ಎರಡು ಚಾಪ್ಟರ್‌ಗಳಲ್ಲಿ ರಿಲೀಸ್ ಆಗುತ್ತಾ ಸಲಾರ್? ಟಾಲಿವುಡ್‌ನಲ್ಲಿ ಏನಿದು ಹೊಸ ಸುದ್ದಿ?

2022ರಲ್ಲಿ ಬಿಡುಗಡೆಯಾಗಬೇಕಿರುವ ಬಹುನಿರೀಕ್ಷೆಯ ಸಿನಿಮಾಗಳಲ್ಲಿ 'ಸಲಾರ್' ಕೂಡ ಒಂದು. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ ನೋಡುವುದಕ್ಕೆ ಇಡೀ ವಿಶ್ವದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಕಾದು ಕೂತಿದ್ದಾರೆ. ಆದರೆ, ಅದ್ಯಾಕೋ 'ಸಲಾರ್' ತಂಡ ಸಿನಿಮಾ ಶೂಟಿಂಗ್ ಅನ್ನು ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನಲಾಗಿದೆ.

ಪ್ರಭಾಸ್ ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಜೊತೆ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳೂ ಕೂಡ ಸೆಟ್ಟೇರುತ್ತಿವೆ. ಈ ಸಿನಿಮಾಗಳ ಮಧ್ಯೆ ಪ್ರಶಾತ್ ನೀಲ್ ಸಿನಿಮಾ ಬಗ್ಗೆ ಸುದ್ದಿನೇ ಇರಲಿಲ್ಲ. ಆದ್ರೀಗ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾವನ್ನು ಮತ್ತೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಅಸಲಿಗೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ತಿಳಿದುಕೊಳ್ಳಲು ಮುಂದೆ ಓದಿ.

ಎರಡು ಭಾಗಗಳಲ್ಲಿ 'ಸಲಾರ್' ರಿಲೀಸ್

ಎರಡು ಭಾಗಗಳಲ್ಲಿ 'ಸಲಾರ್' ರಿಲೀಸ್

ಪ್ರಶಾಂತ್ ನೀಲ್ ಜನರಿಗೆ ಅದ್ಧೂರಿಯಾಗಿ ಸಿನಿಮಾಗಳನ್ನು ತೋರಿಸುತ್ತಾರೆ. ಇದಕ್ಕೆ 'ಕೆಜಿಎಫ್' ಸಿನಿಮಾನೇ ಸಾಕ್ಷಿ. ಈಗ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಜೊತೆ 'ಸಲಾರ್' ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ತೆರೆಮೇಲೆ ಕಥೆ ಹೇಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಇದಕ್ಕೆ 'ಕೆಜಿಎಫ್' ಸಿನಿಮಾವನ್ನೂ ಎರಡು ಭಾಗಗಳಲ್ಲಿ ಶೂಟ್ ಮಾಡುತ್ತಿದ್ದಾರೆ. ಈಗ 'ಸಲಾರ್' ಕೂಡ ಎರಡು ಭಾಗಗಲ್ಲಿ ಬಿಡುಗಡೆಯಾಗುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

