ದರ್ಶನ್ ಜೈಲಿನಲ್ಲಿದ್ರೂ 'ಡೆವಿಲ್' ಬಿಡುಗಡೆಗೆ ಖತರ್ನಾಕ್ ಪ್ಲ್ಯಾನ್: ಪ್ರಿ-ರಿಲೀಸ್ ಇವೆಂಟ್ ಹೇಗಿರುತ್ತೆ ಗೊತ್ತೇ?

ಒಂದ್ವೇಳೆ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ರಿಲೀಸ್ ಆಗಬೇಕಿತ್ತು. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣ ಈ ಸಿನಿಮಾದ ವೇಗವನ್ನೇ ಕುಗ್ಗಿಸಿತ್ತು. ಸಿನಿಮಾ ಮಂದಿಯ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿತ್ತು. 'ಡೆವಿಲ್' ಸಿನಿಮಾ ಆರಂಭ ಆದಲ್ಲಿಂದ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇತ್ತು. ಅದರ ಪರಿಣಾಮ ಅಂದುಕೊಂಡಿದ್ದಕ್ಕಿಂತ ಒಂದು ವರ್ಷ ತಡವಾಗಿ ಬಿಡುಗಡೆಯಾಗುತ್ತಿದೆ.

ದರ್ಶನ್ ಸದ್ಯಕ್ಕೀಗ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಅಲ್ಲಿ ದರ್ಶನ್ ಜಾಮೀನು ರದ್ದಾಗಿದ್ದರಿಂದ ಮತ್ತೆ ಜೈಲಿ ಸೇರಬೇಕಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಇಲ್ಲದೆಯೇ 'ಡೆವಿಲ್' ಸಿನಿಮಾವನ್ನು ರಿಲೀಸ್ ಮಾಡುವ ಅನಿವಾರ್ಯತೆ ಎದುರಾಗಿದೆ.

Darshan and Rachana Rai Starrer The Devil Pre-Release Plan Songs Teaser amp amp Release Date

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಎರಡನೇ ಬಾರಿ ಜೈಲು ಸೇರುತ್ತಿದ್ದಂತೆ ಇತ್ತ ನಿರ್ಮಾಣ ಸಂಸ್ಥೆ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಇದೇ ವರ್ಷ ದಿಸೆಂಬರ್ 12ರಂದು 'ಡೆವಿಲ್' ಮಾಡುವುದಾಗಿ ಅನೌನ್ಸ್ ಕೂಡ ಆಗಿದೆ. ಒಂದು ವೇಳೆ ದರ್ಶನ್‌ಗೆ ಜಾಮೀನು ಸಿಕ್ಕು ಹೊರ ಬಂದರೆ ಆಯ್ತು. ಇಲ್ಲದೇ ಹೋದಲ್ಲಿ 'ಡೆವಿಲ್' ರಿಲೀಸ್‌ ಹೇಗೆ ಮಾಡಬೇಕು ಅನ್ನೋ ಬಗ್ಗೆ ಒಂದು ಹಂತದ ಚರ್ಚೆಯಾಗಿದೆ. ಹೀಗಂತ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಹಾಗಿದ್ರೆ, ಪ್ರಿ-ರಿಲೀಸ್ ಪ್ಲ್ಯಾನ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಡೆವಿಲ್' ಪ್ರೀ ರಿಲೀಸ್ ಪ್ಲ್ಯಾನ್ ಹೈಲೈಟ್

ದರ್ಶನ್ ಇಲ್ಲದೆ 'ಡೆವಿಲ್' ಸಿನಿಮಾ ರಿಲೀಸ್ ಹೇಗಾಗುತ್ತೆ?
ಜೈಲಿನಲ್ಲಿರೋ ದರ್ಶನ್ ಹೊರಬಾರದೇ ಹೋದರೆ ಏನು ಪ್ಲ್ಯಾನ್?
ಕೊನೆಯ ಒಂದು ತಿಂಗಳು ಹೇಗಿರುತ್ತೆ 'ಡೆವಿಲ್' ಪ್ರಮೋಷನ್?

ಹೌದು, ದರ್ಶನ್ ತೂಗುದೀಪಗೆ 'ಡೆವಿಲ್' ಸಿನಿಮಾ ಗೆಲ್ಲಲೇ ಬೇಕಿದೆ. 'ಕಾಟೇರ'ದಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ ಬಳಿಕ ಅದೇ ಯಶಸ್ಸು 'ಡೆವಿಲ್'ನಲ್ಲಿ ಮುಂದುವರೆಯುತ್ತಿತ್ತು. ಸಿನಿಮಾ ಚೆನ್ನಾಗಿದ್ದಿದ್ದರೆ ಥಿಯೇಟರ್‌ನಲ್ಲೂ ಅಬ್ಬರಿಸುತ್ತಿತ್ತು. ಆದ್ರೀಗ ಪರಿಸ್ಥಿತಿ ಬದಲಾಗಿದೆ. ದರ್ಶನ್ ಲಾಯಲ್ ಅಭಿಮಾನಿಗಳನ್ನು ಹೊರತು ಪಡಿಸಿ ಸಾಮಾನ್ಯ ಸಿನಿಪ್ರೇಮಿಗಳನ್ನು ಥಿಯೇಟರ್‌ಗೆ ಕರೆದುಕೊಂಡು ಬರುವುದು ಸ್ವಲ್ಪ ಕಷ್ಟ. ಹೀಗಾಗಿ 'ಡೆವಿಲ್' ರಿಲೀಸ್‌ಗೆ ಭರ್ಜರಿ ಪ್ಲ್ಯಾನ್ ಮಾಡಲಾಗುತ್ತಿದೆ. ಈ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹಬ್ಬಿಸಿದೆ.

