Toxic Trailer: ಟೀಸರ್‌ನಲ್ಲೇ ಕಿಕ್ ಕೊಟ್ಟ ಯಶ್ 'ಟಾಕ್ಸಿಕ್' ಟ್ರೈಲರ್ ಯಾವಾಗ? ಇದೇ ಡೇಟ್ ಫಿಕ್ಸ್ ಅಂತೆ!
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮಹಾ ಸಂಭ್ರಮಕ್ಕೆ ಎದುರು ನೋಡುತ್ತಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿ ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ 'ಟಾಕ್ಸಿಕ್' ಅನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಇತ್ತೀಚೆಗೆ ಯಶ್ ಬರ್ತ್‌ಡೇಗೆ ರಿಲೀಸ್ ಆದ ಟೀಸರ್ ಕಿಕ್ ಕೊಟ್ಟಿತ್ತು. ಇಲ್ಲಿಂದ 'ಟಾಕ್ಸಿಕ್'ಗೆ ಮತ್ತಷ್ಟು ಹೈಪ್ ಸಿಕ್ಕಿದೆ.
'ಟಾಕ್ಸಿಕ್' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿವೆ. ಯಶ್ ಬರ್ತ್‌ಡೇ ಮುನ್ನ ಸಿನಿಮಾದಲ್ಲಿ ನಟಿಸಿರುವ ನಾಯಕಿಯರ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದರು. ಹಾಗೇ ಬರ್ತ್‌ಡೇಗೆ ಟೀಸರ್ ಹೊರಬಿದ್ದಿತ್ತು. ಕೇವಲ ಟೀಸರ್ ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಂಡು ಸದ್ದು ಮಾಡುತ್ತಿದೆ. ಕೇವಲ ಯೂಟ್ಯೂಬ್ ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದ ಎಲ್ಲಾ ಪ್ಲಾಟ್fಫರ್ಮ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, 250 ಮಿಲಿಯನ್‌ಗೂ ಅಧಿಕ ವೀವ್ಸ್ ಸಿಕ್ಕಿದೆ.

ಹೀಗಾಗಿ 'ಟಾಕ್ಸಿಕ್' 2026ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಅನ್ನೋದರಲ್ಲಿ ಅನುಮಾನವೇ ಇಲ್ಲ. 'ಟಾಕ್ಸಿಕ್' ಟೀಸರ್ ಇಂದಿಗೂ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಹೀಗಾಗಿ ಟ್ರೈಲರ್ ನೋಡಬೇಕು ಅನ್ನೋ ಬಯಕೆ ಇದ್ದೇ ಇರುತ್ತೆ. ಅದಕ್ಕೆ 'ಟಾಕ್ಸಿಕ್' ಟೀಮ್ ಟ್ರೈಲರ್ ಅನ್ನು ಯಾವಾಗ ರಿಲೀಸ್ ಮಾಡಬೇಕು ಅಂತ ಚರ್ಚೆ ಶುರು ಮಾಡಿದೆಯಂತೆ. ಸ್ಯಾಂಡಲ್‌ವುಡ್ ಮಂದಿಯ ಬಾಯಲ್ಲಿ 'ಟಾಕ್ಸಿಕ್' ಟ್ರೈಲರ್ ರಿಲೀಸ್ ಡೇಟ್ ಕೂಡ ಹರಿದಾಡುತ್ತಿದೆ. ಅದ್ಯಾವುದು ಅಂತ ನೋಡುವುದಾರೇ,
'ಟಾಕ್ಸಿಕ್' ಎದುರು ಬೇರೆ ಸಿನಿಮಾ ರಿಲೀಸ್ ಆಗೋದಿಲ್ಲ ಅನ್ನೋ ನಿರೀಕ್ಷೆಯಿತ್ತು. ಆದರೆ, ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ಸಿನಿಮಾ 'ಧುರಂಧರ್' ದಾಖಲೆ ಕಲೆಕ್ಷನ್ ಮಾಡಿದೆ. ನಿರೀಕ್ಷೆ ಮಾಡದಷ್ಟು ಯಶಸ್ಸು ಕಂಡಿರುವ 'ಧುರಂಧರ್' ಪಾರ್ಟ್ 2 ಕೂಡ ಬರುತ್ತಿದೆ. ಅದೂ 'ಟಾಕ್ಸಿಕ್' ದಿನವೇ ರಿಲೀಸ್ ಆಗುತ್ತಿರೋದು ಹೊಸ ವಿಷಯವಾಗೇನೂ ಉಳಿದಿಲ್ಲ. ಹೀಗಾಗಿ 'ಟಾಕ್ಸಿಕ್' ಕಾಂಪಿಟೇಟರ್ ಸಿಕ್ಕಂತೆ ಆಗಿದೆ. ಹೀಗಾಗಿ ಟ್ರೈಲರ್ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರಂತೆ.
ಯಶ್ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗುತ್ತಿದೆ. ಅದೂ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಯಶ್ ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಪ್ಯಾನ್ ವರ್ಲ್ಡ್ ಸಿನಿಮಾ ಅನ್ನೋ ಸುಳಿವು ಕೊಟ್ಟಿದ್ದಾರೆ. ಹೀಗಾಗಿ ಭರ್ಜರಿ ಪ್ರಚಾರ ಮಾಡುವುದಕ್ಕೆ ಪ್ಲಾನ್ ಮಾಡಲಾಗುತ್ತಿದೆಯಂತೆ. ಹೀಗಾಗಿ ಟ್ರೈಲರ್ ಅನ್ನು ಬೇಗನೇ ಅಂದರೆ, ಮಾರ್ಚ್ 8 ರಿಂದ 10ರ ಆಸುಪಾಸಿನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರಂತೆ.

ಇದರಿಂದ 'ಟಾಕ್ಸಿಕ್' ಟ್ರೈಲರ್ ಸಿನಿಮಾದ ಹೈಪ್ ಅನ್ನು ರಿಲೀಸ್‌ವರೆಗೂ ತಂದು ನಿಲ್ಲಿಸುತ್ತೆ. ಅಷ್ಟೇ ಅಲ್ಲದೆ ಯಶ್ ಹಾಗೂ ಅವರ ತಂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಲಿದೆ. ಭಾರತದ ಐದು ಭಾಷೆಗಳಷ್ಟೇ ಅಲ್ಲದೆ, ಇಂಗ್ಲಿಷ್ ಸೇರಿ ಅಂತರಾಷ್ಟ್ರೀಯ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಟ್ರೈಲರ್ ಬೇಗನೇ ರಿಲೀಸ್ ಮಾಡಿ ಪ್ರಚಾರದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಸದ್ಯ ಇಂತಹದ್ದೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಯಶ್ ಆಗಲಿ, ಚಿತ್ರತಂಡ ಆಗಲಿ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಇನ್ನೂ ಕೆವಿಎನ್ ಸಂಸ್ಥೆಯಿಂದಲೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಬಹುಶ: ಫೆಬ್ರವರಿ ಕೊನೆಯ ವಾರದಿಂದ ನಿಧಾನವಾಗಿ 'ಟಾಕ್ಸಿಕ್' ಪ್ರಚಾರ ಆರಂಭ ಆಗುವ ಸಾಧ್ಯತೆಯಿದೆ. ಏನೇ ಇದ್ದರೂ 'ಧುರಂಧರ್ 2'ಗೆ ಹೇಗೆ ಟಕ್ಕರ್ ಕೊಡುತ್ತೆ? ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.


Click it and Unblock the Notifications











