ದರ್ಶನ್ ಜತೆ ಬಳುಕುವ ಬಳ್ಳಿ ಸೋನಮ್ ಕಪೂರ್

<ul id="pagination-digg"><li class="previous"><a href="/gossips/sonam-kapoor-acts-darshan-movie-mahesh-sukhadhare-068090.html">« Previous</a>

Darshan
ಆದರೆ, ಸೋನಮ್ ಕಪೂರ್ ನಿಜವಾಗಿಯೂ ಕನ್ನಡಕ್ಕೆ ಬರುತ್ತಾರಾ ಎಂಬುದು ಹಲವರ ಪ್ರಶ್ನೆ!. ಯಾಕೆ ಬರಲಾರರು ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ. ಸೋನಮ್ ಅಪ್ಪ, ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ ಕನ್ನಡದ "ಪಲ್ಲವಿ ಅನುಪಲ್ಲವಿ' ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಅಡಿಯಿಟ್ಟವರು. ಹೀಗಾಗಿ ಅನಿಲ್ ಕಪೂರ್ ಕುಟುಂಬಕ್ಕೆ ಕನ್ನಡದ ಮೇಲೆ ಹೆಚ್ಚಿನ ಅಕ್ಕರೆಯಿದೆ. ಸೋನಮ್ ಕಪೂರ್ ಬರಬಹುದು ಎಂಬ ಆಸೆಗೆ ಇದೇ ಆಸರೆ.

ಅದೇನೆ ಇರಲಿ, ನಿರ್ದೇಶಕ ಮಹೇಶ್ ಸುಖಧರೆ ಈಗ ಹೇಳುತ್ತಿರುವ ಪ್ರಕಾರ, ಸೋನಮ್ ಬಂದೇ ಬರುತ್ತಾರೆ. ಆ ಕಾಲ ಸದ್ಯದಲ್ಲೇ ಕೂಡಿ ಬರಲಿದೆ. ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ನಾಯಕರು ಎಂಬುದು ಇನ್ನೊಂದು ವಿಶೇಷವೇ ಸರಿ. ಹಾಗಿದ್ದರೆ ಚಿತ್ರ ಯಾವಾಗ ಪ್ರಾರಂಭ? ಅದಕ್ಕೆ ಸದ್ಯಕ್ಕೆ ಮಹೇಶ್ ಸುಖಧರೆ ಬಳಿ ಉತ್ತರವಿಲ್ಲ. ಕಾರಣ, ಅವರಿಷ್ಟದ ನಾಯಕ-ನಾಯಕಿ ಇಬ್ಬರೂ ಬಿಜಿಯಿರುವ ಕಾರಣ ಸ್ವಲ್ಪ ಲೇಟಾಗಬಹುದು ಅಷ್ಟೇ.

ಅಂದಹಾಗೆ, ದರ್ಶನ್ ಬಹುನಿರೀಕ್ಷಿತ ಚಿತ್ರ 'ಸಂಗೊಳ್ಳಿ ರಾಯಣ್ಣ' ಆಡಿಯೋ ಬಿಡುಗಡೆ ಸಮಾರಂಭ ಮಗಿಸಿ ಬಿಡುಗಡೆಗೆ ಸಜ್ಜಾಗಿದೆ. ದರ್ಶನ್ ಹಾಗೂ ನಿಖಿತಾ ಜೋಡಿಯ ಈ ಚಿತ್ರದಲ್ಲಿ ಹಿರಿಯ ನಟಿ ಜಯಪ್ರದಾ ಕೂಡ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಬರೋಬ್ಬರಿ ಮೂವತ್ತು ಕೋಟಿ ರು. ಬಜೆಟ್ ಚಿತ್ರವಾಗಿರುವ ಇಉ ಕನ್ನಡದ ಮಟ್ಟಿಗೆ ದಾಖಲೆ ನಿರ್ಮಿಸಲಿದೆ.

ಒಟ್ಟಿನಲ್ಲಿ ದರ್ಶನ್ 'ಬುಲ್ ಬುಲ್' ನಂತರ ಬರಲಿರುವ 'ಭೈರವ' ಚಿತ್ರಕ್ಕೆ ಸೋನಮ್ ಕಪೂರ್ ಬರಲಿದ್ದಾರೆ ಎಂಬ ಮಾತು ನಿರ್ದೇಶಕ ಮಹೇಶ್ ಸುಖಧರೆ ಬಾಯಿಂದ ಮತ್ತೆ ಬಂದಿದೆ. ಆದರೆ ಸೋನಮ್ ಬಾಯಿಂದ 'ಓಕೆ' ಪದ ಬಂದಿಲ್ಲ. ಹೀಗಿರುವಾಗ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವ ಕನ್ನಡದ ಪಡ್ಡೆಗಳಿಗೆ ಸೋನಮ್ ಬಂದರೆ ಖುಷಿ. ಇಲ್ಲದಿದ್ದರೆ... ಕಾದಿರುವ ಖುಷಿಯಷ್ಟೇ ಗತಿ! (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/gossips/sonam-kapoor-acts-darshan-movie-mahesh-sukhadhare-068090.html">« Previous</a>

More from Filmibeat

English summary
Bollywood Actress, Actor Anil Kapoor daughter Sonam Kapoor acts in Challenging Star Darshan Upcoming movie 'Bhairava'. This movie to direct by Mahesh Sukhadhare as he told himself. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X