ಪತ್ನಿ ಮಗನ ಜೊತೆ ದರ್ಶನ್ ಸಂಕ್ರಾಂತಿ? ಫಾರ್ಮ್‌ ಹಾಸ್‌ನಲ್ಲಿ ಕಿಚ್ಚು ಹಾಯಿಸುತ್ತಾರಾ ದಾಸ?

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡೆ ಕುತೂಹಲ ಕೆರಳಿಸಿದೆ. ಬೆಂಗಳೂರಿಗಿಂತ ಹೆಚ್ಚಾಗಿ ಮೈಸೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಅವರ ಆರೋಗ್ಯ, ಶಸ್ತ್ರ ಚಿಕಿತ್ಸೆ, 'ಡೆವಿಲ್' ಸಿನಿಮಾ, ಇವೆಲ್ಲದರ ಬಗ್ಗೆನೂ ದಿನಕ್ಕೊಂದು ಸುದ್ದಿ ಓಡಾಡುತ್ತಲೇ ಇದೆ. ಮತ್ತೊಂದು ಕಡೆ ರೇಣುಕಾಸ್ವಾಮಿ ಕೇಸ್ ವಿಚಾರಣೆ ಕೂಡ ನಡೆಯುತ್ತಿದೆ.

ಇನ್ನು ಪ್ರತಿ ವರ್ಷ ದರ್ಶನ್ ಸಂಕ್ರಾಂತಿ ಹಬ್ಬವನ್ನು ಜೋರಾಗಿ ಆಚರಣೆ ಮಾಡುತ್ತಿದ್ದರು. ತಮ್ಮ ಫಾಮ್ ಹೌಸ್‌ನಲ್ಲಿ ಕಿಚ್ಚು ಹಾಯಿಸಿ ಹಬ್ಬದ ಆಚರಣೆ ನಡೆಯುತ್ತಿತ್ತು. ಆದರೆ, ಈ ವರ್ಷನೂ ಅಷ್ಟೇ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಗುತ್ತಾ? ಅನ್ನೋ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಅಪ್‌ಡೇಡ್ ಕೂಡ ಸಿಕ್ಕಿದೆ. ರೇಣುಕಾಸ್ವಾಮಿ ಕೇಸ್‌ನಲ್ಲಿ ಜಾಮೀನು ಸಿಕ್ಕು ರಿಲೀಫ್ ಆಗಿರುವ ದರ್ಶನ್ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಬಗ್ಗೆ ಸುದ್ದಿ ಓಡಾಡುತ್ತಿದೆ.

Darshan planning to celebrate Makar Sankranti in his farm house with wife Vijayalakshmi and family

ದರ್ಶನ್ ಮೈಸೂರಿಗೆ ತೆರಳುವುದಕ್ಕೆ ಕೋರ್ಟ್‌ನಲ್ಲಿ ಅನುಮತಿ ಕೇಳಿದ್ದರು. ಕಳೆದ ಕೆಲವು ದಿನಗಳಿಂದ ತಮ್ಮ ಫಾರ್ಮ್‌ಹೌಸ್‌ನಲ್ಲಿಯೇ ದರ್ಶನ್ ಇದ್ದರು. ಕೇಸ್ ಹಾಗೂ ಸಿಟಿಯ ಜಂಜಾಟಗಳಿಂದ ದೂರವೇ ಉಳಿದಿದ್ದರು. ಈಗ ಮತ್ತೆ ಫಾರ್ಮ್‌ ಹೌಸ್‌ಗೆ ತೆರಳಿದ್ದು, ಸಂಕ್ರಾಂತಿ ಹಬ್ಬಕ್ಕೆ ಬೇಕಿರೋ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ದರ್ಶನ್‌ ಫಾರ್ಮ್‌ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬ ಹೇಗಿರುತ್ತೆ ಅನ್ನೋದನ್ನು ಹಲವು ವರ್ಷಗಳಿಂದ ನೋಡಿಕೊಂಡೇ ಬಂದಿದ್ದೇವೆ. ತಮ್ಮ ಕುಟುಂಬದೊಂದಿಗೆ, ಆಪ್ತರೊಂದಿಗೆ ಪ್ರತಿ ವರ್ಷ ದರ್ಶನ್ ಸಂಕ್ರಾಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆಪ್ತರೊಂದಿಗೆ ಸಂಭ್ರಮಿಸಿ ಖುಷಿ ಪಡುತ್ತಿದ್ದರು. ಈ ಬಾರಿ ಪರಿಸ್ಥಿತಿ ಬೇರೆ ಇದ್ದಿದ್ದರಿಂದ ಸಂಕ್ರಾಂತಿ ಆಚರಣೆ ಇರುತ್ತೋ ಇಲ್ಲವೋ ಅನ್ನೋ ಅನುಮಾನವಿತ್ತು. ಆದ್ರೀಗ ತೆರೆಬಿದ್ದಿದೆ.

