For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಚಿತ್ರದ ಬಗ್ಗೆ ಹರ್ಷ ಹಬ್ಬಿಸುತ್ತಿರುವ ಗಾಳಿಸುದ್ದಿ

  |

  ಶಿವರಾಜ್ ಕುಮಾರ್, ಶ್ರೀನಗರ ಕಿಟ್ಟಿ ಮತ್ತು ಲೂಸ್ ಮಾದ ಯಾನೆ ಯೋಗೀಶ್ ಅಭಿನಯದ 'ಅಣ್ಣ ತಮ್ಮಂದಿರು' ಚಿತ್ರಕ್ಕೆ ಮಹೂರ್ತ ಫಿಕ್ಸ್ ಯಾವತ್ತು ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

  ಒಂದು ಮೂಲದ ಪ್ರಕಾರ ಕಥೆ ರೆಡಿಯಾಗಿದೆ. ಚಿತ್ರಕಥೆ, ಸಂಭಾಷಣೆ ಸಮೇತ ಎಲ್ಲವನ್ನೂ ನಿರ್ದೇಶಕ ಮಾದೇಶ್ ರೆಡಿ ಮಾಡಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ನಿರ್ಮಾಪಕ ಪ್ರಭಾಕರ್ ಕೂಡ ಶಿವಣ್ಣನಿಗೆ ಕಥೆ ಹೇಳಿ ಓಕೆ ಮಾಡಿಸಿದ್ದಾರೆ ಎಂಬ ಸುದ್ದಿಯೂ ಇದೆ.

  ಆದರೆ ಕೆಲವರು ಈ ಸಿನಿಮಾ ಆಗುವುದಿಲ್ಲ ಎಂದು ಸುದ್ದಿ ಮಾಡುತ್ತಿದ್ದಾರೆ. ಅದರಲ್ಲಿ ನಿರ್ದೇಶಕ ಹರ್ಷ ಅವರದ್ದೂ ಪಾಲಿದೆ. ಅವರು ಆ ಸಿನಿಮಾ ಶುರುವಾಗೋದು ಡೌಟೆಂದು ಅಲ್ಲಲ್ಲಿ ಹೇಳಿಕೊಂಡು ಬರುತ್ತಿದ್ದಾರಂತ ಸುದ್ದಿ.

  ಅವರು ಹೇಳುತ್ತಿರುವ ಕಾರಣ ಶಿವಣ್ಣನ 'ಕಡ್ಡಿಪುಡಿ' ಚಿತ್ರದ ಶೂಟಿಂಗ್ ಮುಗಿದ ನಂತರ ಇಮ್ಮಿಡಿಯಟ್ ತನ್ನ ನಿರ್ದೇಶನದ 'ಭಜರಂಗಿ' ಚಿತ್ರ ಶುರುವಾಗಲಿದೆ ಎಂದು ನ್ಯೂಸ್ ಮಾಡುತ್ತಿದ್ದಾರಂತೆ.

  ಇತ್ತ ಶಿವಣ್ಣ 'ಅಂದರ್ ಬಾಹರ್' ಚಿತ್ರ ಮುಗಿಸುವ ಹಂತದಲ್ಲಿದ್ದರೆ ಕಡ್ಡಿಪುಡಿ ಚಿತ್ರೀಕರಣ ರೋಡು, ಗಲ್ಲಿಗಳಲ್ಲಿ ನಡೆಯುತ್ತಲೇ ಇದೆ. ಇನ್ನು 'ಕೋ.ಕೋ.' ಚಿತ್ರದ ನಿರ್ಮಾಪಕರು ಮಾಡುತ್ತಿರುವ 'ಲಕ್ಷ್ಮೀ' ಚಿತ್ರ ಅರ್ಧಕ್ಕೇ ನಿಂತಿತ್ತು. ಅದು ಈಗ ಹೇಗೋ ರೆಡಿಯಾಗಿ ಬಿಡುಗಡೆಗೆ ಸಿದ್ಧವಾಗಿದೆ.

  ಇದೆಲ್ಲಾ ಮುಗಿದ ಮೇಲೆ ಶಿವಣ್ಣ 'ಅಣ್ಣ ತಮ್ಮಂದಿರು' ಚಿತ್ರ ಒಪ್ಪಿಕೊಂಡರೆ ಅದು ಡ್ಯಾನ್ಸ್ ಮಾಸ್ಟರ್ ಕಮ್ ನಿರ್ದೇಶಕ ಹರ್ಷನಿಗೆ ದೊಡ್ಡ ಹೊಡೆತ. ಅದನ್ನು ಮುಗಿಸಿಯೇ ಭಜರಂಗಿ ಶುರುಮಾಡುವುದು ಶಿವಣ್ಣನಿಗೆ ಅನಿವಾರ್ಯವಾಗಲಿದೆ.

  ಏಕೆಂದರೆ ಮಾದೇಶ ಈಗಾಗಲೇ 'ಹುಡುಗರು' ಚಿತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪುನೀತ್ ರಾಜಕುಮಾರ್ ಗೆ 'ರಾಮ್' ಚಿತ್ರ ಮಾಡಿಕೊಟ್ಟಿದ್ದಾರೆ ಬೇರೆ.

  ಈ ಎಲ್ಲಾ ಕಾರಣಗಳಿಂದ ಶಿವಣ್ಣನ ಕಾಲ್ ಶೀಟ್ ಮೊದಲು ಮಾದೇಶ್ ಪಾಲಾಗಲಿದೆ. ಇನ್ನೊಂದೆಡೆ ಹರ್ಷ ನಿರ್ದೇಶಿಸಿದ 'ಚಿಂಗಾರಿ' ಚಿತ್ರ ದುಡ್ಡು ಚೆನ್ನಾಗಿ ಸಂಪಾದಿಸಿದರೂ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲಿಲ್ಲ.

  ಈ ಎಲ್ಲಾ ಕಾರಣಕ್ಕೆ ಹರ್ಷ 'ಅಣ್ಣ ತಮ್ಮಂದಿರು' ಪ್ರಾಜೆಕ್ಟ್ ನಿಂತಿದೆ. ನಿರ್ಮಾಪಕರ ಕಿಸೆ ಕಾಲಿಯಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಎಷ್ಟೆಂದರೂ ಗಾಂಧಿನಗರ.. ಇಲ್ಲಿ ಗಾಳಿ ಸುದ್ದಿಗೆ ಬರವಿಲ್ಲ.

  English summary
  Director cum Choreographer Harsha creating rumours on Shivaraj Kumar's next project 'Anna Thammandiru'. Harsha is directing movie 'Bhajarangi', in this film Shivaraaj Kumar also in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X