ದೊಡ್ಡ ಮೊತ್ತಕ್ಕೆ 'ಜವಾನ್' ಸಿನಿಮಾ ಹಕ್ಕು ಖರೀದಿಸಿದ ದಿಲ್ ರಾಜು? ಟಾಲಿವುಡ್‌ ಮಂದಿಗೆ ಅಚ್ಚರಿ ಯಾಕೆ?

ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಈಗ ಮತ್ತೆ ಗೆದ್ದು ಬೀಗುತ್ತಿದ್ದಾರೆ. ನಾಲ್ಕು ವರ್ಷಗಳ ಬಳಿಕ ಕಮ್ ಬ್ಯಾಕ್ ಮಾಡಿದ ಸಿನಿಮಾ 'ಪಠಾಣ್' ಬಾಲಿವುಡ್‌ ಬಾಕ್ಸಾಫೀಸ್ ಹೊಸ ದಾಖಲೆಯನ್ನೇ ಬರೆದಿದೆ. ಹೀಗಾಗಿ ಮುಂದಿನ 'ಜವಾನ್' ಮೇಲೆ ಎಲ್ಲರೂ ಕಣ್ಣಿಟ್ಟಿರೋದು ಸಹಜ. ಆ ಸಾಲಿನಲ್ಲಿ ತೆಲುಗು ನಿರ್ಮಾಪಕ ದಿಲ್ ರಾಜು ಕೂಡ ಇದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

'ಜವಾನ್' ಸಿನಿಮಾ ಬಗ್ಗೆ ದಕ್ಷಿಣ ಭಾರತದ ವಿತರಕರು ಆಸಕ್ತಿ ತೋರುತ್ತಿರುವುದಕ್ಕೆ ಕಾರಣ ನಿರ್ದೇಶಕ ಅಟ್ಲೀ. ತಮಿಳು ನಿರ್ದೇಶಕ ಅಟ್ಲೀ ಇದೇ ಮೊದಲ ಬಾರಿಗೆ ಬಾಲಿವುಡ್ ಸಿನಿಮಾಗೆ ಕೈ ಹಾಕಿದ್ದಾರೆ. ಅದರಲ್ಲೂ ಕಿಂಗ್ ಖಾನ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕಾರಣಕ್ಕೆ ದಕ್ಷಿಣ ಭಾರತದಲ್ಲೂ 'ಜವಾನ್'ಗೆ ಒಂದು ಮಟ್ಟಕ್ಕೆ ಕ್ರೇಜ್ ಇದೆ.

Dil Raju really purchased Shah Rukh Khans Atlee Movie Jawan for huge money

ಈ ಬಾರಿ ದಕ್ಷಿಣ ಭಾರತವನ್ನೂ ಗುರಿಯಾಗಿಟ್ಟುಕೊಂಡೇ ಶಾರುಖ್ ಸಿನಿಮಾ ಮಾಡಿದ್ದಾರೆ. ಅವರದ್ದೇ ನಿರ್ಮಾಣ ಸಂಸ್ಥೆ, ದಕ್ಷಿಣ ಭಾರತದ ಕಲಾವಿದರೂ ಇದ್ದಾರೆ. ಹೀಗಾಗಿ 'ಜವಾನ್' ಸೌತ್ ದೊಡ್ಡ ಮೊತ್ತವನ್ನೇ ಕಲೆ ಹಾಕುತ್ತೆ ಅನ್ನೋದು ನಂಬಿಕೆ. ಆದರೂ, ದಿಲ್ ರಾಜು ಅಂತ ನಿರ್ಮಾಪಕರು ದೊಡ್ಡ ಮೊತ್ತ ಕೊಟ್ಟು ತೆಲುಗು ರೈಟ್ಸ್ ಖರೀದಿಸಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದಿಲ್ ರಾಜು ತೆಕ್ಕೆಗೆ 'ಜವಾನ್' ರೈಟ್ಸ್

ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಗ್ಗೆ ದಿಲ್ ರಾಜು ಆಸಕ್ತಿ ತೋರಿದ್ದಾರೆ ಅನ್ನೋ ಟಾಕ್ ಟಾಲಿವುಡ್‌ನಲ್ಲಿ ಓಡಾಡುತ್ತಿದೆ. ಈಗಾಗಲೇ 'ಜವಾನ್' ಹಕ್ಕನ್ನು ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಆದರೆ, ಟಾಲಿವುಡ್ ಮಂದಿ ಮತ್ತೆ ದಿಲ್ ರಾಜು ಕೈ ಸುಟ್ಟುಕೊಳ್ಳುತ್ತಾರೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ.

