ರಜನಿ ಪುತ್ರಿಗೆ ಧನುಷ್‌ ವಿಚ್ಛೇದನ: ಸೂಪರ್‌ಸ್ಟಾರ್ ಅಭಿಮಾನಿಗಳನ್ನು ಕಳೆದುಕೊಳ್ಳುವ ಆತಂಕ

ಕಳೆದೆರಡು ದಿನಗಳಿಂದ ದಕ್ಷಿಣ ಭಾರತದಲ್ಲಿ ನಟ ಧನುಷ್ ಹಾಗೂ ಐಶ್ವರ್ಯಾ ವಿಚ್ಛೇದನದ ಬಗ್ಗೆನೇ ಚರ್ಚೆ ನಡೆಯುತ್ತಿದೆ. ಇಬ್ಬರ ಬಗ್ಗೆನೂ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಆದರೆ, ಈ ಡಿವೋರ್ಸ್ ಸುದ್ದಿ ಹಬ್ಬಿದಾಗಿನಿಂದಲೂ ರಜನಿ ಅಭಿಮಾನಿಗಳು ಧನುಷ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ. ಧನುಷ್ ಬಗ್ಗೆ ಇದ್ದ ಉತ್ತಮ ಅಭಿಪ್ರಾಯಗಳು ಈಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ರಜನಿಕಾಂತ್ ಟಾಲಿವುಡ್‌ನ ಸೂಪರ್‌ಸ್ಟಾರ್. ವಿಶ್ವದ ಮೂಲೆ ಮೂಲೆಯಲ್ಲೂ ಇವರಿಗೆ ಅಭಿಮಾನಿಗಳಿದ್ದಾರೆ. ಧನುಷ್ ಕೂಡ ಅತ್ಯುತ್ತಮ ನಟ. ಇವರಿಗೂ ತಮ್ಮದೇ ಆದ ಅಭಿಮಾನಿ ಬಳಗವಿದೆ. ಇವರ ಜೊತೆ ರಜನಿಕಾಂತ್ ಫ್ಯಾನ್ ಸೇರಿಕೊಂಡರೆ ದೊಡ್ಡ ಹಬ್ಬವನ್ನೇ ಮಾಡುತ್ತಿದ್ದರು. ಆದ್ರೀಗ ರಜನಿ ಅಭಿಮಾನಿಗಳು ಧನುಷ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಧನುಷ್ ಇವರನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಅಂತ ತಮಿಳು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ.

ರಜನಿ ಅಭಿಮಾನಿಗಳನ್ನು ಕಳೆದುಕೊಳ್ಳಬಹುದು

ರಜನಿ ಅಭಿಮಾನಿಗಳನ್ನು ಕಳೆದುಕೊಳ್ಳಬಹುದು

ಅಭಿಮಾನಿಗಳು ಯಾವಾಗಲೂ ತಮ್ಮ ನೆಚ್ಚಿನ ನಟನ ಬೆಂಬಲಕ್ಕೆ ನಿಲ್ಲುತ್ತಾರೆ. ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಅಭಿಮಾನಿಗಳು ನಿಲ್ಲುತ್ತಾರೆ. ಇಷ್ಟು ದಿನ ಧನುಷ್ ಸಿನಿಮಾಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾದರೆ ತಲೈವಾ ಫ್ಯಾನ್ಸ್ ಕೂಡ ನೋಡಿ ಸಂಭ್ರಮ ಪಡುತ್ತಿದ್ದರು. ಧನುಷ್ ಫ್ಯಾನ್ಸ್ ಜೊತೆ ಚಿತ್ರಮಂದಿರಲ್ಲಿ ಕೂತು ಶಿಳ್ಳೆಗಳನ್ನು ಹೊಡೆಯುತ್ತಿದ್ದರು. ಬ್ಯಾನರ್ ಕಟ್ಟಿ ಸಂಭ್ರಮಿಸುತ್ತಿದ್ದರು. ಆದ್ರೀಗ ಆ ಎಲ್ಲಾ ಸಂಭ್ರಮವನ್ನು ಧನುಷ್ ಕಳೆದು ಕೊಳ್ಳಬಹುದು ಎನ್ನಲಾಗುತ್ತಿದೆ.

