ಬಾಲಿವುಡ್‌ಗೆ ಹಾರಿದ ನಯನತಾರಾಗೆ ಸಿಕ್ಕ ಸಂಭಾವನೆ ಎಷ್ಟು? ಟಾಲಿವುಡ್ ಬಂದ ದೀಪಿಕಾ ಪಡೆದಿದ್ದೆಷ್ಟು?

ಇಬ್ಬರೂ ಲೇಡಿ ಸೂಪರ್‌ಸ್ಟಾರ್‌ಗಳನ್ನು ತಮ್ಮ ದಿಕ್ಕು ಬದಲಿಸಿದ್ದಾರೆ. ಉತ್ತರದಿಂದ ದಕ್ಷಿಣದ ಕಡೆಗೆ ದೀಪಿಕಾ ಪಡುಕೋಣೆ ಬಂದರೆ, ಇತ್ತ ದಕ್ಷಿಣದಿಂದ ಉತ್ತರದ ಕಡೆ ನಯನತಾರಾ ಪಯಣ ಬೆಳೆಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಯಾವ ಮಟ್ಟಿಗೆ ಸಕ್ಸಸ್ ಸಿಗುತ್ತೆ ಅನ್ನೋದು ಸದ್ಯಕ್ಕೆ ಅಭಿಮಾನಿಗಳ ಮುಂದಿರೋ ಪ್ರಶ್ನೆ.

ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟಿದ್ದಾರೆ. ಶಾರುಖ್ ಖಾನ್ ಅಭಿನಯದ 'ಜವಾನ್' ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇತ್ತ ದೀಪಿಕಾ ಪಡುಕೋಣೆ ಬಾಲಿವುಡ್‌ನಿಂದ ದಕ್ಷಿಣ ಚಿತ್ರರಂಗಕ್ಕೆ ಬಂದಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Deepika Padukone Salary For Project K 10Cr. And Nayanatara Charging 8 Cr For Jawan

ದೀಪಿಕಾ-ನಯನತಾರಾಗೆ ಕ್ರೇಜ್ ಹೇಗಿದೆ?

ನಯನತಾರಾ ಹಾಗೂ ದೀಪಿಕಾ ಪಡುಕೋಣೆ ಇಬ್ಬರೂ ಅವರ ಅಡ್ಡದಲ್ಲಿ ಸೂಪರ್‌ಸ್ಟಾರ್‌ಗಳೇ. ನಯನತಾರಾ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸೋಕೆ ದೊಡ್ಡ ಮೊತ್ತದ ಸಂಭಾವನೆ ಪಡೆದರೆ, ಅತ್ತ ದೀಪಿಕಾ ಪಡುಕೋಣೆ ಬಾಲಿವುಡ್‌ ಸಿನಿಮಾಗೆ ಅತೀ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದರು. ಆದ್ರೀಗ ಇಬ್ಬರೂ ಚಿತ್ರರಂಗವನ್ನು ಬದಲಿಸಿರೋದ್ರಿಂದ ಸಂಭಾವನೆ ವಿಷಯದಲ್ಲೂ ಏರಿಕೆಯಾಗಿದೆ.

ದಕ್ಷಿಣ ಭಾರತದ ಸಿನಿಮಾದ ಪರದೆ ಮೇಲೆ ದೀಪಿಕಾ ಪಡುಕೋಣೆಯನ್ನು ನೋಡುವುದಕ್ಕೆ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಅತ್ತ ಸೌತ್ ಲೇಡಿ ಸೂಪರ್‌ಸ್ಟಾರ್ ನೋಡುವುದಕ್ಕೆ ಹಿಂದಿ ಬೆಲ್ಟ್‌ನ ಪ್ರೇಕ್ಷಕರು ಕಾದು ಕೂತಿದ್ದಾರೆ. ಹೀಗಾಗಿ ಇಬ್ಬರಿಗೂ ಕ್ರೇಜ್ ಏನೂ ಕಮ್ಮಿಯಿಲ್ಲ. ಹಾಗೇ ಪೈಪೋಟಿಗೆ ಬಿದ್ದು ಸಂಭಾವನೆ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

Deepika Padukone Salary For Project K 10Cr. And Nayanatara Charging 8 Cr For Jawan

ನಯನತಾರಾ ಎಷ್ಟೆಷ್ಟು ಸಂಭಾವನೆ?

