಅನ್ನೋದು ಕನ್ಫರ್ಮ್. ಆದರೆ, 'ಧುರಂಧರ್ 2' ರಿಲೀಸ್ ಆಗದೇ ಹೋಗಿದ್ದರೆ, 'ಟಾಕ್ಸಿಕ್‌'ಗೆ ಇನ್ನೂ ಹೆಚ್ಚು ಥಿಯೇಟರ್‌ಗಳು ಸಿಗುತ್ತಿದ್ದವು. ಸದ್ಯ 'ಟಾಕ್ಸಿಕ್' ವಿತರಕರು ಮುಂಬೈನ ಐಕಾನಿಕ್ ಥಿಯೇಟರ್‌ಗಳಿಗೆ ಬೇಡಿಕೆ ಇಟ್ಟಿದ್ದಾರಂತೆ. ಏನದು ಬೇಡಿಕೆ? 'ಧುರಂಧರ್ 2'ಗೆ ಟಕ್ಕರ್ ಕೊಡುತ್ತಾ 'ಟಾಕ್ಸಿಕ್' ಟೀಮ್‌?

ಮುಂಬೈನಲ್ಲಿ ಬಾಲಿವುಡ್‌ ಸಿನಿಮಾಗಳು ಅತೀ ಹೆಚ್ಚು ಕಲೆಕ್ಷನ್ ಮಾಡುತ್ತವೆ. ನೂರಾರು ಕೋಟಿಗಳನ್ನು ಲೂಟಿ ಮಾಡೋದು ಇಲ್ಲೇ. ಆದ್ರೀಗ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಹಿಂದಿ ಸಿನಿಮಾಗಳಿಗೆ ಕೊಂಚ ಮಟ್ಟಿಗೆ ಹಿನ್ನಡೆಯಾಗಿದೆ. ಈಗ 'ಧುರಂಧರ್ 2'ಗೂ ಅದೇ ತಲೆ ನೋವಾಗಿದೆ. 'ಟಾಕ್ಸಿಕ್'ನಿಂದ ಅವರು ಒಂದಿಷ್ಟು ಥಿಯೇಟರ್‌ಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಅದೇ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

'ಟಾಕ್ಸಿಕ್' ಟೀಮ್ ಮುಂಬೈನ ಐಕಾನಿಕ್ ಥಿಯೇಟರ್‌ಗಳ ಮಾಲೀಕರಿಗೆ ವಿಶೇಷವಾದ ಬೇಡಿಕೆ ಇಟ್ಟಿದ್ದಾರಂತೆ. ತಮ್ಮ ಐಕಾನಿಕ್ ಸಿಂಗಲ್ ಸ್ಕ್ರೀನ್‌ನಲ್ಲಿ 'ಟಾಕ್ಸಿಕ್'ಗೆ ಎಲ್ಲಾ ಶೋಗಳು ಕೊಡಿ. ಇಲ್ಲದೇ ಹೋದರೆ, ಬೇರೆ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡುತ್ತೇವೆ ಎಂದಿದ್ದಾರಂತೆ. ಆದರೆ, ಥಿಯೇಟರ್ ಮಾಲೀಕರು ಶೋಗಳನ್ನು 'ಟಾಕ್ಸಿಕ್' ಹಾಗೂ 'ಧುರಂಧರ್ 2' ಹಂಚುತ್ತೇವೆ ಎಂದು ಹೇಳುತ್ತಿದ್ದಾರಂತೆ. ಹೀಗಾಗಿ ಇಬ್ಬರ ನಡುವೆ ಮಾತುಕತೆ ನಡೆಯುತ್ತಿದೆ ಎಂಬುವುದು ಹರಿದಾಡುತ್ತಿರುವ ಸುದ್ದಿ.

Buzz is that Yash Rukmini Vasanth starrer Toxic team demanding these Mumbai iconic theaters

ಇನ್ನು ಮುಂಬೈನ ಆ ಐಕಾನಿಕ್ ಥಿಯೇಟರ್‌ಗಳು ಯಾವುವು ಅಂತ ನೋಡುವುದಾರೇ, 25ಕ್ಕೂ ಹೆಚ್ಚು ವರ್ಷ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಅಂತಹ ಸಿನಿಮಾ ಪ್ರದರ್ಶನ ಕಂಡಿದ್ದ ಮರಾಠ ಮಂದಿರ್. ಈ ಚಿತ್ರಮಂದಿರ ಮುಂಬೈನ ಹಳೆಯ ಥಿಯೇಟರ್. ಮುಂಬೈನ ಸೆಂಟ್ರಲ್‌ನಲ್ಲಿ ಇರುವ ಈ ಥಿಯೇಟರ್‌ಗೆ ಬೇಡಿಕೆ ಇಟ್ಟಿದ್ದಾರೆ. ಹಾಗೇ ಲಿಬರ್ಟಿ ಸಿನಿಮಾ, ಇಲ್ಲಿ ಮುಘಲ್-ಇ-ಅಜಾಮ್ 6 ವರ್ಷ ಪ್ರದರ್ಶನ ಕಂಡಿತ್ತು. ಮಿನರ್ವ ಥಿಯೇಟರ್, ಇಲ್ಲಿ ಶೋಲೆ 5 ವರ್ಷ ಪ್ರದರ್ಶನ ಕಂಡಿತ್ತು. ಇರೋಸ್ ಸಿನಿಮಾ ಐಮ್ಯಾಕ್ಸ್, ಎಡ್ವರ್ಡ್ ಟಾಕೀಸ್, ರೋಕ್ಷಿ ಸಿನಿಮಾಸ್‌ಗೆ ಪಟ್ಟು ಹಿಡಿದಿದ್ದಾರೆಂದು ಸುದ್ದಿ ಓಡಾಡುತ್ತಿದೆ.

ಈ ಸಿಂಗಲ್‌ ಸ್ಕ್ರೀನ್‌ಗಳು ಉತ್ತಮ ಕಲೆಕ್ಷನ್ ಮಾಡುತ್ತವೆ. ಹೀಗಾಗಿ 'ಟಾಕ್ಸಿಕ್‌'ಗೆ ಪೂರ್ತಿ ಶೋಗಳನ್ನು ಕೊಡುತ್ತಾರಾ? ಇಲ್ವಾ ಹಂಚಿಕೆ ಮಾಡುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ ಇಂತಹದ್ದೊಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಆದರೆ, ಇದು ಕೇವಲ ವದಂತಿಯಾಗಿದ್ದು, ಇನ್ನೂ 'ಟಾಕ್ಸಿಕ್' ಟೀಮ್ ಈ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ.

More from Filmibeat

English summary
Buzz is that Yash Rukmini Vasanth starrer Toxic team demanding these Mumbai iconic theaters.
Read more about: yash toxic rukmini vasanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X