ಅಲ್ಲು ಅರ್ಜುನ್ ಜೊತೆ ಸಮಂತಾ ಭರ್ಜರಿ ಸ್ಟೆಪ್? ಏನಿದು ಸುಕುಮಾರ್ ಸ್ಕೆಚ್ ?
ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಮೂಲಕ ಸದ್ದು ಮಾಡಿದ್ದು ಗೊತ್ತೇ ಇದೆ. ಇದಕ್ಕೆ ಪವರ್ ಮತ್ತಷ್ಟು ಕೊಟ್ಟಿದ್ದು ಸಮಂತಾ. "ಹೂಂ.. ಅಂತೀಯಾ ಮಾಮಾ.. ಊಹೂಂ ಅಂತಿಯಾ ಮಾವಾ.." ಅಂತ ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು.
ಆರಂಭದಲ್ಲಿ ಐಟಂ ಸಾಂಗ್‌ಗೆ ಒಪ್ಪಿರದ ಸಮಂತಾ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮಾತಿಗೆ ಬೆಲೆ ಕೊಟ್ಟು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇಬ್ಬರ ಕಾಂಬಿನೇಷನ್‌ನಲ್ಲಿ ಬಂದ ಹಾಡು ಸೂಪರ್ ಹಿಟ್ ಆಗಿತ್ತು. ಪ್ರೇಕ್ಷಕರು ಥಿಯೇಟರ್ ರೂಫ್ ಕಿತ್ತೋಗುವಂತೆ ಶಿಳ್ಳೆ ಹಾಕಿದ್ದರು.

ಸಮಂತಾ 'ಪುಷ್ಪ' ಐಟಂ ಸಾಂಗ್‌ನಲ್ಲಿ ನಟಿಸೋಕೆ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿತ್ತು. ಆದರೆ, 'ಪುಷ್ಪ 2' ಐಟಂ ಸಾಂಗ್‌ನಲ್ಲಿ ಸಮಂತಾ ಇರೋದಿಲ್ಲ ಅಂತಲೇ ಸುದ್ದಿಯಾಗಿತ್ತು. ಅದ್ರೀಗ ಸುಕುಮಾರ್ ತಮ್ಮ ಪ್ಲ್ಯಾನ್ ಚೇಂಜ್ ಮಾಡಿಕೊಂಡಿದ್ದಾರೆ ಅನ್ನೋದು ಟಾಲಿವುಡ್‌ನಲ್ಲಿ ಓಡಾಡ್ತಿರೋ ಸುದ್ದಿ.
'ಪುಷ್ಪ' ಮೆಗಾ ಸಕ್ಸಸ್ ಕಂಡ ಬಳಿಕ 'ಪುಷ್ಪ 2'ಗಾಗಿ ಕೇವಲ ಟಾಲಿವುಡ್ ಮಂದಿ ಅಷ್ಟೇ ಅಲ್ಲ ಪ್ಯಾನ್ ಇಂಡಿಯಾ ಪ್ರೇಕ್ಷಕರು ಕಾಯುತ್ತಿದ್ದಾರೆ. ಮತ್ತೆ ಅಲ್ಲು ಅರ್ಜುನ್ ಮ್ಯಾನರಿಸಂ ನೋಡುವುದಕ್ಕೆ ಕಾತುರರಾಗಿದ್ದಾರೆ. ಇನ್ನೊಂದು ಕಡೆ ಸಮಂತಾ ಐಟಂ ಸಾಂಗ್ ಬೇಕು ಅಂತಾ ಹಲವರು ಪಟ್ಟು ಹಿಡಿದು ಕೂತಿರೋರು ಇದ್ದಾರೆ. ಈ ಮಧ್ಯೆ ಮತ್ತೆ ಸಮಂತಾ ಹೆಸರು ಓಡಾಡುವುದಕ್ಕೆ ಶುರು ಮಾಡಿದೆ.
ಕೆಲವೇ ದಿನಗಳ ಹಿಂದಷ್ಟೇ 'ಪುಷ್ಪ 2' ಸಿನಿಮಾದ ಹೊಸ ಶೆಡ್ಯೂಲ್ ಶುರುವಾಗಿದೆ. ಆದಷ್ಟು ಬೇಗ ಸಿನಿಮಾ ಶೂಟಿಂಗ್ ಮುಗಿಸುವುದಕ್ಕೆ ಚಿತ್ರತಂಡ ಕೂಡ ಶತಪ್ರಯತ್ನ ನಡೆಸುತ್ತಿದೆ. ಈ ಮತ್ತೆ ಸಮಂತಾ 'ಪುಷ್ಪ 2'ನಲ್ಲೂ ಐಟಂ ಸಾಂಗ್‌ಗೆ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕುತ್ತಾರೆ ಎನ್ನಲಾಗುತ್ತಿದೆ.

