'ಸೆಲ್ಫಿ' ಕೊಟ್ಮೇಲೆ ಅಕ್ಷಯ್ ಕುಮಾರ್ ಕೊಳ್ಳುವವರೇ ಇಲ್ಲ: 'ಓ ಮೈ ಗಾಡ್' ಯಾಕೆ ಹಿಂಗಾಯ್ತು?
ಬಾಲಿವುಡ್‌ನಲ್ಲಿ ಒಂದರ ಹಿಂದೊಂದು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದು ಅಕ್ಷಯ್ ಕುಮಾರ್. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್ ಸಿನಿಮಾಗಳು ಸೋಲುತ್ತಿದ್ದರೆ, ಇತ್ತ ಅಕ್ಷಯ್ ಕುಮಾರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿತ್ತು. ಆದ್ರೆ, ಅದ್ಯಾಕೋ ಇತ್ತೀಚೆಗೆ ಅಕ್ಷಯ್ ಕುಮಾರ್‌ಗೆ ಗೆಲುವು ಸಿಗುತ್ತಲೇ ಇಲ್ಲ. ಒಂದರ ಹಿಂದೊಂದು ಸಿನಿಮಾಗಳು ಸೋತು ಮಕಾಡೆ ಮಲಗುತ್ತಿವೆ.
ಇತ್ತೀಚೆಗೆ ತೆರೆಕಂಡ 'ಸೆಲ್ಫಿ' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ಅಕ್ಷಯ್ ಕುಮಾರ್ ವೃತ್ತಿ ಬದುಕಿನಲ್ಲೇ ಬಾಕ್ಸಾಫೀಸ್‌ನಲ್ಲಿ ಈ ಮಟ್ಟಿಗೆ ಕಳಪೆ ಪ್ರದರ್ಶನವನ್ನು ಯಾವ ಸಿನಿಮಾವೂ ಕಂಡಿರಲಿಲ್ಲ. ಗಲ್ಲಾ ಪೆಟ್ಟಿಯಲ್ಲಿ 10 ಕೋಟಿ ರೂ. ಕಲೆ ಹಾಕುವುದಕ್ಕೂ ಈ ಸಿನಿಮಾ ಪರದಾಡಿತ್ತು. ಈ ಸೋಲಿನ ಎಫೆಕ್ಟ್ ತುಂಬಾನೇ ತೀರಾ ಕೆಟ್ಟದಾಗಿದೆ ಅಂತ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

ಸೋತ್ರೂ ಸಿನಿಮಾಗಳಿಗೇನು ಕಮ್ಮಿಯಿಲ್ಲ
ಅಕ್ಷಯ್ ಕುಮಾರ್ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳನ್ನು ಕೊಟ್ರೂ ಅಭಿಮಾನಿಗಳಲ್ಲಿ ಇನ್ನೂ ನಂಬಿಕೆ ಇದೆ. ಅಕ್ಷಯ್ ಕುಮಾರ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಇವೆಲ್ಲವೂ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಬಹುದು ಅನ್ನೋ ನಿರೀಕ್ಷೆಯಿದೆ. ಈ ಸಿನಿಮಾಗಳೇನಾದ್ರೂ, ಕೈ ಹಿಡಿದರೆ ಮತ್ತೆ ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲಿ ರಾಜನಂತೆ ಮೆರೆಯೋದ್ರಲ್ಲಿ ಅನುಮಾನವಿಲ್ಲ.
ಅಕ್ಷಯ್ ಕುಮಾರ್ ಕೈಯಲ್ಲಿ ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾ 'ಸೂರರೈ ಪೋಟ್ರು' ರಿಮೇಕ್, 'ಓ ಮೈ ಗಾಡ್ 2', 'ಕ್ಯಾಪ್ಸುಲ್ ಗಿಲ್', ಟೈಗರ್ ಶ್ರಾಫ್ ಜೊತೆ 'ಬಡೆ ಮಿಯ್ಯಾ ಛೋಟೆ ಮಿಯ್ಯಾ', 'ಹೇರಾ ಪೇರಿ 3' ಸಿನಿಮಾಗಳಿವೆ. ಇವುಗಳಲ್ಲಿ ಮೊದಲು ರಿಲೀಸ್ ಆಗೋದು 'ಓ ಮೈ ಗಾಡ್ 2'. ಆದರೆ, ಈ ಸಿನಿಮಾವನ್ನು ಕೊಂಡುಕೊಳ್ಳುವವರೇ ಇಲ್ಲ ಎಂದು ವಿವಾದಾತ್ಮಕ ಕ್ರಿಟಿಕ್ ಕಮಾಲ್ ಆರ್ ಖಾನ್ ಟ್ವೀಟ್ ಮಾಡಿದ್ದಾರೆ.