'ಸಲಾರ್' ಬ್ರ್ಯಾಂಡ್ ಮಾಡಲು ಹೊರಟ ಪ್ರಶಾಂತ್

'ಸಲಾರ್' ಬ್ರ್ಯಾಂಡ್ ಮಾಡಲು ಹೊರಟ ಪ್ರಶಾಂತ್

ಪ್ರಶಾಂತ್ ನೀಲ್ ನಿರ್ದೇಶಿಸಿದ 'ಕೆಜಿಎಫ್ 2' ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. 'ಕೆಜಿಎಫ್ ಚಾಪ್ಟರ್‌ 1' ಕ್ಕಿಂತ ಚಾಪ್ಟರ್ 2 ಮೇಲೆ ನಿರೀಕ್ಷೆಗಳು ದುಪ್ಪಟಾಗಿದೆ. ಈ ಸಿನಿಮಾ ಏನಾದರೂ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆದರೆ, ಪ್ರಶಾಂತ್ ನೀಲ್ ಸಿನಿಮಾಗಳ ಮೇಲೆ ನಿರೀಕ್ಷೆಗಳು ಮತ್ತಷ್ಟೂ ಹೆಚ್ಚಾಗುತ್ತೆ. ಈ ಕಾರಣಕ್ಕೆ ಪ್ರಭಾಸ್ ಜೊತೆ ಮಾಡುತ್ತಿರುವ 'ಸಲಾರ್' ಸಿನಿಮಾವನ್ನೂ ಎರಡು ಭಾಗಗಳಲ್ಲಿ ರಿಲೀಸ್ ಮಾಡಲು ಆಲೋಚಿಸಿದ್ದು, 'ಕೆಜಿಎಫ್' ನಂತೆ ಬ್ರ್ಯಾಂಡ್ ಮಾಡಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಅಧಿಕೃತ ಮಾಹಿತಿ ನೀಡಿಲ್ಲ ಪ್ರಶಾಂತ್ ನೀಲ್

ಅಧಿಕೃತ ಮಾಹಿತಿ ನೀಡಿಲ್ಲ ಪ್ರಶಾಂತ್ ನೀಲ್

'ಸಲಾರ್' ಸಿನಿಮಾ ಎರಡು ಪಾರ್ಟ್‌ಗಳಲ್ಲಿ ರಿಲೀಸ್ ಆಗುತ್ತೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಆದರೆ, ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಆಗಲಿ, ಪ್ರಭಾಸ್ ಆಗಲಿ, ಇಲ್ಲಾ ಪ್ರಶಾಂತ್ ನೀಲ್ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ, ಟಾಲಿವುಡ್ ಮಾಧ್ಯಮಗಳು ಮಾತ್ರ 'ಸಲಾರ್' ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತವಾಗಿ ಹೇಳುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ, ಸಿನಿಮಾ ಬಿಡುಗಡೆ ಮತ್ತಷ್ಟು ತಡವಾಗಬಹುದು.

'ಸಲಾರ್' ದಾಖಲೆ ಮಾಡಲು ಚಿಂತನೆ

'ಸಲಾರ್' ದಾಖಲೆ ಮಾಡಲು ಚಿಂತನೆ

ಟಾಲಿವುಡ್‌ನಲ್ಲಿ 'ಸಲಾರ್' ಸಿನಿಮಾವನ್ನು ಬಾಹುಬಲಿ ಜೊತೆ ಹೋಲಿಕೆ ಮಾಡಲಾಗುತ್ತಿದೆಯಂತೆ. ಪ್ರಭಾಸ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ 'ಬಾಹುಬಲಿ' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಅಂತಹದ್ದೇ ದಾಖಲೆಯನ್ನು 'ಸಲಾರ್' ಕೂಡ ಸೃಷ್ಟಿಸಬೇಕು. 'ಸಲಾರ್' ಫ್ರಾಂಚೈಸಿ ಆಗಿ ರೂಪುಗೊಳ್ಳಬೇಕು ಅಂತ ಚಿತ್ರತಂಡ ನಿರ್ಧರಿಸಿದೆ ಎನ್ನುವ ಮಾತುಗಳು ಹರಿದಾಡಿವೆ. ಆದರೆ, ಈ ಬಗ್ಗೆ ಹೊಂಬಾಳೆ ಫಿಲಂಸ್ ಸದ್ಯಕ್ಕೆ ಯಾವುದೇ ಮಾಹಿತಿಯನ್ನೂ ಹೊರಹಾಕಿಲ್ಲ.

More from Filmibeat

English summary
Director Prashanth Neel is planning to take Prabhas Salaar in two parts just like Yash KGF. After this rumour prabhas fans looking Salaar to becomes another milestone in the actor’s career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X