 ಧನುಷ್ ವಿರುದ್ಧ ರಜನಿ ಫ್ಯಾನ್ಸ್ ಬೊಟ್ಟು

ಧನುಷ್ ವಿರುದ್ಧ ರಜನಿ ಫ್ಯಾನ್ಸ್ ಬೊಟ್ಟು

ವಿಚ್ಛೇದನದ ಬಳಿಕ ಎಲ್ಲರೂ ಧನುಷ್ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ರಜನಿಕಾಂತ್ ಪುತ್ರಿ ಐಶ್ವರ್ಯಾ 18 ವರ್ಷದ ದಾಂಪತ್ಯವನ್ನು ಕಡಿದುಕೊಳ್ಳಲು ಮುಂದಾಗಿದ್ದಕ್ಕೆ ಧನುಷ್ ಕಾರಣ ಅಂತ ಮಾತಾಡುವವರು ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಈ ಹಿಂದೆ ಧನುಷ್ ವಿರುದ್ಧ ಕೇಳಿ ಬಂದಿರುವ ಅಫೇರ್‌ಗಳು. ಇದು ರಜನಿಕಾಂತ್ ಅಭಿಮಾನಿಗಳ ಕಿವಿ ಮುಟ್ಟಿರದೆ ಇರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಧನುಷ್ ಸಿನಿಮಾಗಳಿಗೆ ರಜನಿ ಅಭಿಮಾನಿಗಳ ಬೆಂಬಲ ಸಿಗುವುದು ಅನುಮಾನ ಅಂತ ಚಿತ್ರರಂಗದ ಮಂದಿನೇ ಗೊಣಗುತ್ತಿದ್ದಾರೆ.

 ರಜನಿ ಕುಟುಂಬದೊಂದು ಫ್ಯಾನ್ಸ್ ನಂಟು

ರಜನಿ ಕುಟುಂಬದೊಂದು ಫ್ಯಾನ್ಸ್ ನಂಟು

ರಜನಿಕಾಂತ್ ತಮ್ಮ ಅಭಿಮಾನಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ರಾಜಕೀಯಕ್ಕೆ ಬರಬೇಕು ಅನ್ನುವ ತೀರ್ಮಾನಕ್ಕೆ ಬಂದಾಗ ತನ್ನೆಲ್ಲಾ ಅಭಿಮಾನಿ ಸಂಘವನ್ನು ಒಟ್ಟಿಗೆ ಸೇರಿಸಿದ್ದರು. ತಮ್ಮ ನಿರ್ಧಾರದ ಬಗ್ಗೆ ಸ್ವತಃ ಅಭಿಮಾನಿಗಳೊಂದಿಗೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ ರಜನಿಕಾಂತ್ ಕುಟುಂಬದೊಂದಿಗೆ ನೇರ ಸಂಪರ್ಕದಲ್ಲಿರುವ ಫ್ಯಾನ್ಸ್‌ಗೆ ಅವರ ಮನೆಯೊಳಗೆ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ದೊಡ್ಡ ವಿಚಾರವಲ್ಲ. ಹೀಗಾಗಿ ಧನುಷ್ ಬೆಂಬಲದಿಂದ ದೂರಾನೇ ಉಳಿಯಬಹುದು ಎನ್ನುವುದು ತಮಿಳು ಚಿತ್ರರಂಗದಲ್ಲಿ ನಡೆಯುತ್ತಿರುವ ಚರ್ಚೆ.

 ಮನಸ್ತಾಪ ಅಷ್ಟೇ.. ವಿಚ್ಛೇದನ ನೀಡಿಲ್ಲ

ಮನಸ್ತಾಪ ಅಷ್ಟೇ.. ವಿಚ್ಛೇದನ ನೀಡಿಲ್ಲ

ವಿಚ್ಛೇದನದ ವಿಚಾರ ಗಂಭೀರವಾಗಿ ಚರ್ಚೆಯಾಗುತ್ತಿದ್ದಂತೆ ಧನುಷ್ ತಂದೆ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರೂ ಕೋಪದಲ್ಲಿ ಈ ಆತುರದ ನಿರ್ಧಾರಕ್ಕೆ ಕೈ ಹಾಕಿರಬಹುದು. ಆದರೆ ವಿಚ್ಛೇದನ ನೀಡಿಲ್ಲ ಎಂದು ಧನುಷ್ ತಂದೆ ಕಸ್ತೂರಿ ರಾಜ ತಮಿಳಿನ ದಿನತಂತಿ ಪತ್ರಿಕೆಯ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಬ್ಬರೂ ಚೆನ್ನೈನಲ್ಲಿ ಇಲ್ಲ. ಹೈದರಾಬಾದ್‌ನಲ್ಲಿ ಇದ್ದಾರೆ. ಇಬ್ಬರಿಗೂ ಒಂದಿಷ್ಟು ಸಲಹೆಗಳನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಮತ್ತೆ ಇಬ್ಬರೂ ಒಂದಾದರೆ, ರಜನಿಕಾಂತ್ ಅಭಿಮಾನಿಗಳು ಸಮಾಧಾನಗೊಳ್ಳುವ ಸಾಧ್ಯತೆಗಳಿವೆ.

More from Filmibeat

English summary
Dhanush to lose Rajnikanth fan base after he announced divorce with Aishwarya. Dhanush may lose backing of the superstar's fans. This will may impact on his career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X