"ನಾನು ಮೆಂಟಲ್ ಆದ್ರೆ, ನಾಳೆ ನೀನು ಕ್ಯಾಲೆಂಡರ್ ಡೇಟ್ ನೋಡಲ್ಲ": ಖಡಕ್ ಡೈಲಾಗ್ ಬಿಟ್ಟ ದುನಿಯಾ ವಿಜಯ್
ದುನಿಯಾ ವಿಜಯ್ ಸಿನಿ ಜರ್ನಿ ಮತ್ತೆ ಟ್ರ್ಯಾಕ್‌ಗೆ ಮರಳಿದೆ. ಒಂದಿಷ್ಟು ಸೋಲು, ಕೌಟುಂಬಿಕ ಕಲಹ ಇವೆಲ್ಲದಿಂದ ಹೊರಬಂದು ಹೊಸ ದುನಿಯಾ ಕಟ್ಟಿಕೊಂಡಿದ್ದಾರೆ. ಅಲ್ಲಿಂದ ವಿಜಯ್ ಸಿನಿಮಾ ಜರ್ನಿಯಲ್ಲಿ ಸಿಕ್ಕಿರೋದು ಸಕ್ಸಸ್.
ದುನಿಯಾ ವಿಜಯ್ ಕಮ್‌ಬ್ಯಾಕ್ ಸಿನಿಮಾ 'ಸಲಗ' ಸೂಪರ್ ಸಕ್ಸಸ್ ಸಿಕ್ಕಿತ್ತು. ವಿಶೇಷ ಅಂದರೆ, ಕಮ್ ಬ್ಯಾಕ್ ಸಿನಿಮಾಗಾಗಿ ಡೈರೆಕ್ಟರ್ಸ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿದ್ದರು. 'ಸಲಗ' ಸಕ್ಸಸ್ ಕೈ ಹಿಡೀತು. ಅಲ್ಲಿಂದ ಟಾಲಿವುಡ್ ಕಡೆ ಪಯಣ ಬೆಳೆಸಿದ್ದರು. ಅಲ್ಲೂ ಗೆಲುವು ಸಿಕ್ಕಿತ್ತು.

ಈಗ ಇದೇ ಜೋಷ್‌ನಲ್ಲಿ 'ಭೀಮ'ನಾಗಿ ಅಖಾಡಕ್ಕೆ ಉಳಿಯುವುದಕ್ಕೆ ಸಜ್ಜಾಗಿದ್ದಾರೆ. ಈ ಮೂಲಕ ಎರಡನೇ ಬಾರಿ ನಿರ್ದೇಶಕ್ಕೆ ಇಳಿದಿರೋ ದುನಿಯಾ ವಿಜಯ್, ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸದ್ಯಕ್ಕೆ 'ಭೀಮ'ನ ಅಡ್ಡದಲ್ಲಿ ಏನು ನಡೀತಿದೆ? ಈಗ ದುನಿಯಾ ವಿಜಯ್ ಖದರ್ ಹೇಗಿದೆ? ತಿಳಿಯೋಕೆ ಮುಂದೆ ಓದಿ.
ದುನಿಯಾ ವಿಜಯ್ ಖಡಕ್ ಡೈಲಾಗ್
ದುನಿಯಾ ವಿಜಯ್ ಸಿನಿಮಾಗಳಲ್ಲಿ ರೌಡಿಸಂ ಟಚ್ ಇರುತ್ತೆ. ಮಾಸ್ ಸೀನ್‌ಗಳು, ಖಡಕ್ ಡೈಲಾಗ್‌ಗಳು ಇವೆಲ್ಲವೂ ಬ್ಯಾಕ್ ಕೋಬ್ರಾ ಸಿನಿಮಾದಲ್ಲಿ ಕಾಮನ್. ಆದರೆ, ಸಿನಿಮಾದಿಂದ ಸಿನಿಮಾಗೆ ದುನಿಯಾ ವಿಜಯ್ ಮಾಸ್ ಡೈಲಾಗ್‌ಗಳು ಕೂಡ ಅಪ್‌ಗ್ರೇಡ್ ಆಗಿವೆ. ಈಗ ಭೀಮಾ ಡೈಲಾಗ್ ಹೇಗಿರುತ್ತೋ? ಅನ್ನೋದನ್ನು ಕಾತುರದಿಂದ ಅವರ ಅಭಿಮಾನಿಗಳು ನೋಡುತ್ತಿದ್ದಾರೆ.
ಇಷ್ಟು ಸದ್ದಿಲ್ಲದೆ ಸೈಲೆಂಟ್ ಆಗಿಯೇ ಭೀಮಾ ಸಿನಿಮಾದ ಶೂಟಿಂಗ್ ಮಾಡಿದೆ ವಿಜಯ್ ಟೀಂ. ಯೂತ್ ಆಡಿಯನ್ಸ್ ಅನ್ನು ಟಾರ್ಗೆಟ್ ಮಾಡಿ ಕಥೆ ಮಾಡಿದ್ದಾಗಿ ದುನಿಯಾ ವಿಜಯ್ ಈ ಹಿಂದೆಯೇ ಹೇಳಿಕೊಂಡಿದ್ದರು. ಸದ್ಯ ಮತ್ತೆ 'ಭೀಮಾ' ಸದ್ದು ಮಾಡುತ್ತಿದೆ. ದುನಿಯಾ ವಿಜಯ್ ಅವ್ರಿಂದಾನೇ ಡಬ್ಬಿಂಗ್ ಶುರುವಾಗಿದೆ. ಒಂದೇ ಖಡಕ್ ಡೈಲಾಗ್ ಮಾಸ್ ಆಡಿಯನ್ಸ್‌ಗೆ ಕಿಕ್ ಕೊಟ್ಟಿದೆ.