'ಓ ಮೈ ಗಾಡ್ 2' ಸಿನಿಮಾವನ್ನು ಕೊಳ್ಳುವವರೇ ಇಲ್ಲ
ವಿವಾದಾತ್ಮಕ ಸ್ವಯಂ ಘೋಷಿತ ಕ್ರಿಟಿಕ್ ಕೆಆರ್‌ಕೆ ಪ್ರಕಾರ, 'ಓ ಮೈ ಗಾಡ್ 2' ಸಿನಿಮಾವನ್ನು ಕೊಂಡುಕೊಳ್ಳುವುದಕ್ಕೆ ವಿತರಕರೇ ಬರುತ್ತಿಲ್ಲ. ಓಟಿಟಿ ವೇದಿಕೆಗಳು ಕೂಡ ಸಿನಿಮಾವನ್ನು ಕೊಂಡುಕೊಳ್ಳುತ್ತಿಲ್ಲ ಎಂದು ಟ್ವೀಟ್ ಮಾಡಿ ಹಲ್‌ಚಲ್ ಎಬ್ಬಿಸಿದ್ದಾರೆ.
"ಸೆಲ್ಫಿ ಸಿನಿಮಾ ದುರಂತ ಕಂಡ ಬಳಿಕ ಅಕ್ಷಯ್ ಕುಮಾರ್ ವೃತ್ತಿ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈಗ ವಿತರಕರು ಹಾಗೂ ಓಟಿಟಿ ಕಂಪನಿಗಳು ಓ ಮೈ ಗಾಡ್ 2 ಸಿನಿಮಾವನ್ನು ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ. ಇದು ಅಕ್ಷಯ್ ಕುಮಾರ್ ಅಭಿನಯದ ದಕ್ಷಿಣ ಭಾರತದ ಮತ್ತೊಂದು ರಿಮೇಕ್ ಸಿನಿಮಾ. ಹಾಗೇ ಸೂರರೈ ಪೋಟ್ರು ಸಿನಿಮಾವನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ವೆಬ್ ಸಿರೀಸ್ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದೆ." ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ.
ಕೆಆರ್‌ಕೆ ಹೇಳಿದ್ದು ನಿಜವೇ?
ವಿವಾದಾತ್ಮಕ ಕ್ರಿಟಿಕ್ ಕೆಆರ್‌ಕೆ ಬಾಲಿವುಡ್ ಹಾಗೂ ಸೂಪರ್‌ಸ್ಟಾರ್‌ಗಳನ್ನು ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್ ಬಳಿಕ ಈಗ ಅಕ್ಷಯ್ ಕುಮಾರ್ ಅನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೂ, 'ಓ ಮೈ ಗಾಡ್ 2' ಕೊಂಡುಕೊಳ್ಳಲು ಇಲ್ಲವೇ ಅನ್ನೋ ಪ್ರಶ್ನೆಯಂತೂ ಎಲ್ಲರನ್ನೂ ಕಾಡುತ್ತಲೇ ಇದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಅಕ್ಷಯ್ ಕುಮಾರ್ ಸದ್ಯ ಸಂಕಷ್ಟದಲ್ಲಿ ಸಿಲುಕಿರೋದಂತೂ ಸತ್ಯ. ಶಾರುಖ್ ಖಾನ್‌ನಂತೆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಒಂದೊಂದೇ ಫ್ಲಾಪ್ ಲಿಸ್ಟ್ ಸೇರುತ್ತಿವೆ. 'ಬಚ್ಚನ್ ಪಾಂಡೆ', 'ರಕ್ಷಾ ಬಂಧನ್', 'ರಾಮ್ ಸೇತು' ಸಿನಿಮಾಗಳು ಹೀನಾಯವಾಗಿ ಸೋಲುಂಡಿವೆ. ಹೀಗಾಗಿ ಮುಂದಿನ ಸಿನಿಮಾಗಳು ಗೆಲ್ಲಲೇ ಬೇಕಿವೆ.


Click it and Unblock the Notifications











