ನಾಗ ಚೈತನ್ಯಗೆ ವಿಚ್ಛೇದನ ಬೇಕು ಅಂತ ಕೇಳಿದ್ದೇ ಸಮಂತಾ; ಏನಿದು ಶಾಕಿಂಗ್ ನ್ಯೂಸ್?

ಚಿತ್ರರಂಗವೇ ಹಾಗೇ.. ಇಲ್ಲಿ ಪ್ರತಿಯೊಂದು ವಿಷಯವೂ ಬೇಗನೇ ಸಂಚಲನ ಸೃಷ್ಟಿಸಿಬಿಡುತ್ತೆ. ಅದರಲ್ಲೂ ತಾರೆಯರ ಲವ್ ಸ್ಟೋರಿ, ಅಫೇರ್, ಗಾಸಿಪ್, ಡಿವೋರ್ಸ್ ಬಗೆಗಿನ ಸುದ್ದಿಗಳು ಕಾಡ್ಗಿಚ್ಚಿನಂತೆ ಹಬ್ಬಿಬಿಡುತ್ತೆ. ಇದರಲ್ಲಿ ಕಳೆದ ಕೆಲವು ವರ್ಷಗಳಿಂದ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿರುವುದು ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನದ ಸುದ್ದಿ.

ಟಾಲಿವುಡ್‌ನ ಕ್ಯೂಟ್ ಜೋಡಿ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಕೇವಲ ನಾಲ್ಕು ವರ್ಷಗಳಲ್ಲಿಯೇ ಈ ಜೋಡಿ ಬೇರೆಯಾಗುವುದಾಗಿ ಘೋಷಣೆ ಮಾಡಿತ್ತು. ಈ ಸುದ್ದಿ ಇಬ್ಬರ ಅಭಿಮಾನಿಗಳಿಗೂ ದೊಡ್ಡ ಶಾಕ್ ಕೊಟ್ಟಿತ್ತು.

Exploring the Reason Behind Samantha and Naga Chaitanya s Divorce

ಈ ಜೋಡಿ ವಿಚ್ಛೇದನ ನೀಡುವುದಾಗಿ ಘೋಷಣೆ ಏನೋ ಮಾಡಿತ್ತು. ಆದರೆ, ಇದರೂವರೆಗೂ ವಿಚ್ಛೇದನಕ್ಕೆ ಕಾರಣವೇನು? ಅನ್ನೋದನ್ನು ಮಾತ್ರ ರಿವೀಲ್ ಮಾಡಿರಲಿಲ್ಲ. ಈಗ ದಿಡೀರನೇ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನಕ್ಕೆ ಕಾರಣವೇನು ಅನ್ನೋದು ತೆಲುಗು ಮಾಧ್ಯಮಗಳಲ್ಲಿ ಓಡಾಡುತ್ತಿದೆ.

ಅಕ್ಕಿನೇನಿ ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು ನಟಿಸಿದ ಮೊದಲ ಸಿನಿಮಾ ' ಏ ಮಾಯ ಚೆಸಾವೇ'. ಈ ಸಿನಿಮಾ 'ಆಟೋನಗರ ಸೂರ್ಯ', 'ಮಚಿಲಿ' ಅಂತಹ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಮೊದಲ ಸಿನಿಮಾದಿಂದಲೂ ಆತ್ಮೀಯರಾಗಿದ್ದ ಈ ಜೋಡಿ ಪ್ರೀತಿಸುತ್ತಿರುವ ಸುದ್ದಿ ಹಲವು ವರ್ಷಗಳ ಬಳಿಕ ರಿವೀಲ್ ಆಗಿತ್ತು. ಈ ಜೋಡಿ ಕೇವಲ ಸಿನಿಮಾದಲ್ಲಷ್ಟೇ ಅಲ್ಲದೆ, ರಿಯಲ್ ಲೈಫ್‌ನಲ್ಲೂ ಪ್ರೇಮಿಗಳಾಗಿದ್ದರು.

