"ಯಶ್ ಜೊತೆಗಿನ ಸೀನ್‌ಗಳಿಗೆ ತೆಗೆದು ಹಾಕಿ" ಅಂತಿದ್ದಾರಾ ಕಿಯಾರಾ ಅಡ್ವಾಣಿ? ಏನಿದು ಹೊಸ ಗೊಂದಲ?

ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ 'ಟಾಕ್ಸಿಕ್' ಪ್ರತಿ ದಿನವೂ ಒಂದೊಂದು ಸುದ್ದಿಯೊಂದಿಗೆ ಸದ್ದು ಮಾಡುತ್ತಿದೆ. ಈಗಾಗಲೇ ಎರಡು ಬಾರಿ ರಿಲೀಸ್ ಡೇಸ್ ಪೋಸ್ಟ್‌ಪೋನ್ ಆಗಿದೆ. ಮೂರೂವರೆ ನಾಲ್ಕು ವರ್ಷಗಳಿಂದ 'ಟಾಕ್ಸಿಕ್'ಗಾಗಿ ಕಾದು ಕೂತಿದ್ದ ರಾಕಿ ಭಾಯ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿವಾದ ಎಬ್ಬಿಸಬಹುದಾದ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ಗೊತ್ತಿರೋ ಹಾಗೇ ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಐದು ಮಂದಿ ನಾಯಕಿಯರು ಇದ್ದಾರೆ. ಅವರಲ್ಲಿ ಕಿಯಾರಾ ಅಡ್ವಾಣಿ ಕೂಡ ಒಬ್ಬರು. ಈಗಾಗಲೇ ಯಶ್ ಹಾಗೂ ಕಿಯಾರಾ ಅಡ್ವಾಣಿಯ ಹಾಡು 'ತಬಾಹಿ' ರಿಲೀಸ್ ಆಗಿದೆ. ಲಿರಿಕಲ್ ಸಾಂಗ್ ಬಿಡುಗಡೆಯಾದಾಗಲೇ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಯಶ್ ಹಾಗೂ ಕಿಯಾರಾ ಅಡ್ವಾಣಿ ಕೆಮಿಸ್ಟ್ರಿ ಬಗ್ಗೆ ಚರ್ಚೆ ಆಗಿತ್ತು.

Buzz Kiara Advani demanded to cut intimate scenes with Yash in Toxic may lead to controversy

ಈಗ ಅದೇ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಕಿಯಾರಾ ಅಡ್ವಾಣಿ ಚಿತ್ರತಂಡಕ್ಕೆ ಡಿಮ್ಯಾಂಡ್ ಒಂದನ್ನು ಇಟ್ಟಿದ್ದಾರಂತೆ. ಅದೇ ಈಗ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಓಡಾಡುತ್ತಿದೆ. ಹಾಗಿದ್ದರೆ, ಕಿಯಾರಾ ಅಡ್ವಾಣಿ 'ಟಾಕ್ಸಿಕ್' ತಂಡದ ಮುಂದೆ ಇಟ್ಟಿರೋ ಡಿಮ್ಯಾಂಡ್ ಏನು? ಇದ್ದಕ್ಕಿದ್ದ ಹಾಗೇ ಯಾಕೆ ಇಂತಹ ಡಿಮ್ಯಾಂಡ್? ಅದು ವಿವಾದ ಸೃಷ್ಠಿಸುತ್ತಾ? ತಿಳಿಯುವುದಕ್ಕೆ ಮುಂದೆ ಓದಿ.

ಹೌದು, ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಯಶ್ 'ಟಾಕ್ಸಿಕ್' ಬಗ್ಗೆ ಹೊಸದೊಂದು ಚರ್ಚೆ ಹುಟ್ಟಿಕೊಂಡಿದೆ. ನಟಿ ಕಿಯಾರಾ ಅಡ್ವಾಣಿ ತಮ್ಮ ಪಾತ್ರದ ಬಗ್ಗೆ ತಗಾದೆ ತೆಗೆದಿದ್ದಾರೆಂದು ಸುದ್ದಿಯಾಗಿದೆ. ಯಶ್ ಜೊತೆ ಇರುವ ಕೆಲವು ದೃಶ್ಯಗಳನ್ನು ತೆಗೆದು ಹಾಕುವಂತೆ ಈ ಬಾಲಿವುಡ್ ನಟಿ ಮನವಿ ಮಾಡಿಕೊಂಡಿದ್ದಾರಂತೆ. ಅದೇ ಯಶ್ ಅಭಿಮಾನಿಗಳಲ್ಲಿ ಗೊಂದಲ ಹುಟ್ಟಾಕಿದೆ. ಈ ಟೈಮ್‌ನಲ್ಲಿ 'ಟಾಕ್ಸಿಕ್' ವಿವಾದದ ಸುಳಿಗೆ ಸಿಲುಕುತ್ತಾ? ಇಂತಹದ್ದೊಂದು ಪ್ರಶ್ನೆ ಅಂತೂ ಹುಟ್ಟಿದೆ.

