'ಕ್ರಾಂತಿ' ಚಿತ್ರಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು? ಏನಂತಿದೆ ಸ್ಯಾಂಡಲ್‌ವುಡ್?

ಸ್ಯಾಂಡಲ್‌ವುಡ್‌ನಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಸಿನಿಮಾಗಳು ಹೆಚ್ಚು ಬಾಕ್ಸಾಫೀಸ್‌ನಲ್ಲೂ ದಾಖಲೆ ಮಾಡುತ್ತವೆ. ಸಿನಿಮಾ ಬಿಡುಗಡೆಯಾದ ಒಂದು ವಾರದೊಳಗೆ ಚಿತ್ರವನ್ನು ಗೆಲುವಿನ ದಡಕ್ಕೆ ಸೇರಿಸಬಲ್ಲ ನಟ. ಹೀಗಾಗಿ ದರ್ಶನ್ ಜೊತೆ ಸಿನಿಮಾ ಮಾಡಲು ಆಸೆ ಪಡುವ ನಿರ್ಮಾಪಕರೇನು ಕಮ್ಮಿಯಿಲ್ಲ. ದರ್ಶನ್ ಕಾಲ್ ಶೀಟ್ ಸಿಗುತ್ತೆ ಅಂದರೆ, ಅವರು ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡಲು ರೆಡಿದ್ದಾರೆ. ಆದ್ರೀಗ ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ಸಂಭಾವನೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಸಾಮಾನ್ಯವಾಗಿ ಸಿನಿಮಾ ತಂಡ ನಟರಿಗೆ ಕೊಡುವ ಸಂಭಾವನೆ ಬಗ್ಗೆ ಮಾತಾಡವುದಿಲ್ಲ. ಇತ್ತ ಸ್ಟಾರ್‌ಗಳು ಕೂಡ ತಾವು ಪಡೆದ ಸಂಭಾವನೆ ಬಗ್ಗೆ ಬಾಯಿ ಬಿಡುವುದಿಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ಒಂದು ಸಿನಿಮಾಗೆ ಸೂಪರ್‌ಸ್ಟಾರ್ ಪಡೆದ ಸಂಭಾವನೆ ಜಗತ್ತಿಗೆ ಗೊತ್ತಾಗುತ್ತೆ. ಆದರೆ, ಕನ್ನಡದ ಸೂಪರ್‌ಸ್ಟಾರ್‌ಗಳು ಆ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಆದರೂ, ಎಲ್ಲೋ ಒಂದು ಮೂಲೆಯಲ್ಲಿ ನಟರ ಸಂಭಾವನೆ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಲೇ ಇರುತ್ತೆ. ಈಗ ದರ್ಶನ್ ಕ್ರಾಂತಿ ಸಿನಿಮಾಗೆ ಪಡೆದ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ.

Recommended Video

ಅಚ್ಚರಿ ಮೂಡಿಸಿತು ದರ್ಶನ್ ಕ್ರಾಂತಿ ಸಿನಿಮಾಗೆ ತೆಗೆದುಕೊಂಡ ಸಂಭಾವನೆ

'ಕ್ರಾಂತಿ' ದೊಡ್ಡ ಮೊತ್ತದ ಸಂಭಾವನೆ

'ಕ್ರಾಂತಿ' ದೊಡ್ಡ ಮೊತ್ತದ ಸಂಭಾವನೆ

2022ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗುತ್ತಿರುವ ದೊಡ್ಡ ಸಿನಿಮಾಗಳ ಪಟ್ಟಿಯಲ್ಲಿ 'ಕ್ರಾಂತಿ' ಕೂಡ ಸೇರಿಕೊಂಡಿದೆ. ಈ ಹೈಪ್ ಕ್ರಿಯೆಟ್ ಆಗಿದ್ದಕ್ಕೆ ಕಾರಣಗಳಲ್ಲಿ ಒಂದು ದರ್ಶನ್. ಬಾಕ್ಸಾಫೀಸ್‌ನಲ್ಲಿ ಸದಾ ಗೆಲುವಿನ ನಗೆ ಬೀರುತ್ತಿರುವ ನಟನ ಈ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಆಗುತ್ತೆ ಅನ್ನುವ ನಿರೀಕ್ಷೆಯಿದೆ. 'ಯಜಮಾನ', 'ಕುರುಕ್ಷೇತ್ರ' 'ರಾಬರ್ಟ್‌' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ದರ್ಶನ್ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. 'ಕ್ರಾಂತಿ' ಚಿತ್ರಕ್ಕೆ ಹಿಂದೆಂದಿಗಿಂತೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

'ಕ್ರಾಂತಿ'ಗೆ ದರ್ಶನ್ ಪಡೆದಿದ್ದು ಎಷ್ಟು?

'ಕ್ರಾಂತಿ'ಗೆ ದರ್ಶನ್ ಪಡೆದಿದ್ದು ಎಷ್ಟು?

ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, 'ಕ್ರಾಂತಿ' ದರ್ಶನ್ ದೊಡ್ಡ ಸಂಭಾವನೆಯನ್ನೇ ಪಡೆದಿದ್ದಾರೆ. 'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ದರ್ಶನ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನುವು ಸದ್ಯದ ಬಿಸಿ ಬಿಸಿ ಚರ್ಚೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಿಸುತ್ತಿರುವ ಈ ಸಿನಿಮಾಗೆ ದರ್ಶನ್ ಬರೋಬ್ಬರಿ 12 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಹಾಗೂ ದರ್ಶನ್ ಕಡೆಯಿಂದ ಅಧಿಕೃತ ಮಾಹಿತಿ ಇಲ್ಲ.

ದರ್ಶನ್ ಸಂಭಾವನೆ ಹೆಚ್ಚಾಗಿದ್ದೇಗೆ?

ದರ್ಶನ್ ಸಂಭಾವನೆ ಹೆಚ್ಚಾಗಿದ್ದೇಗೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಭಾವನೆ ಹೆಚ್ಚಿಸಿಕೊಂಡಿರುವುದು ಕನ್ನಡ ಸಿನಿಮಾಗಳ ಗಳಿಕೆಯನ್ನು ಹೇಳುತ್ತವೆ. ಅದರಲ್ಲೂ ಇತ್ತೀಚೆಗೆ ದರ್ಶನ್ ನಟಿಸಿದ ಶೇ.90ರಷ್ಟು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ದರ್ಶನ್ ಖಾತೆಯಲ್ಲಿ ಎರಡು 100 ಕೋಟಿ ಗಳಿಸಿದ ಸಿನಿಮಾಗಳಿವೆ. ಈ ಹಿಂದೆ ತೆರೆಕಂಡಿದ್ದ ದರ್ಶನ್ 50ನೇ ಸಿನಿಮಾ 'ಕುರುಕ್ಷೇತ್ರ' 100 ಕೋಟಿ ಗಳಿಸಿತ್ತು. ಇತ್ತೀಚೆಗೆ ಬಿಡುಗಡೆಯಾಗಿದ್ದ 'ರಾಬರ್ಟ್' ಸಿನಿಮಾ ಕೂಡ 100 ಕೋಟಿ ದಾಖಲಿಸಿತ್ತು. 'ಕ್ರಾಂತಿ' ತಂಡವೇ ನಿರ್ಮಿಸಿದ್ದ 'ಯಜಮಾನ' ಬಾಕ್ಸಾಫೀಸ್‌ನಲ್ಲಿ 60 ಕೋಟಿ ದಾಟಿದೆ ಎನ್ನಲಾಗಿತ್ತು. ದರ್ಶನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಿರುವುದರಿಂದ 'ಕ್ರಾಂತಿ'ಗೆ 12 ಕೋಟಿ ಸಂಭಾವನೆ ಪಡೆದಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸಂಭಾವನೆ ಹಾಗೂ ಅಕ್ಷರದಲ್ಲೂ 'ಕ್ರಾಂತಿ'

ಸಂಭಾವನೆ ಹಾಗೂ ಅಕ್ಷರದಲ್ಲೂ 'ಕ್ರಾಂತಿ'

ದರ್ಶನ್ ಈ ಸಿನಿಮಾದಲ್ಲಿ ಅಕ್ಷರ 'ಕ್ರಾಂತಿ' ಮಾಡಲು ಹೊರಟಿದ್ದಾರೆ ಅನ್ನುವುದಷ್ಟೇ ಗೊತ್ತಿದೆ. ಚಿತ್ರತಂಡ ಆಗಲಿ, ನಿರ್ದೇಶಕ ವಿ ಹರಿಕೃಷ್ಣ ಆಗಲಿ ಕಥೆಯ ಬಗ್ಗೆ ಸುಳಿವನ್ನು ನೀಡಿಲ್ಲ. ಆದರೆ, ಮಾಸ್ ಎಲಿಮೆಂಟ್ಸ್‌ಗಳ ಜೊತೆ ಒಂದೊಳ್ಳೆ ಮೆಸೇಜ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಕೊರೊನಾ ಕಾಲದಲ್ಲೂ ಸಿನಿಮಾ ಬೇಗ ಬೇಗನೇ ಸಿನಿಮಾ ಮುಗಿಸುತ್ತಿದೆ. ನಾಲ್ಕನೇ ಅಲೆ, ಐದನೇ ಅಲೆ ಆರಂಭ ಆಗುವುದಕ್ಕೂ ಮುನ್ನ ಪ್ರೇಕ್ಷಕರಿಗೆ ಸಿನಿಮಾ ತೋರಿಸಬೇಕು ಅನ್ನುವ ತವಕದಲ್ಲಿ ಚಿತ್ರತಂಡವಿದೆ.

More from Filmibeat

English summary
Challenging Star Darshan took a huge amount for as remuneration for Kranti. Rumours going around is that Darshna took 12 crores for Kranti.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X