ಬಾಹುಬಲಿ ನಟಿ ಗರ್ಭಿಣಿ, ಇದಕ್ಕೆ ಕಾರಣ ಬಾಲಿವುಡ್ ನಿರ್ಮಾಪಕ? ಮತ್ತೊಂದು ಡಿವೋರ್ಸ್ ಸುದ್ದಿ!

ಸಿನಿಮಾ ರಂಗಕ್ಕೂ ದಾಂಪತ್ಯ ಸುಖಕ್ಕೂ ಅಷ್ಟೇನೂ ಒಳ್ಳೆ ನಂಟಿಲ್ಲ. ವರ್ಷಕ್ಕೆ ಎಷ್ಟು ಮದುವೆಗಳಾಗ್ತವೋ.. ಅದಕ್ಕಿಂತ ಹೆಚ್ಚೇ ವಿಚ್ಛೇದನಗಳು ಚಿತ್ರರಂಗದಲ್ಲಿ ಆಗುತ್ತವೆ ಅನ್ನೋ ವಿಪರ್ಯಾಸದ ಮಾತುಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇದಕ್ಕೊಂದು ಹೊಸಾ ಉದಾಹರಣೆಯಾಗಿ ಬಾಲಿವುಡ್ ಅಂಗಳದಲ್ಲಿ ಹೊಸಾ ಡಿವೋರ್ಸ್ ರೂಮರ್ ಹುಟ್ಟಿಕೊಂಡಿದೆ.

ಖ್ಯಾತ ನಿರ್ಮಾಪಕನ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಹೆಸರು ಬದಲಿಸಿಕೊಂಡಾಗ ತಕ್ಷಣವೇ ಈ ಅನುಮಾನ ಶುರುವಾಗಿದೆ. ನಿಮಗೆ ನೆನಪಿರಬಹುದು...ಈಗೊಂದು ವರ್ಷದ ಹಿಂದೆ ಸಮಂತಾ ಮತ್ತು ನಾಗಚೈತನ್ಯ ಬೇರೆಯಾಗಿದ್ದಾರೆ ಅನ್ನೋ ಬಗ್ಗೆ ಗುಮಾನಿ ಶುರುವಾಗಿದ್ದೇ ಇನ್‌ಸ್ಟಾಗ್ರಾಂನಿಂದ. ಸಮಂತಾ ತನ್ನ ಹೆಸರನ್ನು ಸಮಂತಾ ಅಕ್ಕಿನೇನಿಯಿಂದ ಸಮಂತಾ ರುತ್ ಪ್ರಭು ಎಂದು ಬದಲಿಸಿಕೊಂಡಿದ್ದರು.

Divya Khosla and Bhushan kumar heading for divorce due to affair with bahubali actress

ಗಂಡ ನಾಗಚೈತನ್ಯನ ಕುಟುಂಬದ ಹೆಸರು ಅಕ್ಕಿನೇನಿಯನ್ನು ಕೈಬಿಟ್ಟಿದ್ದು ಎಲ್ಲರಿಗೂ ಒಮ್ಮೆ ಶಾಕ್ ಆಗಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಈ ದಂಪತಿ ತಾವು ಬೇರೆಯಾಗ್ತಿರೋದಾಗಿ ಅಧಿಕೃತ ಪೋಸ್ಟ್ ಶೇರ್ ಮಾಡೋ ಮೂಲಕ ದೃಢಪಡಿಸಿದ್ದರು. ಆಗಿಂದ ನಟ ನಟಿಯರ ಅಭಿಮಾನಿಗಳಿಗೆ ತಾರೆಯರ ಇನ್‌ಸ್ಟಾಗ್ರಾಂ ಹ್ಯಾಂಡಲ್ ಒಂದಷ್ಟು ಗುಟ್ಟುಗಳನ್ನು ವಿಭಿನ್ನವಾಗಿ ಬಿಟ್ಟುಕೊಡುವ ಮಾರ್ಗವಾಗಿ ಕಂಡಿದೆ.

ಈಗ ಲೇಟೆಸ್ಟ್ ಸೇರ್ಪಡೆ ದಿವ್ಯಾ ಕೋಸ್ಲಾ ಕುಮಾರ್. ಈಕೆ ಬಾಲಿವುಡ್‌ನ ಮುದ್ದು ಮುಖದ ನಟಿ. ಈಕೆಯ ಪತಿ ದೇಶದ ಅತಿದೊಡ್ಡ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಟಿ ಸೀರಿಸ್‌ನ ಮಾಲೀಕ ಭೂಷಣ್ ಕುಮಾರ್. ಇವರಿಬ್ಬರದ್ದು 19 ವರ್ಷಗಳ ದಾಂಪತ್ಯ. ದಿವ್ಯಾಗೆ ಕೇವಲ 18 ವರ್ಷವಿದ್ದಾಗಲೇ ಭೂಷಣ್ ಕುಮಾರ್ ಅನ್ನು ಮದುವೆಯಾಗಿದ್ದರು. ಇತ್ತೀಚೆಗೆ ದಿವ್ಯಾ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ಪತಿಯ ಹೆಸರು ಕುಮಾರ್ ಅನ್ನು ಕೈಬಿಟ್ಟಿದ್ದಾರೆ. ತಮ್ಮ ಹೆಸರನ್ನು ದಿವ್ಯಾ ಕೋಸ್ಲಾ ಎಂದಷ್ಟೇ ಬರೆದುಕೊಂಡಿದ್ದಾರೆ. ಜೊತೆಗೆ ಅನಿತಾ ಕೋಸ್ಲಾ ಪುತ್ರಿ ಎಂದೂ ಸೇರಿಸಿಕೊಂಡಿದ್ದಾರೆ. ಹೀಗೆ ಧಿಡೀರನೆ ಗಂಡನ ಹೆಸರು ಡ್ರಾಪ್ ಮಾಡಿದ್ದರ ಹಿಂದೆ ಕೇಳಿಬರ್ತಿರೋದು ಮಾತ್ರ ಬಾಹುಬಲಿ ನಟಿಯೊಂದಿಗೆ ಪತಿಯ ಲವ್ವಿ ಡವ್ವಿ ಕಥೆ.

