ಮತ್ತೆ ಒಂದಾದ ಗೀತಾ ಗೋವಿಂದಂ ಟೀಮ್: ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಿಸ್ಸಿಂಗ್.. ಯಾಕೆ?

'ಗೀತಾ ಗೋವಿಂದಂ' ಟಾಲಿವುಡ್‌ನ ಸೂಪರ್‌ಹಿಟ್ ಸಿನಿಮಾ. ಇದೇ ಸಿನಿಮಾ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರನ್ನು ಸ್ಟಾರ್ ಪಟ್ಟಕ್ಕೇರಿಸಿತ್ತು. ಇಬ್ಬರಿಗೂ 100 ಕೋಟಿ ಕ್ಲಬ್ ಸೇರಿಸಿದ ಸಿನಿಮಾನೂ ಇದೇನೆ.

ಈ ಸಿನಿಮಾ ಮೂವರ ಸಿನಿಮಾ ಬದುಕೇ ಬದಲಾಗಿ ಹೋಯ್ತು. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ಪರಶುರಾಮ್ ಸಿನಿ ಕರಿಯರ್‌ಗೆ ಹೊಸ ತಿರುವು ಸಿಕ್ಕಿತ್ತು. ಈ ಸಿನಿಮಾ ಹಿಟ್ ಆಗಿದ ಬೆನ್ನಲ್ಲೇ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮತ್ತೊಂದು ಸಿನಿಮಾದಲ್ಲಿ ನಟಿಸುವಂತಾಗಿತ್ತು.

Geetha Govindam team next movie Vijay Devarakonda, Mrunal Takur in Rashmika Mandanna missing

'ಗೀತಾ ಗೋವಿಂದಂ' ಬಳಿಕ ಮತ್ತೆ ಈ ಹಿಟ್ ಕಾಂಬಿನೇಷನ್ ಸಿನಿಮಾಗಾಗಿ ಒಟ್ಟಿಗೆ ಸೇರಲೇ ಇಲ್ಲ. ಸಿನಿಪ್ರಿಯರಿಗೂ ಮತ್ತೆ 'ಗೀತಾ ಗೋವಿಂದಂ' ಕಾಂಬಿನೇಷನ್ ಒಟ್ಟಿಗೆ ಕೆಲಸ ಮಾಡಬೇಕು ಅಂತ ಅನಿಸಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಅತ್ತ ರಶ್ಮಿಕಾ ಬ್ಯುಸಿ, ಇತ್ತ ವಿಜಯ್ ದೇವರಕೊಂಡ ಬ್ಯುಸಿ. ಮಹೇಶ್ ಬಾಬು ಸಿನಿಮಾದಲ್ಲಿ ನಿರ್ದೇಶಕ ಪರಶುರಾಮ್ ಬ್ಯುಸಿಯಾಗಿದ್ದರು. ಈಗ 'ಗೀತಾ ಗೋವಿಂದಂ' ಜೋಡಿ ಒಂದಾಗುತ್ತಿದೆ ಅನ್ನೋ ಖಬರ್ ಇದೆ. ಅದರಲ್ಲಿ ರಶ್ಮಿಕಾ ಮಾತ್ರ ಮಿಸ್ಸಿಂಗ್ ಎನ್ನಲಾಗುತ್ತಿದೆ.

ಮತ್ತೆ 'ಗೀತಾ ಗೋವಿಂದಂ' ಕಾಂಬೋ

ಆಗ ತಾನೇ 'ಅರ್ಜುನ್ ರೆಡ್ಡಿ' ಯುವಕರ ನಿದ್ದೆ ಕೆಡಿಸಿತ್ತು. ವಿಜಯ್ ದೇವರಕೊಂಡ ಸ್ಟಾರ್ ಆಗಿ ಎಮರ್ಜ್ ಆಗಿದ್ದರು. ರಗಡ್, ರೌಡಿ ಲುಕ್ ಕೊಟ್ಟಿದ್ದ ವಿಜಯ್ ದೇವರಕೊಂಡ 'ಗೀತಾ ಗೋವಿಂದಂ' ಸಿನಿಮಾದಲ್ಲಿ ಕಂಪ್ಲೀಟ್ ಡಿಫ್ರೆಂಟ್ ಲುಕ್ ಕೊಟ್ಟಿದ್ದರು. ಸೈಲೆಂಟ್, ಪ್ರಬುದ್ಧರಾಗಿ ಕಂಡಿದ್ದರು.

