'ಫೈಟರ್' ವೇದಿಕೆ ಮೇಲೆ ಕಿಟ್ಟಿ-ವಿಜಯ್ ನಡುವೆ ಬೆಂಕಿ ಹೊತ್ತಿಕೊಂಡಿದ್ದೇಕೆ? ಹಳೆ ಗೆಳೆಯರ ನಡುವೆ ಏನಿದು ಸಮರ?

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್ ಹಾಗೂ ಶ್ರೀನಗರ ಕಿಟ್ಟಿ ತಮ್ಮದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಇಬ್ಬರೂ ಒಳ್ಳೆ ಸ್ನೇಹಿತರಾಗಿದ್ದರು. ಇಬ್ಬರ ಮನೆಗಳು ಕೂಡ ದೂರವೇನೂ ಇರಲಿಲ್ಲ. ಒಬ್ಬರು ಕತ್ರಿಗುಪ್ಪೆ. ಇನ್ನೊಬ್ಬರು ಶ್ರೀನಗರ. ಇಬ್ಬರು ಅಕ್ಕ ಪಕ್ಕದಲೇ ಇದ್ದರು.

ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಹೊಸ್ತಿಲಲ್ಲಿ ದುನಿಯಾ ವಿಜಯ್ ಹಾಗೂ ಶ್ರೀನಗರ ಕಿಟ್ಟಿ ಇಬ್ಬರೂ ಸ್ನೇಹಿತರಾಗಿಯೇ ಇದ್ದರು. ನಿರ್ದೇಶಕ ದುನಿಯಾ ಸೂರಿ ಹಾಗೂ ಯೋಗರಾಜ್ ಭಟ್ ತಂಡದಲ್ಲಿ ದುನಿಯಾ ವಿಜಯ್ ಹಾಗೂ ಶ್ರೀನಗರ ಕಿಟ್ಟಿ ಇಬ್ಬರೂ ಗುರುತಿಸಿಕೊಂಡಿದ್ದರು. ಹೀಗಾಗಿ ಆರಂಭದ ದಿನಗಳಲ್ಲಿ ಆತ್ಮೀಯರಾಗಿಯೇ ಇದ್ದರು.

Duniya Vijay and Srinagara Kitty Dialogue war in fighter event what did Industry say

ನಿರ್ದೇಶಕ ಸೂರಿ 'ದುನಿಯಾ' ಮೂಲಕ ವಿಜಯ್‌ಗೆ ಬ್ರೇಕ್ ಕೊಟ್ಟರೆ, ಶ್ರೀನಗರ ಕಿಟ್ಟಿಗಾಗಿ 'ಇಂತಿ ನಿನ್ನ ಪ್ರೀತಿಯ' ಸಿನಿಮಾ ಮಾಡಿದ್ದರು. ಇಬ್ಬರೂ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಈ ಎರಡು ಸಿನಿಮಾಗಳೇ ಕಾರಣ. ಈ ವೇಳೆ ವಿಜಯ್ ಹಾಗೂ ಶ್ರೀನಗರ ಕಿಟ್ಟಿ ಇಬ್ಬರೂ ಆತ್ಮೀಯರಾಗಿದ್ದರು. ಆದರೆ, ಫೈಟರ್ ವೇದಿಕೆ ಮೇಲೆ ಒಬ್ಬರಿಗೊಬ್ಬರು ಟಾಂಗ್ ಕೊಟ್ಟು ಮಾತಾಡಿದ್ದರು. ಇದ್ಯಾಕೆ ಹೀಗೆ ವೇದಿಕೆ ಮೇಲೆ ಮಾತಲ್ಲೇ ಏಟು ತಿರುಗೇಟು ಕೊಟ್ಟರು ಅನ್ನೋ ಚರ್ಚೆಯಾಗುತ್ತಿದೆ.

ಶ್ರೀನಗರ ಕಿಟ್ಟಿ ಹೇಳಿದ್ದೇನು?

'ಫೈಟರ್' ಇವೆಂಟ್‌ನಲ್ಲಿ ಶ್ರೀನಗರ ಕಿಟ್ಟಿ ಸಿನಿಮಾ ಬಗ್ಗೆ ಮಾತಾಡುವಾಗ ದುನಿಯಾ ವಿಜಯ್ ಅನ್ನು ಉದ್ದೇಶಿ ಮಾತಾಡಿದ್ದರು. "ವಿಜಿ ಬಂದಿದ್ದಾನೆ ಲಾಂಚ್ ಮಾಡುವುದಕ್ಕೆ. ಎಲ್ಲರೂ ತುಂಬಾ ಚೆನ್ನಾಗಿ ಹೇಳಿದರು ರಿಯಲ್ ಫೈಟರ್ ಅಂತ. ಅವನು ಏನೆಲ್ಲ ಆಟಗಳನ್ನು ಆಡಿದ ಅಂತ ನೋಡಿಕೊಂಡೇ ಬಂದಿದ್ದೀನಿ. ಅಕ್ಕ ಪಕ್ಕದವರಾಗಿದ್ದುಕೊಂಡು ಅವನು ಇಲ್ಲಿಂದ (ಕೆಳಗೆ) ಆಡಿದನ್ನು ಇಲ್ಲಿ (ಮೇಲೆ)ವರೆಗೂ ನೋಡಿದ್ದೀವಿ. ಇನ್ನು ಮುಂದಿದ್ದನ್ನು ನೀವೆಲ್ಲರೂ ನೋಡುತ್ತೀರ. ನೀವೆಲ್ಲರೂ ನೋಡಿ.. ನಿಮ್ಮ ಹರಕೆ ಹಾರೈಕೆ ನಮ್ಮೆಲ್ಲರ ಮೇಲೂ ಇರಲಿ" ಎಂದು ಶ್ರೀನಗರ ಕಿಟ್ಟಿ ಫೈಟರ್ ವೇದಿಕೆ ಮೇಲೆ ಹೇಳಿದ್ದರು. ಅದಕ್ಕೆ ವಿಜಯ್ ತಿರುಗೇಟು ನೀಡಿದ್ದರು.

