ಧನುಷ್ ಹಾಗೂ ಐಶ್ವರ್ಯಾ ಲವ್ ಸ್ಟೋರಿ ಕಿವಿಗೆ ಬೀಳುತ್ತಿದ್ದಂತೆ ರಜನಿಕಾಂತ್ ಮಾಡಿದ್ದೇನು?

ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯಾ ಇಬ್ಬರೂ ನಿನ್ನೆ (ಜನವರಿ 17) ರಂದು 18 ವರ್ಷಗಳ ತಮ್ಮ ದಾಂಪತ್ಯಕ್ಕೆ ತಿಲಾಂಜಲಿ ಇಡುವುದಾಗಿ ಘೋಷಿಸಿದ್ದಾರೆ. ಇದು ಧನುಷ್ ಹಾಗೂ ರಜನಿಕಾಂತ್ ಅಭಿಮಾನಿಗಳಿ ದೊಡ್ಡ ಶಾಕ್ ಅಷ್ಟೇ ಅಲ್ಲ ನಿರಾಸೆ ಕೂಡ ಆಗಿದೆ. ಇಬ್ಬರ ವಿಚ್ಚೇದನಕ್ಕೆ ಕಾರಣವೇನು ಅನ್ನುವುದು ತಿಳಿದು ಬಂದಿಲ್ಲ. ಆದರೆ, ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾಗಲು ತೀರ್ಮಾನಿಸಿದ್ದಾರೆ.

Recommended Video

ಅಪ್ಪನ ಹಿಂದೆಯೇ ಹೋದ ರಜನಿಕಾಂತ್ ಪುತ್ರಿ ಐಶ್ವರ್ಯ | Filmibeat Kannada

18 ವರ್ಷಗಳ ಹಿಂದೆ ಧನುಷ್ ಹಾಗೂ ರಜನಿಕಾಂತ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳು ನಟ ಧನುಷ್ ಜೊತೆ ದಾಂಪತ್ಯಕ್ಕೆ ದಾಂಪತ್ಯಕ್ಕೆ ಕಾಲಿಟ್ಟಿದ್ದು ದೊಡ್ಡ ಸಂಭ್ರಮವೇ ಆಗಿತ್ತು. ಧನುಷ್ ಹಾಗೂ ಐಶ್ವರ್ಯಾ ಲವ್ ಸ್ಟೋರಿ ತಿಳಿಸಿದ್ದ ರಜನಿ, ಇಬ್ಬರನ್ನೂ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರು. 18 ವರ್ಷಗಳ ಹಿಂದೆ ಇದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.

'ಕಾದಲ್ ಕೊಂಡೈನ್' ನೋಡಿ ಫಿದಾ

'ಕಾದಲ್ ಕೊಂಡೈನ್' ನೋಡಿ ಫಿದಾ

ಧನುಷ್‌ ಅಭಿನಯಿಸಿದ್ದ 'ಕಾದಲ್ ಕೊಂಡೈನ್' ಸಿನಿಮಾ ಆಗತಾನೇ ಬಿಡುಗಡೆಯಾಗಿತ್ತು. ಸಿನಿಮಾ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. ಹೀಗಾಗಿ ಈ ಸಿನಿಮಾವನ್ನು ನೋಡುವುದಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯಾ ಕೂಡ ಬಂದಿದ್ದರು. ಈ ಸಿನಿಮಾ ನೋಡಿದ ಬಳಿಕ ಧನುಷ್ ಅಭಿನಯ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ತುಂಬಾನೇ ಇಷ್ಟ ಆಗಿತ್ತು. ಅಲ್ಲಿಂದ ಧನುಷ್ ಮೇಲೆ ಫಿದಾ ಆಗಿದ್ದರು ಐಶ್ವರ್ಯಾ.