ಬಾಹುಬಲಿಯಲ್ಲಿ ನಟಿಸಿದ್ದ ನೋರಾ ಫತೇಹಿ ಗೊತ್ತಿರಬೇಕು. ಇತ್ತೀಚೆಗೆ ಕನ್ನಡದ 'ಕೆಡಿ' ಸಿನಿಮಾಗೂ ಹೆಜ್ಜೆ ಹಾಕಿ ಹೋಗಿದ್ದಾರೆ. ಈಕೆ ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆಗಿಂತಾ ಶ್ರೀಮಂತೆ ಅನ್ನೋ ಸುದ್ದಿ ಇದೆ. ಬಾಹುಬಲಿ ಚಿತ್ರದ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದ ಈ ನೋರಾಗೂ, ದಿವ್ಯಾ ಕೋಸ್ಲಾ ಪತಿ ಭೂಷಣ್ ಕುಮಾರ್ಗೂ ಲಿಂಕ್ ಇದೆ ಎಂದು ವಿವಾದಾತ್ಮಕ ವಿಮರ್ಷಕ ಉಮೈರ್ ಸಂದು ಬರೆದುಕೊಂಡಿದ್ದಾರೆ.

Divya Khosla and Bhushan kumar heading for divorce due to affair with bahubali actress

ಅಷ್ಟೇ ಅಲ್ಲ, 2021ರಲ್ಲಿ ನೋರಾ ಫತೇಹಿ ಗರ್ಭಿಣಿಯಾಗಿದ್ದರಂತೆ. ಆದರೆ, ಗರ್ಭಪಾತ ಮಾಡಿಸಿಕೊಂಡಿದ್ದರು ಎಂದೂ ಬರೆದಿದ್ದಾರೆ. "ಆಕೆಯ ಬಳಿ ಇರೋ ಹಣ ಸೆ* ಮನಿಯಾ ಅಥವಾ ಬ್ಲಾಕ್ ಮನಿಯಾ?" ಎಂದೂ ಈತ ಪ್ರಶ್ನಿಸಿದ್ದಾನೆ. ಸದ್ಯ ಈ ವಿಚಾರಗಳು ಬಾಲಿವುಡ್‌ನಲ್ಲಿ ಭಾರೀ ಚರ್ಚೆಯಾಗ್ತಿವೆ.

ಆದರೆ, ಅದೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಅಭಿಮಾನಿಗಳು ಉಮೈರ್ ಸಂದುವನ್ನೇ ಬೈದಿದ್ದಾರೆ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡ ಎಂದೂ ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಟಿ ಸೀರಿಸ್‌ನ ಮಾಧ್ಯಮ ಸಂಪರ್ಕ ವಿಭಾಗ ದಿವ್ಯಾ ಕೋಸ್ಲಾ ತಮ್ಮ ಹೆಸರನ್ನು ಬದಲಿಸಿಕೊಂಡಿರೋದು ವಿಚ್ಛೇದನದಿಂದ ಅಲ್ಲ. ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ಎಂದಿದ್ದಾರೆ.

ದಿವ್ಯಾ ಮತ್ತು ಭೂಷಣ್ ಕುಮಾರ್ ನಡುವೆ ಯಾವುದೇ ಒಡಕಿಲ್ಲ. ಜ್ಯೋತಿಷಿಯೊಬ್ಬರ ಸಲಹೆಯಂತೆ ಆಕೆ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ಒಂದು ಹೆಚ್ಚುವರಿ ಎಸ್ ಅಕ್ಷರ ಕೂಡಾ ಸೇರಿಸಿಕೊಂಡಿದ್ದಾರೆ. ಅದನ್ನೂ ನೀವು ಗಮನಿಸಬಹುದು. ಇದೆಲ್ಲವೂ ಜ್ಯೋತಿಷಿಗಳ ಹೇಳಿಕೆಯ ಮೇಲಷ್ಟೇ. ಇದು ಆಕೆಯ ಸ್ವಂತ ಇಚ್ಛೆ, ಆಕೆಯ ಇಚ್ಛೆಯನ್ನು ಗೌರವಿಸಬೇಕು ಎಂದಿದ್ದಾರೆ. ಆದರೆ, ಇದುವರೆಗೂ ಈ ಬಗ್ಗೆ ದಿವ್ಯಾ ಕೋಸ್ಲಾ ಆಗಲಿ ಅವರ ಪತಿ ಭೂಷಣ್ ಕುಮಾರ್ ಆಗಿ ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲಿ ತನಕ ಬಹುಶಃ ಈ ಎಲ್ಲಾ ಅಂತೆ ಕಂತೆಗಳು ಮತ್ತಷ್ಟು ವಿಜೃಂಭಿಸೋದ್ರಲ್ಲಿ ಅನುಮಾನವಿಲ್ಲ.

More from Filmibeat

English summary
Divya Khosla and Bhushan kumar heading for divorce. Reason Baahubali actress Nora Fatehi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X