'ಪುಷ್ಪ'ದಲ್ಲಿ ಸಮಂತಾ ಹೆಜ್ಜೆ ಹಾಕಿದ ಹಾಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಎಲ್ಲಾ ಭಾಷೆಯಲ್ಲೂ ಈ ಹಾಡು ಹಿಟ್ ಆಯ್ತು. ಅಲ್ಲದೆ ಸಮಂತಾಗೆ ಬೇರೆ ಬೇರೆ ಭಾಷೆಯಲ್ಲಿ ಫ್ಯಾನ್ಸ್ ಸಂಖ್ಯೆನೂ ಏರಿಕೆ ಆಯ್ತು. ಈ ಕ್ರೇಜ್ ಹೆಚ್ಚಾಗಿದ್ದರಿಂದ ಸುಕುಮಾರ್ ಮತ್ತೆ ಸಮಂತಾರನ್ನೇ ಐಟಂ ಸಾಂಗ್‌ಗೆ ಕರೆ ತರಲು ಚಿಂತಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಸುಕುಮಾರ್ ಸಮಂತಾ ಬದಲು ಬೇರೆ ನಟಿಯನ್ನು ಐಟಂ ಸಾಂಗ್‌ಗೆ ಹುಡುಕುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದ್ರೀಗ ಸಮಂತಾ ಐಟಂ ಸಾಂಗ್‌ಗೆ ಫಿಕ್ಸ್ ಆಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಹೀಗಾಗಿ ಸಿನಿಮಾ ಅಲ್ಲು ಅರ್ಜುನ್ ಫ್ಯಾನ್ಸ್ ಇನ್ನಿಲ್ಲದಂತೆ ಸಂಭ್ರಮಿಸುತ್ತಿದ್ದಾರೆ.
ಸಮಂತಾ ಕೇವಲ ಐಟಂ ಸಾಂಗ್‌ನಲ್ಲಿ ಮಾತ್ರವಷ್ಟೇ ಅಲ್ಲ. ಈ ಬಾರಿ ಕೆಲವು ದೃಶ್ಯಗಳಲ್ಲೂ ನಟಿಸುತ್ತಿದ್ದಾರಂತೆ. ಈ ಬಗ್ಗೆ ಸದ್ಯ ಅಧಿಕೃತ ಮಾಹಿತಿ ಇಲ್ಲದೇ ಹೋದರೂ ಟಾಲಿವುಡ್‌ನಲ್ಲಿ ಜೋರಾಗಿಯೇ ಈ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಸಿಕ್ಕಿರೋ ಮಾಹಿತಿ ಪ್ರಕಾರ, 'ಪುಷ್ಪ 2' ಸಿನಿಮಾವನ್ನು ರಷ್ಯಾ, ಚೀನಾ ಹಾಗೂ ಜಪಾನ್‌ನಲ್ಲೂ ರಿಲೀಸ್ ಮಾಡಲು ಚಿಂತಿಸಿದ್ದು, 2024ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.


Click it and Unblock the Notifications