'ಡೆವಿಲ್' ಪ್ರಚಾರ ಹೇಗಿರುತ್ತೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಿಂದ ಹೊರಗಿದ್ದಿದ್ದರೆ ದೊಡ್ಡ ಇವೆಂಟ್ ಅಂತೂ ಆಗೇ ಆಗುತ್ತಿತ್ತು. ಆದರೆ, ಸದ್ಯ ಪರಿಸ್ಥಿತಿಯಲ್ಲಿ ದರ್ಶನ್ ಕಮ್ಮಿ ಅಂದರೂ ಆರು ತಿಂಗಳು ಹೊರ ಬರುವುದಿಲ್ಲ ಅಂತ ವಕೀಲರ ವಲಯದಲ್ಲೇ ಆಗುತ್ತಿರುವ ಚರ್ಚೆ. ಹೀಗಾಗಿ ದರ್ಶನ್ ಅನುಪಸ್ಥಿತಿಯಲ್ಲಿಯೇ 'ಡೆವಿಲ್' ರಿಲೀಸ್ ಆಗಲಿದೆ. ಹೀಗಾಗಿ ಟೀಸರ್, ಟ್ರೈಲರ್, ಆಡಿಯೋ ರಿಲೀಸ್‌ನಿಂದ ಹಿಡಿದು ಪ್ರತಿಯೊಂದು ಹೇಗಿರಬೇಕು ಅನ್ನೋದ ಪ್ಲ್ಯಾನ್ ನಡೆಯುತ್ತಿದೆ.

Darshan and Rachana Rai Starrer The Devil Pre-Release Plan Songs Teaser amp amp Release Date

ಟೀಸರ್, ಟ್ರೈಲರ್, ಇವೆಂಟ್ ಯಾವಾಗ?

'ಡೆವಿಲ್' ಸಿನಿಮಾದ ಮೊದಲ ಹಾಡು " ಇದ್ರೆ ನೆಮ್ಮದಿಯಾಗ್ ಇರ್ಬೇಕ್" ಈಗಾಗಲೇ ರಿಲೀಸ್ ಆಗಿದೆ. ಅದಕ್ಕೆ ದರ್ಶನ್ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಇದೇ ಜೋಷ್ ಅನ್ನೇ ಇಟ್ಟುಕೊಂಡು ಟೀಸರ್, ಟ್ರೈಲರ್, ಆಡಿಯೋ ರಿಲೀಸ್ ಬಗ್ಗೆ ಭರ್ಜರಿ ಪ್ಲ್ಯಾನ್ ಮಾಡಲಾಗಿದೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ 'ಡೆವಿಲ್' ಟೀಸರ್ ವಿಜಯ ದಶಮಿಗೆ ರಿಲೀಸ್ ಆಗುತ್ತಿದೆ. ದೀಪಾವಳಿ ಹಬ್ಬಕ್ಕೆ ಆಡಿಯೋ ರಿಲೀಸ್ ಆಗುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ದೊಡ್ಡದೊಂದು ಇವೆಂಟ್ ಮಾಡಿ ಟ್ರೈಲರ್ ರಿಲೀಸ್ ಮಾಡುವ ಬಗ್ಗೆ ಟೀಮ್ ಸ್ಕೆಚ್ ಹಾಕಿದೆ ಎಂಬ ಸುದ್ದಿ ಹಬ್ಬಿದೆ.

ಪ್ರಚಾರಕ್ಕೆ ವಿಜಯಲಕ್ಷ್ಮಿ ಎಂಟ್ರಿ

ದರ್ಶನ್ ಅನುಪಸ್ಥಿತಿಯಲ್ಲಿ 'ಡೆವಿಲ್' ಸಿನಿಮಾದ ಪ್ರಚಾರದ ಪ್ಯಾನ್‌ಗಳನ್ನು ವಿಜಯಲಕ್ಷ್ಮಿ ಅವರೇ ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ದರ್ಶನ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಕೂಡ ಅವರೇ ಹ್ಯಾಂಡಲ್ ಮಾಡುತ್ತಿದ್ದಾರೆ. ಇದರ ಜೊತೆಗೆ 'ಡೆವಿಲ್' ಪ್ರೀ-ರಿಲೀಸ್ ಇವೆಂಟ್‌ಗಳನ್ನೂ ವಿಜಯಲಕ್ಷ್ಮಿ ಅವರು ನಿರ್ದೇಶಕ ಮಿಲನಾ ಪ್ರಕಾಶ್ ಜೊತೆಗೂಡಿ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Darshan Thoogudeepa and Rachana Rai Starrer The Devil: Pre-Release Plan, Songs, Teaser & Release Date.
Read more about: darshan kannada movies events
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X