ಕೊರೊನಾಗೆ ಬೆದರಿದ ಅನುಷ್ಕಾ ಶೆಟ್ಟಿ: ಹೊಸ ಸಿನಿಮಾ ಡೇಟ್ ಕೊಡಲು ಹಿಂದೇಟು, ನಿರ್ಮಾಪಕ ಕಂಗಾಲು

ಕರ್ನಾಟಕ ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಟಾಲಿವುಡ್‌ನ ನಂಬರ್ 1 ನಟಿ. ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿರುವ ಈ ನಟಿ ಬಹು ಬೇಡಿಕೆಯ ನಟಿ. 40ನೇ ವಯಸ್ಸಿಗೆ ಕಾಲಿಟ್ಟರೂ ಅನುಷ್ಕಾ ಶೆಟ್ಟಿಗೆ ಡಿಮ್ಯಾಂಡ್ ಮಾತ್ರ ಕಡಿಮೆ ಆಗಿಲ್ಲ. ಟಾಲಿವುಡ್ ನಿರ್ಮಾಪಕರು ಬಾಹುಬಲಿ ನಟಿಗಾಗಿ ಕ್ಯೂ ನಿಲ್ಲುತ್ತಿದ್ದಾರೆ. ಆದರೆ ಟಾಲಿವುಡ್ ಸ್ವೀಟಿನೇ ಯಾಕೋ ಸಿನಿಮಾ ಮಾಡುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಈಗ ಒಪ್ಪಿಕೊಂಡಿರೋ ಸಿನಿಮಾ ಡೇಟ್ ಕೊಡುತ್ತಿಲ್ಲ ಅಂತ ಅನ್ನೊ ಸುದ್ದಿ ಟಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಹರಿದಾಡುತ್ತಿದೆ.

Recommended Video

ಕಂ ಬ್ಯಾಕ್ ಸಿನಿಮಾಗೆ ಅನುಷ್ಕಾ ಶೆಟ್ಟಿ ಮಾಡ್ತಿದ್ದಾರೆ ತಯಾರಿ!

ಟಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿ ಅನುಷ್ಕಾ ಶೆಟ್ಟಿ. ಆದರೆ, ಬಾಹುಬಲಿ ತೆರೆಕಂಡ ದಿನದಿಂದ ಇವರ ಸಿನಿಮಾಗಳು ಹೆಚ್ಚಾಗಿ ಸೆಟ್ಟೇರುತ್ತಿಲ್ಲ. ಇದಕ್ಕೆ ಕೊರೊನಾ ಕಾರಣವೂ ಇರಬಹುದು. ಆದರೆ, ಕಳೆದ ಐದು ವರ್ಷಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದು ಬರೀ ಎರಡು ಸಿನಿಮಾಗಳಲ್ಲಿ ಮಾತ್ರ. ಮತ್ತೆ ಯಾವಾಗ ಸ್ವೀಟಿ ಸಿನಿಮಾ ನೋಡುತ್ತೇವೋ ಅಂತ ಕಾದು ಕೂತಿರುವ ತನ್ನ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮಾಡಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಅಸಲಿಗೆ ಅನುಷ್ಕಾ ಶೆಟ್ಟಿ ಮ್ಯಾಟರ್ ಏನು? ಅಂತ ತಿಳಿಯುವುದಕ್ಕೆ ಮುಂದೆ ಓದಿ.

 ಅನುಷ್ಕಾ ಕೊರೊನಾ ಭಯ

ಅನುಷ್ಕಾ ಕೊರೊನಾ ಭಯ

ಅನುಷ್ಕಾ ಶೆಟ್ಟಿಯನ್ನು ಕೊರೊನಾ ಇನ್ನಿಲ್ಲದಂತೆ ಕಾಡುತ್ತಿದೆಯಂತೆ. ಆಂಧ್ರದಲ್ಲಿ ಕೊರೊನಾ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದಂತೆ ಟಾಲಿವುಡ್ ಸ್ವೀಟಿ ಫುಲ್ ಸೈಲೆಂಟ್ ಆಗಿದ್ದಾರಂತೆ. ಸಿನಿಮಾನೂ ಮಾಡಲ್ಲ. ಡೇಟು ಕೊಡಲ್ಲ ಅಂತ ಪಟ್ಟು ಹಿಡಿದು ಕೂತಿದ್ದಾರಂತೆ. ಇಂತಹದೊಂದು ಸುದ್ದಿ ಟಾಲಿವುಡ್‌ನ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಲು ಶುರುವಾಗಿದೆ. ಅಷ್ಟಕ್ಕೂ ಅದ್ಯಾವ ಸಿನಿಮಾಗೆ ಅನುಷ್ಕಾ ಶೆಟ್ಟಿ ಡೇಟ್ ಕೊಡುತ್ತಿಲ್ಲಾ ಅಂತಿರಾ? ಅದು 'ಸಾಹೋ' ಸಿನಿಮಾ ನಿರ್ಮಿಸಿದ್ದ ಯುವಿ ಕ್ರಿಯೇಷನ್.