Geetha Govindam team next movie Vijay Devarakonda, Mrunal Takur in Rashmika Mandanna missing

ಇನ್ನೊಂದು ಕಡೆ ಹಿಂದಿನ ಸಿನಿಮಾದಲ್ಲಿ ಸೈಲೆಂಟ್ ಆಗಿ ಕಂಡಿದ್ದ ರಶ್ಮಿಕಾ ಮಂದಣ್ಣ, 'ಗೀತಾ ಗೋವಿಂದಂ'ನಲ್ಲಿ ವೈಲೆಂಟ್ ಆಗಿದ್ದರು. ಎರಡು ವಿಭಿನ್ನ ಕ್ಯಾರೆಕ್ಟರ್‌ಗಳನ್ನು ತೆರೆಮೇಲೆ ನೋಡಿ ಸಿನಿಪ್ರಿಯರು ಫಿದಾ ಆಗಿದ್ದರು. ಈಗ ನಿರ್ದೇಶಕ ಪರಶುರಾಮ್ ಹಾಗೂ ವಿಜಯ್ ದೇವರಕೊಂಡ ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದು, ಇದರಲ್ಲಿ ರಶ್ಮಿಕಾ ಮಂದಣ್ಣ ಮಿಸ್ ಆಗಿದ್ದಾರೆ.

'ಗೀತಾ ಗೋವಿಂದಂ' ನಿರ್ದೇಶಕನ ಸಿನಿಮಾದಲ್ಲಿ ರೌಡಿ

ಗೀತಾ ಗೋವಿಂದಂ ನಿರ್ದೇಶಕ ಪರಶುರಾಮ್ ಮತ್ತೊಮ್ಮೆ ವಿಜಯ್ ದೇವರಕೊಂಡಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ಟಾರ್ ನಿರ್ಮಾಪಕ ದಿಲ್ ರಾಜ್ ಹಾಗೂ ಶಿರೀಶ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಳೆ (ಜೂನ್ 14) ಈ ಸಿನಿಮಾ ಸೆಟ್ಟೇರುತ್ತಿದೆ ಎನ್ನಲಾಗಿದೆ.

ಆದರೆ, ಒಬ್ಬರೇ ಒಬ್ಬರು ಮಿಸ್ಸಿಂಗ್. ಅವರೇ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಮತ್ತೆ ಜೊತೆಯಾಗಿರುವ ಪರಶುರಾಮ್ ಹಾಗೂ ವಿಜಯ್ ದೇವರಕೊಂಡ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ ನೆಟ್ಟಿಗರಲ್ಲಿ ಗೊಂದಲ ಶುರುವಾಗಿದೆ.

ರಶ್ಮಿಕಾ ಮಂದಣ್ಣ ಮಿಸ್ಸಿಂಗ್ ಯಾಕೆ?

'ಡಿಯರ್ ಕಾಮ್ರೇಡ್' ಬಳಿಕ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ಒಂದೇ ಸಿನಿಮಾ ನಟಿಸಿಲ್ಲ. ಪರಶುರಾಮ್ ಹಾಗೂ ವಿಜಯ್ ದೇವರಕೊಂಡ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿಲ್ಲ. ಹೀಗಾಗಿ ಸಿನಿಪ್ರಿಯರು ಆ ಬೆಸ್ಟ್ ಕಾಂಬಿನೇಷನ್‌ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಮಿಸ್ಟಿಂಗ್ ಯಾಕೆ?

ಅಂತಾನೂ ಪ್ರಶ್ನೆ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣಗೆ ನಿರ್ದೇಶಕ ಪರಶುರಾಮ್ ಹಾಗೂ ವಿಜಯ್ ದೇವರಕೊಂಡ ಈ ಸಿನಿಮಾಗೆ ಅಪ್ರೋಚ್ ಮಾಡಿಲ್ಲವೇ? ಅಥವಾ ಮೃಣಾಲ್ ಠಾಕೂರ್ ಮೊದಲ ಆಯ್ಕೆ ಆಗಿತ್ತಾ? ರಶ್ಮಿಕಾ ಮಂದಣ್ಣ ಮಿಸ್ ಆಗಿದ್ಯಾಕೆ? ಅನ್ನೋದು ಫ್ಯಾನ್ಸ್‌ಗೆ ಗೊಂದಲವಾಗಿ ಪರಿಣಮಿಸಿದೆ.

More from Filmibeat

English summary
Geetha Govindam team next movie Vijay Devarakonda, Mrunal Takur in Rashmika Mandanna missing, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X