Yash-Toxic: 'ಟಾಕ್ಸಿಕ್' ರೀ-ಶೂಟ್.. ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ? ಏನು ಇಷ್ಟೊಂದು ಸುದ್ದಿ?

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ 'ಟಾಕ್ಸಿಕ್' ರಿಲೀಸ್ ಆಗಿರಬೇಕಿತ್ತು. ಯುಗಾದಿ ಹಬ್ಬಕ್ಕೆ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಬೇಕಿತ್ತು. ಆದರೆ, ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಅಭಿಮಾನಿಗಳ ಈ ಎಲ್ಲಾ ಆಸೆಗಳಿಗೆ ತಣ್ಣೀರು ಎರಚಿತ್ತು. ಕೆವಿಎನ್ ಹಾಗೂ ಯಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಇತ್ತೀಚೆಗೆ ಯಶ್ ಹಾಲಿವುಡ್‌ ಮೀಡಿಯಾಗಳಿಗೆ ಸಂದರ್ಶನಗಳನ್ನು ನೀಡಿದ್ದರು. ಅದರಲ್ಲಿ 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯಶ್ ಈಗಿನಿಂದಲೇ ನಿಧಾನವಾಗಿ 'ಟಾಕ್ಸಿಕ್' ಸಿನಿಮಾದ ಪ್ರಚಾರವನ್ನು ಆರಂಭಿಸಿದ್ದಾರೆ. 'ಟಾಕ್ಸಿಕ್' ಗ್ಲೋಬಲ್ ಸಿನಿಮಾ ಆಗುತ್ತೆ ಅನ್ನೋ ಸುಳಿವು ನೀಡಿದ್ದಾರೆ.

Buzz is that Yash Toxic re-shoot done silently and May first week promotion starts

ಈ ಮಧ್ಯೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಹೊಸದೊಂದು ಸುದ್ದಿ ಓಡಾಡುತ್ತಿದೆ. 'ಟಾಕ್ಸಿಕ್' ರಿಲೀಸ್ ಪೋಸ್ಟ್ ಪೋನ್ ಮಾಡುತ್ತಿದ್ದಂತೆ ಯಶ್ ಸದ್ದಿಲ್ಲದೆ ಕೆಲವು ಭಾಗದ ದೃಶ್ಯಗಳನ್ನು ರೀ-ಶೂಟ್ ಮಾಡಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಜೊತೆ 'ಟಾಕ್ಸಿಕ್' ಸಿನಿಮಾದ ಅಸಲಿ ಪ್ರಚಾರ ಎಂದಿನಿಂದ ಶುರು ಅನ್ನೋದೂ ಭಾರೀ ಚರ್ಚೆಯಾಗುತ್ತಿದೆ. ಹಾಗಿದ್ದರೆ, 'ಟಾಕ್ಸಿಕ್' ರೀ-ಶೂಟ್ ಆಗಿದೆಯಾ? ಯಶ್ ಸಿನಿಮಾ ಬಗ್ಗೆ ಹರಿದಾಡ್ತಿರೋ ಸುದ್ದಿಗಳೇನು? ತಿಳಿಯುವುದಕ್ಕೆ ಮುಂದೆ ಓದಿ.