ನಯನತಾರಾಗೆ ವಿವಾಹದ ಬಳಿಕವೂ ಕ್ರೇಜ್ ಎನೂ ಕಮ್ಮಿಯಾಗಿಲ್ಲ. ಬಾಲಿವುಡ್‌ ಸೂಪರ್‌ಸ್ಟಾರ್ ಶಾರುಖ್ ಖಾನ್ ಸಿನಿಮಾದಲ್ಲಿ ನಾಯಕಿಯಾಗೋ ಚಾನ್ಸ್ ಸಿಕ್ಕಿದೆ. ಇನ್ನೊಂದು ಕಡೆ ಸ್ವತ: ಶಾರುಖ್ ಖಾನ್ ಲೇಡಿ ಸೂಪರ್‌ಸ್ಟಾರ್ ನೋಡುವುದಕ್ಕೆ ಚೆನ್ನೈಗೆ ಬಂದಿದ್ದರು. ಮೂಲಕಗಳ ಪ್ರಕಾರ, ನಯನಾತಾರಾ ಮೊದಲ ಬಾಲಿವುಡ್ ಸಿನಿಮಾ ಬರೋಬ್ಬರಿ 8 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ನಯನತಾರಾ ಬಾಲಿವುಡ್‌ಗೆ ಹಾರಿದ್ದಷ್ಟೇ ಅಲ್ಲ. ಸಂಭಾವನೆಯಲ್ಲೂ ಏರಿಕೆಯಾಗಿದೆ.

'ಜವಾನ್' ಸಿನಿಮಾ ಬಳಿಕ ನಯನತಾರಾ ಮತ್ತೆ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎನ್ನಲಾಗಿದೆ. ತಮಿಳು ನಟ ಜಯಂ ರವಿ ಜೊತೆ ನಟಿಸುತ್ತಿರುವ ನಯನತಾರಾ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಈ ಮೂಲಕ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನಲಾಗುತ್ತಿದೆ.

ದೀಪಿಕಾ ಪಡುಕೋಣೆ 'ಪ್ರಾಜೆಕ್ಟ್‌ ಕೆ' ಸಂಭಾವನೆ ಎಷ್ಟು?

ಇತ್ತ ದೀಪಿಕಾ ಪಡುಕೋಣೆ 'ಪ್ರಾಜೆಕ್ಟ್ ಕೆ' ಸಿನಿಮಾ ಮೂಲಕ ಮತ್ತೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್, ಅಮಿತಾಭ್ ಬಚ್ಚನ್ ನಟಿಸುತ್ತಿರುವ ಸಿನಿಮಾಗೆ ಹೀರೊಯಿನ್ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ದೀಪಿಕಾ ಪಡುಕೋಣೆ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

ದೀಪಿಕಾ ಪಡುಕೋಣೆ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುವುದಕ್ಕೆ ಇದಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಒಂದು ಸಿನಿಮಾಗೆ ಬರೋಬ್ಬರಿ 22 ಕೋಟಿ ರೂ. ಪಡೆಯುತ್ತಾರೆ ಎನ್ನಲಾಗಿದೆ. ಆದರೆ, ದಕ್ಷಿಣ ಭಾರತದ ಮಾರುಕಟ್ಟೆಗೆ ಅನುಗುಣವಾಗಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ನಯನತಾರಾ ಬಾಲಿವುಡ್‌ನಲ್ಲಿ, ದೀಪಿಕಾ ಪಡುಕೋಣೆ ಟಾಲಿವುಡ್‌ನಲ್ಲಿ ದಾಖಲೆ ಸಂಭಾವನೆ ಪಡೆದಿದ್ದಾರೆ ಎಂದು ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ.

More from Filmibeat

English summary
Deepika Padukone Salary For Project K 10Cr. And Nayanatara Charging 8 Cr For Jawan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X