ಅನ್ನೋನ್ಯವಾಗಿದ್ದ ಈ ಜೋಡಿ ಸಂಸಾರದಲ್ಲಿ ಇದ್ದಕ್ಕಿದ್ದ ಹಾಗೆ ಬಿರುಕು ಬಿಟ್ಟುಕೊಂಡಿತ್ತು. ಇಬ್ಬರೂ ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದರು. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದು ಬಹಳ ದಿನಗಳಾಗಿವೆ. ಹೀಗಿದ್ದರೂ ಇಬ್ಬರೂ ಯಾಕೆ ಬೇರೆಯಾದರು? ಇದರ ಹಿಂದಿನ ಕಾರಣ ಮಾತ್ರ ನಿಗೂಢವಾಗಿಯೇ ಇತ್ತು.

Exploring the Reason Behind Samantha and Naga Chaitanya s Divorce

ಸಮಂತಾ ನಾಗಚೈತನ್ಯ ಬೇರೆಯಾದಾಗ ಹಲವು ಸುದ್ದಿಗಳು ಹೊರಬಂದಿದ್ದರು. ಒಬ್ಬೊಬ್ಬರು ಒಂದೊಂದು ಕಾರಣ ಹೇಳಿದ್ದರು. ಅದು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಇತ್ತ ಇಬ್ಬರೂ ವಿಚ್ಛೇದನಕ್ಕೆ ಕಾರಣವೇನು? ಅನ್ನೋದನ್ನು ನಿಗೂಢವಾಗಿಯೇ ಇಟ್ಟಿದ್ದರು. ಈಗ ದಿಡೀರನೇ ಟಾಲಿವುಡ್ ಮೀಡಿಯಾಗಳು ಸಮಂತಾನೇ ಮೊದಲ ವಿಚ್ಛೇದನ ಕೇಳಿದ್ದು ಎಂಬ ಸುದ್ದಿಯನ್ನು ಬಿತ್ತರಿಸುತ್ತಿವೆ.

ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ನಡುವಿನ ಸಮಸ್ಯೆ ಸರಿ ಹೋಗುತ್ತಿದೆ ಅನ್ನುವಾಗ ಸ್ವತಃ ಸಮಂತಾ ನಾಗ ಚೈತನ್ಯ ಅವರಿಗೆ ವಿಚ್ಛೇದನ ಕೇಳಿದ್ದರು ಎನ್ನಲಾಗಿದೆ. ಇದಕ್ಕೆ ನಾಗ ಚೈತನ್ಯ ಕೂಡ ಒಪ್ಪಲೇ ಬೇಕಿತ್ತು ಅಂತ ವರದಿಯಾಗಿವೆ. ಇತ್ತೀಚೆಗಿನ ಮಾಹಿತಿಯ ಪ್ರಕಾರ, ನಾಗ ಚೈತನ್ಯಗಿಂತಲೂ ಮೊದಲೇ ತನಗೆ ಮಯೋಸಿಟಿಸ್ ಇದೆ ಅನ್ನೋದು ಸಮಂತಾಗೆ ಗೊತ್ತಾಗಿತ್ತು ಎನ್ನಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಮುಂದೆ ತೊಂದರೆಯಾಗುತ್ತದೆ ಎಂದು ಭಾವಿಸಿ ಸಮಂತಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಸಮಂತಾ ತನ್ನ ಅನಾರೋಗ್ಯ ಹಿನ್ನೆಲೆ ಅರಿತು ನಾಗ ಚೈತನ್ಯರಿಂದ ಬೇರ್ಪಟ್ಟಿದ್ದಾರೆ ಎಂಬುದು ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

More from Filmibeat

English summary
Samantha's diagnosis with myositis is speculated to be a significant factor in her decision to divorce Naga Chaitanya, highlighting the impact of health on personal decisions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X