Dil Raju really purchased Shah Rukh Khans Atlee Movie Jawan for huge money

ಶಾರುಖ್ ಖಾನ್ ಸಿನಿಮಾ ತೆಲುಗು ರಾಜ್ಯದಲ್ಲಿ ಕಲೆಕ್ಷನ್ ಮಾಡೋದಿಲ್ಲ. ಡಬ್ ಆದ ಸಿನಿಮಾಗಳೂ ಅಷ್ಟೇ.. ಇದು ಗೊತ್ತಿದ್ದರೂ ದಿಲ್ ರಾಜು ಸಿನಿಮಾ ಖರೀದಿ ಮಾಡಿರುವ ಬಗ್ಗೆ ತೆಲುಗು ಮಂದಿ ಗೊಂದಲಕ್ಕೆ ಒಳಗಾಗಿದ್ದಾರೆ. ಮೂಲಗಳ ಪ್ರಕಾರ, 'ಜವಾನ್' ತೆಲುಗು ಖರೀದಿಗೆ ಅಟ್ಲಿ ಕಾರಣ ಎನ್ನಲಾಗಿದೆ. ಯಾಕಂದ್ರೆ ಅಟ್ಲಿ ನಿರ್ದೇಶಿಸಿದ ಸಿನಿಮಾಗಳು ತೆಲುಗು ಬಾಕ್ಸಾಫೀಸ್‌ನಲ್ಲಿ ದೊಡ್ಡ ಗಳಿಕೆಯನ್ನೇ ಕಂಡಿವೆ. ಇದೇ ಕಾರಣ ಎನ್ನಲಾಗುತ್ತಿದೆ.

'ಜವಾನ್' ಪ್ರೀ ರಿಲೀಸ್ ಬ್ಯುಸಿನೆಸ್ ಜೋರು

ಶಾರುಖ್ ಖಾನ್ ತಮ್ಮ ರೆಡ್ ಚಿಲ್ಲೀಸ್ ಬ್ಯಾನರ್‌ನಿಂದಲೇ 'ಜವಾನ್' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಅಟ್ಲೀ ನಿರ್ದೇಶನವಿದೆ. ಜೊತೆ ನಯನತಾರಾ, ಪ್ರಿಯಾಮಣಿ ಅಂತಹ ದಕ್ಷಿಣದ ನಟಿಯರೂ ಇದ್ದಾರೆ. ಈ ಕಾರಣಕ್ಕೆ ಸಿನಿಮಾದ ಬ್ಯುಸಿನೆಸ್ ಕೂಡ ಚೆನ್ನಾಗಿದೆ ಎನ್ನಲಾಗಿದೆ.

'ಜವಾನ್' ಸಿನಿಮಾ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 'ಪಠಾಣ್' ದಾಖಲೆ ಕಲೆಕ್ಷನ್ ಮಾಡಿದ್ದರಿಂದ ಈ ಸಿನಿಮಾಗೂ ಬೇಡಿಕೆ ಹೆಚ್ಚಾಗಿದೆ. ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು ಸುಮಾರು 250 ಕೋಟಿ ರೂ. ದಾಟಿದೆ ಎಂದು ವರದಿಗಳಾಗಿವೆ. ಇದು ಬಾಲಿವುಡ್‌ ಮಟ್ಟಕ್ಕೆ ದೊಡ್ಡ ಡೀಲ್ ಎನ್ನಲಾಗುತ್ತಿದೆ.

ಟ್ರೈಲರ್ ಬಳಿಕ ಮತ್ತಷ್ಟು ಕ್ರೇಜ್

ದಿಲ್ ರಾಜು ಟಾಲಿವುಡ್‌ನ ಅನುಭವಿ ವಿತರಕ. ವಿತರಣೆ ಮಾಡಿದ ಸಿನಿಮಾಗಳೆಲ್ಲಾ ಬಹುತೇಕ ಲಾಭ ತಂದುಕೊಟ್ಟಿದೆ. ಆದರೆ, ಇತ್ತೀಚೆಗಷ್ಟೇ ವಿತರಣೆ ಮಾಡಿದ 'ಶಾಕುಂತಲಂ' ಸಿನಿಮಾದಿಂದ ದೊಡ್ಡ ನಷ್ಟ ಮಾಡಿಕೊಂಡಿದ್ದರು. ಹಾಗಾಗಿಯೇ 'ಆದಿಪುರುಷ್' ಡೀಲ್ ಅನ್ನು ಕೈ ಬಿಟ್ಟಿದ್ದರು. ಈ ಬೆನ್ನಲ್ಲೇ ಮತ್ತೊಂದು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

'ಜವಾನ್' ಸಿನಿಮಾದ ಟ್ರೈಲರ್ ಇದೇ ಜುಲೈ 12ಕ್ಕೆ ರಿಲೀಸ್ ಆಗುತ್ತಿದೆ. ಆ ಬಳಿಕ ಸಿನಿಮಾ ಹಕ್ಕುಗಳು ಮತ್ತಷ್ಟು ದೊಡ್ಡ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಅಟ್ಲೀ ಹಾಗೂ ಅನಿರುದ್ಧ್ ಮ್ಯೂಸಿಕ್ ಪ್ರೇಕ್ಷಕರಿಗೆ ಕಿಕ್ ಕೊಡುವ ಸಾಧ್ಯತೆಯಿದೆ. ಎಲ್ಲಕ್ಕೂ ಟ್ರೈಲರ್ ಮುನ್ನುಡಿ ಬರೆಯುತ್ತಿದೆ.

More from Filmibeat

English summary
Dil Raju really purchased Shah Rukh Khan's Atlee Movie Jawan for huge money, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X