'ಟಾಕ್ಸಿಕ್' ರೀ-ಶೂಟ್

ಚಿತ್ರರಂಗ ಅಂದ್ಮೇಲೆ ಗಾಸಿಪ್‌ಗಳು ಲೆಕ್ಕವಿಲ್ಲದಷ್ಟು ಹರಿದಾಡುತ್ತಲೇ ಇರುತ್ತೆ. ಹಾಗೇ 'ಟಾಕ್ಸಿಕ್' ರಿಲೀಸ್ ಪೋಸ್ಟ್ ಪೋನ್ ಆಗುತ್ತಿದ್ದಂತೆ ಗಾಂಧಿನಗರದಲ್ಲಿ ನಾನಾ ಸುದ್ದಿಗಳು ಹರಿದಾಡುವುದಕ್ಕೆ ಶುರುವಾಗಿದ್ದವು. ಅದರಲ್ಲಿ ರೀ-ಶೂಟ್ ಆಗುತ್ತಿದೆ ಅನ್ನೋದು ಕೂಡ ಒಂದು. ಅಸಲಿಗೆ ಈ ಸುದ್ದಿಯಲ್ಲಿ ಎಷ್ಟು ನಿಜವಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ, ಸಿನಿಮಾ ಮಂದಿ ಬಾಯಲ್ಲಿ ಮಾತ್ರ ಇಂತಹದ್ದೊಂದು ಚರ್ಚೆಯಾಗುತ್ತಿದೆ.

'ಟಾಕ್ಸಿಕ್' ಸಿನಿಮಾದ ಕೆಲವು ಸೀನ್‌ಗಳನ್ನು ರೀ-ಶೂಟ್ ಮಾಡಲಾಗಿದೆ ಅನ್ನೋದು ಸುದ್ದಿ. ಹೀಗಾಗಿ ಮುಂಬೈನಲ್ಲಿ ಐದು ದಿನಗಳ ಕಾಲ ಈ ದೃಶ್ಯಗಳ ಚಿತ್ರೀಕರಣ ನಡೆದಿದ್ದು, ಅದರಲ್ಲಿ ಯಶ್ ಹಾಗೂ ಅವರ ತಂಡ ಸೀಕ್ರೆಟ್ ಆಗಿ ಸಿನಿಮಾ ಕೆಲವು ದೃಶ್ಯಗಳನ್ನು ಶೂಟ್ ಮಾಡಿದೆ ಎಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, 'ಟಾಕ್ಸಿಕ್' ಟೀಮ್ ಆಗಲಿ, ಯಶ್ ಆಗಲಿ ಈ ಬಗ್ಗೆ ಮಾಹಿತಿಯನ್ನು ಎಲ್ಲೂ ಹಂಚಿಕೊಂಡಿಲ್ಲ.

'ಟಾಕ್ಸಿಕ್' ರಿಲೀಸ್ ಮತ್ತೆ ಮುಂದೂಡಿಕೆ

ಗಾಂಧಿನಗರದ ಮಂದಿ ಚರ್ಚೆ ಮಾಡುತ್ತಿರೋ ಮತ್ತೊಂದು ಸುದ್ದಿಯಿದು. 'ಟಾಕ್ಸಿಕ್' ರಿಲೀಸ್ ಮತ್ತೆ ಮುಂದೂಡುವ ಸಾಧ್ಯತೆಯಿದೆ. ಯಾಕಂದ್ರೆ, ಸಿನಿಮಾ ಬಿಡುಗಡೆಗೆ ಹೆಚ್ಚು ಕಡಿಮೆ ಇನ್ನೂ ಒಂದು ತಿಂಗಳು ಇದೆ. ಈಗಾಗಲೇ ಸಿನಿಮಾ ಸೆನ್ಸಾರ್‌ಗೆ ಹೋಗಬೇಕಿತ್ತು. ಆದರೆ, ಇನ್ನೂ 'ಟಾಕ್ಸಿಕ್' ಸೆನ್ಸಾರ್ ಪ್ರಕ್ರಿಯೆಯನ್ನೇ ಆರಂಭ ಮಾಡಿಲ್ಲ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಅಸಲಿಗೆ 'ಟಾಕ್ಸಿಕ್' ತಂಡದೊಳಗೆ ಏನು ನಡೀತಿದೆ ಅನ್ನೋದು ಇನ್ನೂ ಚಿಕ್ಕದೊಂದು ಸುಳಿವು ಕೂಡ ಇಲ್ಲ.