Duniya Vijay and Srinagara Kitty Dialogue war in fighter event what did Industry say

ದುನಿಯಾ ವಿಜಯ್ ತಿರುಗೇಟು

"ಕಿಟ್ಟಿ ಹೇಳಿದ ಹಾಗೆ ಅವನು ನನ್ನನ್ನು ಹೆಂಗೆಂಗೆ ನೋಡಿದ್ದಾನೋ ಗೊತ್ತಿಲ್ಲ. ನಾನು ಆತರ ಅವನಿಗೆ ಕಾಣಿಸಿಕೊಂಡೇ ಇಲ್ಲ. ನಾನು ಕಿಟ್ಟಿ ನೋಡಿ ಖುಷಿ ಪಟ್ಟಿದ್ದೀನಿ. ಇವರನು ಹೆಂಗಿದ್ದ ಹೆಂಗೆಂಗೋ ಆಗಿ ಹೋದ್ನಲ್ಲ ಅಂತ. ಓ ಪಾಪ.. ಕಿಟ್ಟಿಗೆ ಅಷ್ಟೊಂದು ಒಳ್ಳೆ ಮನಸ್ಸಿದೆ. ಹಿಂಗಿಂಗೆ ಎಲ್ಲಾ ನೋಡಿದೆ.. ಹಂಗಂಗೆ ಎಲ್ಲಾ ನೋಡುತ್ತೀನಿ.. ಮುಂದೆ ನೀವು ನೋಡುತ್ತೀರ. ಹಿಂಗೆ ಅಂದೂ ಅಂದೂ ನಾನು ಬೆಳೆಯುತ್ತಲೇ ಇದ್ದೀನಿ. ಅವರು ಆರಾಮಾಗಿ ಹಂಗೇ ಇದ್ದಾರೆ. ಇದೇ ಮಜಾ. ಇದೇ ಎನರ್ಜಿ." ಎಂದು ದುನಿಯಾ ವಿಜಯ್ ತಿರುಗೇಟು ನೀಡಿದ್ದರು. ಇಲ್ಲಿಂದ ಈ ಏಟು-ಎದಿರೇಟು ನೀಡಿದ ವಿಡಿಯೋ ಚರ್ಚೆ ಆಗುತ್ತಲೇ ಇದೆ.

ಗೆಳೆಯ ಮುನಿಸಿನ ಬಗ್ಗೆ ಏನಂತಿದೆ ಸ್ಯಾಂಡಲ್‌ವುಡ್?

ಅಷ್ಟಕ್ಕೂ ದುನಿಯಾ ವಿಜಯ್ ಹಾಗೂ ಶ್ರೀನಗರ ಕಿಟ್ಟಿ ಹೀಗೆ ಟಾಂಗ್ ಕೊಟ್ಟುಕೊಂಡಿದ್ದೇಕೆ? ಈ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ದುನಿಯಾ ವಿಜಯ್ ಬಗ್ಗೆ ಶ್ರೀನಗರ ಕಿಟ್ಟಿ ತಮಾಷೆಯಾಗಿ ಮಾತಾಡಿದರು. ಅದನ್ನು ದುನಿಯಾ ವಿಜಯ್‌ಗೆ ಹಿಡಿಸಲಿಲ್ಲ. ಹೀಗಾಗಿ ವೇದಿಕೆ ಮೇಲೆ ತಿರುಗೇಟು ಕೊಟ್ಟರು ಅಷ್ಟೇ. ಅದು ಬಿಟ್ಟಿರ ಇಬ್ಬರ ನಡುವೆ ಬೇರೆ ಏನೂ ಇಲ್ಲ ಅಂತ ಕೆಲ ಸಿನಿಮಾ ಮಂದಿ ಹೇಳುತ್ತಿದ್ದಾರೆ.

ಇಬ್ಬರ ಗೆಳೆಯರಲ್ಲ

ಇನ್ನೊಂದು ಕಡೆ ಶ್ರೀನಗರ ಕಿಟ್ಟಿ ಹೇಳಿದ ಮಾತಿಗೆ ದುನಿಯಾ ವಿಜಯ್ ರಾಂಗ್ ಆಗಿದ್ದರು ಅನ್ನೋ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ. ಆದರೆ, ಇಬ್ಬರು ಗೆಳೆಯರ ಮುನಿಸಿಗೆ ಕಾರಣವೇನು? ಅನ್ನೋದು ಗೊತ್ತಿಲ್ಲ. ಚಿತ್ರರಂಗದಲ್ಲಿ ಮಾತ್ರ ಇಬ್ಬರೂ ಗೆಳೆಯರಲ್ಲ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ ಅಂತ ಗಾಂಧಿನಗರದ ಗಲ್ಲಿ ಗಲ್ಲಿ ಹರಿದಾಡುತ್ತಿರುವ ಸುದ್ದಿ.

More from Filmibeat

English summary
Duniya Vijay and Srinagara Kitty Dialogue war in fighter event what is the reason?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X