ನಿರಾಸೆಯಾದ ಅಭಿಮಾನಿಗಳಿಗೆ ಎರಡನೇ ಟ್ರೈಲರ್ ಸಿಗೋದ್ಯಾವಾಗ? ಇಲ್ಲಿದೆ ಸಲಾರ್ ಲೇಟೆಸ್ಟ್ ಅಪ್‌ಡೇಟ್!

ಪ್ರಭಾಸ್ ಫ್ಯಾನ್ಸ್‌ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾಗಳೆಲ್ಲ ನೆಲಕ್ಕಚ್ಚಿವೆ. 'ಸಾಹೋ', 'ರಾಧೆ ಶ್ಯಾಮ್', 'ಆದಿಪುರುಷ್' ಈ ಮೂರೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಂಚಲ ಸೃಷ್ಟಿಸುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದು ಹುಸಿಯಾಗಿದ್ದು ಗೊತ್ತೇ ಇದೆ. ಹೀಗಾಗಿ 'ಸಲಾರ್' ರಿಲೀಸ್ ಆಗುವುದನ್ನು ಎದುರು ನೋಡುತ್ತಿದ್ದಾರೆ.

'ಕೆಜಿಎಫ್ 2' ಅಂತಹ ಮೆಗಾ ಸಿನಿಮಾ ಕೊಟ್ಟಿರೋ ಪ್ರಶಾಂತ್ ನೀಲ್ ಮೇಲೆ ಎಲ್ಲಿಲ್ಲದ ನಂಬಿಕೆ ಇತ್ತು. ಹೀಗಾಗಿ 'ಸಲಾರ್' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಅಬ್ಬರಿಸಬೇಕು ಅಂತ ತುದಿಗಾಲಲ್ಲಿ ನಿಂತಿದ್ದರು. ಘೋಷಣೆ ಮಾಡಿದಂತೆ ಡಿಸೆಂಬರ್ 1ರಂದು 'ಸಲಾರ್' ಟ್ರೈಲರ್ ರಿಲೀಸ್ ಆಯ್ತು. ಆದರೆ, ಕೆಲ ಅಭಿಮಾನಿಗಳು ಇಷ್ಟ ಆಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅಸಮಧಾನ ಹೊರಹಾಕಿದ್ದರು.

Buzz Prabhs Salaar second trailer will be releasing on Dec 16th here is details

ಡಾರ್ಲಿಂಗ್ ಫ್ಯಾನ್ಸ್ ಬೇಸರಗೊಂಡಿದ್ದು ಗೊತ್ತಾಗುತ್ತಿದ್ದಂತೆ 'ಸಲಾರ್' ತಂಡ ಇನ್ನೊಂದು ಟ್ರೈಲರ್ ರಿಲೀಸ್ ಮಾಡುತ್ತೆ ಅನ್ನೋ ಸುದ್ದಿ ಹರಿದಾಡಿತ್ತು. ಈಗ ಟಾಲಿವುಡ್‌ ಮಂದಿ ಎರಡನೇ ಟ್ರೈಲರ್ ಯಾವಾಗ ರಿಲೀಸ್ ಆಗುತ್ತೆ? ಅನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಟಾಲಿವುಡ್‌ನಲ್ಲಿ ಹರಿದಾಡ್ತಿರೋ ಸುದ್ದಿ ಏನು? ಎರಡನೇ ಟ್ರೈಲರ್ ಎಷ್ಟು ಉದ್ದವಿದೆ? ಸಿನಿಮಾ ಎಷ್ಟು ನಿಮಿಷ ಇದೆ? ಇಂತಹದ್ದೇ ಒಂದಿಷ್ಟು ಸುದ್ದಿಗಳು ಓಡಾಡುತ್ತಿವೆ.

'ಸಲಾರ್' 2ನೇ ಟ್ರೈಲರ್ ಯಾವಾಗ?

ಪ್ರಭಾಸ್, ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಕ್ರೇಜ್ ಕಮ್ಮಿಯೇನು ಇಲ್ಲ. ವಿದೇಶದಲ್ಲಿ 'ಸಲಾರ್' ನೋಡುವುದಕ್ಕೆ ಅನಿವಾಸಿ ಭಾರತೀಯರು ತುದಿಗಾಲಲ್ಲಿ ನಿಂತಿದ್ದಾರೆ. ಅಡ್ವಾನ್ಸ್ ಬುಕಿಂಗ್‌ಗೆ ಸಿಕ್ಕಿರುವ ಪ್ರತಿಕ್ರಿಯೆನೇ ಸಾಕ್ಷಿ. ಯುಎಸ್‌ಎ, ಯುಕೆ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ 'ಸಲಾರ್'ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಟ್ರೈಲರ್ ರಿಲೀಸ್ ಆದ್ಮೇಲೆ ಸಿನಿಮಾ ಬಗ್ಗೆ ಕ್ರೇಜ್ ಕಮ್ಮಿ ಆಗಬಹುದು ಗೊಂದಲಕ್ಕೆ ತೆರೆಬಿದ್ದಿದೆ. ಭಾರತದಲ್ಲಿರೋ ಕ್ರೇಜ್ ದುಪ್ಪಟ್ಟು ಮಾಡುವುದಕ್ಕೆ 'ಸಲಾರ್' 2ನೇ ಟ್ರೈಲರ್ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಡಿಸೆಂಬರ್ 16ರಂದು ಬಿಡುಗಡೆಯಾಗುತ್ತೆ ಅನ್ನೋ ಮಾತು ಕೇಳಿ ಬರುತ್ತಿವೆ.

