ತೆಲುಗಿಗೆ ಹಾರಿದ್ರಾ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ? ರಾಜಮೌಳಿ ಶಿಷ್ಯನೇ ನಿರ್ದೇಶಕ? ಯಾವುದದು?

ಇತ್ತೀಚೆಗಷ್ಟೇ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವ ಗಾಲಿ ಜನಾರ್ಧನ ರೆಡ್ಡಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ಪುತ್ರ ಕಿರೀಟಿಯನ್ನು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿಸುವುದಕ್ಕೆ ಹೊರಟಿದ್ದಾರೆ. ಕೆಲವು ವರ್ಷಗಳ ಹಿಂದೆ ಕಿರೀಟಿ ಚೊಚ್ಚಲ ಸಿನಿಮಾ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸೆಟ್ಟೇರಿತ್ತು. ಆ ಸಿನಿಮಾ ರಿಲೀಸ್‌ಗೂ ಮುನ್ನವೇ ಮೊತ್ತೊಂದು ಸಿನಿಮಾ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಮೊದಲ ಸಿನಿಮಾದಲ್ಲಿಯೇ ದೊಡ್ಡ ಸ್ಟಾರ್‌ಕಾಸ್ಟ್ ಇಟ್ಟುಕೊಂಡು ಚಿತ್ರೀಕರಣ ಶುರು ಮಾಡಿದ್ದರು. ಆದರೆ, ಆ ಸಿನಿಮಾ ಏನಾಯ್ತು? ರಿಲೀಸ್ ಯಾವಾಗ? ಇಂತಹದ್ದು ಯಾವುದೇ ಸುದ್ದಿಯಿಲ್ಲ. ಇನ್ನೊಂದು ಕಡೆ ಕಿರೀಟಿ ತನ್ನ ಎರಡನೇ ಸಿನಿಮಾದ ಶೂಟಿಂಗ್ ಶುರು ಮಾಡಿದ್ದು, ತೆಲುಗಿನಲ್ಲಿ ಇಂಟ್ರುಡ್ಯೂಸ್ ಆಗುತ್ತಿದ್ದಾರೆ ಅನ್ನುವ ಸುದ್ದಿ ಓಡಾಡುತ್ತಿದೆ.

Gali Janardhana Reddy son Kireeti is busy shooting for the second film before the release of debut

ಕಿರೀಟಿ ರೆಡ್ಡಿ ಎರಡನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಮೊದಲನೇ ಸಿನಿಮಾದ ಕಥೆ ಏನು? ಎರಡನೇ ಸಿನಿಮಾ ಕನ್ನಡದಲ್ಲಿ ಬರೋದಿಲ್ಲವೇ? ಜನಾರ್ಧನ ರೆಡ್ಡಿ ಮಗನನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರಾ? ಆ ತೆಲುಗು ಸಿನಿಮಾದ ನಿರ್ದೇಶಕರು ಯಾರು? ಈ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ..

