UI Movie:'ಯುಐ'ನಲ್ಲಿ ಉಪ್ಪಿಯದ್ದು ಡಬಲ್ ರೋಲ್‌? ಒಂದು ಬ್ಲಾಕ್ ಅಂಡ್ ವೈಟ್, ಇನ್ನೊಂದು ಕಲರ್

ರಿಯಲ್ ಸ್ಟಾರ್ ಉಪೇಂದ್ರ 20 ವರ್ಷಗಳ ಹಿಂದೆ ನಿರ್ದೇಶಿಸಿದ ಸಿನಿಮಾವನ್ನು ಇಂದಿಗೂ ಡಿಕೋಡ್ ಮಾಡುತ್ತಲೇ ಇದ್ದಾರೆ. ಪ್ರತಿಬಾರಿಯೂ ಒಂದೊಂದು ಅರ್ಥ ಸಿಗುತ್ತಿದೆ. ನಾಳೆ (ಡಿಸೆಂಬರ್ 20) ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಯುಐ'ನಲ್ಲಿ ಇನ್ನೇನು ತಲೆಗೆ ಹುಳ ಬಿಟ್ಟಿದ್ದಾರೋ ಅಂತ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

'ಯುಐ' ಅದ್ಧೂರಿ ಬಿಡುಗಡೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿವೆ. ಅಷ್ಟೊತ್ತಿಗಾಗಲೇ ಅಭಿಮಾನಿಗಳು ಸಿನಿಮಾದ ಕಥೆಯನ್ನೇ ಡಿಕೋಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಉಪ್ಪಿ ಯಾವ ರೀತಿ ಕಥೆ ಹೇಳಿರಬಹುದು ಎಂದು ಲೆಕ್ಕ ಹಾಕುತ್ತಿದ್ದಾರೆ. ಈ ಗ್ಯಾಪ್‌ನಲ್ಲಿ ಉಪೇಂದ್ರ 'ಯುಐ'ನಲ್ಲಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿನೂ ಹರಿದಾಡುತ್ತಿದೆ.

Buzz Upendra has appeared in dual roles in the movie UI as Sathya and Kalki

ಉಪೇಂದ್ರ ತಲೆಯೊಳಗೆ ಏನೇನಿದೆಯೋ ಗೊತ್ತಿಲ್ಲ. 'ಯುಐ' ಮೂಲಕ ಏನು ಹೇಳುವುದಕ್ಕೆ ಹೊರಟಿದ್ದಾರೋ ಅದೂ ಗೊತ್ತಿಲ್ಲ. ಇನ್ನು ಕೆಲವೇ ಗಂಟೆಗಳಲ್ಲಿ ಎಲ್ಲದಕ್ಕೂ ತೆರೆಬೀಳಲಿದೆ. ಆದರೆ, ಈಗ್ಯಾಪ್‌ನಲ್ಲಿ ಉಪ್ಪಿಯದ್ದು ಡಬಲ್ ಅಂತ ಹೇಳುತ್ತಿರೋ ಮ್ಯಾಟರ್ ಏನು? 'ಕಪ್ಪು ಬಿಳುಪು', 'ಕಲರ್' ಕಾನ್ಸೆಪ್ಟ್ ಕಥೆಯೇನು? ತಿಳಿಯುವುದಕ್ಕೆ ಮುಂದೆ ಓದಿ.

2024ರ ಕೊನೆಯಲ್ಲಿ 'ಯುಐ' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಟ್ರೆಂಡಿಂಗ್ ಸಿನಿಮಾ ಕೊಡುತ್ತೆ ಅನ್ನೋ ಅಚಲವಾದ ನಂಬಿಕೆಯಲ್ಲಿದೆ. ಕಳೆದ ಒಂದೂವರೆ ಎರಡು ವರ್ಷಗಳಿಂದ ಸ್ಯಾಂಡಲ್‌ವುಡ್‌ಗೆ ಬಿಗ್ ಸಿನಿಮಾ ಅನ್ನೋದು ಸಿಕ್ಕಿಲ್ಲ. ಹೀಗಾಗಿ 'ಯುಐ' ಕನ್ನಡ ಸಿನಿಮಾವನ್ನು ಇನ್ನೊಂದು ಸ್ಟೇಜ್‌ಗೆ ತೆಗೆದುಕೊಂಡು ಹೋಗುತ್ತಾ? ಆ ಫಲಿತಾಂಶ ನಾಳೆ ಹೊರಬೀಳಲಿದೆ. ಈ ಸಿನಿಮಾ ಬಗ್ಗೆ ಇಷ್ಟೊಂದು ಕುತೂಹಲ ಯಾಕೆ ಅಂದರೆ, ಉಪ್ಪಿ ಹೀಗೆ ತಂತ್ರಜ್ಞಾನವನ್ನು ಬಳಸಿ ಸಿನಿಮಾ ಮಾಡಿದ್ದು ಇದೇ ಮೊದಲು. ಅದಕ್ಕೆ ಈ ಕ್ಯೂರಿಯಾಸಿಟಿ.