Buzz Prabhs Salaar second trailer will be releasing on Dec 16th here is details

ಎಷ್ಟು ನಿಮಿಷ ಇರುತ್ತೆ ಟ್ರೈಲರ್?

'ಸಲಾರ್' ಎರಡನೇ ಟ್ರೈಲರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ರಿಲೀಸ್ ಡೇಟ್‌ನಿಂದ ಹಿಡಿದು, ಟ್ರೈಲರ್ ಎಷ್ಟು ನಿಮಿಷ ಇದೆ ಅನ್ನೋದನ್ನು ಚರ್ಚೆ ಮಾಡಲಾಗುತ್ತುದೆ. 'ಸಲಾರ್' ಎರಡನೇ ಟ್ರೈಲರ್ ಸುಮಾರು 2 ನಿಮಿಷ 45 ಸೆಕೆಂಡ್ ಇರುತ್ತೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

ಡಿಸೆಂಬರ್ 22ಕ್ಕೆ ರಿಲೀಸ್ ಆಗುತ್ತಿರುವ ಪ್ರಭಾಸ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದರೆ, ಮತ್ತೆ ಟ್ರ್ಯಾಕ್‌ಗೆ ಬಂದಂತಾಗುತ್ತೆ. ವಿಶೇಷ ಅಂದರೆ, ಇದೂವರೆಗೂ ಪ್ರಭಾಸ್ ಅಬ್ಬರದ ಪ್ರಚಾರಕ್ಕೆ ಮುಂದಾಗಿಲ್ಲ. ಮೊದಲ ಟ್ರೈಲರ್ ರಿಲೀಸ್ ಆದಾಗಳೂ ಪ್ರಭಾಸ್ ಸದ್ದು ಮಾಡಿರಲಿಲ್ಲ. ಟಾಲಿವುಡ್ ಮೂಲಗಳ ಪ್ರಕಾರ, ಎರಡನೇ ಟ್ರೈಲರ್ ಮೂಲಕ ಪ್ರಭಾಸ್ ಪ್ರಚಾರಕ್ಕೆ ಧುಮುಕಲಿದ್ದಾರೆ ಎನ್ನಲಾಗಿದೆ.

'ಸಲಾರ್' ಎಷ್ಟು ಗಂಟೆ ಸಿನಿಮಾ?

ಪ್ರಶಾಂತ್ ನೀಲ್ ನಿರ್ದೇಶಿಸಿರುವ 'ಸಲಾರ್' ಹೈ ವೋಲ್ಟೇಜ್ ಆಕ್ಷನ್ ಸಿನಿಮಾ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಏನಿಲ್ಲ ಅಂದರೂ, ಅದ್ಭುತ ಆಕ್ಷನ್ ಹಾಗೂ ವಿಜ್ಯೂವಲ್ಸ್ ಅಂತೂ ಇರುತ್ತೆ ಅನ್ನೋದು ಗೊತ್ತಾಗಿದೆ. ಅಲ್ಲದೆ ಈಗಾಗಲೇ ಸೆನ್ಸಾರ್ ಪ್ರಕ್ರಿಯೆಯನ್ನೂ ಮುಗಿಸಿ ರಿಲೀಸ್‌ಗೆ ರೆಡಿಯಾಗಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿವೆ.

ಪ್ರಶಾಂತ್ ನೀಲ್ ಈಗಾಗಲೇ ಹೇಳಿದ ಹಾಗೆ 'ಸಲಾರ್' ದೊಡ್ಡ ಕಥೆ. ಎರಡು ಪಾರ್ಟ್‌ಗಳಲ್ಲಿ ಹೇಳಬಹುದಾದ ಕಥೆ ಎಂದಿದ್ದರು. ಟಾಲಿವುಡ್‌ಗಳ ಪ್ರಕಾರ, ಸಲಾರ್ ಸಿನಿಮಾ ಬರೋಬ್ಬರಿ 2 ಗಂಟೆ 55 ನಿಮಿಷವಿದೆ. ಈ ಅಂಕಿಗಳು ನಿಜವೇ ಆಗಿದ್ದಲ್ಲಿ ದೊಡ್ಡ ಸಿನಿಮಾ ಎಂದೇ ಹೇಳಬಹುದು. ಕಥೆ ಬೋರ್ ಹೊಡೆಸದೆ ಹೋದರೆ, ಪ್ರೇಕ್ಷಕರು ತಡೆದುಕೊಳ್ಳಬಹುದು. ಏನಕ್ಕೂ ಈ ಎಲ್ಲಾ ಅಂಶಗಳ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಹೇಳಿಕೆ ನೀಡಬೇಕಿದೆ.

More from Filmibeat

English summary
Prabhas starrer Salaar second trailer release date; Telugu cinema news, Telugu Movies Updates|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X