ಭೀಮನ ದುನಿಯಾದಲ್ಲಿ ಮಾಸ್ ಡೈಲಾಗ್
ದುನಿಯಾ ವಿಜಯ್ ಸಿನಿಮಾಗಳಲ್ಲಿ ಮಾಸ್ ಡೈಲಾಗ್ ಇಲ್ಲದಿದ್ರೆ ಹೇಗೆ? 'ಭೀಮಾ' ಟೀಂ ಇತ್ತೀಚೆಗೆ ಚಿಕ್ಕದೊಂದು ಡಬ್ಬಿಂಗ್ ತುಣುಕನ್ನು ಹೊರಬಿಟ್ಟಿದೆ. ಅದರಲ್ಲಿ ದುನಿಯಾ ವಿಜಯ್ ಡಬ್ಬಿಂಗ್ ಮಾಡುತ್ತಿದ್ದು, ಮಾಸ್ ಸೀನ್ ಒಂದಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಆ ಡೈಲಾಗ್ ಕೇಳಿನೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
"ಏಯ್ ಬ್ಯಾಡ ಕಣೋ ಮಗಾ.. ನಮ್ಮ ಹುಡುಗರನ್ನು ಮುಟ್ಟಿದರೆ, ನಾನು ಮೆಂಟಲ್ ಆಗುತ್ತೇನೆ. ನಾನು ಮೆಂಟಲ್ ಆದ್ರೆ, ನಾಳೆ ನೀನು ಕ್ಯಾಲೆಂಡರ್ ಡೇಟ್ ನೋಡಲ್ಲ" ಅಂತ ಡಬ್ಬಿಂಗ್ ಮಾಡಿದ್ದಾರೆ. ಇದೇ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಮಾಸ್ ಡೈಲಾಗ್‌ಗೆ ಮಾಸ್ ಆಡಿಯನ್ಸ್ ಫಿದಾ ಆಗಿದ್ದಾರೆ.
'ಭೀಮ'ನ ಜೊತೆ ಬಹುತೇಕ ಹೊಸಬರು
ಚುನಾವಣೆ, ಐಪಿಎಲ್ ಎಲ್ಲಾ ಮುಗಿಯುತ್ತಿದ್ದಂತೆ ಸಿನಿಮಾ ಚಟುವಟಿಗಳು ಆರಂಭ ಆಗಿವೆ. ಹಾಗೇ ದುನಿಯಾ ವಿಜಯ್ ತೆರೆಮರೆಯಲ್ಲಿಯೇ 'ಭೀಮ' ಸಿನಿಮಾದ ಶೂಟಿಂಗ್ ಬಹುತೇಕ ಮುಗಿಸಿದ್ದಾರೆ. ಸಮಾಜ ಕೆಟ್ಟ ದಾರಿ ಹಿಡಿಯುತ್ತಿದ್ದು, ಅದರತ್ತ ಯಾರೂ ಗಮನ ಹರಿಸುತ್ತಿಲ್ಲ. ಯಾಕೆ ಹೀಗಾಗುತ್ತಿದೆ? ಅನ್ನೋದನ್ನು ಕೆಲವು ಸನ್ನಿವೇಶಗಳನ್ನು ಇಟ್ಕೊಂಡು ರಗಡ್ ಆಗಿ ಹೇಳುವುದಕ್ಕೆ ಹೊರಟಿದ್ದಾರೆ.
'ಭೀಮಾ' ಸಿನಿಮಾದಲ್ಲಿ ಶೇ.90ರಷ್ಟು ಮಂದಿ ಹೊಸಬರು ನಟಿಸಿದ್ದಾರೆ. ಅವರ ನಟನೆಗೆ ಸ್ವತ: ವಿಜಯ್ ಫಿದಾ ಆಗಿದ್ದಾರೆ. ರಂಗಭೂಮಿಯಲ್ಲಿ ಅನುಭವವಿರುವ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ಟಾರೆ, 'ಭೀಮಾ' ಮತ್ತೆ ಆರ್ಭಟಿಸೋಕೆ ಶುರು ಮಾಡಿದ್ದಾನೆ. ಮುಂದೆ ಇನ್ನೂ ಇಂಟ್ರೆಸ್ಟಿಂಗ್ ಸಂಗತಿಗಳನ್ನು ದುನಿಯಾ ವಿಜಯ್ ರಿವೀಲ್ ಮಾಡಲಿದ್ದಾರೆ.


Click it and Unblock the Notifications