ಇತ್ತೀಚೆಗೆ ದರ್ಶನ್ ಬೆಂಗಳೂರಿನ ಸೆಷನ್ಸ್ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಆ ವೇಳೆ ಮತ್ತೆ ಮೈಸೂರಿಗೆ ಹೋಗಲು ಅನುಮತಿಯನ್ನು ಕೇಳಿದ್ದರು. ಅದಕ್ಕೆ ನ್ಯಾಯಾಲಯ ಅನುಮತಿಯನ್ನೂ ನೀಡಿರುವ ಬಗ್ಗೆ ವರದಿಯಾಗಿದೆ. ಜನವರಿ 12ನೇ ತಾರೀಕಿನಿಂದ 5 ದಿನಗಳ ಕಾಲ ಮೈಸೂರಿಗೆ ತೆರಳುವುದಕ್ಕೆ ಅನುಮತಿಯನ್ನು ಕೋರ್ಟ್ ನೀಡಿದ್ದು, ಸಂಕ್ರಾಂತಿ ಹಬ್ಬದ ತಯಾರಿಯಲ್ಲಿ ಮುಳುಕಿದ್ದಾರೆ ಎನ್ನಲಾಗಿದೆ.

Darshan planning to celebrate Makar Sankranti in his farm house with wife Vijayalakshmi and family

ಕಳೆದ ಏಳೆಂಟು ತಿಂಗಳಿಂದ ಜೈಲು, ಕೋರ್ಟ್, ಕಛೇರಿ ಅಂತ ಹೈರಾಣಿಗಿರುವ ದರ್ಶನ್ ನೆಮ್ಮದಿಯಾಗಿ ಸಂಕ್ರಾಂತಿಯನ್ನು ಆಚರಿಸಲು ನಿರ್ಧರಿಸಿದ್ದಾರೆ ಅನ್ನೋದು ಸುದ್ದಿ. ಈ ಬಾರಿ ಕುಟುಂಬದೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಿದ್ದಾರೆ ಎನ್ನಲಾಗಿದ್ದು, ಕೆಲವೇ ಕೆಲವು ಮಂದಿ ಆಪ್ತರಿಗೆ ಆಹ್ವಾನ ನೀಡಲಾಗಿದೆ. ಎನ್ನಲಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಹಾಗೂ ತಮ್ಮ ದಿನಕರ್ ಕುಟುಂಬ ಭಾಗವಹಿಸಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ದರ್ಶನ್ ಡಬಲ್ ಖುಷಿಯಲ್ಲಿ ಇದ್ದರು. ಒಂದು 'ಕಾಟೇರ್' ಸೂಪರ್ ಸಕ್ಸಸ್ ಆಗಿತ್ತು. ಇನ್ನೊಂದು ಕಡೆ ಸಂಕ್ರಾಂತಿ ಹಬ್ಬ. ಎರಡೂ ಹಬ್ಬವನ್ನು ಸಖತ್ ಎಂಜಾಯ್ ಮಾಡಿಕೊಂಡು ಆಚರಿಸಿದ್ದರು. ಈ ಬಾರಿ ಸಂಕ್ರಾಂತಿ ಹಬ್ಬ ಆಚರಣೆ ಮಾಡುತ್ತಾರೋ ಇಲ್ಲವೋ ಅನ್ನೋ ಅನುಮಾನವಿತ್ತು. ಆದರೆ, ದರ್ಶನ್ ಪ್ರತಿವರ್ಷದಂತೆ ಸಂಕ್ರಾಂತಿ ಹಬ್ಬ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇನ್ನೊಂದು ಕಡೆ ಪವಿತ್ರಾ ಗೌಡ ಉತ್ತರ ಭಾರತದ ಕಡೆ ಟೆಂಪಲ್ ರನ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಇನ್ನು ಈ ಎಲ್ಲಾ ತೊಡಕುಗಳ ಮಧ್ಯೆ ದರ್ಶನ್ ಸಂಕ್ರಾಂತಿ ಹೇಗಿರುತ್ತೆ ಅನ್ನೋದನ್ನು ನೋಡಬೇಕಿದೆ.

More from Filmibeat

English summary
Buzz: Darshan planning to celebrate Sankranti in his farmhouse with wife Vijayalakshmi and family;
Read more about: darshan sankranti gossip
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X