 ಅನುಷ್ಕಾ ಶೆಟ್ಟಿ ಡೇಟ್ ಕೊಡುತ್ತಿಲ್ಲ

ಅನುಷ್ಕಾ ಶೆಟ್ಟಿ ಡೇಟ್ ಕೊಡುತ್ತಿಲ್ಲ

ಸ್ವೀಟಿ ಅನುಷ್ಕಾ ಯುವಿ ಕ್ರಿಯೇಷನ್ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ಗ್ರೀ‍ನ್ ಸಿಗ್ನಲ್ ಕೊಟ್ಟಿದ್ದರು. 'ಜಾತಿರತ್ನಲು' ಸಿನಿಮಾದ ನಾಯಕ ನಟ ನವೀನ್ ಪೊಲಿಶೆಟ್ಟಿ ಆ ಚಿತ್ರದ ನಾಯಕ ನಟ. ಈ ಸಿನಿಮಾ ಇಷ್ಟೊತ್ತಿಗಾಗಲೇ ಸೆಟ್ಟೇರಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಇನ್ನೇ ಟೇಕ್ ಆಫ್ ಆಗಿಲ್ಲ. ಇನ್ನೇನು ಸಿನಿಮಾ ಶೂಟಿಂಗ್ ಮಾಡಬೇಕು ಅನ್ನುವಾಗಲೇ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಆದರೂ, ಸಿನಿಮಾ ಶೂಟಿಂಗ್ ಶುರು ಮಾಡೇ ಬಿಡೋಣ ಅಂತ ನಿರ್ಧಾರ ಮಾಡಿದ್ದಾರಂತೆ. ಆದರೆ, ಅನುಷ್ಕಾ ಶೆಟ್ಟಿ ರೆಡಿ ಇಲ್ವಂತೆ.

 ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿದ ಸ್ವೀಟಿ

ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿದ ಸ್ವೀಟಿ

ಅನುಷ್ಕಾ ಶೆಟ್ಟಿ ನಿರ್ಮಾಪಕರಿಗೆ ಡೇಟ್ ಕೊಡದೆ ಇರಲು ಕಾರಣ ಇದೆನೇ. ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದ್ಕಡೆ ಓಮಿಕ್ರಾನ್. ಇವೆರಡನ್ನೂ ಅನುಷ್ಕಾ ಗಂಭೀರವಾಗಿ ಪರಿಗಣಿಸಿದ್ದಾರೆ. ಕೊರೊನಾ ಮೂರನೇ ಅಲೆ ತೊಲಗುವವರೆಗೂ ಸಿನಿಮಾಗೆ ಡೇಟ್ ಕೊಡುವುದಿಲ್ಲವೆಂದು ನಿರ್ಧಾರ ಮಾಡಿದ್ದಾರಂತೆ. ಅದು ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿದ್ಯಂತೆ. ಸಿನಿಮಾ ಶೂಟಿಂಗ್ ಶುರು ಮಾಡೋಣ ಅಂದ್ರೆ, ಅನುಷ್ಕಾ ಶೆಟ್ಟಿನೇ ಒಪ್ಪುತ್ತಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ದಾರಂತೆ.

 'ಅರುಂಧತಿ' ಸಿನಿಮಾಗೆ 13

'ಅರುಂಧತಿ' ಸಿನಿಮಾಗೆ 13

'ಅರುಂಧತಿ' ಅನುಷ್ಕಾ ಶೆಟ್ಟಿಗೆ ಹೊಸ ಇಮೇಜ್ ಕೊಟ್ಟ ಸಿನಿಮಾ. ಅನುಷ್ಕಾ ವೃತ್ತಿ ಬದುಕಿಗೆ ಸ್ಟಾರ್ ಗಿರಿ ಕೊಟ್ಟಿದ್ದು ಇದೇ ಸಿನಿಮಾ. ಇದೇ ಸಿನಿಮಾವೀಗ 13 ವರ್ಷಗಳನ್ನು ಪೂರೈಸಿದೆ. ಹೀಗಾಗಿ ಈ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಅನುಷ್ಕಾ ಶೆಟ್ಟಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಮ್ಮ ಗೆಲುವಿಗೆ ಕಾರಣರಾದವನ್ನು ನೆನಪಿಸಿಕೊಂಡಿದ್ದಾರೆ. ಅಂದ ಹಾಗೆ 2009 ಜನವರಿ 16ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.

More from Filmibeat

English summary
Due Covid outbreak, Anushka has not allotted her dates to UV Creations producer worried. Anushka has taken the Covid outbreak seriously, she is not willing to take any risks for now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X