ಜನಾರ್ಧನ ರೆಡ್ಡಿ ತಮ್ಮ ಪುತ್ರ ಕಿರೀಟಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಶ್ರೀಲೀಲಾ, ಜೆನಿಲಿಯಾ, ರವಿಚಂದ್ರನ್ ಸೇರಿದಂತೆ ದೊಡ್ಡ ಕಲಾವಿದರ ತಂಡೇ ಇತ್ತು. ಈ ಸಿನಿಮಾ ಶೂಟಿಂಗ್ ಶುರುವಾಗಿದ್ದಷ್ಟೇ ಬಂತು. ಆದರೆ, ಮುಂದೇನಾಯ್ತು ಅನ್ನುವ ಬಗ್ಗೆ ಸುದ್ದಿನೇ ಇಲ್ಲ ಅಷ್ಟರಲ್ಲೇ ಎರಡನೇ ಸಿನಿಮಾ ಬಗ್ಗೆ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಅಂದ್ಹಾಗೆ ಕಿರೀಟಿ ನಟಿಸುತ್ತಿರುವ ಎರಡನೇ ಸಿನಿಮಾವನ್ನು ರಾಜಮೌಳಿ ಶಿಷ್ಯ ನಿರ್ದೇಶನ ಮಾಡುತ್ತಿದ್ದಾರಂತೆ. ಕಿರೀಟಿ ಸಿನಿಮಾಗೆ ತ್ರಿಕೋಟಿ ಅನ್ನುವ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ರಾಜಮೌಳಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಇವರು ಕೆಲಸ ಮಾಡಿದ್ದರು. ಈಗಾಗಲೇ ಒಂದು ಸಿನಿಮಾ ನಿರ್ದೇಶಿಸಿದ್ದು, ಅದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ. ಹಾಗಾಗಿ ಎರಡನೇ ಸಿನಿಮಾವನ್ನು ತಡವಾಗಿ ಆರಂಭಿಸುತ್ತಿದ್ದಾರೆ ಅನ್ನೋದು ಸುದ್ದಿ. ಸದ್ಯ ಹೈದರಾಬಾದ್‌ನಲ್ಲಿ ಈ ಸಿನಿಮಾ ಶೂಟಿಂಗ್ ನಡೆಯುತ್ತಿದೆಯಂತೆ.

Gali Janardhana Reddy son Kireeti is busy shooting for the second film before the release of debut

ರಾಜಮೌಳಿ ಸಿನಿಮಾದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ತ್ರಿಕೋಟಿ ಪೇಟಾ ಈ ಬಾರಿ ಒಂದೊಳ್ಳೆ ಸ್ಕ್ರಿಪ್ಟ್ ಅನ್ನು ರೆಡಿ ಮಾಡಿಟ್ಟುಕೊಂಡಿದ್ದಾರಂತೆ. ಕಿರೀಟಿ ಮೊದಲನೇ ಸಿನಿಮಾವನ್ನು ರಾಜಮೌಳಿ ಬಂದು ಕ್ಲಾಪ್ ಮಾಡಿದ್ದರು. ಆದರೆ, ಆ ಸಿನಿಮಾ ಬಗ್ಗೆ ಯಾಕೋ ಸುದ್ದಿನೇ ಇಲ್ಲ. ಹೀಗಾಗಿ ಮೊದಲು ತೆಲುಗು ಸಿನಿಮಾನೇ ರಿಲೀಸ್ ಆಗುತ್ತಾ? ನಿಜಕ್ಕೂ ಸದ್ದಿಲ್ಲದೆ ಎರಡನೇ ಸಿನಿಮಾ ಶುರು ಮಾಡಿದ್ರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳಂತೂ ಹುಟ್ಟಿಕೊಂಡಿದೆ.

ಇನ್ನು ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ'ಯ ಎರಡೂ ಸೀರಿಸ್‌ಗಳಿಗೆ ಕೆಲಸ ಮಾಡಿದ್ದಾರೆ. 'ಬಾಹುಬಲಿ: ದಿ ಬಿಗಿನಿಂಗ್', 'ಬಾಹುಬಲಿ 2: ದಿ ಕನ್‌ಕ್ಲೂಷನ್', RRR ಅಂತಹ ಸಿನಿಮಾಗಳಿಗೆ ನಿರ್ದೇಶಕ ತ್ರಿಕೋಟಿ ಪೇಟಾ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಜುವ್ವ ಅನ್ನುವ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಸಿನಿಮಾ ಸದ್ದು ಮಾಡಿರಲಿಲ್ಲ. ಈಗ ಎರಡನೇ ಸಿನಿಮಾ ಮೂಲಕ ಗೆಲ್ಲುವುದಕ್ಕೆ ಸಜ್ಜಾಗಿದ್ದಾರೆ.

More from Filmibeat

English summary
Gali Janardhana Reddy's son, Kireeti, is busy shooting for the second film in Hyderabad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X