ರಾಜಮೌಳಿಗೆ ಮಿಸ್ಟರ್ ಪ. ಆಮಿರ್ ಖಾನ್ ವಿಲನ್: ಸೂಪರ್‌ಸ್ಟಾರ್ ಕಥೆಯೇನು?
ರಾಜಮೌಳಿ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಅದೆಷ್ಟೋ ಮಂದಿಯ ಕನಸು. ಅದರಲ್ಲೂ 'ಬಾಹುಬಲಿ', 'RRR' ಬಳಿಕವಂತೂ ಜಕ್ಕಣ್ಣನಿಗೆ ಗ್ಲೋಬಲ್ ಲೆವೆಲ್‌ನಲ್ಲಿ ಕ್ರೇಜ್ ಹೆಚ್ಚಾಗಿದೆ. ರಾಜಮೌಳಿಯ ಮುಂದಿನ ಸಿನಿಮಾಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ.
'RRR' ಸಿನಿಮಾ ಹಾಲಿವುಡ್ ದಿಗ್ಗಜರನ್ನೂ ಬೆಚ್ಚಿ ಬೀಳಿಸಿತ್ತು. ರಾಜಮೌಳಿಯ ನಿರ್ದೇಶನಕ್ಕೆ ಹಾಲಿವುಡ್ ಸ್ಟಾರ್ ನಿರ್ದೇಶಕರೇ ಥ್ರಿಲ್ ಆಗಿದ್ದರು. ಬೇರೆ ಬೇರೆ ಸಮಯದಲ್ಲಿ ರಾಜಮೌಳಿಯ ನಿರ್ದೇಶನಕ್ಕೆ ಬಹುಪರಾಕ್ ಹೇಳಿದ್ದರು. ಈಗ ಎಲ್ಲರ ಕಣ್ಣು ಅವರ ಮುಂದಿನ ಸಿನಿಮಾ ಮೇಲಿದೆ.

ಹೌದು, ರಾಜಮೌಳಿ ಮುಂದಿನ ಸಿನಿಮಾ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಈಗಾಗಲೇ ಸಿನಿಮಾ ಕಥೆ ಬಗ್ಗೆನೂ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಈ ಮಧ್ಯೆನೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ರಾಜಮೌಳಿಗೆ ಆಮಿರ್ ಖಾನ್ ವಿಲನ್ ಅನ್ನೋ ಸುದ್ದಿ ಓಡಾಡುತ್ತಿದೆ.
ರಾಜಮೌಳಿಗೆ ಆಮಿರ್ ಖಾನ್ ವಿಲನ್?
ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಹಾಗಂತ ರಾಜಮೌಳಿಗೂ ಆಮಿರ್ ಖಾನ್ ನಡುವೆ ವೈಮನಸ್ಸು ಶುರುವಾಗಿದೆಯಾ? ಅಂತ ಅಂದುಕೊಳ್ಳಬೇಡಿ. ರಾಜಮೌಳಿ ಮುಂದಿನ ಸಿನಿಮಾದಲ್ಲಿ ಆಮಿರ್ ಖಾನ್ ಪ್ರಮುಖ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ತಮಿಳು ಫಿಲ್ಮ್ ಕ್ರಿಟಿಕ್ ಟ್ವೀಟ್ ಮಾಡಿದ ಮೇಲೆ ಮತ್ತಷ್ಟು ಸದ್ದು ಮಾಡುತ್ತಿದೆ.
"ಮಹೇಶ್ ಬಾಬು ಹಾಗೂ ಎಸ್‌ಎಸ್ ರಾಜಮೌಳಿ ಜಂಗಲ್ ಅಡ್ವೆಂಚರ್ ಸಿನಿಮಾದಲ್ಲಿ ಆಮಿರ್ ಖಾನ್ ವಿಲನ್ ಆಗಿ ನಟಿಸುವ ಸಾಧ್ಯತೆಯಿದೆ" ಎಂದು ತಮಿಳಿನ ಕ್ರಿಟಿಕ್ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಮಿರ್ ಖಾನ್ ವಿಲನ್ ಆಗಿ ನಟಿಸುತ್ತಿರುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ನೆಟ್ಟಿಗರ ರಿಯಾಕ್ಷನ್ ಏನು?
