ಕಮಲ್ ಹಾಸನ್ ನಿರ್ಮಾಣದ ಸಿನಿಮಾಗೆ ದೀಪಿಕಾ ಪಡುಕೋಣೆ? ಹೀರೊಗಿಂತ ಡಿಪ್ಪಿಗೆ ಹೆಚ್ಚು ಸಂಭಾವನೆ?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೆ ನಂ 1 ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಶಾರುಖ್ ಖಾನ್ ಜೊತೆ ನಟಿಸಿದ 'ಪಠಾಣ್' ಸಿನಿಮಾ ಹಿಟ್ ಆಗುತ್ತಿದ್ದಂತೆ ದೀಪಿಕಾಗೆ ದಕ್ಷಿಣ ಭಾರತದ ಸಿನಿಮಾರಂಗದಿಂದಲೂ ಆಫರ್‌ಗಳು ಬರುತ್ತಿವೆ.
ಈಗಾಗಲೇ ದೀಪಿಕಾ ಪಡುಕೋಣೆ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸಿನಿಮಾ 'ಪ್ರಾಜೆಕ್ಟ್ ಕೆ'ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೂಡ ವೇಗವಾಗಿ ನಡೆಯುತ್ತಿದೆ. ಈ ಬೆನ್ನಲ್ಲೆ ಮತ್ತೊಂದು ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಬಾರಿ ಸೌಂಡ್ ಮಾಡುತ್ತಿದೆ.

ಹೌದು, ಇತ್ತೀಚೆಗಷ್ಟೇ ತಮಿಳು ನಟ ಸಿಂಬು ನಟಿಸಿದ 'ಪತ್ತು ತಲಾ' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿರೋದ್ರಿಂದ ಬೇಡಿಕೆ ಹೆಚ್ಚಾಗಿದೆಯಂತೆ. ಸ್ವತ: ಕಮಲ್ ಹಾಸನ್ ಈ ನಟನಿಗಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಇವರೇ ದೀಪಿಕಾ ಪಡುಕೋಣೆಗೆ ತಮಿಳು ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ತಮಿಳು ಸಿನಿಮಾಗೆ ದೀಪಿಕಾ ಗ್ರೀನ್ ಸಿಗ್ನಲ್?
ದೀಪಿಕಾ ಪಡುಕೋಣೆ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 'ಪಠಾಣ್' ಸಿನಿಮಾ ಬಾಲಿವುಡ್ ಬಾಕ್ಸಾಫೀಸ್ ದಾಖಲೆಯನ್ನು ಉಡೀಸ್ ಮಾಡುತ್ತಿದ್ದಂತೆ ಆಫರ್ ಕೂಡ ಹೆಚ್ಚಾಗಿದೆ. ಇದೇ ವೇಳೆ ಕಮಲ್ ಹಾಸನ್ ಕೂಡ ಸಿಂಬುಗಾಗಿ ತಾವೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ನಟಿಸುವಂತೆ ದೀಪಿಕಾಗೆ ಆಫರ್ ಕೊಟ್ಟಿದ್ದಾರಂತೆ. ಇಂತಹದ್ದೊಂದು ಸುದ್ದಿ ಕಾಲಿವುಡ್ ಹರಿದಾಡುತ್ತಿದೆ.

ಇದು ಸಿಂಬು ನಟನೆಯ 48ನೇ ಸಿನಿಮಾ. ದೇಸಿಂಗು ಪೆರಿಯಾಸಾಮಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಕಣ್ಣುಂ ಕಣ್ಣುಂ ಕೊಳ್ಳೈಯಾಡಿತಾಳ್' ಅನ್ನೋ ಸೂಪರ್ ಹಿಟ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ಸಿಂಬು ತೂಕವನ್ನು ಇಳಿಸಿಕೊಂಡು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಸಿಂಬುಗಿಂತ ದೀಪಿಕಾಗೆ ಹೆಚ್ಚು ಸಂಭಾವನೆ?
'ಎಸ್‌ಟಿಆರ್ 48' ತಮಿಳು ನಟ ಸಿಂಬು ವೃತ್ತಿ ಬದುಕಿನಲ್ಲೇ ದೊಡ್ಡ ಸಿನಿಮಾ ಎನ್ನಲಾಗುತ್ತಿದೆ. ಕಮಲ್ ಹಾಸನ್ ಈ ಸಿನಿಮಾವನ್ನು ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
'ಪಠಾಣ್' ಬೋಲ್ಡ್ ಅಂಡ್ ಆಕ್ಷನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾ ಹೆಚ್ಚು ಹಣ ಡಿಮ್ಯಾಂಡ್ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದು ಸಿಂಬು ನೀಡುತ್ತಿರುವ ಸಂಭಾವನೆಗಿಂತ ಅಧಿಕ ಎನ್ನಲಾಗುತ್ತಿದೆ. ಆದರೆ, ಕಮಲ್ ಹಾಸನ್ ಟೀಂ ಇನ್ನೂ ದೀಪಿಕಾ ಜೊತೆ ಮಾತುಕತೆ ನಡೆಸುತ್ತಲೇ ಇದ್ದು, ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಅಂತಾನೂ ಹೇಳಲಾಗಿದೆ.
ರಜನಿಕಾಂತ್ ಜೊತೆ ನಟಿಸಿದ್ದ ದೀಪಿಕಾ
ದೀಪಿಕಾ ಪಡುಕೋಣೆ ಈ ಹಿಂದೆನೇ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಎಕ್ಸ್‌ಪೆರಿಮೆಂಟಲ್ ಸಿನಿಮಾ 'ಕೊಚ್ಚಡೈಯಾನ್'ನಲ್ಲಿ ನಟಿಸಿದ್ದರು. ಅದು ಮೋಷನ್ ಕ್ಯಾಪ್ಚರ್ ಸಿನಿಮಾ ಆಗಿತ್ತು. ಹೀಗಾಗಿ ದೀಪಿಕಾ ಪಡುಕೋಣೆಯನ್ನು ಸ್ಟ್ರೈಟ್ ಆಗಿ ತಮಿಳು ಸಿನಿಮಾ ನೋಡಲು ಸಾಧ್ಯವಾಗಿರಲ್ಲ.
ಈ ಹಿಂದೆ ಶಾರುಖ್ ಖಾನ್ ನಟನೆಯ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ತಮಿಳು ಹುಡುಗಿಯಾಗಿ ಕಾಣಿಕೊಂಡಿದ್ದರು. ಈ ಸಿನಿಮಾ ಕೂಡ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿತ್ತು. ಒಂದ್ವೇಲೆ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ದೀಪಿಕಾ ಪಡುಕೋಣೆ ಗ್ರೀನ್ ಸಿಗ್ನಲ್ ಕೊಟ್ಟರೆ, ಸಿಂಬು ಸಿನಿಮಾಗೆ ಹೊಸ ಮೈಲೇಜ್ ಸಿಗಲಿದೆ.


Click it and Unblock the Notifications











