7 ವರ್ಷಗಳ ಬಳಿಕ ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ ಗೋಲ್ಡನ್ ಕ್ವೀನ್? ಯಾವ ಹೀರೋಗೆ ನಾಯಕಿಯಾಗ್ತಾರೆ ಅಮೂಲ್ಯ?

ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಮೂಲ್ಯ ನಂತರ ನಾಯಕಿಯಾಗಿ ಬೆಳೆದಿದ್ದು ಗೊತ್ತೇ ಇದೆ. ಒಂದು ಕಾಲದಲ್ಲಿ ಅಮೂಲ್ಯರನ್ನು ಹುಚ್ಚರಂತೆ ಇಷ್ಟ ಪಡುವ ಅಭಿಮಾನಿಗಳು ಇದ್ದರು. ಇಂತಹ ಅಭಿಮಾನಕ್ಕೆ ಕಾರಣ ಕಲಾ ಸಾಮ್ರಾಟ್ ಎಸ್‌.ನಾರಾಯಣ್ ನಿರ್ದೇಶನದ 'ಚೆಲುವಿನ ಚಿತ್ತಾರ'.

ಇಲ್ಲಿವರೆಗೂ ಬಾಲನಟಿಯಾಗಿ ನಟಿಸುತ್ತಿದ್ದ ಅಮೂಲ್ಯ, ಗೋಲ್ಡನ್ ಸ್ಟಾರ್ ನಟನೆಯ 'ಚೆಲುವಿನ ಚಿತ್ತಾರಾ' ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾವೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಮೊದಲ ಸಿನಿಮಾದಲ್ಲಿಯೇ ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದರು. ಇಲ್ಲಿಂದ ಮತ್ತೆಂದು ತಿರುಗಿ ನೋಡಲೇ ಇಲ್ಲ.

Golden Queeen actress Amulya making sandalwood comeback with Prajwal Devaraj’s Karavali

'ಚೆಲುವಿನ ಚಿತ್ತಾರ'ದ ಬಳಿಕ 'ನಾನು ನನ್ನ ಕನಸು','ಶ್ರಾವಣಿ ಸುಬ್ರಮಣ್ಯ', 'ಗಜಕೇಸರಿ', 'ಖುಷಿ ಖುಷಿಯಾಗಿ' ಅಂತಹ ಸಿನಿಮಾಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಗಣೇಶ್ ಜೊತೆ ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಹೀಗಾಗಿ ಅಭಿಮಾನಿಗಳು ಪ್ರೀತಿಯಿಂದ ಗೋಲ್ಡನ್ ಕ್ವೀನ್ ಎಂದು ಬಿರುದುಕೊಟ್ಟಿದ್ದರು. 2017ರಲ್ಲಿ ಯೋಗರಾಜ್‌ ಭಟ್ ನಿರ್ದೇಶಿಸಿದ 'ಮುಗುಳು ನಗೆ' ಸಿನಿಮಾದಲ್ಲಿ ಗಣೇಶ್ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಅವರ ಕೊನೆಯ ಸಿನಿಮಾ.

ಇದೇ ವರ್ಷ (2017) ಅಮೂಲ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜಗದೀಶ್ ಜೊತೆ ಅದ್ದೂರಿಯಾಗಿ ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಮದುವೆ, ಸಾಂಸಾರಿಕ ಜೀವನ, ಮಕ್ಕಳು ಅಂತಲೇ ಬ್ಯುಸಿಯಾಗಿಬಿಟ್ಟರು. ಈಗ ಸುಮಾರು ಏಳು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಕೆಲವೆಡೆ ಅಮೂಲ್ಯ ರೀ ಎಂಟ್ರಿ ವರದಿಗಳಾಗಿವೆ.

Golden Queeen actress Amulya making sandalwood comeback with Prajwal Devaraj’s Karavali

ಅಂದ್ಹಾಗೆ, ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ 'ಕರಾವಳಿ' ಸಿನಿಮಾ ಮೂಲಕ ಅಮೂಲ್ಯ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ದೇವರಾಜ್ ಈ ಸಿನಿಮಾದಲ್ಲಿ ವಿಭಿನ್ನ ಲುಕ್ ಕೊಟ್ಟು ಈಗಾಗಲೇ ಗಮನ ಸೆಳೆದಿದ್ದಾರೆ. ಕರಾಬಳಿಯ ಕಂಬಳ ಹಿನ್ನೆಲೆಯುಳ್ಳ ಕಥೆಯಲ್ಲಿ ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಅಮೂಲ್ಯ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

'ಕರಾವಳಿ' ಸಿನಿಮಾದಲ್ಲಿ ನಟಿಸುವುದಕ್ಕೆ ಅಮೂಲ್ಯ ಗ್ರೀನ್ ಸಿಗ್ನಲ್ ಕಟ್ಟಿದ್ದು, ಅಧಿಕೃತ ಮಾಹಿತಿ ಅಷ್ಟೇ ಹೊರಬೀಳಬೇಕಿದೆ ಎಂದು ವರದಿಯಾಗಿದೆ. ಸುಮಾರು 13 ಸಿನಿಮಾಗಳಲ್ಲಿ ನಟಿಸಿರುವ ಅಮೂಲ್ಯ ವಿಭಿನ್ನ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ತುಳುನಾಡಿನ ಕಂಬಳ ಹಿನ್ನೆಲೆಯುಳ್ಳ ಈ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಬಗ್ಗೆ ಕಥೆ ಹೆಣೆಯಲಾಗಿದೆ.

ಈ ಸಿನಿಮಾದಲ್ಲಿ ಅಮೂಲ್ಯ ಪಾತ್ರ ಕಥೆಗೆ ಇಂಟ್ರೆಸ್ಟಿಂಗ್ ತಿರುವುಗಳನ್ನು ಕೊಡಲಿದೆ ಎನ್ನಲಾಗಿದೆ. ಇನ್ನೊಂದು ಕಡೆ 'ಕರಾವಳಿ' ತಂಡ ಬೇರೆ ಬೇರೆ ಪಾತ್ರಗಳಿಗೆ ಆಡಿಷನ್ ಕರೆದಿದ್ದು, ಫೆಬ್ರವರಿ ತಿಂಗಳ ಎರಡನೇ ವಾರದಿಂದ ಸಿನಿಮಾ ಶೂಟಿಂಗ್ ಆಗುವ ಸಾಧ್ಯತೆಯಿದೆ. ಇನ್ನು ನಿರ್ದೇಶಕ ಗುರುದತ್ ಗಾಣಿಗಗೆ 'ಕರಾವಳಿ' ಎರಡನೇ ಸಿನಿಮಾ. ಈ ಹಿಂದೆ ರೆಬೆಲ್‌ಸ್ಟಾರ್ ಅಂಬರೀಷ್ ನಟಿಸಿದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.

More from Filmibeat

English summary
Actress Amulya setting comeback with Prajwal Devaraj movie Karavali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X