'ಯುಐ' ಸಿನಿಮಾ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಓಡಾಡುತ್ತಿದೆ. 'ಯುಐ'ನಲ್ಲಿ ಉಪ್ಪಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಒಂದು ಸತ್ಯ ಅನ್ನೋ ಪಾತ್ರ. ಇನ್ನೊಂದು 'ಕಲ್ಕಿ' ಈ ಎರಡು ಪಾತ್ರಗಳನ್ನು ಉಪೇಂದ್ರ ಸಾಂಕೇತಿಕಗಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಎರಡು ಪಾತ್ರಗಳ ಮೂಲಕವೇ ತಮ್ಮ ಫಿಲಾಸಫಿಯನ್ನು ಜನರ ಮುಂದಿಡುವುದಕ್ಕೆ ಮುಂದಾಗಿದ್ದಾ ಎನ್ನಲಾಗಿದೆ.

ಉಪ್ಪಿ ಕಾಣಿಸಿಕೊಳ್ಳುವ ಸತ್ಯ ಪಾತ್ರ ಬ್ಲಾಕ್ ಅಂಡ್ ವೈಟ್‌ನಲ್ಲಿ ಕಾಣಿಸಿಕೊಳ್ಳುತ್ತದೆಯಂತೆ. ಅದೇ 'ಕಲ್ಕಿ' ಪಾತ್ರ ಕಲರ್‌ಫುಲ್ ಆಗಿರುತ್ತೆ. ಸತ್ಯ ಭೂತ ಹಾಗೂ ವರ್ತಮಾನವನ್ನು ಹೇಳುತ್ತಿದ್ದರೆ. 'ಕಲ್ಕಿ' ಭೂತಕಾಲದ ಕಥೆಯನ್ನು ಹೇಳುತ್ತೆ ಅನ್ನೋದು ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ. ಆದರೆ, ಉಪ್ಪಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಿತ್ತಾರಾ? ಇಲ್ವಾ ಅನ್ನೋದು ನಾಳೆ ಸಿನಿಮಾವನ್ನು ತೆರೆಮೇಲೆ ನೋಡಿದಾಗಲೇ ಗೊತ್ತಾಗುತ್ತೆ.

ಈ ಬಾರಿ ಉಪೇಂದ್ರ ಕೇವಲ ಕಥೆಯನ್ನಷ್ಟೇ ವಿಭಿನ್ನವಾಗಿ ಹೇಳುತ್ತಿಲ್ಲ. ಆದೇ ರೀತಿ ಅವರದ್ದೇ ಕಲ್ಪನೆಯ ಬೇರೊಂದು ಲೋಕವನ್ನು ನೋಡಬಹುದು. ಈ ಲೋಕವನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಉಪ್ಪಿಯ ಹೊಸ ಲೋಕವನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಒಂದ್ಕಡೆ ಉಪ್ಪಿ ಫಿಲಾಸಫಿ. ಇನ್ನೊಂದು ಕಡೆ ಉಪ್ಪಿ ವರ್ಲ್ಡ್. ಎರಡನ್ನೂ ನೋಡಿದ ಮೇಲೆ ಪ್ರೇಕ್ಷಕರು ಏನಂತಾರೆ ಅನ್ನೋದು ಸದ್ಯಕ್ಕಂತೂ ಕುತೂಹಲ.

More from Filmibeat

Read more about: upendra ui sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X