ಹೇಳಿ ಕೇಳಿ ಕೆವಿಎನ್ ಪ್ರೊಡಕ್ಷನ್‌ಗೂ ಸೆನ್ಸಾರ್‌ಗೂ ಮೊದಲೇ ಯಾಕೋ ಆಗಿ ಬರುತ್ತಿಲ್ಲ. ಹೀಗಾಗಿ ಸಿನಿಮಾ ರಿಲೀಸ್‌ಗೆ ಒಂದು ತಿಂಗಳು ಇರುವಾಗಲೇ ಸೆನ್ಸಾರ್‌ಗೆ ಅಪ್ಲೇ ಮಾಡಿದರೆ ಉತ್ತಮ. ಆದರೆ, ಇನ್ನೂ ಆ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಸಿನಿಮಾವನ್ನು ಪೋಸ್ಟ್‌ ಪೋನ್ ಮಾಡುವ ಸಾಧ್ಯತೆ ಇದೆ ಅನ್ನೋದು ಇದೇ ಗಾಂಧಿನಗರದ ಮಂದಿ ಹೇಳುತ್ತಿರೋ ಮಾತು.

'ಟಾಕ್ಸಿಕ್' ಪ್ರಚಾರ ಯಾವಾಗ?

'ಟಾಕ್ಸಿಕ್' ಬಗ್ಗೆ ಗಾಂಧಿನಗರದಲ್ಲಿ ಇಷ್ಟೆಲ್ಲ ಸುದ್ದಿ ಹಬ್ಬಿದರೂ, ಇದಕ್ಕೆ ಅಪೋಸಿಟ್ ಆದ ಸುದ್ದಿಯೊಂದಿದೆ. ಕೆಲ ಎಕ್ಸ್‌ಪರ್ಟ್‌ಗಳ ಪ್ರಕಾರ 'ಟಾಕ್ಸಿಕ್' ಸಿನಿಮಾ ಮೇ ಮೊದಲ ವಾರದಿಂದ ಭರ್ಜರಿ ಪ್ರಚಾರ ಆರಂಭ ಆಗಲಿದೆ. ಫಿಲ್ಮ್ ಟ್ರೇಡ್ ಅನಲಿಸ್ಟ್ ಸಮಿತ್ ಕಡೆಲ್ ಪ್ರಕಾರ, ಬಿರುಗಾಳಿ ಬರುವುದಕ್ಕೂ ಮುನ್ನ ಮೌನವಾಗಿರುತ್ತೆ. ಟಾಕ್ಸಿಕ್ ಸಿನಿಮಾ ಪ್ರಚಾರ ಮುಂದಿನ ತಿಂಗಳ ಆರಂಭದಲ್ಲಿ ಭರ್ಜರಿಯಾಗಿ ಆರಂಭ ಆಗುತ್ತಿದೆ. ರಾಮಾಯಣಗೂ ಮುನ್ನ ಟಾಕ್ಸಿಕ್ ಏಕೈಕ ಪ್ಯಾನ್ ಇಂಡಿಯಾ ಸಿನಿಮಾ ಇವೆಂಟ್ ಆಗುತ್ತಿದೆ ಎಂದು ಹೇಳಿದ್ದಾರೆ.

ಹೀಗಾಗಿ 'ಟಾಕ್ಸಿಕ್' ಬಗ್ಗೆ ಜನರು ಮಾತಾಡಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಹೀಗಾಗಿ 'ಟಾಕ್ಸಿಕ್' ಭರ್ಜರಿ ಓಪನಿಂಗ್ ಪಡೆದುಕೊಳ್ಳುವುದು ಗ್ಯಾರಂಟಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆ ಗ್ಲೋಬಲ್ ಲೆವೆಲ್‌ನಲ್ಲೂ ಈ ಸಿನಿಮಾ ಜೋರಾಗಿಯೇ ಸದ್ದು ಮಾಡುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

English summary
Buzz is that Yash Toxic re-shoot done silently and May first week promotion starts.
Read more about: yash toxic kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X