ರಾಜಮೌಳಿ ಸಿನಿಮಾದಲ್ಲಿ ಆಮಿರ್ ಖಾನ್ ವಿಲನ್ ಆಗಿ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಕೆಲವರಿಗೆ ಥ್ರಿಲ್ ಕೊಟ್ಟಿದೆ. ಅದೇ ಮತ್ತೆ ಕೆಲವರು ಇದು ಸುಳ್ಳು ಸುದ್ದಿ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. "ಉಪಯೋಗವಿಲ್ಲ. ಈ ಸಿನಿಮಾವನ್ನು ಮುಗಿಸೋಕೆ 5 ವರ್ಷ ತೆಗೆದುಕೊಳ್ಳುತ್ತಾರೆ. 2030ರಲ್ಲಿ ಚರ್ಚೆ ಮಾಡಿ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು " ಆಮಿರ್ ಖಾನ್, ರಾಜಮೌಳಿ, ಮಹೇಶ್ ಬಾಬು ಇದ್ದರೆ, ಬಾಕ್ಸಾಫೀಸ್ ಧೂಳಿಪಟ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ದಯವಿಟ್ಟು ಬೇಡ.. ಧೂಮ್ 3 ಹಾಗೂ 'ಘಜನಿ'ಯಲ್ಲಿ ಅದೇ ಎಕ್ಸ್‌ಪ್ರೆಷನ್ ಅನ್ನು ನೋಡಿ ಸಾಕಾಗಿದೆ" ಎಂದು ಕಮೆಂಟ್ ಮಾಡಿದ್ದಾರೆ. ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಕಮೆಂಟ್‌ಗೂ ಬಂದಿವೆ. ಆದರೆ, ಈ ಸುದ್ದಿ ಹರಿದಾಡುತ್ತಿರೋದಂತೂ ನಿಜ. ಇನ್ನೇನಿದ್ದರೂ, ರಾಜಮೌಳಿಯೇ ಅಧಿಕೃತವಾಗಿ ಹೇಳಬೇಕಿದೆ.
ಆಮಿರ್ ಖಾನ್ ಸಿನಿಮಾದಿಂದ ದೂರ
ಆಮಿರ್ ಖಾನ್ ಸದ್ಯ ಸಿನಿಮಾದಿಂದ ಸ್ವಲ್ಪ ಮಟ್ಟಿಗೆ ಬ್ರೇಕ್ ತೆಗೆದುಕೊಂಡಿದ್ದಾರೆ. 'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತ ಬಳಿಕ ಈ ನಿರ್ಧಾರಕ್ಕೆ ಬಂದಿದ್ದರು. ಕುಟುಂಬದೊಂದಿಗೆ ಕಾಲ ಕಳೆಯಬೇಕು ಎಂದು ಹೇಳಿದ್ದರು. ಅದರಂತೆ, ಇದೂವರೆಗೂ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ.
ಈಗಾಗಲೇ ಸಿನಿಮಾ 'ಧೂಮ್ 3'ಯಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರಿಂದ, ರಾಜಮೌಳಿ ಸಿನಿಮಾವನ್ನು ಒಪ್ಪಿಕೊಳ್ಳಬಹುದು. ಅಲ್ಲದೆ, ಜಕ್ಕಣ್ಣನ ಸಿನಿಮಾದಲ್ಲಿ ಹೀರೋದಷ್ಟೇ ವಿಲನ್ ಪಾತ್ರವೂ ಪವರ್‌ಫುಲ್ ಆಗಿರುತ್ತೆ. ಹೀಗಾಗಿ ರಾಜಮೌಳಿ ಸಿನಿಮಾ ಒಪ್ಪಿಕೊಂಡರೂ ಅಚ್ಚರಿಯಿಲ್ಲ. ಆದರೆ, ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯಂತೂ ಅಧಿಕೃತವಲ್ಲ.


Click it and Unblock the Notifications