ಅಸಲಿಗೆ ಮ್ಯಾಟರ್ ಏನು ಅಂದರೆ, ಸೋಶಿಯಲ್ ಮೀಡಿಯಾ ಪೇಜ್‌ಗಳು ಕಿಯಾರಾ ಅಡ್ವಾಣಿ ಕುರಿತ ಸುದ್ದಿಯೊಂದನ್ನು ಹಬ್ಬಿಸುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಹಾಗೂ ಯಶ್ ನಡುವೆ ಕೆಲವು ಹಸಿ ಬಿಸಿ ದೃಶ್ಯಗಳು ಇವೆಯಂತೆ. ಆ ಎಲ್ಲಾ ದೃಶ್ಯಗಳನ್ನು ತೆಗೆದು ಹಾಕುವಂತೆ ನಿರ್ದೇಶಕ ಹಾಗೂ ಚಿತ್ರತಂಡಕ್ಕೆ ಮನವಿ ಮಾಡಿಕೊಂಡಿದ್ದಾರಂತೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಬಗ್ಗೆ ಏನು ಪ್ರತಿಕ್ರಿಯೆ ನೀಡಿದ್ದಾರೆ ಅನ್ನೋದು ಮಾತ್ರ ಹೊರ ಬಿದ್ದಿಲ್ಲ.

Buzz Kiara Advani demanded to cut intimate scenes with Yash in Toxic may lead to controversy

ಒಂದು ವೇಳೆ 'ಟಾಕ್ಸಿಕ್' ತಂಡವಾಗಲಿ, ಯಶ್ ಆಗಲಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಆಗಲಿ ಕಿಯಾರಾ ಅಡ್ವಾಣಿ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದರೆ, ವಿವಾದ ಸೃಷ್ಟಿಯಾಗಬಹುದೆಂದೂ ಚರ್ಚೆ ಮಾಡಲಾಗುತ್ತಿದೆ. ಅಸಲಿಗೆ ಯಶ್ ಹಾಗೂ ಕಿಯಾರಾ ಅಡ್ವಾಣಿ ಮಧ್ಯೆ ಅಷ್ಟೊಂದು ಹಸಿ ಬಿಸಿ ದೃಶ್ಯಗಳಿವೆಯೇ? ಸಿನಿಮಾ ಒಪ್ಪಿಕೊಳ್ಳುವಾಗ ತಕರಾರು ಮಾಡದ ನಟಿ ಈಗ್ಯಾಕೆ ಮಾಡುತ್ತಿದ್ದಾರೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇತ್ತ ಯಶ್ 'ಟಾಕ್ಸಿಕ್' ಸಿನಿಮಾವನ್ನು ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಿದೇಶಿ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಾ ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಗ್ಲೋಬಲ್ ಆಡಿಯನ್ಸ್‌ಗಾಗಿ ಕೆಲವು ದೃಶ್ಯಗಳನ್ನು ರೀ-ಶೂಟ್ ಮಾಡುತ್ತಿದ್ದಾರೆಂಬ ಸುದ್ದಿನೂ ಓಡಾಡುತ್ತಿದೆ. ಈ ಸಮಯದಲ್ಲಿ ಕಿಯಾರಾ ಅಡ್ವಾಣಿ ದೃಶ್ಯಗಳನ್ನು ಕತ್ತರಿಸುವಂತೆ ಹೇಳುತ್ತಿದ್ದಾರೆ? ಅನ್ನೋ ಪ್ರಶ್ನೆಯಂತೂ ಎದ್ದಿದೆ. ಆದರೆ, ಈ ಪೋಸ್ಟ್‌ಗಳ ಬಗ್ಗೆ ಯಶ್, ಕಿಯಾರಾ ಅಡ್ವಾಣಿ ಅಥವಾ 'ಟಾಕ್ಸಿಕ್' ತಂಡ ಅಧಿಕೃತವಾಗಿ ಹೇಳಿಕೆಯನ್ನು ನೀಡಿಲ್ಲ.

English summary
Buzz Kiara Advani demanded to cut intimate scenes with Yash in Toxic may lead to controversy.
Read more about: yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X