Toxic Event: ಬೆಂಗಳೂರಿನಲ್ಲಿ ಟಾಕ್ಸಿಕ್ ಬಿಗ್ ಈವೆಂಟ್? ಪ್ಯಾನ್ ಇಂಡಿಯಾ ನಡುಗಿಸೋಕೆ ಯಶ್ ಪ್ಲ್ಯಾನ್ ಏನು?
ಮಾರ್ಚ್ 19 ಕನ್ನಡ ಚಿತ್ರರಂಗಕ್ಕೆ ಬಿಗ್ ಡೇ. 'ಕೆಜೆಎಫ್ 2' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ ಬಳಿಕ ಯಶ್ ಸಿನಿಮಾ ರಿಲೀಸ್ ಆಗ್ತಿದೆ. ಇದೇ ದಿನ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಧುರಂಧರ್ 2'. ಯಶ್ ಹಾಗೂ ರಣ್‌ವೀರ್ ಸಿಂಗ್ ಇಬ್ಬರೂ ಸಾವಿರ ಕೋಟಿ ಸರದಾರರೇ. ಹೀಗಾಗಿ ಯಾರ ವಿರುದ್ಧ ಯಾರು ಗೆಲ್ತಾರೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಭಾರತದ ಬಾಕ್ಸಾಫೀಸ್‌ನಲ್ಲಿ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಸಿನಿಮಾಗಳ ಕಾಳಗಳನ್ನು ನೋಡುವುದಕ್ಕೆ ಕೇವಲ ಸ್ಯಾಂಡಲ್‌ವುಡ್ ಬಾಲಿವುಡ್ ಅಷ್ಟೇ ಅಲ್ಲ, ಇಡೀ ದೇಶವೇ ಎದುರು ನೋಡುತ್ತಿದೆ. ಇವೆರಡು ಸಿನಿಮಾಗಳಲ್ಲಿ ಯಾರು ಗೆಲ್ಲಬಹುದು? ಮತ್ತೊಬ್ಬ ಬಾಲಿವುಡ್ ನಟನನ್ನು ಮಣಿಸುತ್ತಾರಾ? ಈ ಕುತೂಹಲಕ್ಕೆ ಮಾರ್ಚ್ 19ಕ್ಕೆ ತೆರೆ ಬೀಳಲಿದೆ. ಅಲ್ಲಿವರೆಗೂ ಎರಡು ಸಿನಿಮಾಗಳ ಅಭಿಮಾನಿಗಳಿ ಟೆನ್ಷನ್ ತಪ್ಪಿದ್ದಲ್ಲ.

ಅತ್ತ 'ಧುರಂಧರ್ 2' ಸೈಲೆಂಟ್ ಆಗಿದ್ದರೆ, ಇತ್ತ 'ಟಾಕ್ಸಿಕ್' ಅಗ್ರೆಸಿವ್ ಆಗಿ ಪ್ರಚಾರ ಆರಂಭಿಸಿದೆ. ತಮ್ಮ ಸಿನಿಮಾದಲ್ಲಿರುವ ಪಾತ್ರಗಳ ಗುಟ್ಟನ್ನು ಬಿಟ್ಟುಕೊಡದ ತಂಡ ಈಗ ಒಬ್ಬೊಬ್ಬರೇ ಕಲಾವಿದರನ್ನು ರಿವೀಲ್ ಮಾಡುತ್ತಿದ್ದಾರೆ. ಈ ಮಧ್ಯೆ ಸ್ಯಾಂಡಲ್‌ವುಡ್‌ನಲ್ಲಿ ಒಂದು ಸುದ್ದಿ ಹಬ್ಬಿದೆ. ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ ಬೆಂಗಳೂರಿನಲ್ಲಿ ದೊಡ್ಡ ಇವೆಂಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದಾರಂತೆ. ಇಡೀ ದೇಶವೇ ತಿರುಗಿ ನೋಡುವ ಇವೆಂಟ್ ಅದು ಅನ್ನೋದು ಗಾಂಧಿನಗರದಲ್ಲಿ ಗಿರಿಕಿ ಹೊಡೆಯುತ್ತದೆ.
'ಟಾಕ್ಸಿಕ್' ಕನ್ನಡ ಚಿತ್ರರಂಗದ ಮತ್ತೊಂದು ಬಿಗ್ ಬಜೆಟ್ ಸಿನಿಮಾ. 'ಕೆಜಿಎಫ್ 2' ಬಳಿಕ 'ಕಾಂತಾರ ಚಾಪ್ಟರ್ 1' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಈಗ 'ಟಾಕ್ಸಿಕ್' ಸರದಿ. ಒಂದು ವೇಳೆ ಯಶ್ ಈ ಯುದ್ಧದಲ್ಲಿ ಗೆದ್ದರೆ, ಮತ್ತೆ ಅವರನ್ನು ಅಷ್ಟು ಸುಲಭಕ್ಕೆ ಹಿಡಿಯೋದಕ್ಕೆ ಆಗೋದಿಲ್ಲ. ಅದಕ್ಕಾಗಿ ತೆರೆಮರೆಯಲ್ಲಿ ಒಂದಿಷ್ಟು ಸಾಹಸಗಳು ನಡೆಯುತ್ತಿದೆ. ಅದೇ ಈ ಬಿಗ್ ಈವೆಂಟ್ ಎನ್ನಲಾಗಿದೆ.

ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ 'ಟಾಕ್ಸಿಕ್' ಮೊದಲ ಈವೆಂಟ್ ಮಾರ್ಚ್ ಮೊದಲ ವಾರದಲ್ಲಿ ನಡೆಯಲಿದೆ. ಮಾರ್ಚ್ ಎಂಟರಂದು ಬಿಗ್ ಇವೆಂಟ್‌ಗೆ ಇಡೀ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇದು ಇಡೀ ದೇಶವೇ ತಿರುಗಿ ನೋಡುವಂತಹ ಇವೆಂಟ್ ಆಗುತ್ತೆ ಎಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಆ ಇವೆಂಟ್‌ನ ಸ್ವರೂಪಗಳು ಹೇಗಿರುತ್ತೆ? ಆ ಇವೆಂಟ್‌ನಲ್ಲಿ ಏನೆಲ್ಲ ಇರುತ್ತೆ? ಯಾರೆಲ್ಲ ಬರುತ್ತಾರೆ? ಅನ್ನೋ ಬಗ್ಗೆ ಖಚಿತ ಮಾಹಿತಿ ಇಲ್ಲ.
ಒಂದು ಮೂಲದ ಪ್ರಕಾರ, ಮಾರ್ಚ್ ಎಂಟರಂದು 'ಟಾಕ್ಸಿಕ್' ಟೀಸರ್ ಇದೇ ಇವೆಂಟ್‌ನಲ್ಲಿ ಲಾಂಚ್ ಆಗುತ್ತಿದೆ. ಈ ಟ್ರೈಲರ್ ಲಾಂಚ್ ಮಾಡುವುದಕ್ಕಾಗಿಯೇ ಈ ಇವೆಂಟ್ ಅನ್ನು ಆಯೋಜಿಸಲಾಗಿದ್ದು, ಇಡೀ ತಂಡ ಅಂದು ಈ ಇವೆಂಟ್‌ನಲ್ಲಿ ಭಾಗವಹಿಸಲಿದೆ ಎಂದು ಹೇಳುತ್ತಿದೆ. ಯಶ್, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿದಂತ ದೊಡ್ಡ ಸ್ಟಾರ್‌ಕಾಸ್ಟ್ ಈ ಸಿನಿಮಾದಲ್ಲಿ ನಟಿಸಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಇವೆಂಟ್ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಚಿತ್ರತಂಡದಿಂದ ಲಭ್ಯವಾಗಿಲ್ಲ. ಯಾರೆಲ್ಲ ಈ ಇವೆಂಟ್‌ನಲ್ಲಿ ಕಾಣಿಸಿಕೊಳ್ಳಬಹುದು ಅನ್ನೋ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ. ಇನ್ನು ₹1000 ಕೋಟಿ ಪ್ರಿ-ರಿಲೀಸ್ ಬ್ಯುಸಿನೆಸ್ ಟಾರ್ಗೆಟ್ ಇಟ್ಟುಕೊಂಡಿದ್ದ ತಂಡ ಅದರ ಸಮೀಪಕ್ಕೆ ಹೋಗಿದೆ. ಇನ್ನು ಹೆಚ್ಚಿನ ಮಾಹಿತಿ ಮಾರ್ಚ್ 8ರ ಇವೆಂಟ್‌ನಲ್ಲಿ ತಿಳಿಯುವ ಸಾಧ್ಯತೆಯಿದೆ.


Click it and Unblock the Notifications