ಅಲ್ಬರ್ಟ್ ಥಿಯೇಟರ್‌ನಲ್ಲಿ ಮೊದಲ ಭೇಟಿ

ಅಲ್ಬರ್ಟ್ ಥಿಯೇಟರ್‌ನಲ್ಲಿ ಮೊದಲ ಭೇಟಿ

ರಜನಿಕಾಂತ್ ಪುತ್ರಿರಾದ ಐಶ್ವರ್ಯಾ ಹಾಗೂ ಸೌಂದರ್ಯಾ ಇಬ್ಬರೂ ಧನುಷ್ ಸಹೋದರಿಗೆ ಸ್ನೇಹಿತರು. ಹೀಗಾಗಿ ಧನುಷ್ ನಟಿಸಿದ್ದ 'ಕಾದಲ್ ಕೊಂಡೈನ್' ಸಿನಿಮಾ ನೋಡಲು ಅಲ್ಬರ್ಟ್ ಚಿತ್ರಮಂದಿರಕ್ಕೆ ಬಂದಿದ್ದರು. ಆಗ ಆ ಚಿತ್ರಮಂದಿರದ ಮಾಲೀಕರು ಇಬ್ಬರನ್ನೂ ಭೇಟಿ ಮಾಡಿಸಿದ್ದರು. ಮೊದಲ ಭೇಟಿಯಲ್ಲಿ ಚಿಕ್ಕ ಮಾತುಕತೆಯಲ್ಲಿ ಮುಗಿದು ಹೋಗಿತ್ತು. ಆದರೆ, ಮರುದಿನವೇ ಐಶ್ವರ್ಯಾ ನಟ ಧನುಷ್‌ಗೆ ಹೂವಿನ ಬೊಕ್ಕೆಯನ್ನು ಕಳುಹಿಸಿದ್ದರು. ಇಲ್ಲಿಂದ ಇಬ್ಬರೂ ಭೇಟಿ, ಮಾತುಕತೆ ಆರಂಭ ಆಗಿತ್ತು.

ರಜನಿ ಕಿವಿಗೆ ಬೀಳುತ್ತಿದ್ದಂತೆ ಮದುವೆ

ರಜನಿ ಕಿವಿಗೆ ಬೀಳುತ್ತಿದ್ದಂತೆ ಮದುವೆ

ಧನುಷ್ ಹಾಗೂ ಐಶ್ವರ್ಯಾ ಲವ್ ಸ್ಟೋರಿ ನಿಧಾನವಾಗಿ ಮಾಧ್ಯಮಗಳಲ್ಲಿ ಹರಿದಾಡಲು ಶುರುವಾಗಿತ್ತು. ಕೇವಲ ಆರು ತಿಂಗಳಲ್ಲಿಯೇ ಇಬ್ಬರ ಪ್ರೀತಿ ಬೆಳಕಿಗೆ ಬಂದಿತ್ತು. ಇದು ಸೂಪರ್‌ಸ್ಟಾರ್ ರಜನಿಕಾಂತ್ ಕಿವಿಗೂ ಬಿತ್ತು. ಹೀಗಾಗಿ ತಕ್ಷಣವೇ ಮಗಳ ಮದುವೆ ಮಾಡಲು ನಿರ್ಧರಿಸಿದ್ದರು. ಆಗ ಧನುಷ್‌ಗೆ ಕೇವಲ 21 ವರ್ಷ. ಐಶ್ವರ್ಯಾಗೆ 23 ವರ್ಷ. ತನ್ನ ಮಗಳಿಗಿಂತ ಎರಡು ವರ್ಷ ಚಿಕ್ಕವನಾಗಿದ್ದರೂ ರಜನಿ ಒಪ್ಪಿಗೆ ನೀಡಿದ್ದರು, ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಮುಗಿಸಿದ್ದರು.

ಲವ್ ಮ್ಯಾರೇಜ್ ಅಲ್ಲ ಅರೇಂಜ್ಡ್ ಮ್ಯಾರೇಜ್

ಲವ್ ಮ್ಯಾರೇಜ್ ಅಲ್ಲ ಅರೇಂಜ್ಡ್ ಮ್ಯಾರೇಜ್

2013ರಲ್ಲಿ ಐಶ್ವರ್ಯಾ ನೀಡಿದ್ದ ಸಂದರ್ಶನವೊಂದಲ್ಲಿ ಇಬ್ಬರದ್ದೂ ಲವ್ ಸ್ಟೋರಿ ಅಲ್ಲ ಅಂತ ಹೇಳಿದ್ದರು. "ಎರಡೂ ಕುಟುಂಬಗಳು ನಿರ್ಧರಿಸಿ ಮದುವೆ ಮಾಡಿದ್ದಾರೆ. ಧನುಷ್ ಸಹೋದರಿ ಮತ್ತು ನಾನು ಸ್ನೇಹಿತೆಯಾಗಿದ್ದೆವು. ಅಲ್ಲಿಂದ ಪರಿಚಯ ಬಿಟ್ಟರೆ. ಧನುಷ್ ಹಾಗೂ ನನ್ನ ಮದುವೆ ಲವ್ ಮ್ಯಾರೇಜ್ ಅಲ್ಲ.. ಅರೇಂಜ್ಡ್ ಮ್ಯಾರೇಜ್ ಎಂದು ಹೇಳಿಕೆ ನೀಡಿದ್ದರು." ಈಗ 18 ವರ್ಷಗಳ ಬಳಿಕ ಇಬ್ಬರೂ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ.

More from Filmibeat

English summary
Dhanush and Aishwarya Love Story Rajinikanth got both of them Married in hurry. Dhanush and Aishwarya Rajinikanth's wedding in 2004 took place in a hurry after the news of their affair spread in the media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X